ಶೀಘ್ರದಲ್ಲಿಯೇ ಮಾರುಕಟ್ಟೆಗೆ ಲಗ್ಗೆ ಇಡಲಿರುವ ಐ ಪೋನ್ -13
ಹೊಸ ಐ ಪೋನ್ 13 ಸ್ಮಾರ್ಟ್ ಪೋನ್ 120 Hz OLED ಡಿಸ್ ಪ್ಲೇ ಅನ್ನು ಒಳಗೊಂಡಿರಲಿದೆ.
Team Udayavani, Jan 2, 2021, 4:00 PM IST
ನವದೆಹಲಿ: ವಿಶ್ವದ ಸುಪ್ರಸಿದ್ಧ ಆ್ಯಪಲ್ ಕಂಪೆನಿ ತನ್ನ ಐ ಪೋನ್ 12ನೇ ಆವೃತ್ತಿಯ ಸ್ಮಾರ್ಟ್ ಪೋನ್ ಅನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದ ಕೆಲವೇ ದಿನಗಳಲ್ಲಿ ಆ್ಯಪಲ್ ಕಂಪನಿ ತನ್ನ ಐ ಪೋನ್ 13 ಆವೃತ್ತಿಯ ಹೊಸ ಮೊಬೈಲ್ ಪೋನ್ ಅನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲು ತಯಾರಿ ನಡೆಸುತ್ತಿದೆ ಎನ್ನಲಾಗಿದೆ.
ಕೊರಿಯಾ ಮೂಲದ ವರದಿಯ ಪ್ರಕಾರ ಆ್ಯಪಲ್ ಕಂಪನಿಯು ತನ್ನ ಐ ಪೋನ್ 13 ಸರಣಿಯನ್ನು ಸದ್ಯದಲ್ಲಿಯೇ ಮಾರುಕಟ್ಟೆಗೆ ಬಿಡುಗಡೆ ಮಾಡಲು ಎಲ್ಲಾ ತಯಾರಿಗಳನ್ನು ಮಾಡಿಕೊಂಡಿದ್ದು, ತನ್ನ ಹಿಂದಿನ ಆವೃತ್ತಿಯ ಮೊಬೈಲ್ ಗಿಂತ ಅತ್ಯಾಕರ್ಷಕವಾದ ವಿನ್ಯಾಸದೊಂದಿಗೆ ಹಲವಾರು ವೈಶಿಷ್ಟ್ಯತೆಗಳನ್ನು ಇದು ಹೊಂದಿರಲಿದೆ ಎನ್ನಲಾಗಿದೆ.
ಹೊಸ ಐ ಪೋನ್ 13 ಸ್ಮಾರ್ಟ್ ಪೋನ್ 120 Hz OLED ಡಿಸ್ ಪ್ಲೇ ಅನ್ನು ಒಳಗೊಂಡಿರಲಿದ್ದು, ಐ ಪೋನ್ 13 ಪ್ಯಾನಲ್ ಗೆ ಸ್ಯಾಮ್ ಸಂಗ್ ಮತ್ತು ಎಲ್ ಜಿ ಡಿಸ್ ಪ್ಲೇಗಳು ಪ್ರಮುಖ ಸಪ್ಲೇಯರ್ ಗಳಾಗಿವೆ ಎಂದು ತಿಳಿದು ಬಂದಿದೆ.
ಈಗಿನ ವರದಿಯ ಪ್ರಕಾರ ಐ ಪೋನ್ ಬಿಡುಗಡೆಗೊಳಿಸಲಿರುವ ಐ ಪೋನ್ 13 ಪ್ರೋ ಹಾಗೂ ಐ ಪೋನ್ 13 ಪ್ರೋ ಮ್ಯಾಕ್ಸ್ ಸರಣಿಯ ಸ್ಮಾರ್ಟ್ ಪೋನ್ ಗಳಲ್ಲಿ 120 Hz ಪ್ರೋ ಮೋಷನ್ ಡಿಸ್ ಪ್ಲೇ ಸೌಲಭ್ಯ ಇರಲಿದೆಯಂತೆ. ಅಲ್ಲದೆ ಈ ಸ್ಮಾರ್ಟ್ ಪೋನ್ ಗಳು ಕೈಗೆಟಕುವ ದರದಲ್ಲಿ ಲಭ್ಯವಾಗುವ ಸಾದ್ಯತೆಗಳಿವೆ ಎಂದಿದೆ.
