ಟಿಕ್ ಟಾಕ್ ಬಳಸದಂತೆ ಉದ್ಯೋಗಿಗಳಿಗೆ ಅಮೇಜಾನ್ ಸೂಚನೆ,ಕೆಲವೇ ಗಂಟೆಗಳಲ್ಲಿ ನಿರ್ಧಾರ ಹಿಂತೆಗೆತ!
Team Udayavani, Jul 11, 2020, 8:56 AM IST
ವಾಷಿಂಗ್ಟನ್: ತನ್ನ ಉದ್ಯೋಗಿಗಳಿಗೆ ಟಿಕ್ ಟಾಕ್ ಆ್ಯಪ್ ಬಳಸದಂತೆ ಮೇಲ್ ಮಾಡಿದ ಅಮೆಜಾನ್ ಸಂಸ್ಥೆ ಅದಾದ ಕೆಲವೇ ಗಂಟೆಗಳಲ್ಲಿ ತನ್ನ ನಿರ್ಧಾರವನ್ನು ಹಿಂತೆಗೆದುಕೊಂಡಿದೆ.
ಶುಕ್ರವಾರ ಅಮೆಜಾನ್ ತನ್ನ ಉದ್ಯೋಗಿಗಳಿಗೆ ಟಿಕ್ ಟಾಕ್ ಆ್ಯಪ್ ಬಳಸದಂತೆ ಮಾತ್ರವಲ್ಲದೆ ಕೂಡಲೇ ಡಿಲೀಟ್ ಮಾಡುವಂತೆ ಇ-ಮೇಲ್ ಮೂಲಕ ಸೂಚನೆ ನೀಡಿತ್ತು. ತದನಂತರದಲ್ಲಿ ತನ್ನ ನಿರ್ಧಾರವನ್ನು ಹಿಂತೆಗೆದುಕೊಂಡಿದ್ದಲ್ಲದೆ ಕಣ್ತಪ್ಪಿನಿಂದ ಮೇಲ್ ಕಳುಹಿಸಲಾಗಿದೆ ಎಂದು ತಿಳಿಸಿದೆ. ಮಾತ್ರವಲ್ಲದೆ ಟಿಕ್ ಟಾಕ್ ಗೆ ಸಂಬಂಧಿಸಿದಂತೆ ನಮ್ಮ ನೀತಿಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ತಿಳಿಸಿದೆ.
ಕಳೆದ ವಾರವಷ್ಟೆ ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೋಂಪಿಯೋ ಟಿಕ್ ಟಾಕ್ ನಿಷೇಧ ಮಾಡುವುದರತ್ತ ಅಮೆರಿಕಾ ಚಿಂತಿಸುತ್ತಿದೆ ಎಂದಿದ್ದರು.
ಅಮೆಜಾನ್ ಟಿಕ್ ಟಾಕ್ ನಿಷೇಧ ಮಾಡುವಂತೆ ಆರಂಭಿಕ ಮೇಲ್ ಮಾಡಿರುವುದಕ್ಕೆ ಕಾರಣ ಸ್ಪಷ್ಟವಾಗಿಲ್ಲ. ಆದರೇ ಆಂತರಿಕ ಭದ್ರತೆಗಾಗಿ ಈ ಕ್ರಮಕೈಗೊಳ್ಳಲಾಗಿತ್ತು ಎಂದು ಮಾಧ್ಯಮ ಮೂಲಗಳು ತಿಳಿಸಿವೆ. ಅಮೆರಿಕಾದಲ್ಲಿ ವಾಲ್ಮಾರ್ಟ್ ನಂತರ ಅಮೆಜಾನ್ ಸಂಸ್ಥೆಯಲ್ಲಿ ಅತೀ ಹೆಚ್ಚು ಜನರು ಕಾರ್ಯನಿರ್ವಹಿಸುತ್ತಿದ್ದಾರೆ., ಮಾತ್ರವಲ್ಲದೆ ಅಮೆಜಾನ್ ವಿಶ್ವಾದ್ಯಂತ 8,40,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ.
ಟಿಕ್ ಟಾಕ್ ಗೆ ಚೀನದ ಬೈಟೇಡ್ಯಾನ್ಸ್ ಸಂಸ್ಥೆಯೂ ಮಾಲೀಕತ್ವವನ್ನು ಹೊಂದಿದ್ದು ಅತೀ ವೇಗವಾಗಿ ಬೆಳೆಯುತ್ತಿರುವ ಡಿಜಿಟಲ್ ಪ್ಲಾಟ್ಫಾರ್ಮ್ಗಳಲ್ಲಿ ಒಂದಾಗಿದೆ, ಆದರೇ ಬಳಕೆದಾರರ ಡೇಟಾವನ್ನು ಕಾಪಾಡಲು ಭಾರತ ಸರ್ಕಾರ ಟಿಕ್ಟಾಕ್ ಸೇರಿದಂತೆ 59 ಚೀನೀ ಅಪ್ಲಿಕೇಶನ್ಗಳನ್ನು ಜೂನ್ ನಲ್ಲಿ ನಿಷೇಧಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sparrows ಕಣ್ಮರೆಯಾಗುತ್ತಿರುವ ಗುಬ್ಬಚ್ಚಿಗಳು..ಆದರೆ ಇಲ್ಲಿವೆ ನೂರಾರು ಚಿಂವ್..ಚಿಂವ್ ಗಳು..
ಉದ್ಯಾವರ-ಮರ್ಣೆ-ಬೆಳ್ಳೆ ರಸ್ತೆ ಅಭಿವೃದ್ಧಿ
Panaji; ಹೊಸ ದಾಖಲೆ ನಿರ್ಮಿಸಿದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್
ರಾಷ್ಟ್ರೀಯ ನಾಟ್ಯೋತ್ಸವ; ದೇಶವೇ ಕೆರೆಮನೆಯತ್ತ ನೋಡುವಂತಾಗಿದ್ದು ಸಾಧನೆ
Thirthahalli ಅಂಗನವಾಡಿ ಮಿಲೆಟ್ ಲಡ್ಡು ಮಿಶ್ರಣದಲ್ಲಿ ಹುಳು ಪ್ರತ್ಯಕ್ಷ !