
ಮೈಕ್ರೋಸಾಪ್ಟ್ ಸರ್ಫೇಸ್ ಲ್ಯಾಪ್‍ಟಾಪ್ 4 ಭಾರತದ ಮಾರುಕಟ್ಟೆಗೆ
Team Udayavani, May 25, 2021, 3:19 PM IST

ಮೈಕ್ರೋಸಾಫ್ಟ್ ಇಂಡಿಯಾ ಶೈಕ್ಷಣಿಕ ಗ್ರಾಹಕರು ಮತ್ತು ಅಧಿಕೃತ ರೀಟೇಲರ್‌ಗಳಿಗೆ ಅನುಕೂಲಕರವಾದ ಸರ್ಫೇಸ್ ಲ್ಯಾಪ್‌ಟಾಪ್ 4 ಅನ್ನು ಬಿಡುಗಡೆ ಮಾಡಿದೆ. ಈ ಲ್ಯಾಪ್‌ಟಾಪ್ ಅಮೆಜಾನ್.ಇನ್‌ನಲ್ಲಿ ಲಭ್ಯವಿದೆ. ಈ ಲ್ಯಾಪ್‌ಟಾಪ್ ನಿರಂತರವಾಗಿ ಕೆಲಸ ಮಾಡುವ ಅಥವಾ ಕಲಿಕೆಯಲ್ಲಿ ತೊಡಗುವವರಿಗೆ ಅಥವಾ ಹೆಚ್ಚು ಸಮಯ ಕೆಲಸ ಮಾಡುವ ಬಳಕೆದಾರರಿಗೆ ಹೇಳಿ ಮಾಡಿಸಿದ ಉತ್ಪನ್ನವಾಗಿದೆ.
ಈ ಬಗ್ಗೆ ಮಾತನಾಡಿದ ಮೈಕ್ರೋಸಾಫ್ಟ್ ಇಂಡಿಯಾದ ಚೀಫ್ ಆಪರೇಟಿಂಗ್ ಆಫೀಸರ್ ರಾಜೀವ್ ಸೋಧಿ ಅವರು, ‘‘ನಾವು ಭಾರತಕ್ಕೆ ಹೊಸ ಸರ್ಫೇಸ್ ಲ್ಯಾಪ್‌ಟಾಪ್ 4 ಅನ್ನು ಬಿಡುಗಡೆ ಮಾಡಲು ಸಂತಸವೆನಿಸುತ್ತಿದೆ. ಈ ಮೂಲಕ ನಾವು ನಮ್ಮ ಆವಿಷ್ಕಾರಕ ಮತ್ತು ನಾವೀನ್ಯತೆಯ ಉತ್ಪನ್ನಗಳು ಮತ್ತು ಪರಿಹಾರಗಳನ್ನು ನಮ್ಮ ಗ್ರಾಹಕರಿಗೆ ನೀಡಲು ಬಯಸಿದ್ದೇವೆ. ಇದರ ಮೂಲಕ ಗ್ರಾಹಕರು ಅಥವಾ ಬಳಕೆದಾರರು ಹೊಸ ಮಾರ್ಗಗಳಲ್ಲಿ ಸತತ ಕೆಲಸ ನಿರ್ವಹಣೆ ಮತ್ತು ಕಲಿಕೆಯಲ್ಲಿ ತೊಡಗಬಹುದಾಗಿದೆ. ಸರ್ಫೇಸ್ ಲ್ಯಾಪ್‌ಟಾಪ್ 4 ಮೈಕ್ರೋಸಾಪ್ಟ್ ನಿಂದ ಹೊಸ ಮೀಟಿಂಗ್ ಮತ್ತು ಸಹಯೋಗಿತ ಅಕ್ಸೆಸರಿಗಳನ್ನು ಹೊಂದಿದೆ. ನಮ್ಮ ಇತ್ತೀಚಿನ ಲೈನ್-ಅಪ್ ಮೊಬಿಲಿಟಿಯನ್ನು ಹೆಚ್ಚು ಮಾಡಲಿದ್ದರೆ, ಕಾರ್ಯದಕ್ಷತೆ ಪ್ರಮಾಣವನ್ನು ದುಪ್ಪಟ್ಟುಗೊಳಿಸಲಿದೆ ಎಂದರು.
ಇದನ್ನೂ ಓದಿ:‘ಒಪ್ಪೋ ರೆನೋ 5ಎ ಜಪಾನ್ ನಲ್ಲಿ ಬಿಡುಗಡೆ..! ಭಾರತದಲ್ಲಿ ಯಾವಾಗ..?
