
AI ನ್ಯೂಸ್; ವಿಮಾನ ಪ್ರಯಾಣಕ್ಕೆ ಎಐ ಏಜೆಂಟ್
Team Udayavani, Nov 14, 2023, 6:56 AM IST

ಆರೋಗ್ಯ, ಸುರಕ್ಷೆ, ತಂತ್ರಜ್ಞಾನ ಕ್ಷೇತ್ರಗಳ ಬೆನ್ನಲ್ಲೇ ಇದೀಗ ವಿಮಾನಯಾನ ಕ್ಷೇತ್ರದಲ್ಲಿಯೂ ಕೃತಕ ಬುದ್ಧಿಮತ್ತೆ (ಎಐ)ಯ ಬಳಕೆ ಆರಂಭವಾಗಿದ್ದು, ವಿಮಾನ ಪ್ರಯಾಣಿಕರ ಸಹಾಯಕ್ಕಾಗಿ ಏರ್‌ಇಂಡಿಯಾ ಎಐ ಆಧಾರಿತವಾದ ತನ್ನ ವರ್ಚುವಲ್ ಏಜೆಂಟ್ “ಮಹಾರಾಜ್’ ಅನ್ನು ಪರಿಚಯಿಸಿದೆ.
ಆಸ್ಕ್ ಮಹಾರಾಜ್ ಎನ್ನುವ ಈ ಎಐ ವರ್ಚುವಲ್ ಏಜೆಂಟ್:-ಪ್ರಯಾಣಿಕರಿಗೆ ಟಿಕೆಟ್ ಬುಕ್ಕಿಂಗ್, ಫ್ಲೈಟ್ ಸ್ಟೇಟಸ್, ಚೆಕ್‌ಇನ್, ಏರ್‌ಪೋರ್ಟ್ ಲಾಂಜ್ ಆ್ಯಕ್ಸೆಸ್, ಫ್ಲೈಟ್‌ಚಾರ್ಜ್, ರೀಫಂಡ್, ಪಾರ್ಕಿಂಗ್ ನಿಯಮಗಳು ಸಹಿತ 1,300ಕ್ಕೂ ಅಧಿಕ ವಿಚಾರಗಳ ಬಗ್ಗೆ ದಿನವೊಂದಕ್ಕೆ 6,000 ಪ್ರಶ್ನೆಗಳಿಗೆ ಉತ್ತರಿಸಿ , ಗೈಡ್ ಮಾಡಲಿದೆ. ವಿಶ್ವದಲ್ಲಿ ಇದೇ ಮೊದಲಬಾರಿಗೆ ವಿಮಾನಯಾನ ಸಂಸ್ಥೆ ಇಂಥ ವ್ಯವಸ್ಥೆ ಹೊಂದಿದೆ.
ಟಾಪ್ ನ್ಯೂಸ್
