
ಮಹೀಂದ್ರಾ ಥಾರ್4×2 ಬಿಡುಗಡೆ: ಇದೇ ಜ.14ರಿಂದ ಖರೀದಿಗೆ ಲಭ್ಯ
Team Udayavani, Jan 10, 2023, 8:00 AM IST

ಖ್ಯಾತ ವಾಹನ ತಯಾರಕ ಸಂಸ್ಥೆ ಮಹೀಂದ್ರಾ ಆ್ಯಂಡ್ ಮಹೀಂದ್ರಾ, ಭಾರತದ ಮಾರುಕಟ್ಟೆಗೆ ಥಾರ್4×2 ಆವೃತ್ತಿಯನ್ನು ಬಿಡುಗಡೆಗೊ ಳಿಸಿದ್ದು, ಜ.14ರಿಂದ ಎಸ್‌ಯುವಿ, ಖರೀದಿಗೆ ಲಭ್ಯವಿರಲಿದೆ.
ನೂತನ ಎಸ್‌ಯುವಿಗೆ 2 ಇಂಜಿನ್ ಆಯ್ಕೆಯನ್ನೂ ನೀಡಲಾಗಿದ್ದು, 1.5 ಲೀಟರ್ ಡೀಸೆಲ್ ಇಂಜಿನ್‌ನ ವಾಹನದ ಎಕ್ಸ್ ಶೋರೂಂ ಬೆಲೆ 9.99 ಲಕ್ಷ ರೂ. 2 ಲೀಟರ್ ಟಬೋì ಪೆಟ್ರೋಲ್ ಇಂಜಿನ್ ಥಾರ್‌ನ ಬೆಲೆ 13.49 ಲಕ್ಷ ರೂ.ಗಳಾಗಿದೆ.
ಎವೆರೆಸ್ಟ್ ವೈಟ್ ಹಾಗೂ ಬ್ಲೇಜಿಂಗ್ ಬ್ರೋನ್ಸ್ ಬಣ್ಣಗಳಲ್ಲಿ ವಾಹನ ಲಭ್ಯವಿದ್ದು, ಫೋರ್ಸ್ ಮೋಟರ್ಸ್‌ನ ಫೋರ್ಸ್ ಗೂರ್ಖ ಹಾಗೂ ಮಾರುತಿ ಸುಜುಕಿಯ ಜಿಮಿನಿಗಳಿಗೆ ಪ್ರತಿಸ್ಪರ್ಧಿಯಾಗಿ ಮಹೀಂದ್ರಾ ಥಾರ್ 4×2 ಆವೃತ್ತಿ ಬಿಡುಗಡೆಗೊಳಿಸಿದೆ.
ಟಾಪ್ ನ್ಯೂಸ್