ಇದು ತನ್ನ ಹಿಂದಿನ ಮಾದರಿಯ ಲ್ಯಾಪ್‌ಟಾಪ್‌ಗಳಲ್ಲಿರುವಂತೆ ಐಕಾನಿಕ್ ವಿನ್ಯಾಸಗಳು, ಡೀಟೇಲ್‌ಗಳು ಮತ್ತು ಉತ್ಪನ್ನಗಳನ್ನು ಒಳಗೊಂಡಿದೆ. ಇದರ 13.5 ಇಂಚು ಮತ್ತು 15 ಇಂಚು ಮಾದರಿಗಳು ಸಿಗ್ನೇಚರ್ 3:2 ಪಿಕ್ಸೆಲ್‌ಸೆನ್ಸ್ ಹೈ-ಕಾಂಟ್ರಾಸ್ಟ್ ಟಚ್‌ಸ್ಕ್ರೀನ್ ಡಿಸ್‌ಪ್ಲೇಯನ್ನು ಮತ್ತು ಡಾಲ್ಬಿ ಆಟ್‍ಮೋಸ್ ಸ್ಪೀಕರ್‌ಗಳನ್ನು ಒಳಗೊಂಡಿವೆ. ಬಳಕೆದಾರರು ತಮ್ಮ ನೆಚ್ಚಿನ ಸಿನಿಮಾಗಳನ್ನು ಸಿನೆಮ್ಯಾಟಿಕ್ ಅನುಭವದೊಂದಿಗೆ ವೀಕ್ಷಣೆ ಮಾಡಬಹುದಾಗಿದೆ.
ಇದರಲ್ಲಿ ಬಿಲ್‌ಟ್-ಇನ್ ಎಚ್‌ಡಿ ಫ್ರಂಟ್-ಫೇಸಿಂಗ್ ಕ್ಯಾಮೆರಾ ಇದ್ದು, ಇದು ಕಡಿಮೆ ಬೆಳಕಿನಲ್ಲೂ ಉತ್ತಮವಾಗಿ ಕೆಲಸ ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ. ಸ್ಟುಡಿಯೋ ಮೈಕ್ರೋಫೋನ್ ಅನ್ನು ಹೊಂದಿದೆ. ಇದರ ಮೂಲಕ ಕೆಲಸದ ಸಂದರ್ಭದಲ್ಲಿ ಮೀಟಿಂಗ್ ಅನುಭವಗಳನ್ನು ಹೆಚ್ಚು ಮಾಡಲಿದೆ. ಇದಲ್ಲದೇ, ಇದರ ಲಾರ್ಜ್ ಟ್ರ್ಯಾಕ್‌ಪ್ಯಾಡ್ ಗೆಸ್ಚರ್ ಸಪೋರ್ಟ್ ಅನ್ನು ಹೊಂದಿದೆ. ಇದರಿಂದಾಗಿ ಬಳಕೆದಾರರು ತಮ್ಮ ಆದ್ಯತೆಯ ವರ್ಕ್‌ಫ್ಲೋ ಅನ್ನು ಹೊಂದಾಣಿಕೆ ಮಾಡಿಕೊಳ್ಳಬಹುದಾಗಿದೆ.
ಇದು 11th Gen Intel®️ Core™️ processors ಹೊಂದಿದ್ದು, Radeon™️ Graphics Microsoft Surface®️ Edition ಹಾಗೂ AMD Ryzen™️ Mobile Processors ಗಳನ್ನೊಳಗೊಂಡಿದೆ.
ಈ ಸಾಧನವು ಪವರ್ ಮಾಡರ್ನ್ ಆಗಿದ್ದು, ಕಚೇರಿ, ಲಿವಿಂಗ್ ರೂಂ, ಕಾಫಿ ಶಾಪ್ ಅಥವಾ ಕ್ಲಾಸ್‌ರೂಂಗಳಲ್ಲಿ ಬಹುಕಾರ್ಯಗಳ ಬೇಡಿಕೆಗಳನ್ನು ಪೂರೈಸಲಿದೆ.
