Udayavni Special

ಮೈಕ್ರೋಸಾಫ್ಟ್ ಟೀಮ್ಸ್ ಈಗ ಕನ್ನಡದಲ್ಲಿಯೂ ಲಭ್ಯ: ಈಗ ವೈಯಕ್ತಿಕ ವೈಶಿಷ್ಟ್ಯಗಳು ಉಚಿತ


Team Udayavani, Jun 17, 2021, 3:36 PM IST

ಮೈಕ್ರೋಸಾಫ್ಟ್ ಟೀಮ್ಸ್ ಈಗ ಕನ್ನಡದಲ್ಲಿಯೂ ಲಭ್ಯ: ಈಗ ವೈಯಕ್ತಿಕ ವೈಶಿಷ್ಟ್ಯಗಳು ಉಚಿತ

ಬೆಂಗಳೂರು: ಈಗಿನ ಸಂಕಷ್ಟ ಕಾಲದಲ್ಲಿ ಸಾಮಾಜಿಕ ಅಂತರವು ನಮ್ಮನ್ನು ನಮ್ಮ ಸ್ನೇಹಿತರಿಂದ ಮತ್ತು ಕುಟುಂಬದಿಂದ ದೈಹಿಕವಾಗಿ ದೂರ ಇಟ್ಟಿದ್ದರೂ ತಂತ್ರಜ್ಞಾನವು ನಮ್ಮನ್ನು ಮತ್ತಷ್ಟು ಹತ್ತಿರಕ್ಕೆ ತರುವಲ್ಲಿ ನೆರವಾಗಿದೆ.

ಎಲ್ಲರಿಗೂ ಚಾಟ್ ಮತ್ತು ಸಹಯೋಗದ ಪ್ಲಾಟ್ ಫಾರ್ಮ್ ಆಗಿರುವ ಮೈಕ್ರೋಸಾಫ್ಟ್ ಟೀಮ್ಸ್, ವೃತ್ತಿಪರ ಉದ್ಯೋಗಿಗಳಿಗೆ ಈಗಾಗಲೇ ಪರಿಚಿತವಾಗಿದೆ. ಈಗ ಮೈಕ್ರೋಸಾಫ್ಟ್ ಟೀಮ್ಸ್ ಮೂಲಕ ನೀವು ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂಪರ್ಕ ಸಾಧಿಸಬಹುದಾಗಿದೆ. ನೀವು iOS, ಆ್ಯಂಡ್ರಾಯ್ಡ್ ಅಥವಾ ಡೆಸ್ಕ್ ಟಾಪ್ ಆ್ಯಪ್ ಅನ್ನು ಡೌನ್ಲೋಡ್ ಮಾಡಿಕೊಂಡು ಸಂವಹನ ನಡೆಸಬಹುದು. ನೀವು ಕಾಳಜಿವಹಿಸುವ ಜನರೊಂದಿಗೆ ಸುಲಭ ಮತ್ತು ತ್ವರಿತ ಸಂಭಾಷಣೆಗಳನ್ನು ಖಚಿತಪಡಿಸಿಕೊಳ್ಳಲು ಹೊಸ ವೈಶಿಷ್ಟ್ಯತೆಗಳನ್ನು ವಿನ್ಯಾಸಗೊಳಿಸಲಾಗಿದೆ.

1 ಕನ್ನಡದಲ್ಲಿಯೇ ಟೀಮ್ಸ್ ಬಳಸಿ: ಮೈಕ್ರೋಸಾಫ್ಟ್ ಟೀಮ್ಸ್ ಅನ್ನು ನೀವು ನಿಮ್ಮದೇ ಆದ ಭಾಷೆಯಲ್ಲಿ ಬಳಸಬಹುದು- ಅಂದರೆ ಕನ್ನಡದಲ್ಲಿ! ನೀವು ಟೀಮ್ಸ್ ನ ಎಲ್ಲಾ ವೈಶಿಷ್ಟ್ಯತೆಗಳನ್ನು ಅಕ್ಸೆಸ್ ಮಾಡಿಕೊಳ್ಳಬಹುದಾಗಿದೆ ಮತ್ತು ನೀವು ಯಾವುದೇ ಸಂದರ್ಭದಲ್ಲಿ ಬೇಕಾದರೂ ಇಂಗ್ಲೀಷ್ ಗೆ ಮರಳಬಹುದು. ನೀವು ಸ್ವೀಕರಿಸುವ ಸಂದೇಶಗಳನ್ನು ಕನ್ನಡದಲ್ಲಿಯೇ ಕೇಳಲು ಆ್ಯಪ್ ಅವಕಾಶ ಕಲ್ಪಿಸುತ್ತದೆ.

