Udayavni Special

ನಿಮ್ಮ ಸ್ಮಾರ್ಟ್ ಫೋನ್ ಅನ್ನು ಮಾರಾಟ ಮಾಡುವ ಮುನ್ನ… ಈ ವಿಷಯಗಳ ಬಗ್ಗೆ ಗಮನಿವಿರಲಿ


Team Udayavani, Jul 25, 2021, 5:30 PM IST

Additional steps to take before you sell your phone

ನೀವೇನಾದರೂ ಹೊಸ ಮೊಬೈಲ್ ಫೋನ್ ಕೊಂಡುಕೊಳ್ಳಲು ಹೊರಟಿದ್ದೀರಾ? ಇದಕ್ಕಾಗಿ ನಿಮ್ಮ ಹಳೇಯ ಸ್ಮಾರ್ಟ್ ಫೋನ್ ಯಾರಿಗಾದರೂ ಮಾರಬೇಕೆಂದಿದ್ದೀರಾ? ಆದರೆ, ನಿಮ್ಮ ಫೋನ್‌ನಲ್ಲಿರುವ ಸಂಪರ್ಕ, ಸಂದೇಶಗಳು ಇತ್ಯಾದಿ ಮಾಹಿತಿಗಳನ್ನು ಏನು ಮಾಡುವುದು? ಹೇಗೆ ಸಂರಕ್ಷಿಸುವುದು? ನಿಮ್ಮ ಯಾವುದೇ ಮೊಬೈಲ್ ಫೋನ್ ಅನ್ನು ಮಾರಾಟ ಮಾಡುವ ಮುನ್ನ ಇದನ್ನೆಲ್ಲಾ ಮಾಡಲೇಬೇಕು.

  • ಸಂಪರ್ಕ ಪಟ್ಟಿಯನ್ನು ಬ್ಯಾಕ್‌ ಅಪ್ ಮಾಡಿ

ನೀವು ಆಂಡ್ರಾಯ್ಡ್ ಬಳಕೆದಾರರಾದರೆ, ಅದರಲ್ಲೂ ಗೂಗಲ್ ಆ್ಯಪ್‌ಗಳನ್ನು ಅತಿಯಾಗಿ ಬಳಸುವವರಾದರೆ, ನಿಮ್ಮ ಮೊಬೈಲ್‌ನಲ್ಲಿರುವ ಎಲ್ಲಾ ಸಂಪರ್ಕಗಳನ್ನು ಜೀಮೇಲ್‌ಗೆ ಬ್ಯಾಕ್‌ಅಪ್ ಮಾಡಿಡಿ. ಎಲ್ಲರ ಸಂಖ್ಯೆಯು ಸಿಮ್ ಕಾರ್ಡ್ನಲ್ಲಿ ಸೇವ್ ಆಗಿದ್ದರೆ ಏನೂ ತೊಂದರೆ ಆಗುವುದಿಲ್ಲ. ಬದಲಿಗೆ ಫೋನ್‌ನಲ್ಲಿಯೇ ಸೇವ್ ಆಗಿದ್ದರೆ, ಅದನ್ನು ಟ್ರಾನ್ಸ್ಫರ್ ಮಾಡಲು ಸ್ವಲ್ಪ ಕಷ್ಟವಾದೀತು. ಅದಲ್ಲದೆ, ಇನ್ನು ಮುಂದೆ ಹೊಸಬರ ಸಂಖ್ಯೆಯನ್ನು ಸೇವ್ ಮಾಡಲು ಇದ್ದರೆ, ನಿಮ್ಮ ಜೀಮೇಲ್‌ನಲ್ಲಿಯೇ (https://contacts.google.com/ ) ಸೇವ್ ಮಾಡಿದರೆ ಉತ್ತಮ.

ಇದನ್ನೂ ಓದಿ : ‘ಭಜರಂಗಿ ಭಾಯಿಜಾನ್’ ಗೆ ನಿರ್ದೇಶನ ಮಾಡಲು ರಾಜಮೌಳಿ ‘ನೋ’ ಎಂದಿದ್ದೇಕೆ ?

