
20 ಲಕ್ಷ ವಾಟ್ಸ್‌ಆ್ಯಪ್ ಖಾತೆ ಬ್ಯಾನ್
ಕೇಂದ್ರದ ಐಟಿ ನಿಯಮಗಳಡಿ ಕ್ರಮ: ಸಂಸ್ಥೆ ಪ್ರಕಟಣೆ
Team Udayavani, Dec 3, 2021, 10:45 AM IST

ನವದೆಹಲಿ: ದೇಶದಲ್ಲಿ ಅಕ್ಟೋಬರ್ ತಿಂಗಳೊಂದರಲ್ಲಿ 20.69 ಲಕ್ಷ ವಾಟ್ಸ್‌ಆ್ಯಪ್ ಖಾತೆಗಳನ್ನು ನಿರ್ಬಂಧಿಸಿರುವುದಾಗಿ ವಾಟ್ಸ್‌ಆ್ಯಪ್ ಸಂಸ್ಥೆ ತಿಳಿಸಿದೆ.
ಸಂಸ್ಥೆಯ ನಿಯಮಗಳನ್ನು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಈ ನಿರ್ಬಂಧ ಹೇರಿರುವುದಾಗಿ ತಿಳಿಸಲಾಗಿದೆ.
ಒಂದು ತಿಂಗಳ ಅವಧಿಯಲ್ಲಿ 500 ದೂರುಗಳನ್ನು ಸಂಸ್ಥೆ ಸ್ವೀಕರಿಸಿದೆ. ಅದರಲ್ಲಿ 146 ದೂರು ಅಕೌಂಟ್ ಸಪೋರ್ಟ್ ಬಗ್ಗೆ, 248 ಖಾತೆಗೆ ನಿರ್ಬಂಧ ಹೇರುವ ಬಗ್ಗೆ, 53 ಪ್ರೊಡಕ್ಟ್ ಸಪೋರ್ಟ್, 11 ಸುರಕ್ಷತೆ ಕುರಿತಾಗಿ ಹಾಗೂ 42 ಇತರ ವಿಚಾರಗಳ ಕುರಿತಾಗಿ ಸಲ್ಲಿಸಲಾದ ದೂರಾಗಿದ್ದವು.
ಈ ದೂರುಗಳನ್ನು ಪರಿಗಣಿಸಿ, 18 ಖಾತೆಗಳ ವಿರುದ್ಧ ಕ್ರಮ ತೆಗೆದುಕೊಂಡಿರುವುದಾಗಿ ಸಂಸ್ಥೆ ಹೇಳಿದೆ. ಅಕ್ಟೋಬರ್‌ನಲ್ಲಿ 34,000 ಟ್ವಿಟರ್ ಖಾತೆಗಳನ್ನೂ ನಿರ್ಬಂಧಿಸಿರುವುದಾಗಿ ಟ್ವಿಟರ್ ಸಂಸ್ಥೆ ಹೇಳಿದೆ.
ಇದನ್ನೂ ಓದಿ:ಅತ್ಯಾಚಾರ ಆರೋಪಿ ಖುಲಾಸೆ: ಜೈಲಿಂದ ಬಿಡುಗಡೆ ಮಾಡಲು ಆದೇಶ
ಸೆಪ್ಟೆಂಬರ್‌ನಲ್ಲಿ 22.09 ಲಕ್ಷ ಖಾತೆಗಳನ್ನು ನಿರ್ಬಂಧಿಸಲಾಗಿತ್ತು. ಆ ತಿಂಗಳು ನಿರ್ಬಂಧ ಹೇರಲು ಕೋರಿ 309 ದೂರುಗಳು ಸಂಸ್ಥೆಗೆ ಬಂದಿದ್ದವು. ಹಾಗೆಯೇ ಆಗಸ್ಟ್ ತಿಂಗಳಲ್ಲಿ 20.7 ಲಕ್ಷ ಖಾತೆಗಳನ್ನು ನಿರ್ಬಂಧಿಸಲಾಗಿತ್ತು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Dr. TMA Pai Convention Centre; 3 ದಿನಗಳ “ಬಿಗ್ ಬ್ರ್ಯಾಂಡ್ಸ್ ಎಕ್ಸ್‌ಪೋಗೆ’ ಚಾಲನೆ

Health: ಸೋಶಿಯಲ್ ಆ್ಯಂಕ್ಸೈಟಿ ಡಿಸಾರ್ಡರ್

Karachi; ಗುಂಡಿನ ದಾಳಿಯಲ್ಲಿ ಲಷ್ಕರ್-ಎ-ತೈಬಾ ಸ್ಥಾಪಕ ಸದಸ್ಯ ಖೈಸರ್ ಫಾರೂಕಿ ಹತ್ಯೆ

GHOST: ಶಿವಣ್ಣನ ಘೋಸ್ಟ್ ಅವತಾರಕ್ಕೆ ಫ್ಯಾನ್ಸ್ ಫಿದಾ; ಟ್ರೇಲರ್ ನೋಡಿ

Bengaluru; ನಟ ನಾಗಭೂಷಣ ಕಾರು ಅಪಘಾತ; ಮಹಿಳೆ ಸ್ಥಳದಲ್ಲೇ ಸಾವು