ಕೇವಲ 30 ನಿಮಿಷಗಳಲ್ಲಿ ಬರೋಬ್ಬರಿ 1 ಲಕ್ಷ ಸ್ಕಾರ್ಪಿಯೋ ಬುಕಿಂಗ್!
Team Udayavani, Jul 31, 2022, 7:40 AM IST
ನವದೆಹಲಿ: ಮಹೀಂದ್ರಾ ಸಂಸ್ಥೆಯ ನೂತನ ಸ್ಕಾರ್ಪಿಯೋ-ಎನ್ ಎಸ್‌ಯುವಿ ಮುಂಗಡ ಬುಕಿಂಗ್ ಶನಿವಾರ ಆರಂಭವಾಗಿದೆ.
ಬುಕಿಂಗ್ ಆರಂಭವಾಗಿ ಕೇವಲ 30 ನಿಮಿಷಗಳಲ್ಲಿ ಬರೋಬ್ಬರಿ 1 ಲಕ್ಷ ಎಸ್‌ಯುವಿಗಳ ಬುಕಿಂಗ್ ಆಗಿದ್ದು, ನೂತನ ದಾಖಲೆ ನಿರ್ಮಾಣವಾಗಿದೆ.
ಈ ಹಿಂದೆ ಸಂಸ್ಥೆ 2021ರ ಅ.21ರಂದು ಮಹೀಂದ್ರಾ ಎಕ್ಸ್‌ಯುವಿ700 ಬುಕಿಂಗ್ ಆರಂಭಿಸಿದಾಗ ಕೇವಲ 57 ನಿಮಿಷಗಳಲ್ಲಿ 1 ಲಕ್ಷ ಕಾರಿಗೆ ಬುಕಿಂಗ್ ಆಗಿತ್ತು.
ಆದರೆ ಆ ದಾಖಲೆಯನ್ನು ಸ್ಕಾರ್ಪಿಯೋ ಎನ್ ಮುರಿದಿದೆ. ಬುಕಿಂಗ್ ಆರಂಭವಾದ ಒಂದೇ ನಿಮಿಷದಲ್ಲಿ ಬರೋಬ್ಬರಿ 25,000 ಕಾರುಗಳ ಬುಕಿಂಗ್ ಆಗಿದೆ ಎಂದು ಸಂಸ್ಥೆ ತಿಳಿಸಿದೆ. ಸೆ.26ರಿಂದ ಕಾರುಗಳ ಡೆಲಿವರಿ ಆರಂಭವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಓಲಾ ಎಲೆಕ್ಟ್ರಿಕ್ ಅನಾವರಣ; ನಾಲ್ಕೇ ಸೆಕೆಂಡಿಗೆ ವೇಗ ಹೆಚ್ಚಿಸಿಕೊಳ್ಳುವ ಕಾರು
ಪರಿಸರಸ್ನೇಹಿ, ಸುಲಲಿತ ತಂತ್ರಜ್ಞಾನ ಸಾಧನ ಇ-ಪ್ಯಾಡ್
ಸ್ವಿಫ್ಟ್ ಎಸ್-ಸಿಎನ್ಜಿ ಬಿಡುಗಡೆ;1 ಕೆ.ಜಿ. ಸಿಎನ್ಜಿಗೆ 30.90ಕಿ.ಮೀ ಮೈಲೇಜ್
ಭಾರತದಲ್ಲಿ ವಿಎಲ್ ಸಿ ಮೀಡಿಯಾ ಪ್ಲೇಯರ್ ನಿಷೇಧ… ಸೈಬರ್ ಸೆಕ್ಯುರಿಟಿ ತಜ್ಞರ ಆರೋಪವೇನು?
ಫೇಸ್ಬುಕ್ ಮಂಡಿಸಿರುವ ಪ್ರಸ್ತಾವನೆಗೆ ಗೂಗಲ್ ಸಂಸ್ಥೆ ವಿರೋಧ