  • ಫೋಟೋ, ವೀಡಿಯೋಗಳನ್ನು ಕ್ಲೌಡ್ ಸ್ಟೋರೇಜ್‌ ನಲ್ಲಿ ಬ್ಯಾಕ್‌ ಅಪ್ ಮಾಡುವುದು

ಹಲವರಿಗೆ ಇದು ಗೊತ್ತಿರಲಿಕ್ಕೂ ಇಲ್ಲ. ನಾವ ಸಾಮಾನ್ಯವಾಗಿ ಹೊಸ ಫೋನ್ ಖರೀದಿಸಿದಾಗ, ಒಂದು ಮೊಬೈಲ್‌ನಿಂದ ಮತ್ತೊಂದಕ್ಕೆ ಎಲ್ಲಾ ಫೋಟೋ-ವೀಡಿಯೋಗಳನ್ನು ಶೇರ್ ಮಾಡುತ್ತೇವೆ. ಇದರ ಬದಲಿಗೆ, ಹಳೇ ಫೋನ್‌ ನಲ್ಲಿಯೇ ಇದನ್ನು ಗೂಗಲ್, ಮೈಕ್ರೋಸಾಫ್ಟ್ ಅಥವಾ ಇತರ ಕ್ಲೌಡ್ ಸ್ಟೋರೇಜ್‌ಗೆ ಬ್ಯಾಕ್‌ಅಪ್ ಮಾಡಿಟ್ಟರೆ, ಹೊಸ ಫೋನ್‌ಗೆ ಶೇರ್ ಮಾಡುವ ಮೊದಲೇ, ನೀವು ಅಪ್ಲೋಡ್ ಮಾಡಿದ ಡ್ರೈವ್‌ನ ಅಕೌಂಟ್ ಹಾಕಿದ ಕೂಡಲೆ ನಿಮಗೆ ಅದರ ಎಕ್ಸೆಸ್ ಸಿಗುವುದು. ಎಲ್ಲವೂ ಆನ್‌ಲೈನ್‌ನಲ್ಲಿಯೇ ಸಿಗುವುದರಿಂದ ನಿಮಗೆ ಬೇಕಾಗಿರುವುದನ್ನು ಮಾತ್ರ ಡೌನ್‌ಲೋಡ್ ಮಾಡಿಟ್ಟುಕೊಳ್ಳಬಹುದು.

  • ಎಲ್ಲಾ ಸಾಮಾಜಿಕ ಮಾಧ್ಯಮಗಳಿಂದ ಲಾಗ್‌ ಔಟ್ ಆಗಲು ಮರೆಯದಿರಿ!

ಪ್ರಸ್ತುತ ಕಾಲಘಟ್ಟದಲ್ಲಿ ಓದಲು, ಬರೆಯಲು ಬರುವುದಕ್ಕಿಂತ ನೀವು ಸಾಮಾಜಿಕ ಮಾಧ್ಯಮ-ಜಾಲತಾಣಗಳಲ್ಲಿ ಎಷ್ಟು ಸಕ್ರಿಯರಾಗಿದ್ದೀರ ಎಂಬುವುದರ ಮೇಲೆ ಕೆಲವರು ಸಾಕ್ಷರತೆಯನ್ನು ಅಳೆಯುತ್ತಾರೆ. ಹೀಗಿರುವಾಗ, ನಿಮ್ಮ ಫೋನ್‌ನಲ್ಲಿ ಯಾವೆಲ್ಲಾ ಆ್ಯಪ್ ಗಳಿವೆಯೋ, ಯಾವುದೆಲ್ಲಾ ಜಾಲತಾಣಗಳೊಳಗೆ ಲಾಗ್ ಇನ್ ಆಗಿದ್ದೀರೋ, ಅದರಿಂದ ಲಾಗ್‌ಔಟ್ ಆಗಿ. ಸಾಮಾನ್ಯವಾಗಿ ನಿಮ್ಮ ಫೋನ್ ಸೆಟ್ಟಿಂಗ್‌ನಲ್ಲಿ “ಅಕೌಂಟ್ಸ್” ಎಂದು ಸರ್ಚ್ ಮಾಡಿದಾಗ ಯಾವುದೆಲ್ಲಾ ಜಾಲತಾಣಗಳಲ್ಲಿ ನೀವುನಲಾಗ್ ಇನ್ ಆಗಿದ್ದೀರಿ ಎಂಬುವುದನ್ನು ನೋಡಬಹುದಾಗಿದೆ.