ಗ್ರಾಹಕರ ಭದ್ರತಾ ಅಗತ್ಯತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಸರ್ಫೇಸ್ ಲ್ಯಾಪ್‌ಟಾಪ್ 4 ಅತ್ಯದ್ಭುತವಾದ ಸೆಕ್ಯೂರಿಟಿ ಔಟ್-ಆಫ್-ಬಾಕ್‌ಸ್ ಅನ್ನು ಒಳಗೊಂಡಿದೆ. ಇದರೊಂದಿಗೆ ಇಂಟಗ್ರೇಟೆಡ್ ಹಾರ್ಡ್‌ವೇರ್, ಫರ್ಮ್‌ವೇರ್, ಸಾಫ್ಟ್ ವೇರ್ ಮತ್ತು ಐಡೆಂಟಿಟಿ ಪ್ರೊಟೆಕ್ಷನ್ ಇರಲಿದೆ. ಇವುಗಳು ರಿಮೂವೇಬಲ್ ಹಾರ್ಡ್ ಡ್ರೆವ್‌ನೊಂದಿಗೆ ಅತ್ಯಂತ ಸೂಕ್ಷ್ಮ ಮಾಹಿತಿಗಳ ಮೇಲೆ ನಿಯಂತ್ರಣ ಹೊಂದಿರುತ್ತವೆ. ಇದರ ಜತೆಗೆ ಡೇಟಾ ರಿಟೆನ್ಷನ್ ಮತ್ತು ಕ್ಲೌಡ್-ಫಸ್‌ಟ್ ಡಿವೈಸ್ ಡಿಪ್ಲಾಯ್‌ಮೆಂಟ್‌ನ ನಿಯಂತ್ರಣವನ್ನು ಹೊಂದಿರುತ್ತವೆ.
ಪ್ಲಾಟಿನಂ ಅಥವಾ ಬ್ಲ್ಯಾಕ್ ಕಲರ್‌ಗಳಲ್ಲಿ ಮೆಟಲ್ ಫಿನಿಶ್‌ನಲ್ಲಿ ಈ ಲ್ಯಾಪ್‌ಟಾಪ್ ಲಭ್ಯವಿದೆ. ಈ ಸರ್ಫೇಸ್ ಲ್ಯಾಪ್‍ಟ್ಯಾಪ್ 4 ದರ 1,02,999 ರೂ.ಗಳಿಂದ ಆರಂಭವಾಗುತ್ತದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

MP Election: ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ… ಮೂವರು ಕೆಂದ್ರ ಸಚಿವರು ಕಣಕ್ಕೆ

Hosapete: ಬಸ್ ಪಲ್ಟಿ; 10ಕ್ಕೂ ಹೆಚ್ಚು ಜನರಿಗೆ ಗಾಯ, ಚಾಲಕನ ಸ್ಥಿತಿ ಗಂಭೀರ

UV Fusion: ನಂಬಿಕೆಗಿಂತ ದೊಡ್ಡದು ಬೇರೇನಿಲ್ಲ

Daily Horoscope: ಸಜ್ಜನರ ಸೋಗುಹಾಕಿದ ವಂಚಕರ ಬಗ್ಗೆ ಎಚ್ಚರ, ಉದ್ಯೋಗಸ್ಥರಿಗೆ ಕೈತುಂಬಾ ಕೆಲಸ

KSRTC Bus: ಬಾಗಿಲಿದ್ದರೂ ಮುಚ್ಚುವವರಿಲ್ಲ! ಪ್ರಾಣಕ್ಕೆ ಎರವಾಗುತ್ತಿದೆ ಅಜಾಗರೂಕತೆ