ಕ್ರೀಡಾಳುಗಳಿಗಾಗಿ ಗಾರ್ಮಿನ್ ಫೋರ್‌ ರನ್ನರ್ 55 ಸ್ಮಾರ್ಟ್ ವಾಚ್ ಬಿಡುಗಡೆ

Team Udayavani, Jun 30, 2021, 5:03 PM IST

A GPS running watch for all types of runners by Garmin. Running.

ನವ ದೆಹಲಿ : ಕ್ರೀಡಾಪಟುಗಳು, ಓಟಗಾರರು, ಸೈಕ್ಲಿಸ್‌ಟ್ ಗಳು ಬಳಸುವ ಜಿಪಿಎಸ್ ಸಾಧನಗಳು, ಸ್ಮಾರ್ಟ್ ವಾಚ್‌ಗಳ ತಯಾರಕ ಕಂಪೆನಿ ಗಾರ್ಮಿನ್ ಭಾರತದ ಮಾರುಕಟ್ಟೆಗೆ ತನ್ನ ಹೊಸ ಸ್ಮಾರ್ಟ್ ವಾಚ್,  ಫೋರ್ ರನ್ನರ್ 55 ನನ್ನು ಬಿಡುಗಡೆ ಮಾಡಿದೆ.

ಜಿಪಿಎಸ್ ಹೊಂದಿರುವ ಈ ಸ್ಮಾರ್ಟ್‌ ವಾಚ್, ವಿಶೇಷವಾಗಿ ಓಟಗಾರರು ತಮ್ಮ ಓಟದ ಅಂಕಿಅಂಶಗಳ ಮಾಹಿತಿ ಮತ್ತು ತಮ್ಮ ಫಿಟ್‌ನೆಸ್‌ನ ಗುರಿಗಳನ್ನು ಸಾಧಿಸಲು ಬಯಸುವವರಿಗಾಗಿ ಈ ಸ್ಮಾರ್ಟ್‌ ವಾಚ್ ತಯಾರಿಸಲಾಗಿದೆ.

ಪೇಸ್‌ ಪ್ರೊ ಮತ್ತು ಓಟದ ಲಯದ (ಕ್ಯಾಡೆನ್‌ ಸ್) ಎಚ್ಚರಿಕೆಗಳು ಸೇರಿದಂತೆ ಎಲ್ಲಾ ಪ್ರಾಥಮಿಕ ವೈಶಿಷ್ಟ್ಯತೆಗಳನ್ನು ಈ ವಾಚ್ ಹೊಂದಿದೆ. ಇದು ಓಟಗಾರರಿಗೆ ತಮ್ಮ ಓಟ ಮತ್ತು ತರಬೇತಿಯ ಮೂಲಭೂತ ವಿಷಯಗಳತ್ತ ಗಮನಹರಿಸಲು ಮತ್ತು ಮುಂದಿನ ಹಂತಕ್ಕೆ ಕೊಂಡೊಯ್ಯಲು ಸಹಾಯ ಮಾಡುತ್ತದೆ.

ಈ ಸ್ಮಾರ್ಟ್ ವಾಚ್, ಓಟದ ಸಮಗ್ರ ವಿಧಾನಗಳು, ದಿನನಿತ್ಯದ ತರಬೇತಿ ಸಲಹೆಗಳು, ಟ್ರ್ಯಾಕ್‌ನಲ್ಲಿ ಮತ್ತು ಹೊರಗೆ ಬಳಕೆದಾರರ ಕಾರ್ಯಕ್ಷಮತೆಯನ್ನು ಸುಧಾರಿಸಲು ಸುಧಾರಿತ ಆರೋಗ್ಯ ಮೇಲ್ವಿಚಾರಣೆ ಸೌಲಭ್ಯವನ್ನೂ ಸಹ ಒಳಗೊಂಡಿದೆ.

ಸ್ಪಷ್ಟ ಪರದೆಯು ಓಟಗಾರರು ಸಾಗಿದ ದೂರದ ಮಾಹಿತಿ ಪ್ರದರ್ಶಿಸುತ್ತದೆ. ನಿಮಗೆ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಒಂದೇ ನೋಟದಲ್ಲಿ ತೋರಿಸಲು ಇದರಲ್ಲಿ ಸೂಕ್ತ ಬದಲಾವಣೆ ಮಾಡಬಹುದು. ಅಂತರ್ಗತವಾಗಿರುವ ಜಿಪಿಎಸ್ ನೆರವಿನಿಂದ ಬಳಕೆದಾರರು ತಮ್ಮ ಓಟವನ್ನು ಪ್ರಾರಂಭಿಸಬಹುದು ಅಥವಾ ನಡೆಯಬಹುದು. ಓಟಕ್ಕೆ ತೆಗೆದುಕೊಂಡ ಸಮಯ, ಸಾಗಿದ ದೂರ, ವೇಗ ಮತ್ತು ಹೃದಯ ಬಡಿತದ ಮಾಹಿತಿಯ ಮೇಲೆ ತಮ್ಮ ಮಣಿಕಟ್ಟಿನಿಂದಲೇ ನಿಗಾ ಇರಿಸಬಹುದು.