ಕೆಲವೊಮ್ಮೆ ನಿಮ್ಮ ಫೋನ್‌ ಅನ್ನು ಮುಂದೆ ಖರೀದಿಸುವವರು ನಿಮ್ಮ ಅಕೌಂಟ್ ಅನ್ನು ದುರುಪಯೋಗಪಡಿಸಬಹುದು. ನಿಮ್ಮ ಹೆಸರಿರುವ ಖಾತೆಯಿಂದ ನಿಮಗೇ ಗೊತ್ತಿಲ್ಲದೆ ಏನಾದರೂ ಚಟುವಟಿಕೆಗಳು ಆಗಬಹುದು. ಹಾಗಾಗಿ ಲಾಗ್‌ಔಟ್ ಆಗುವುದು ಉತ್ತಮ.

  • ಎಸ್‌ ಡಿ ಕಾರ್ಡ್, ಸಿಮ್ ಕಾರ್ಡ್ ತೆಗೆದಿಡಿ

ಹಲವರು ಇದನ್ನು ಮರೆತುಬಿಡುತ್ತಾರೆ. ಯಾವಾಗಲೂ ನಿಮ್ಮ ಮೊಬೈಲ್ ರಿಪೇರಿಗೆ ಕೊಡುವಾಗ ಅಥವಾ ಅದನ್ನು ಯಾರಿಗಾದರೂ ಮಾರಾಟ ಮಾಡುವಾಗ, ಅದರಿಂದ ಎಸ್‌ಡಿ ಕಾರ್ಡ್ ಹಾಗೂ ಸಿಮ್ ಕಾರ್ಡ್ಗಳನ್ನು ಹೊರತೆಗೆಯಿರಿ. ಇಲ್ಲದಿದ್ದರೆ, ನಿಮ್ಮ ಖಾಸಗಿ ಮಾಹಿತಿಗಳು, ಸಂಪರ್ಕ ಪಟ್ಟಿ ಇತ್ಯಾದಿ ವಿಷಯಗಳು ಇತರರಿಗೆ ಸಿಗುವ ಸಾಧ್ಯತೆ ಇರುತ್ತದೆ.

  • ವಾಟ್ಸಾಪ್ ಬ್ಯಾಕ್‌ ಅಪ್

ಒಂದೆರಡು ಅಪರೂಪದ ಮುತ್ತುಗಳನ್ನು ಹೊರತುಪಡಿಸಿದರೆ, ವಾಟ್ಸಾಪ್ ಇಲ್ದಿರೋರು ಯಾರಾದ್ರೂ ಇದ್ದಾರಾ! ವಾಟ್ಸಾಪ್ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಅದಲ್ಲದೆ, ಹಲವು ಬಹುಮುಖ್ಯ ಮಾಹಿತಿಗಳು ಅದರಲ್ಲಿರಲೂಬಹುದು. ಹಾಗಾಗಿ ನಿಮ್ಮ ಸ್ಮಾರ್ಟ್‌ಫೋನ್ ರೀಸೆಟ್ ಮಾಡುವ ಮುನ್ನ ವಾಟ್ಸಾಪ್ ಅನ್ನು ಯಾವುದಾದರೂ ಕ್ಲೌಡ್ ಸ್ಟೋರೇಜ್‌ನಲ್ಲಿ ಬ್ಯಾಕ್‌ಅಪ್ ಮಾಡಿ. ವಾಟ್ಸಾಪ್‌ಗೆ ಹೋಗಿ, ಮೋರ್ (ಮೂರು ಚುಕ್ಕಿಗಳು) ಆಪ್ಷನ್ ನಲ್ಲಿ ಸೆಟ್ಟಿಂಗ್ – ಚಾಟ್ಸ್ – ಚಾಟ್ಸ್ ಬ್ಯಾಕ್‌ಅಪ್ – ಬ್ಯಾಕ್‌ಟಪ್ ಟು ಗೂಗಲ್ ಡ್ರೈವ್. ಆಗ, ಹೊಸ ಸ್ಮಾರ್ಟ್ಫೋನ್‌ನಲ್ಲಿ ವಾಟ್ಸಾಪ್ ಇನ್‌ಸ್ಟಾಲ್ ಮಾಡಿದಾಗ, ಹಳೆಯ ಚಾಟ್‌ಗಳನ್ನು ಅದರಲ್ಲಿ ಪುನಃ ಪಡೆಯಬಹುದು.

