
ಗೂಗಲ್ ಉದ್ಯೋಗಿಗಳ ಸವಲತ್ತುಗಳಿಗೆ ಕತ್ತರಿ
Team Udayavani, Apr 2, 2023, 7:55 AM IST

ವಾಷಿಂಗ್ಟನ್: ಈ ವರ್ಷದ ಆರಂಭದಲ್ಲಿ 12,000 ಉದ್ಯೋಗಿಗಳನ್ನು ವಜಾ ಮಾಡುವ ಘೋಷಣೆ ಮಾಡಿದ್ದ ಗೂಗಲ್ ಕಂಪನಿ, ಇದೀಗ ವೆಚ್ಚ ಕಡಿತದ ಭಾಗವಾಗಿ ಉದ್ಯೋಗಿಗಳಿಗೆ ನೀಡುತ್ತಿದ್ದ ಹಲವು ಸವಲತ್ತುಗಳಿಗೆ ಕತ್ತರಿ ಹಾಕುವ ಮಾಹಿತಿ ನೀಡಿದೆ.
“ಇನ್ನು ಮುಂದೆ ಉಚಿತ ತಿಂಡಿಗಳು, ಲಾಂಡ್ರಿ ಸೇವೆ, ಮಸಾಜ್ ಸೇವೆ ಮತ್ತು ಕಂಪನಿ ಊಟಕ್ಕೆ ಬ್ರೇಕ್ ಬೀಳಲಿದೆ. ಇದೇ ವೇಳೆ ಹೊಸ ಉದ್ಯೋಗಿಗಳ ನೇಮಕವೂ ತಗ್ಗಲಿದೆ. ಲ್ಯಾಪ್‌ಟಾಪ್‌ಗ್ಳ ಖರೀದಿಯಲ್ಲೂ ಕಡಿವಾಣ ಬೀಳಲಿದೆ. ಕೆಲಸಕ್ಕೆ ಹೆಚ್ಚು ಆದ್ಯತೆ ನೀಡುವ ನಿಟ್ಟಿನಲ್ಲಿ ಉದ್ಯೋಗಿಗಳ ತಂಡಗಳನ್ನು ಮರುರಚನೆ ಮಾಡಲಾಗುವುದು.
ಹೆಚ್ಚಿನ ಆದ್ಯತೆಯ ಕೆಲಸದ ಮೇಲೆ ಕೇಂದ್ರೀಕರಿಸಲು ಕಂಪನಿಯು ಹಣವನ್ನು ಸಮರ್ಥವಾಗಿ ಬಳಸಬೇಕಾಗಿರುವುದರಿಂದ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ,’ ಎಂದು ಗೂಗಲ್ ಮುಖ್ಯ ಹಣಕಾಸು ಅಧಿಕಾರಿ ರುತ್ ಪೊರಾಟ್ ತಿಳಿಸಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು
