ಲಕ್ಸುರಿ ರೈಡ್‌ಗೆ ಗೋಲ್ಡ್‌ ವಿಂಗ್‌

Team Udayavani, Feb 26, 2018, 11:45 AM IST

bike.jpg

ಹಲವರಿಗೆ ಕಾರು, ಬೈಕ್‌ ಸವಾರಿ ಅನ್ನೋದು ಒಂದು ಹುಚ್ಚುತನ. ಹೀಗೂ ಇರುತ್ತಾ? ಎಂದು ಹುಬ್ಬೇರಿಸುವ ಮಟ್ಟಕ್ಕೆ ಕಾರು, ಬೈಕ್‌ಗಳ ಮೇಲೆ ಪ್ರೀತಿ ಬೆಳೆಸಿಕೊಂಡಿರುತ್ತಾರೆ. ಕೆಲವೊಮ್ಮೆ ನಂಬಲಿಕ್ಕೂ ಸಾಧ್ಯವಾಗದ ರೀತಿಯ ದುಬಾರಿ ಕಾರು, ಬೈಕ್‌ಗಳು ಮಾರುಕಟ್ಟೆ ಪ್ರವೇಶಿಸಿದ ಬೆನ್ನಲ್ಲೇ ಖರೀದಿಸಿ ತಮ್ಮ ಮನೆಯಂಗಳದಲ್ಲಿ ತಂದು ನಿಲ್ಲಿಸಿಕೊಳ್ಳುವವರಿದ್ದಾರೆ.

ಅಷ್ಟಕ್ಕೂ ಇವೆಲ್ಲವೂ ಹಣ ಇರುವಲ್ಲೇ ಸಾಧ್ಯ ಅನ್ನೋದು ಕಟು ಸತ್ಯ. ಹಾಗಂತ ಮತ್ಯಾರಿಂದಲೂ ಸಾಧ್ಯವೇ ಇಲ್ಲ ಎಂದು ವಾದಿಸಲೂ ಸಾಧ್ಯವಾಗದು. ನಿರ್ದಿಷ್ಟ ಗುರಿ ಇಟ್ಟುಕೊಂಡು ಸಾಧನೆಯ ಬೆನ್ನೇರಿದ ಅನೇಕ ಬಡವರೂ ಬೆವರಿಳಿಸಿ, ಕೈತುಂಬ ಗಳಿಸಿಯೇ ದುಬಾರಿ ಕಾರು, ಬೈಕ್‌ಗಳ ಒಡೆಯರಾಗಿರುವುದಕ್ಕೆ ನೂರಾರು ಉದಾಹರಣೆಗಳು ಸಿಗುತ್ತವೆ. ಒಂದಂತೂ ಖರೆ, “ಲಕ್ಸುರಿ’ ಲೈಫ್ಗೆ ಆಕರ್ಷಿತರಾಗದಿರುವವರು ಕಡಿಮೆ. ಹೆಚ್ಚಿನವರು ಜೀವನದಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಲಕ್ಸುರಿತನದ ಅನುಭವ ಬಯಸುತ್ತಾರೆ.

ಇಂಥ ಕ್ರೇಜ್‌ ಹೆಚ್ಚಿನದಾಗಿ ಇರುವುದೇ ಯುವಕ-ಯುವತಿಯರಲ್ಲಿ. ಅಂಥವರ ನಾಡಿಮಿಡಿತ ಅರಿತಿರುವ ಆಟೋಮೊಬೈಲ್‌ ಕಂಪನಿಗಳು, ಈಗ ವರ್ಷದ 365 ದಿನಗಳೂ ಹೊಸ ಹೊಸ ವಿನ್ಯಾಸ, ತಂತ್ರಜ್ಞಾನಗಳ ಅಳವಡಿಕೆಯ ಅನ್ವೇಷಣೆಯಲ್ಲಿ ತೊಡಗಿರುತ್ತವೆ. ಇದಕ್ಕೆಂದೇ ತಜ್ಞರನ್ನು, ನೂರಾರು ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿರುತ್ತವೆ. ಇಂಥ ಅನ್ವೇಷಣೆಯ ಫ‌ಲವಾಗಿ ಮಾರುಕಟ್ಟೆಗೆ ಪರಿಚಯಗೊಂಡಿರುವ ದುಬಾರಿ ಬೈಕ್‌ಗಳಲ್ಲಿ “ಹೋಂಡಾ ಗೋಲ್ಡ್‌ ವಿಂಗ್‌’ ಕೂಡ ಒಂದು.
1974ರಲ್ಲೇ ಹೋಂಡಾ ಲಕ್ಸುರಿ ವಿನ್ಯಾಸದಲ್ಲಿ ಈ ಹೆಸರಿನ ಬೈಕ್‌ ತಯಾರಿಸಿತ್ತು. ಆನಂತರದ ದಿನಗಳಲ್ಲಿ ಅಮೆರಿಕ, ಯುರೋಪ್‌, ಆಸ್ಟ್ರೇಲಿಯಾಗಳ ಜನಪ್ರಿಯ ಬೈಕ್‌ಗಳಲ್ಲಿ ಇದೂ ಒಂದಾಗಿತ್ತು. ಜಪಾನ್‌ನಲ್ಲೂ ಈ ಬೈಕ್‌ನ ಬಗ್ಗೆ ಭಾರೀ ಕ್ರೇಜ್‌ ಸೃಷ್ಟಿಯಾಗಿತ್ತು. ಈಗ ಭಾರತ ಕೂಡ ಇದರಿಂದ ಹೊರತಾಗಿಲ್ಲ.

