ಇನ್ಫಿನಿಕ್ಸ್ ಜೀರೋ 5ಜಿ 2023 ಬಿಡುಗಡೆ; 50 ಮೆಗಾಫಿಕ್ಸಲ್ ಟ್ರಿಪಲ್ ರೇರ್ ಕ್ಯಾಮೆರಾ
6.78 ಇಂಚಿನ ಪೂಲ್ ಎಚ್ಡಿ ಸ್ಕ್ರೀನ್ ಡಿಸ್ಪೇ
Team Udayavani, Dec 3, 2022, 8:00 AM IST
ಇನ್ಫಿನಿಕ್ಸ್ ಜೀರೋ 5ಜಿ 2023 ಸ್ಮಾರ್ಟ್ಫೋನ್ ಗುರುವಾರ ಬಿಡುಗಡೆಯಾಗಿದೆ. ಇದು 50 ಮೆಗಾಫಿಕ್ಸಲ್ ಟ್ರಿಪಲ್ ರೇರ್ ಕ್ಯಾಮೆರಾ, 16 ಮೆಗಾಫಿಕ್ಸಲ್ ಫ್ರಂಟ್ ಕ್ಯಾಮೆರಾ ಹೊಂದಿದೆ. ಜತೆಗೆ 5,000 ಎಂಎಎಚ್ ಬ್ಯಾಟರಿ ಮತ್ತು 33 ವ್ಯಾಟ್ ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆ ಹೊಂದಿದೆ.
6.78 ಇಂಚಿನ ಪೂಲ್ ಎಚ್ಡಿ ಸ್ಕ್ರೀನ್ ಡಿಸ್ಪೇ ಹೊಂದಿರುವ ಈ ಮೊಬೈಲ್, ಆಂಡ್ರಾಯ್ಡ ಎಕ್ಸ್ಒಎಸ್ 12 ಸಾಫ್ಟ್ವೇರ್ ಮೂಲಕ ಕೆಲಸ ಮಾಡಲಿದೆ. 8GB RAM ಮತ್ತು 256 ಜಿಬಿ ಸ್ಟೋರೇಜ್ ಕೆಪಾಸಿಟಿ ಹೊಂದಿದೆ. ಕಪ್ಪು, ಕಿತ್ತಳೆ ಮತ್ತು ಬಿಳಿ ಬಣ್ಣದಲ್ಲಿ ಮೊಬೈಲ್ ಲಭ್ಯವಿದೆ. ಮೊಬೈಲ್ ಬೆಲೆಯ ಕುರಿತು ಕಂಪನಿ ಅಧಿಕೃತವಾಗಿ ಬಹಿರಂಗಪಡಿಸಿಲ್ಲ.