  • ಫ್ಯಾಕ್ಟರಿ ರೀಸೆಟ್

ಎಲ್ಲಾ ಮುಖ್ಯ ಮಾಹಿತಿಗಳನ್ನು ಬ್ಯಾಕ್‌ಅಪ್ ಮಾಡಿ ಮುಗಿದ ಬಳಿಕ ಹಾಗೂ ಫೋನ್ ಒಳಗಿನಿಂದ ಸಿಮ್ ಹಾಗೂ ಎಸ್‌ಡಿ ಕಾರ್ಡ್ ಹೊರತೆಗೆದ ಬಳಿಕ, ನಿಮ್ಮ ಫೋನನ್ನು ರೀಸೆಟ್ ಮಾಡಿ. ಸೆಟ್ಟಿಂಗ್ಸ್ ನಲ್ಲಿ ಪ್ಯಾಕ್ಟರಿ ರೀಸೆಟ್ ಅಥವಾ ಇರೇಸ್ ಆಲ್ ಡೇಟಾ ಅನ್ನೋ ಆಪ್ಷನ್ ಸರ್ಚ್ ಮಾಡಿ, ಎಲ್ಲವನ್ನೂ ಇರೇಸ್ ಮಾಡಿಬಿಡಿ. ಆಗ ನಿಮ್ಮ ಫೋನ್, ಆರಂಭದಲ್ಲಿದ್ದಂತೆ ಕಂಡುಬರುವುದು.

ಇವಿಷ್ಟು ಮಾಡಿದರೆ, ಮೊಬೈಲ್ ಸ್ಕ್ರೀನ್‌ನಲ್ಲಿ ಯಾವುದೇ ಡ್ಯಾಮೇಜ್ ಆಗಿರದಿದ್ದರೆ ನಿಮ್ಮ ಸ್ಮಾರ್ಟ್ಫೋನ್ ಹೊಸತರಂತೆ ಕಾಣುವ ಸಾದ್ಯತೆ ಹೆಚ್ಚಿರುತ್ತದೆ. ಆಗ, ನೀವು ಅದನ್ನು ಎಕ್ಸ್ಚೇಂಜ್‌ನಲ್ಲಿ ಅಥವಾ ಹೇಗಾದರೂ ಮಾರಾಟ ಮಾಡಿದರೆ ಒಳ್ಳೆಯ ಮೌಲ್ಯ ಬರುವುದರಲ್ಲಿ ಯಾವುದೇ ಸಂಶಯವಿಲ್ಲ.

-ಇಂದುಧರ ಹಳೆಯಂಗಡಿ

ಇದನ್ನೂ ಓದಿ : ‘ಭಜರಂಗಿ ಭಾಯಿಜಾನ್’ ಗೆ ನಿರ್ದೇಶನ ಮಾಡಲು ರಾಜಮೌಳಿ ‘ನೋ’ ಎಂದಿದ್ದೇಕೆ ?