ಗುಣಮಟ್ಟದ ಎಂಜಿನ್‌ ಬಳಕೆ
“ಕಾಸಿಗೆ ತಕ್ಕ ಕಜ್ಜಾಯ’ ಎನ್ನುವಂತೆ 2018ರ ಸಾಲಿನಲ್ಲಿ ಪರಿಚಯಿಸಲಾಗಿರುವ ಗೋಲ್ಡ್‌ ವಿಂಗ್‌ನಲ್ಲಿ ಎಂಜಿನ್‌ನ ಗುಣಮಟ್ಟವನ್ನು ಇನ್ನಷ್ಟು ಉತ್ತಮಗೊಳಿಸಲಾಗಿದೆ. 1833 ಸಿಸಿ, 125 ಬಿಎಚ್‌ಪಿ ಮತ್ತು 170ಎನ್‌ಎಂ ಟಾರ್ಕ್‌ ಸಾಮರ್ಥ್ಯದ 6 ಸಿಲಿಂಡರ್‌ ಎಂಜಿನ್‌ ಬಳಸಿಕೊಳ್ಳಲಾಗಿದ್ದು, ಯಾವುದೇ ಪ್ರಕಾರದ ರಸ್ತೆಯಲ್ಲೂ ಸಲೀಸಾಗಿ ಮುನ್ನುಗ್ಗುವ ಶಕ್ತಿ ಹೊಂದಿದೆ. ಹೈಡ್ರೋಲಿಕ್‌ ಕ್ಲಚ್‌ ವ್ಯವಸ್ಥೆಯೊಂದಿಗೆ 7ಸ್ಪೀಡ್‌ ಗೇರ್‌ಬಾಕ್ಸ್‌ ನೀಡಲಾಗಿದೆ.

ಸುರಕ್ಷತೆಯೂ ಅತ್ಯುತ್ತಮ
ಅಂದಹಾಗೆ ಸುರಕ್ಷತೆ ದೃಷ್ಟಿಯಿಂದ ಎಲ್ಲಾ ಮಾದರಿಯ ಅತ್ಯಾಧುನಿಕ ತಂತ್ರಜ್ಞಾನಗಳನ್ನೂ ಬಳಸಿಕೊಳ್ಳಲಾಗಿದೆ. ಎಬಿಎಸ್‌ ವ್ಯವಸ್ಥೆಯ 3ಪಿಸ್ಟನ್‌ ಕ್ಯಾಲಿಪರ್‌ ಹೈಡ್ರೋಲಿಕ್‌ ಡಿಸ್ಕ್ ಬ್ರೇಕ್‌ ಅನ್ನು ಮುಂಭಾಗದಲ್ಲಿಯೂ, ಎಬಿಎಸ್‌ ವ್ಯವಸ್ಥೆಯ 3ಪಿಸ್ಟನ್‌ ಕ್ಯಾಲಿಪರ್‌ ವೆಂಟಿಲೇಟೆಡ್‌ ಡಿಸ್ಕ್ ಬ್ರೇಕ್‌ ಅನ್ನು ಹಿಂಭಾಗದಲ್ಲಿ ಬಳಸಿಕೊಳ್ಳಲಾಗಿದೆ.

ವೇರಿಯಂಟ್‌
ಎಸ್‌ಟಿಡಿ ಮತ್ತು ಟೂರ್‌ ಹೆಸರಿನ ಎರಡು ವೇರಿಯಂಟ್‌ಗಳಲ್ಲಿ ಲಭ್ಯವಿದ್ದು, ಟೂರ್‌ ಹೆಸರಿನ ವೇರಿಯಂಟ್‌ನ ಎಕ್ಸ್‌ ಶೋ ರೂಂ ಬೆಲೆ 30 ಲಕ್ಷ ರೂ. ಆಗಲಿದೆ.

ಎಕ್ಸ್‌ ಶೋರೂಂ ಬೆಲೆ 28.45 ಲಕ್ಷ ರೂ. ನಿಂದ

– ಕರ್ಬ್ ಭಾರ 364 ಕಿಲೋಗ್ರಾಂ
– ಉದ್ದ 2475 ಮಿ.ಮೀ/905ಮಿ.ಮೀ ಅಗಲ/1340ಮಿ.ಮೀ ಎತ್ತರ
– 130ಮಿ.ಮೀ. ಗ್ರೌಂಡ್‌ ಕ್ಲಿಯರೆನ್ಸ್‌
– ವೀಲ್‌ ಅಳತೆ 18 ಇಂಚು
– ಇಂಧನ ಶೇಖರಣಾ ಸಾಮರ್ಥ್ಯ 21.1 ಲೀಟರ್‌

– ಗಣಪತಿ ಅಗ್ನಿಹೋತ್ರಿ

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.