Boult ನಿಂದ 2 ಇಯರ್ ಬಡ್ ಬಿಡುಗಡೆ
Team Udayavani, Aug 7, 2024, 1:33 PM IST
ನವದೆಹಲಿ: ಆಡಿಯೋ ಬ್ರ್ಯಾಂಡ್ ಬೌಲ್ಟ್ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಅತ್ಯುನ್ನತ ವಿನ್ಯಾಸ ಹೊಂದಿರುವ ಟಿಡಬ್ಲ್ಯೂಎಸ್ ಕ್ಲಾರಿಟಿ 1 ಮತ್ತು ಕ್ಲಾರಿಟಿ 3 ಎಂಬ 2 ಇಯರ್ ಬಡ್ ಗಳನ್ನು ಬಿಡುಗಡೆ ಮಾಡಿದೆ.
ಹೊಸ ಕ್ಲಾರಿಟಿ ಸರಣಿಯ ವೈರ್‌ಲೆಸ್ ಇಯರ್‌ಬಡ್‌ಗಳನ್ನು ಅತ್ಯಾಧುನಿಕ ಫೀಚರ್ ಗಳೊಂದಿಗೆ ವಿಶಿಷ್ಟ ಆಡಿಯೋ ಅನುಭವ ಒದಗಿಸಲೆಂದೇ ಸಿದ್ಧಪಡಿಸಲಾಗಿದೆ.
50 ಡಿಬಿವರೆಗಿನ ಹೈಬ್ರಿಡ್ ಆಕ್ಟಿವ್ ನಾಯ್ಸ್ ಕ್ಯಾನ್ಸಲೇಷನ್, ಸ್ಪಷ್ಟ ಕಾಲ್ ಸೌಲಭ್ಯ ಒದಗಿಸುವ 6 ಅತ್ಯಾಧುನಿಕ ಮೈಕ್ರೊಫೋನ್‌ಗಳು ಮತ್ತು ಬೌಲ್ಟ್ ಎಎಂಪಿ ಆ್ಯಪ್ ಮೂಲಕ ಸುಲಭವಾಗಿ ನಿರ್ವಹಣೆಯಂತ ಸೌಕರ್ಯಗಳನ್ನು ಒದಗಿಸಿ ಅಪೂರ್ವ ಅನುಕೂಲತೆ ಒದಗಿಸುತ್ತದೆ. ಡ್ಯುಯಲ್ ಡಿವೈಸ್ ಪೇರಿಂಗ್ (ಎರಡು ಡಿವೈಸ್ ಗಳಿಗೆ ಕನೆಕ್ಟ್ ಮಾಡಬಹುದು) ಮತ್ತು ಬ್ಲೂಟೂತ್ 5.4 ನಿಂದ ವೇಗವಾಗಿ ಕನೆಕ್ಟ್ ಆಗುತ್ತದೆ. ಸ್ಪೇಷಿಯಲ್ ಆಡಿಯೋ ಸೌಲಭ್ಯ ಉತ್ತಮ ಸೌಂಡ್ ಅನ್ನು ಒದಗಿಸುತ್ತದೆ. ಅಬ್ಸಿಡಿಯನ್ ಬ್ಲ್ಯಾಕ್ ಮತ್ತು ಸ್ಮೋಕಿ ಮೆಟಲ್ ಬಣ್ಣಗಳಲ್ಲಿ ಪ್ರೀಮಿಯಂ ಗುಣಮಟ್ಟದ ಫಿನಿಶ್ ಜೊತೆಗೆ ಲಭ್ಯವಿದೆ.
ಈ ಟಿಡಬ್ಲ್ಯೂಎಸ್ 50 ಗಂಟೆಗಳವರೆಗಿನ ಪ್ಲೇ ಟೈಮ್ ನೀಡುತ್ತದೆ ಮತ್ತು ಲೈಟ್ನಿಂಗ್ ಬೌಲ್ಟ್™ ತಂತ್ರಜ್ಞಾನದಿಂದ ಇದನ್ನು ಮಿಂಚಿನ ವೇಗದಲ್ಲಿ ಚಾರ್ಜಿಂಗ್ ಮಾಡಬಹುದಾಗಿದೆ. ಬಾಸ್ ಹೆಚ್ಚಳಕ್ಕೆ 13 ಎಂಎಂ ಡ್ರೈವರ್ ಇರುವುದರಿಂದ, ಗೇಮಿಂಗ್ ಅನುಭವ ಹೆಚ್ಚು ಮಾಡುವ ಎಸ್‌ಬಿಸಿ ಎಎಸಿ ಕೋಡೆಕ್ ಕಂಪಾಟಿಬಿಲಿಟಿ ಸೌಲಭ್ಯದಿಂದ ಮತ್ತು ಕಾಂಬ್ಯಾಟ್™ ಗೇಮಿಂಗ್ ಮೋಡ್‌ನಲ್ಲಿ ಅಲ್ಟ್ರಾ ಲೋ 45ಎಮ್‌ಎಸ್ ಲೇಟೆನ್ಸಿ ಹೊಂದಬಹುದು. ಐಪಿಎಕ್ಸ್5 ವಾಟರ್ ರೆಸಿಸ್ಟೆನ್ಸ್ ಸೌಲಭ್ಯ ಇದೆ.
ಕ್ಲಾರಿಟಿ 1 ಸೂಕ್ತವಾದ ವಾಯ್ಸ್ ಅಸಿಸ್ಟೆಂಟ್ ಜೊತೆ ಸುಲಭವಾಗಿ ಹೊಂದಿಕೊಂಡು ಕಾರ್ಯನಿರ್ವಹಿಸುತ್ತದೆ. ಆದ್ದರಿಂದ ವಾಯ್ಸ್ ಕಮಾಂಡ್ ಗಳ ಮೂಲಕ ಸಂಗೀತ ಕೇಳಬಹುದು ಮತ್ತು ಸೂಚನೆಗಳನ್ನು ತಿಳಿಯಬಹುದು.
ಡ್ಯುಯಲ್ ಡಿವೈಸ್ ಕನೆಕ್ಟಿವಿಟಿ ಸೌಲಭ್ಯ ಇರುವುದರಿಂದ ಏಕಕಾಲದಲ್ಲಿ ಎರಡು ಸಾಧನಗಳಿಗೆ ಈ ಉತ್ಪನ್ನಗಳನ್ನು ಕನೆಕ್ಟ್ ಮಾಡಬಹುದು. 80 ಗಂಟೆಗಳ ಬ್ಯಾಟರಿ ಬಾಳಿಕೆ ಬರುತ್ತದೆ ಎಂದು ಕಂಪೆನಿ ತಿಳಿಸಿದೆ.
ಬೆಲೆ: ಕ್ಲಾರಿಟಿ 3 ಅಬ್ಸಿಡಿಯನ್ ಬ್ಲ್ಯಾಕ್ ಮತ್ತು ಸ್ಮೋಕಿ ಮೆಟಲ್ ರೂ. 1,999/- ರೂ., ಕ್ಲಾರಿಟಿ 1 ಅಕ್ವಾಮರೀನ್, ಮಿಡ್ನೈಟ್ ಬ್ಲ್ಯಾಕ್ ಮತ್ತು ಸ್ಕೈಲೈನ್ ಗ್ರೇ ರೂ. 999/- ಫ್ಲಿಪ್ ಕಾರ್ಟ್, ಅಮೆಜಾನ್ ಮತ್ತು boultaudio.com ನಲ್ಲಿ ಲಭ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.