ಟಾಪ್ ನ್ಯೂಸ್

ಪೋಷಕರೇ ನಿರೀಕ್ಷಿಸದ ಸಾಧನೆ; ಈಕೆ ಪ್ರಥಮ ಪ್ರಯತ್ನದಲ್ಲೇ ಯುಪಿಎಸ್ ಪರೀಕ್ಷೆ ತೇರ್ಗಡೆ

ಪೋಷಕರೇ ನಿರೀಕ್ಷಿಸದ ಸಾಧನೆ; ಈಕೆ ಪ್ರಥಮ ಪ್ರಯತ್ನದಲ್ಲೇ ಯುಪಿಎಸ್ ಪರೀಕ್ಷೆ ತೇರ್ಗಡೆ

ನಾಲ್ಕು ದಿನದ ಹಿಂದೆ ಭದ್ರಾ ನದಿಗೆ ಹಾರಿ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತ ದೇಹ ಪತ್ತೆ

ನಾಲ್ಕು ದಿನದ ಹಿಂದೆ ಭದ್ರಾ ನದಿಗೆ ಹಾರಿ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತ ದೇಹ ಪತ್ತೆ

cgdfg

ನಟಿ ಪಾಯಲ್ ಘೋಷ್ ಮೇಲೆ ಆ್ಯಸಿಡ್ ದಾಳಿಗೆ ಯತ್ನ

ಪುತ್ತೂರು ನಗರ ಪೊಲೀಸ್ ಠಾಣೆ

ಪುತ್ತೂರು:ಹೋಟೆಲ್ ನಲ್ಲಿ ಭಿನ್ನಕೋಮಿನ ಯವಕ-ಯುವತಿಗೆ ಹಲ್ಲೆ ಆರೋಪ:ಹಿಂದೂಸಂಘಟನೆಯ ಇಬ್ಬರ ಬಂಧನ

ಮುಂದಿನ ಚುನಾವಣೆಗೆ ಭದ್ರಾವತಿ ಕ್ಷೇತ್ರದ ಅಭ್ಯರ್ಥಿ ಘೋಷಣೆ ಮಾಡಿದ ಕುಮಾರಸ್ವಾಮಿ

ಮುಂದಿನ ಚುನಾವಣೆಗೆ ಭದ್ರಾವತಿ ಕ್ಷೇತ್ರದ ಅಭ್ಯರ್ಥಿ ಘೋಷಣೆ ಮಾಡಿದ ಕುಮಾರಸ್ವಾಮಿ

ಕಿಟ್ಟಿ ‘ಗೌಳಿ’ಗೆ ಮುಹೂರ್ತ: ಪಾವನಾ ನಾಯಕಿ

ಕಿಟ್ಟಿ ‘ಗೌಳಿ’ಗೆ ಮುಹೂರ್ತ: ಪಾವನಾ ಗೌಡ ನಾಯಕಿ

ಸಚಿವ ಮುರುಗೇಶ್ ನಿರಾಣಿ ಟ್ವಿಟ್ಟರ್ ಖಾತೆ ಹ್ಯಾಕ್!

ಸಚಿವ ಮುರುಗೇಶ್ ನಿರಾಣಿ ಟ್ವಿಟ್ಟರ್ ಖಾತೆ ಹ್ಯಾಕ್!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಡುಕಾಟಿ ಮಾನ್‌ಸ್ಟರ್‌ ಬೈಕ್‌ ಗಳ ಬುಕಿಂಗ್‌ ಶುರು : ಬೆಲೆ ಎಷ್ಟು ಗೊತ್ತಾ ?

ಡುಕಾಟಿ ಮಾನ್‌ಸ್ಟರ್‌ ಬೈಕ್‌ ಗಳ ಬುಕಿಂಗ್‌ ಶುರು : ಬೆಲೆ ಎಷ್ಟು ಗೊತ್ತಾ?

ಡ್ರೋನ್‌ ಹೊಡೆದುರುಳಿಸಲು ಪಿಎಜಿ ಬಳಕೆ

ಡ್ರೋನ್‌ ಹೊಡೆದುರುಳಿಸಲು ಪಿಎಜಿ ಬಳಕೆ

ಫೋರ್ಡ್‌ ಉತ್ಪಾದನಾ ಘಟಕಗಳು ಎಂಜಿ ತೆಕ್ಕೆಗೆ?

ಫೋರ್ಡ್‌ ಉತ್ಪಾದನಾ ಘಟಕಗಳು ಎಂಜಿ ತೆಕ್ಕೆಗೆ?

