
ಗೂಗಲ್ ಪ್ಲೇ ಸ್ಟೋರ್ ನಲ್ಲಿ ಹೊಸ ಗೇಮ್ FAU-G ಲಭ್ಯ
ಬೆಂಗಳೂರು ಮೂಲದ ಎನ್ ಕೋರ್ ಗೇಮ್ಸ್ ಅಭಿವೃದ್ಧಿಪಡಿಸಿದ FAU-G
Team Udayavani, Jan 26, 2021, 1:37 PM IST

ನವ ದೆಹಲಿ : FAU-G ಅಥವಾ ಫಿಯರ್ ಲೆಸ್ ಮತ್ತು ಯುನೈಟೆಡ್ ಗಾರ್ಡ್ಸ್, ಈಗ Google Play ನಲ್ಲಿ ಡೌನ್ ಲೋಡ್ ಮಾಡಲು ಲಭ್ಯವಿದೆ. ಈ ಆಟವನ್ನು ಬೆಂಗಳೂರು ಮೂಲದ ಎನ್ ಕೋರ್ ಗೇಮ್ಸ್ ಅಭಿವೃದ್ಧಿಪಡಿಸಿದೆ ಮತ್ತು ಕೇಂದ್ರ ಸರ್ಕಾರದಿಂದ ನಿಷೇಧಕ್ಕೊಳಗಾದ ಜನಪ್ರಿಯ PUBG ಗೇಮ್ ಗೆ ಭಾರತದ ಪರ್ಯಾಯವಾಗಿದೆ ಎಂದು ಹೇಳಲಾಗುತ್ತದೆ.
ಓದಿ : ಬ್ಯಾರಿಕೇಡ್ ಮುರಿದವರು ನಾವಲ್ಲ : ಸಂಯುಕ್ತ ಕಿಸಾನ್ ಮೋರ್ಚಾ
ಎನ್ ಕೋರ್ ಈ ಹೊಸ ಆಟವನ್ನು ಸೆಪ್ಟೆಂಬರ್ ನಲ್ಲಿ ಬಿಡುಗಡೆಗೊಳಿಸುತ್ತೇವೆ ಎಂದು ಹೇಳಿತ್ತು. ಪ್ರಾಥಮಿಕ ಆವೃತ್ತಿಯನ್ನು ನವೆಂಬರ್ ನಲ್ಲಿ ಬಿಡುಗಡೆ ಮಾಡಲು ಆಯೋಜಿಸಲಾಗಿತ್ತು. ಆದಾಗ್ಯೂ, ಅದು ವಿಳಂಬವಾಗಿತ್ತು.
ಗಣರಾಜ್ಯೋತ್ಸವದ ಸಂದರ್ಭದಲ್ಲಿ FAU-G, ಗೂಗಲ್ ಪ್ಲೇ ಸ್ಟೋರ್ ನಲ್ಲಿ ಡೌನ್ ಲೋಡ್ ಮಾಡಲು ಲಭ್ಯವಿದೆ. ಆಟದ ಪ್ರಿ ರಿಜಿಸ್ಟ್ರೇಶನ್ ಕಳೆದ ಡಿಸೆಂಬರ್ ನಿಂದ ಲೈವ್ ಆಗಿತ್ತು. ಕೆಲವೇ ದಿನಗಳ ಹಿಂದೆ ನಾಲ್ಕು ಮಿಲಿಯನ್‌ಗಳನ್ನು ಮೀರಿದೆ. ಹಾಗೂ FAU-G ನ ಬ್ಯಾಟಲ್ ರಾಯಲ್ ಮೋಡ್ ಮತ್ತು ಪಿವಿಪಿ [ಪ್ಲೇಯರ್ ವರ್ಸಸ್ ಪ್ಲೇಯರ್] ಮೋಡ್‌ಗಳು ‘ಶೀಘ್ರದಲ್ಲೇ ಬರಲಿದೆ’ ಎಂದು ಎನ್ ಕೋರ್ ಗೇಮ್ಸ್ ಸಂಸ್ಥಾಪಕ ವಿಶಾಲ್ ಗೊಂಡಾಲ್ ಖಚಿತಪಡಿಸಿದ್ದಾರೆ.
ಓದಿ : ಗಣರಾಜ್ಯೋತ್ಸವದಲ್ಲಿ ಜಮ್ ನಗರದ “ಪಾಗ್ಡಿ”ಯಲ್ಲಿ ಕಂಗೊಳಿಸಿದ ಪ್ರಧಾನಿ
FAU-G ಅಥವಾ ಫಿಯರ್ ಲೆಸ್ ಮತ್ತು ಯುನೈಟೆಡ್ ಗಾರ್ಡ್ಸ್, ಆಟವು ಈಗ ಗೂಗಲ್ ಪ್ಲೇನಲ್ಲಿ ಉಚಿತ ಡೌನ್‌ಲೋಡ್ ಗಾಗಿ ಲಭ್ಯವಿದೆ. ಬಳಕೆದಾರರು ತಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಗಳಲ್ಲಿನ ಗೂಗಲ್ ಪ್ಲೇ ಸ್ಟೋರ್ ಗೆ ಹೋಗಿ ‘ಇನ್‌ಸ್ಟಾಲ್’ ಬಟನ್ ಕ್ಲಿಕ್ ಮಾಡುವ ಮೂಲಕ FAU-G ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.
ಡೆವಲಪರ್‌ಗಳ ಪ್ರಕಾರ, ಆಟವು ಆಂಡ್ರಾಯ್ಡ್ 8 ವರ್ಶನ್ ಹಾಗೂ ಅದಕ್ಕಿಂತ ಹೆಚ್ಚಿನ ಸಾಮರ್ಥ್ಯ ಹೊಂದಿರುವ ಹ್ಯಾಂಡ್ ಸೆಟ್ ಗಳಲ್ಲಿ ಈ ಗೇಮ್ ನನ್ನು ಆಡಲು ಬಳಸಬಹುದು ಎಂದು ಕಂಪೆನಿ ಹೇಳಿದೆ.
ಸದ್ಯಕ್ಕೆ, ಐಒಎಸ್ ಬಳಕೆದಾರರಿಗೆ ಈ ಆಟ ಲಭ್ಯವಾಗುತ್ತದೆಯೇ ಅಥವಾ ಯಾವಾಗ ಎಂಬ ಬಗ್ಗೆ ಡೆವಲಪರ್ಸ್ ಯಾವುದೇ ಮಾಹಿತಿ ಇದುವರೆಗೆ ನೀಡಿಲ್ಲ.
ಕಳೆದ ಸೆಪ್ಟೆಂಬರ್ ನಲ್ಲಿ ನಟ ಅಕ್ಷಯ್ ಕುಮಾರ್ FAU-G ಬಗ್ಗೆ ಮಾಹಿತಿ ನೀಡಿದ್ದರು, ಪ್ರಧಾನಿ ಮೋದಿ ಅವರ ಆತ್ಮನಿರ್ಭರ್ ಆಂದೋಲನವನ್ನು ಈ ಯೋಜನೆ ಬೆಂಬಲಿಸುತ್ತದೆ. ಮಾತ್ರವಲ್ಲದೇ, ಈ ಆಟವು ಆಟಗಾರರಿಗೆ ‘ನಮ್ಮ ಸೈನಿಕರ ತ್ಯಾಗದ ಬಗ್ಗೆ ತಿಳಿಯಲು’ ಸಹಾಯ ಮಾಡುತ್ತದೆ ಎಂದು ಹೇಳಿದ್ದರು. FAU-G ಆಟದಿಂದ ಬರುವ ಆದಾಯದ 20 ಪ್ರತಿಶತವನ್ನು “ಭಾರತ್ ಕೆ ವೀರ್ ಟ್ರಸ್ಟ್”ಗೆ ನೀಡಲಾಗುವುದು ಎಂದು ಕುಮಾರ್ ಘೋಷಿಸಿದ್ದರು.
ಓದಿ : ದೆಹಲಿ ಟ್ರ್ಯಾಕ್ಟರ್ Rally: ಪೊಲೀಸರನ್ನೇ ಅಟ್ಟಾಡಿಸಿಕೊಂಡು ಹೋದ ರೈತರು, ಹಲವರಿಗೆ ಗಾಯ
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan

ಯಾರು ಬೇಕಾದರೂ ಸುಲಭವಾಗಿ ನಂದಿ ಬಟ್ಟಲು ಹೂವಿನಿಂದ ಸುಂದರ ಹಾರ ತಯಾಸಬಹುದು
ಹೊಸ ಸೇರ್ಪಡೆ

ಮೈಗ್ರೇನ್ ಎಂಬ ತಲೆಶೂಲೆ…ಇದರ ಲಕ್ಷಣಗಳೇನು? ಮೈಗ್ರೇನ್ಗೆ ಇದೆ ಮನೆ ಮದ್ದು

ದುಬೈಯಿಂದ ಆಕ್ಲೆಂಡ್ ಗೆ ಹೊರಟಿದ್ದ ಎಮಿರೇಟ್ಸ್ ವಿಮಾನ ಮತ್ತೆ ದುಬೈಗೆ ಬಂದಿಳಿಯಿತು!

ಪುಟಿನ್ ಗಿಂತ ಚೀನಾ ಅಧ್ಯಕ್ಷ ಅತ್ಯಂತ ಒರಟು, ಕ್ರೂರ ನಾಯಕ: ಮೈಕ್ ಪೊಂಪಿಯೊ

ಭಾರತ್ ಜೋಡೋ ಯಾತ್ರೆ ಎಲ್ಲಾ ಸಮಾಜ ವಿರೋಧಿ ಅಂಶಗಳನ್ನು ಒಟ್ಟುಗೂಡಿಸಿತು: ಬಿಜೆಪಿ

ಕಾರ್ಕಳ: ಸರಕಾರಿ-ಖಾಸಗಿ ಚಾಲಕ-ನಿರ್ವಾಹಕ ನಡುವೆ ಹೊಡೆದಾಟ