
BSNL ಬೊಂಬಾಟ್ ಯೋಜನೆ : 300 ಕ್ಕೂ ಹೆಚ್ಚು ಚಾನೆಲ್ ಗಳು ಕೇವಲ 129 ರೂ ಗಳಲ್ಲಿ..!
Team Udayavani, Mar 18, 2021, 12:52 PM IST

ನವ ದೆಹಲಿ : ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿಯಾದ ಬಿ ಎಸ್ ಎನ್ ಎಲ್ ತನ್ನ ಇಂಟರ್ ನೆಟ್ ಬಳಕೆದಾರರಿಗೆ ಒಟಿಟಿ ಅಡಿಯಲ್ಲಿ ಹೊಸದಾದ ಉತ್ತಮ ಯೋಜನೆಯೊಂದನ್ನು ನೀಡುತ್ತಿದೆ.
ಕಂಪನಿಯು YUPP TV ಅಡಿಯಲ್ಲಿ ಈ ಕೊಡುಗೆಗಳನ್ನು ನೀಡುತ್ತಿದ್ದು, ಇದು ಮನರಂಜನೆಯ ದೃಷ್ಟಿಯಿಂದ ಭಾರೀ ಅಗ್ಗದ ದರದಲ್ಲಿ ಗ್ರಾಹಕರಿಗೆ ದೊರಕುತ್ತಿರುವ ಯೊಜನೆಯಾಗಿದೆ.
ಓದಿ : ಇಂಗ್ಲೆಂಡ್ ಮಾಡಿದ ತಪ್ಪನ್ನೇ ವಿರಾಟ್ ಮಾಡುತ್ತಿದ್ದಾರೆ: ಆಯ್ಕೆ ಪ್ರಕ್ರಿಯೆ ಬಗ್ಗೆ ವಾನ್ ಟೀಕೆ
ಇನ್ನು, ಬಿ ಎಸ್ ಎನ್ ಎಲ್ ತನ್ನ ಒಟಿಟಿ ಪ್ಲಾಟ್ ಫಾರ್ಮ್‌ಗಾಗಿ ಉತ್ತಮ ಯೋಜನೆಯನ್ನು ತಂದಿದೆ. ಕಂಪನಿಯು ಕೇವಲ 129 ರೂಗಳಿಗೆ ಮೂರು ತಿಂಗಳ ಕಾಲ ಒಟಿಟಿ ಸೇವೆಯನ್ನು ಒದಗಿಸುತ್ತಿದೆ.
ಕಂಪನಿಯ ಅಧಿಕೃತ ವೆಬ್‌ಸೈಟ್, ಪ್ರಕಾರ ಬಿ ಎಸ್ ಎನ್ ಎಲ್ ಒಟಿಟಿ ಪ್ಲಾಟ್ ಫಾರ್ಮ್ ನಲ್ಲಿ ZEE5 Premium, SonyLIV, Voot Select ಸೇರಿ ಮುನ್ನೂರು ಚಾನೆಲ್ ಗಳ ಪ್ಯಾಕ್ ಕೂಡ ಸಿಗಲಿದೆ. ಈ ಪ್ಯಾಕ್ ಗಳನ್ನು ಪ್ರತ್ಯೇಕವಾಗಿ ಖರೀದಿಸುವುದಾದರೇ ಭಾರೀ ಬೆಲೆ ಪಾವತಿಸಬೇಕಾಗುತ್ತದೆ. ಆದರೇ, ಬಿ ಎಸ್ ಎನ್ ಎಲ್ ಗ್ರಾಹಕರನ್ನು ತನ್ನತ್ತ ಸೆಳೆದುಕೊಳ್ಳುವ ಉದ್ದೇಶದಿಂದ ಈ ನೂತನ ಯೋಜನೆಯೊಂದನ್ನು ಬಿಡುಗಡೆ ಮಾಡಿದೆ.
ತನ್ನ ಗ್ರಾಹಕರಿಗೆ ವಿಶ್ವದ ಅತಿದೊಡ್ಡ ಇಂಟರ್ ನೆಟ್ ಟಿವಿ YUPP TV ಆ್ಯಪ್ ಅಡಿಯಲ್ಲಿ ಈ ಬೊಂಬಾಟ್ ಕೊಡುಗೆಗಳನ್ನು ನೀಡಲಾಗುತ್ತಿದೆ ಎಂದು ಬಿ ಎಸ್ ಎನ್ ಎಲ್ ಹೇಳಿಕೊಂಡಿದೆ.
ಓದಿ : 20 ಕಿಲೋಮೀಟರ್ ಗೂ ಹೆಚ್ಚು ದೂರ ಹಿಮ್ಮುಖವಾಗಿ ಚಲಿಸಿದ ರೈಲು: ತಪ್ಪಿದ ಭಾರಿ ದುರಂತ
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

ರಾಮನಗರದಲ್ಲಿ ವರುಣನ ಅಬ್ಬರ… ಸಿಡಿಲು ಬಡಿದು 4ಮೇಕೆ ಸಾವು, ಮೂರು ಕುರಿಗಾಹಿಗಳಿಗೆ ಗಾಯ

Chamarajanagar; ಜೋಡಿ ರಸ್ತೆ ದುರವಸ್ಥೆ; ದ್ವಿಚಕ್ರ ವಾಹನ ಸವಾರರ ಪರದಾಟ

Bhatkal: ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ ಆದೇಶ ನೀಡುವಂತೆ ಮನವಿ

IPL: ಧೋನಿಯ ಬಗ್ಗೆ ಜಡೇಜಾ ಟ್ವೀಟ್… ʻಮಾಹಿ ಭಾಯಿ…ನಿಮಗಾಗಿ..ʼ- ಏನಿದು?

New Delhi: ಏರ್ ಇಂಡಿಯಾ ಸಿಬ್ಬಂದಿ ಮೇಲೆ ಪ್ರಯಾಣಿಕನಿಂದ ಹಲ್ಲೆ…