ದಾಖಲೆ ಬರೆದ ಓಲಾ ಇ-ಸ್ಕೂಟರ್‌

ದಾಖಲೆ ಬರೆದ ಓಲಾ : ಎರಡೇ ದಿನದಲ್ಲಿ 1,100 ಕೋಟಿ ಮೌಲ್ಯದ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ

ಸ್ಪೇಸ್‌ ಟೂರ್‌ ಶುರು

ಸ್ಪೇಸ್‌ ಟೂರ್‌ ಶುರು; ಏನಿದು ಸ್ಪೇಸ್‌ ಟೂರಿಸಂ?

MUST WATCH

udayavani youtube

ನೂತನ ಬಾರ್ ಓಪನ್ ಹಿನ್ನೆಲೆ ಗ್ರಾಮಸ್ಥರಿಂದ ಆಕ್ರೋಶ

udayavani youtube

‘ತಾಸೆದ ಪೆಟ್ಟ್ ಗ್’ ತುಳು ಹಾಡು ಹಾಡಿದ ಮಂಗಳೂರು ಪೊಲೀಸ್ ಆಯುಕ್ತ

udayavani youtube

ರಷ್ಯಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯಿಂದ ಗುಂಡಿನ ದಾಳಿ

udayavani youtube

ಅರಮನೆ ಆವರಣದಲ್ಲಿ ಹೆಣ್ಣಾನೆಯ ರಂಪಾಟ, ಆನೆಯನ್ನು ನಿಯಂತ್ರಿಸಿದ ಅಭಿಮನ್ಯು

udayavani youtube

ನಿಮ್ಮ ಅಧಿಕಾರಿಗಳನ್ನು ಸಂಜೆಯೊಳಗೆ ಸಸ್ಪೆಂಡ್ ಮಾಡಿ : ಮಾಜಿ ಸ್ಪೀಕರ್​ ರಮೇಶ್​ ಕುಮಾರ್​

ಹೊಸ ಸೇರ್ಪಡೆ

ಬಳಿಘಟ್ಟ ಏತ ನೀರಾವರಿ ಯೋಜನೆ: ಮುಕ್ತಾಯ ಹಂತದಲ್ಲಿ ಪ್ರಥಮ ಹಂತದ ಕಾಮಗಾರಿ

ಬಳಿಘಟ್ಟ ಏತ ನೀರಾವರಿ ಯೋಜನೆ: ಮುಕ್ತಾಯ ಹಂತದಲ್ಲಿ ಪ್ರಥಮ ಹಂತದ ಕಾಮಗಾರಿ

ಉತ್ತರ ಗೋವಾದ ಶ್ರೀರುದ್ರೇಶ್ವರ ದೇವಸ್ಥಾನಕ್ಕೆ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಭೇಟಿ

ಉತ್ತರ ಗೋವಾದ ಶ್ರೀರುದ್ರೇಶ್ವರ ದೇವಸ್ಥಾನಕ್ಕೆ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಭೇಟಿ

ಪೋಷಕರೇ ನಿರೀಕ್ಷಿಸದ ಸಾಧನೆ; ಈಕೆ ಪ್ರಥಮ ಪ್ರಯತ್ನದಲ್ಲೇ ಯುಪಿಎಸ್ ಪರೀಕ್ಷೆ ತೇರ್ಗಡೆ

ಪೋಷಕರೇ ನಿರೀಕ್ಷಿಸದ ಸಾಧನೆ; ಈಕೆ ಪ್ರಥಮ ಪ್ರಯತ್ನದಲ್ಲೇ ಯುಪಿಎಸ್ ಪರೀಕ್ಷೆ ತೇರ್ಗಡೆ

ನಾಲ್ಕು ದಿನದ ಹಿಂದೆ ಭದ್ರಾ ನದಿಗೆ ಹಾರಿ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತ ದೇಹ ಪತ್ತೆ

ನಾಲ್ಕು ದಿನದ ಹಿಂದೆ ಭದ್ರಾ ನದಿಗೆ ಹಾರಿ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತ ದೇಹ ಪತ್ತೆ

cgdfg

ನಟಿ ಪಾಯಲ್ ಘೋಷ್ ಮೇಲೆ ಆ್ಯಸಿಡ್ ದಾಳಿಗೆ ಯತ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.