ಇದು ಹೃದಯ ಬಡಿತದ ಮೇಲ್ವಿಚಾರಣೆ, ದೈಹಿಕ ಶಕ್ತಿಯ ಮೇಲ್ವಿಚಾರಣೆ, ಮಹಿಳೆಯರ  ಋತು ಚಕ್ರ ಮತ್ತು ಗರ್ಭಧಾರಣೆಯ ಮಾಹಿತಿ ಸೇರಿದಂತೆ ಹಲವಾರು ಸೌಲಭ್ಯಗಳನ್ನು ಒಳಗೊಂಡಿದೆ. ಈ ಸ್ಮಾರ್ಟ್‌ವಾಚ್ ಓಟದ ವಿವರವಾದ ದತ್ತಾಂಶ, ದೈನಂದಿನ ಜೀವನಕ್ರಮಗಳು, ಹೆಚ್ಚುವರಿ ಅಂತರ್‌ನಿರ್ಮಿತ ಕ್ರೀಡಾ ಅಪ್ಲಿಕೇಷನ್‌ಗಳು ಮತ್ತು ಬಳಕೆದಾರರು ತಮ್ಮ ದೈಹಿಕ ಆರೋಗ್ಯದ ಗುರಿಗಳನ್ನು ಸಾಧಿಸಲು ಸಹಾಯ ಮಾಡುತ್ತದೆ.

ಓಟದ ಸುಧಾರಿತ ವೈಶಿಷ್ಟ್ಯಗಳು

ಪೇಸ್‌ ಪ್ರೊ : ಓಟಗಾರರು ತಮ್ಮ ಪ್ರಯತ್ನಗಳನ್ನು ಆಯ್ದ ಕೋರ್ಸ್ ಅಥವಾ ದೂರಕ್ಕೆ ತಕ್ಕಂತೆ ನಿಗದಿಪಡಿಸಲು ಮಾರ್ಗದರ್ಶನ ನೀಡುತ್ತದೆ

ಅಂತಿಮ ಸಮಯ ಅಂದಾಜು ಮಾಡುವ ಸೌಲಭ್ಯವು ಕ್ರೀಡಾಪಟುಗಳಿಗೆ ಓಟದ ಅಂತರವನ್ನು ಆಯ್ಕೆ ಮಾಡಲು ಮತ್ತು ತಮ್ಮ ಓಟ ಮುಕ್ತಾಯಗೊಳಿಸುವ ಅಂದಾಜು ಸಮಯವನ್ನು ತಮ್ಮ ಮಣಿಕಟ್ಟಿನಿಂದಲೇ ವೀಕ್ಷಿಸಲು ಅವಕಾಶ ಒದಗಿಸುತ್ತದೆ.

ಓಟದ ಲಯದ  ಎಚ್ಚರಿಕೆಗಳು  ಓಟಗಾರರು ತಮ್ಮ ಓಟದ ಲಯದ ಗುರಿಯಿಂದ  ಹೊರಗಿರುವಾಗ, ಅವರ ಓಟದ ಮಟ್ಟ ಸುಧಾರಿಸಲು ಸಹಾಯ ಮಾಡುತ್ತದೆ

ತಮ್ಮ ವ್ಯಾಯಾಮದ ದಿನಚರಿಯನ್ನು ಬದಲಾಯಿಸಲು ಬಯಸುವವರಿಗೆ, ಹಲವಾರು ಅಂತರ್ಗತವಾಗಿರುವ ಚಟುವಟಿಕೆಯನ್ನು ಒಳಗೊಂಡಿದೆ. ಟ್ರ್ಯಾಕ್ ಅಥವಾ ವರ್ಚುವಲ್ ರನ್ನಿಂಗ್, ಈಜುಗೊಳ, ವಿವಿಧ ಕ್ರೀಡಾ ಸಾಮಗ್ರಿಗಳ ಜತೆ ವ್ಯಾಯಾಮ ಮಾಡುವುದು, ಹೈ ಇಂಟೆನ್ಸಿಟಿ ಇಂಟರ್‌ವಲ್ ಟ್ರೇನಿಂಗ್ (ಎಚ್‌ಐಐಟಿ) ಮುಂತಾದವುಗಳನ್ನು ಒಳಗೊಂಡಿದೆ

ಒಂದು ತಾಲೀಮನ (ವರ್ಕ್‌ ಔಟ್) ನಂತರ, ಅಂತರ್ಗತ ಚೇತರಿಕೆಯ ಸಮಯವು ಕ್ರೀಡಾಪಟುಗಳಿಗೆ ತಮ್ಮ ಮುಂದಿನ ದೊಡ್ಡ ಪ್ರಯತ್ನಕ್ಕೆ ಮುಂಚಿತವಾಗಿ ಎಷ್ಟು ಸಮಯ ವಿಶ್ರಾಂತಿ ಪಡೆಯಬೇಕೆಂದು ಸೂಚಿಸುತ್ತದೆ

ಕ್ರೀಡಾಪಟುಗಳು ತಮ್ಮ ಒತ್ತಡವನ್ನು ಗುರುತಿಸಬಹುದು ಮತ್ತು ಸಣ್ಣ ಉಸಿರಾಟದ ವ್ಯಾಯಾಮಗಳನ್ನು ಮಾಡಲು ವಿಶ್ರಾಂತಿಯ ಜ್ಞಾಪನೆಗಳನ್ನು ಹೊಂದಿಸಬಹುದು.