ಇದನ್ನೂ ಓದಿ: ಭಾರತೀಯ ಕ್ರಿಕೆಟಿಗರ ಹೊಟೇಲ್ ಬಿಲ್ ನೀಡುವ ಮೂಲಕ ಸುದ್ದಿಯಾದ ನವಲ್‌ದೀಪ್ ಸಿಂಗ್
ಈ ಕುರಿತಾಗಿ ಇನ್ನು ಕೆಲವೇ ದಿನಗಳಲ್ಲಿ ಐ ಪೋನ್ ಕಂಪನಿಯು ತನ್ನ ಹೊಸ ಸರಣಿಯೊಂದನ್ನು ಬಿಡುಗಡೆಗೊಳಿಸಲಿದೆ ಎಂದು ಪ್ರಸಿದ್ಧ ಟಿಪ್ ಸ್ಟಾರ್ ಜಾನ್ ಅವರು ಹೇಳಿಕೆ ನೀಡುವ ಮೂಲಕ ಐ ಪೋನ್ 13 ಕುರಿತಾದ ಸುಳಿವನ್ನು ನೀಡಿದ್ದರು.
ಈ ಸಂದರ್ಭದಲ್ಲಿ ಅವರು ಐ ಪೋನ್ ಮುಂಬರುವ ಸರಣಿಯ ಮೊಬೈಲ್ ಪೋನ್ ಹಲವಾರು ವಿಭಿನ್ನ ಸೌಲಭ್ಯಗಳನ್ನು ಒಳಗೊಂಡಿರುತ್ತದೆ ಹಾಗೂ ಇದು ಪೋರ್ಟ್ ಲೆಸ್ ಆಗಿರಲಿದೆ. ಇದು ಸಂಪೂರ್ಣ ಪೋರ್ಟ್ ಲೆಸ್ ಆಗಿರುವುದರಿಂದ ಚಾರ್ಜಿಂಗ್ ಅನ್ನು ಮ್ಯಾಗ್ ಸೇಫ್ ಮೂಲಕ ಮಾಡುವ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ತಮ್ಮ ಟ್ಟೀಟ್ ಸಂದೇಶದ ಮೂಲಕ ಮಾಹಿತಿ ಹಂಚಿಕೊಂಡಿದ್ದರು.
ಮ್ಯಾಗ್ ಸೇಫ್ ಇದು ಆಯಸ್ಕಾಂತೀಯವಾಗಿ ಜೋಡಿಸಲಾಗಿರುವ ವೈರ್ ಲೆಸ್ ವಿದ್ಯುತ್ ವರ್ಗಾವಣಾ ವ್ಯವಸ್ಥೆಯಾಗಿದ್ದು, ಈ ತಂತ್ರಜ್ಞಾನದ ಕುರಿತಾದ ಯಾವುದೇ ಮಾಹಿತಿಗಳನ್ನು ಸಂಸ್ಥೆ ಈವರೆಗೆ ಬಹಿರಂಗಪಡಿಸಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Accenture: ಐಟಿ ವಲಯದ ಬೃಹತ್ ಅಕ್ಸೆಂಜರ್ ಕಂಪನಿಯ 19,000 ಉದ್ಯೋಗಿಗಳ ವಜಾ
Google Services Down!; ಜಿ ಮೇಲ್, ಯೂಟ್ಯೂಬ್, ಗೂಗಲ್ ಡ್ರೈವ್ ಸೇವೆಯಲ್ಲಿ ವ್ಯತ್ಯಯ
HP ಯಿಂದ ಪೆವಿಲಿಯನ್ ಏರೋ 13 ಲ್ಯಾಪ್ ಟಾಪ್ ಗಳ ಬಿಡುಗಡೆ
ಹೊಸ ಮಾದರಿ ವೆರ್ನಾ ರಿಲೀಸ್; ನಾಲ್ಕು ವಿಧಗಳಲ್ಲಿ, ಒಂಬತ್ತು ಬಣ್ಣಗಳಲ್ಲಿ ಲಭ್ಯ
PAN Aadhaar Link: 10 ದಿನ ಬಾಕಿ – ಆಧಾರ್ PAN ಲಿಂಕ್ ಆಗಿದೆಯಾ ಎಂದು ತಿಳಿಯುವುದು ಹೇಗೆ?