2 24 ಗಂಟೆಗಳ ಉಚಿತ ಕರೆ: ಮೈಕ್ರೋಸಾಫ್ಟ್ ಟೀಮ್ಸ್ ನೊಂದಿಗೆ ನೀವು ಇನ್ನು ಮುಂದೆ 300 ಕ್ಕೂ ಹೆಚ್ಚು ಜನರೊಂದಿಗೆ ದಿನದ 24 ಗಂಟೆಯೂ ಮಾತನಾಡಬಹುದು! ಮೈಕ್ರೋಸಾಫ್ಟ್ ಟೀಮ್ಸ್ ನೊಂದಿಗೆ ಫೋನ್ ಬಿಲ್ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಈ ಸಾಂಕ್ರಾಮಿಕದ ಅವಧಿಯಲ್ಲಿ ನೀವು ನಿರಂತರವಾಗಿ ದೀರ್ಘ ಕರೆಗಳನ್ನು ಮಾಡಬಹುದು.

3 ವಿಡಿಯೋ ಕಾಲಿಂಗ್: ವಿಡಿಯೋ ಕಾಲ್ ಅನ್ನು ಸಂಪರ್ಕಿಸುವ ಮೂಲಕ ನಿಮ್ಮ ಪ್ರೀತಿ ಪಾತ್ರರ ಜತೆಯಲ್ಲಿ ಮಾತನಾಡಿ. ಟೀಮ್ಸ್ ನಲ್ಲಿನ ವಿಡಿಯೋ ಕಾಲ್ ಲಿಂಕ್ ಗಳನ್ನು ಯಾರೊಂದಿಗೆ ಬೇಕಾದರೂ ಶೇರ್‍ ಮಾಡಿಕೊಳ್ಳಬಹುದು. ನೀವು ಆ್ಯಪ್ ಅನ್ನು ಉಪಯೋಗಿಸದಿದ್ದರೂ ಇದು ಸಾಧ್ಯವಾಗುತ್ತದೆ. ನಿಮ್ಮ ಸ್ನೇಹಿತರು ಅಥವಾ ಕುಟುಂಬ ಸದಸ್ಯರು ಯಾವುದೇ ಡಿವೈಸ್ ಅಥವಾ ವೆಬ್ ಬ್ರೌಸರ್ ಬಳಸಿ ಮೀಟಿಂಗ್ ಗೆ ಸೇರಿಕೊಳ್ಳಲು ಸಾಧ್ಯವಿದೆ.

ಇದನ್ನೂ ಓದಿ:‘ಮೈಕ್ರೋ ಸಾಫ್ಟ್ ಔಟ್‌ ಲುಕ್’ ಅಂದ್ರೆ ಏನು ಗೊತ್ತಾ..? ಸಂಪೂರ್ಣ ಮಾಹಿತಿ ಇಲ್ಲಿದೆ.

4 ಟುಗೆದರ್ ಮೋಡ್ (Together Mode): ಈ ಟುಗೆದರ್ ಮೋಡ್ ನಲ್ಲಿ ಸಂವಹನ ನಡೆಸುವ ವೇಳೆಯಲ್ಲಿ ನೀವು ನಿಮ್ಮ ಪ್ರೀತಿಪಾತ್ರರೊಂದಿಗೆ ಒಂದೇ ಕೊಠಡಿಯಲ್ಲಿರುವ ಅನುಭವವಾಗುತ್ತದೆ. ಈ ವೈಶಿಷ್ಟ್ಯತೆಯೊಂದಿಗೆ ನೀವು ಯಾವುದೇ ಸಾಮಾನ್ಯ ವಿಡಿಯೋ ಕಾಲ್ ಅನ್ನು ವರ್ಚುವಲ್ ಸನ್ನಿವೇಶದಲ್ಲಿ ಹಂಚಿಕೊಳ್ಳಬಹುದಾಗಿದೆ. ಕಾಫಿ ಶಾಪ್, ಹಾಲಿಡೇ ತಾಣ- ಹೀಗೆ ನೀವು ನಿಮ್ಮ ನೆಚ್ಚಿನ ವರ್ಚುವಲ್ ವಾತಾವರಣವನ್ನು ಆಯ್ಕೆ ಮಾಡಿಕೊಳ್ಳಬಹುದು.