ಬಳಕೆದಾರರು ಮೆಸೇಜ್‌ಗಳನ್ನು ಸ್ವೀಕರಿಸಬಹುದು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿನ ಸಂದೇಶಗಳು, ಇ-ಮೇಲ್‌ಗಳನ್ನು ವೀಕ್ಷಿಸಬಹುದು.

ಬ್ಯಾಟರಿ ಬಾಳಿಕೆ

ಸ್ಮಾರ್ಟ್ ವಾಚ್ ಮೋಡ್‌ನಲ್ಲಿ 2 ವಾರಗಳವರೆಗೆ ಮತ್ತು ಜಿಪಿಎಸ್ ಮೋಡ್‌ನಲ್ಲಿ 20 ಗಂಟೆಗಳವರೆಗೆ ಬ್ಯಾಟರಿ ಬಾಳಿಕೆ ಬರುತ್ತದೆ.

ಬೆಲೆ: ಫೋರ್‌ರನ್ನರ್ 55 ಕಪ್ಪು, ಅಕ್ವಾ ಮತ್ತು ಬೂದು ಸೇರಿದಂತೆ 3 ಬಣ್ಣಗಳಲ್ಲಿ ಬರುತ್ತದೆ. ಬೆಲೆ ರೂ 20,990 ಇದೆ.

ಲಭ್ಯತೆ:  ಅಮೆಜಾನ್‌ ಡಾಟ್‌ ಇನ್, ಫ್ಲಿಪ್‌ ಕಾರ್ಟ್, ಟಾಟಾ ಕ್ಲಿಕ್ ಮತ್ತು ಸಿನರ್‌ ಜೈಸರ್‌ ಡಾಟ್.ಸಿಒ.ಇನ್ ಗಾರ್ಮಿನ್ ಬ್ರಾಂಡ್ ಸ್ಟೋರ್‌ಗಳಲ್ಲಿ ಲಭ್ಯ.

ಟಾಪ್ ನ್ಯೂಸ್

ಉಡುಪಿ- ಚಿಕ್ಕಮಗಳೂರು: ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳು ಇವೆ: ಕೋಟ

ಉಡುಪಿ- ಚಿಕ್ಕಮಗಳೂರು: ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳು ಇವೆ: ಕೋಟ

ಅಡಿಕೆ, ಹಿಂಗಾರ ಕಳವು ಮಾಡುತ್ತಿದ್ದ ವ್ಯಕ್ತಿಯ ಸೆರೆ

Kinnigoli ಅಡಿಕೆ, ಹಿಂಗಾರ ಕಳವು ಮಾಡುತ್ತಿದ್ದ ವ್ಯಕ್ತಿಯ ಸೆರೆ

Perla, Kasaragod; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Perla; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

raKundapura ರೈಲಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ

Kundapura ರೈಲಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Dharmasthala; ಕೆಎಸ್ಸಾರ್ಟಿಸಿ ಬಸ್‌ನಡಿ ಸಿಲುಕಿ ಮಹಿಳೆ ಸಾವು

Dharmasthala; ಕೆಎಸ್ಸಾರ್ಟಿಸಿ ಬಸ್‌ನಡಿ ಸಿಲುಕಿ ಮಹಿಳೆ ಸಾವು

ಮಾದಕವಸ್ತು ಕಳ್ಳಸಾಗಣೆ: ಸುಳ್ಯದ ಇಬ್ಬರು ಕೇರಳ ಪೋಲಿಸ್‌ ವಶಕ್ಕೆ

ಮಾದಕವಸ್ತು ಕಳ್ಳಸಾಗಣೆ: ಸುಳ್ಯದ ಇಬ್ಬರು ಕೇರಳ ಪೋಲಿಸ್‌ ವಶಕ್ಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಉಡುಪಿ- ಚಿಕ್ಕಮಗಳೂರು: ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳು ಇವೆ: ಕೋಟ

ಉಡುಪಿ- ಚಿಕ್ಕಮಗಳೂರು: ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳು ಇವೆ: ಕೋಟ

ಅಡಿಕೆ, ಹಿಂಗಾರ ಕಳವು ಮಾಡುತ್ತಿದ್ದ ವ್ಯಕ್ತಿಯ ಸೆರೆ

Kinnigoli ಅಡಿಕೆ, ಹಿಂಗಾರ ಕಳವು ಮಾಡುತ್ತಿದ್ದ ವ್ಯಕ್ತಿಯ ಸೆರೆ

Perla, Kasaragod; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Perla; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

raKundapura ರೈಲಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ

Kundapura ರೈಲಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.