
ಏನಿದು ಇಂಟರ್‌ನೆಟ್ ಶಟ್‌ಡೌನ್?
Team Udayavani, Jul 4, 2022, 9:25 AM IST

ದೇಶದಲ್ಲಿ ಯಾವುದೇ ಭಾಗದಲ್ಲಿ ಗಲಭೆಗಳಾದರೂ, ಮೊದಲಿಗೆ ಅಲ್ಲಿಗೆ ಬರುವುದು ಪೊಲೀಸರು. ಬಳಿಕ ಆಗುವುದು ಇಂಟರ್‌ನೆಟ್ ಶಟ್‌ಡೌನ್. ಪೊಲೀಸ ರೇನೋ ಬರುವುದು ಸರಿ, ಆದರೆ ಅಂತರ್ಜಾಲದ ಮೇಲೆ ನಿರ್ಬಂಧ ಏಕೆ ಎಂಬುದು ಬಹಳಷ್ಟು ಜನರ ಪ್ರಶ್ನೆ. ಹಾಗಾ ದರೆ, ಇಂಟರ್ನೆಟ್ ಶಟ್‌ಡೌನ್ ಅಂದರೇನು? ಇಲ್ಲಿದೆ ಮಾಹಿತಿ.
ಏನಿದು ಅಂತರ್ಜಾಲ ನಿರ್ಬಂಧ?
ಗಲಭೆ ಪೀಡಿತ ಸ್ಥಳದಲ್ಲಿ ಮೊಬೈಲ್ (3ಜಿ, 4ಜಿ/ಎಲ್ಟಿಇ), ಫಿಕ್ಸ್‌ಡ್ ಲೈನ್ ಇಂಟರ್‌ನೆಟ್ (ವೈರ್ಡ್, ವೈರ್‌ಲೆಸ್) ಸೌಲಭ್ಯಗಳನ್ನು ಸಂಪೂರ್ಣ ವಾಗಿ ಕಡಿತಗೊಳಿಸುವುದು.
ಏಕೆ ಮಾಡಲಾಗುತ್ತದೆ?
ಸಾಮಾನ್ಯವಾಗಿ ಗಲಭೆ ಪೀಡಿತ ಪ್ರದೇಶಗಳಲ್ಲಿ ವದಂತಿಗಳು ಹಬ್ಬುವ ಸಾಧ್ಯತೆ ಹೆಚ್ಚಿರುತ್ತದೆ. ಅಲ್ಲಿ, ಸಾಮಾಜಿಕ ಜಾಲತಾಣಗಳ ಮೂಲಕ ವ್ಯಾಪಿಸುವಂಥ ವದಂತಿಗಳಿಂದಾಗಿ ಗಲಭೆ ಇನ್ನಷ್ಟು ಹೆಚ್ಚಳವಾಗುವ ಭೀತಿಯಿರುತ್ತದೆ. ಹೀಗಾಗಿಯೇ ಸರಕಾರಗಳು ಅಂತರ್ಜಾಲವನ್ನು ನಿರ್ಬಂಧಿಸುತ್ತವೆ.
ಎಲ್ಲಿ ಹೆಚ್ಚು ಕಡಿತ?
2012ರಿಂದ ಇದುವರೆಗೆ ದೇಶದಲ್ಲಿ 665 ಬಾರಿ ಇಂಟರ್‌ನೆಟ್ ಶಟ್‌ಡೌನ್ ಮಾಡಲಾಗಿದೆ. ಈ ವರ್ಷವೇ 59 ಬಾರಿ ಶಟ್‌ಡೌನ್ ಆಗಿದೆ. ಅದರಲ್ಲೂ ಅತಿ ಹೆಚ್ಚು ಇಂಟರ್‌ನೆಟ್ ಬ್ಯಾನ್ ಆಗಿರುವುದು ಜಮ್ಮು ಮತ್ತು ಕಾಶ್ಮೀರದಲ್ಲಿ. 2012ರಿಂದ ಇಲ್ಲಿವರೆಗೆ 411 ಬಾರಿ ಶಟ್‌ಡೌನ್ ಆಗಿದೆ. ವಿಚಿತ್ರವೆಂದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ತೆಗೆದು ಹಾಕಿದ ಮೇಲೆ ಸತತವಾಗಿ 552 ದಿನಗಳವರೆಗೆ ಇಂಟರ್‌ನೆಟ್ ಶಟ್‌ಡೌನ್ ಮಾಡಲಾಗಿದೆ. ಇದನ್ನು ಬಿಟ್ಟರೆ, ರಾಜಸ್ಥಾನದಲ್ಲಿ 88 ಬಾರಿ ನಿರ್ಬಂಧಿಸಲಾಗಿದೆ.
ರಾಜಸ್ಥಾನದಲ್ಲಿ ಏಕೆ?
ಇತ್ತೀಚಿನ ದಿನಗಳಲ್ಲಿ ಹೆಚ್ಚು ಗಲಭೆಗಳಿಗೆ ಸಾಕ್ಷಿಯಾಗುತ್ತಿರುವುದು ರಾಜಸ್ಥಾನ. ಇತ್ತೀಚೆ ಗಷ್ಟೇ ಕನ್ಹಯ್ಯಲಾಲ್ ಅವರನ್ನು ಇಬ್ಬರು ದುಷ್ಕರ್ಮಿಗಳು ಹತ್ಯೆ ಮಾಡಿದಾಗಲೂ, ಉದಯಪುರದಲ್ಲಿ ಅಂತರ್ಜಾಲವನ್ನು ನಿರ್ಬಂಧಿಸಲಾಗಿತ್ತು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

iPhone 15ಗಾಗಿ ಮೊಬೈಲ್ ಅಂಗಡಿ ಸಿಬ್ಬಂದಿಯನ್ನೇ ಹಿಗ್ಗಾಮುಗ್ಗಾವಾಗಿ ಥಳಿಸಿದ ಗ್ರಾಹಕರು.!

Nijjar: ಕೆನಡಾದಲ್ಲಿ ಇದ್ದುಕೊಂಡೇ ಭಾರತ ಮೇಲಿನ ದಾಳಿಗೆ ಧನಸಹಾಯ ಮಾಡುತ್ತಿದ್ದ ನಿಜ್ಜರ್

Mangaluru: ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನಕ್ಕೆ ರಜತ ಸಂಭ್ರಮ; ಕಾರ್ಯಾಲಯ ಉದ್ಘಾಟನೆ

Meramec Caverns:ನಿಸರ್ಗದ ರಚನೆಗೆ ಮನಸೋಲದವರ್ಯಾರು….ವಿಸ್ಮಯ, ಕೌತುಕಗಳ ಆಗರ ಗುಹೆಗಳು

Chincholi: ಜನತಾ ದರ್ಶನ ಪೂರ್ವ ಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