5 ಚಾಟಿಂಗ್ ಆರಂಭಿಸಿ: ನೀವು ಅಪ್ಲಿಕೇಷನ್ ಆರಂಭಿಸುವಾಗ ನಿಮ್ಮ ಸಂಪರ್ಕಗಳೊಂದಿಗೆ ಚಾಟ್ ಆರಂಭ ಮಾಡಬಹುದು. ನೀವು ನಿಮ್ಮ ಸಂಪರ್ಕಗಳಿಂದ ವೈಯಕ್ತಿಕ ಸಂದೇಶಗಳನ್ನು ಕಳುಹಿಸಬಹುದು ಅಥವಾ ಗ್ರೂಪ್ ಚಾಟ್ ಅನ್ನೂ ಸಹ ಆರಂಭಿಸಬಹುದು. ನಿಮ್ಮ ಗ್ರೂಪ್ ಗೊಂದು ಹೆಸರಿಡಿ ಮತ್ತು ಅದನ್ನು ಸಂಘಟಿತವಾಗಿಟ್ಟುಕೊಳ್ಳಬಹುದು. ಒಂದು ವೇಳೆ ಯಾರಾದರೂ ಟೀಮ್ಸ್ ಅನ್ನು ಹೊಂದಿರದೇ ಇದ್ದರೂ ಅವರು ಎಸ್ಎಂಎಸ್ ಸಂದೇಶಗಳ ಮೂಲಕ ಎಲ್ಲಾ ಚಾಟ್ ಗಳಿಗೆ ಪ್ರತಿಕ್ರಿಯೆ ನೀಡಬಹುದು.

6 ಪೋಲಿಂಗ್‍ ಆಯ್ಕೆ: ಮೈಕ್ರೋಸಾಫ್ಟ್ ಟೀಮ್ಸ್ ನಲ್ಲಿನ ಪೋಲಿಂಗ್ ವೈಶಿಷ್ಟ್ಯತೆಯ ಮೂಲಕ ನಿಮ್ಮ ಸ್ನೇಹಿತರು ಅಥವಾ ಕುಟುಂಬದವರೊಂದಿಗೆ ನಿಮ್ಮ ನಿರ್ಧಾರಗಳನ್ನು ಪ್ರಕಟಿಸಬಹುದು. ನಿಮ್ಮ ಟೀಮ್ಸ್ ಚಾಟ್ ನಲ್ಲಿ ಮತವನ್ನು ಹಾಕಬಹುದು ಮತ್ತು ಡಿನ್ನರ್ ಗೆ ಏನು ಬೇಕೆಂಬುದರ ಬಗ್ಗೆ ಆರ್ಡರ್ ಮಾಡಲು ತ್ವರಿತವಾಗಿ ಪ್ರತಿಕ್ರಿಯೆ ನೀಡಬಹುದು ಅಥವಾ ನಿಮ್ಮ ಮಗುವಿನ ಹುಟ್ಟುಹಬ್ಬದ ಸಂಭ್ರಮದ ಪಾರ್ಟಿಗೆ ಕನೆಕ್ಟ್ ಮಾಡಲೂಬಹುದು!

ನಿಮ್ಮ iOS ಅಥವಾ  Android ಡಿವೈಸ್ ನಲ್ಲಿ ಟೀಮ್ಸ್ ಅನ್ನು ಉಚಿತವಾಗಿ ಡೌನ್‍ ಲೋಡ್‍ ಮಾಡಿಕೊಳ್ಳಬಹುದು.

ಟಾಪ್ ನ್ಯೂಸ್

ಇಂದಿನ ದಿನ ಭವಿಷ್ಯ: ಈ ರಾಶಿಯವರಿಗಿಂದು ದಾಂಪತ್ಯದಲ್ಲಿ ತಾಳ್ಮೆ ಅಗತ್ಯ!

ಇಂದಿನ ದಿನ ಭವಿಷ್ಯ: ಈ ರಾಶಿಯವರಿಗಿಂದು ದಾಂಪತ್ಯದಲ್ಲಿ ತಾಳ್ಮೆ ಅಗತ್ಯ!

Untitled-1

ದೀರ್ಘ‌ಕಾಲೀನ ಹೆಪಟೈಟಿಸ್‌: ಸದ್ದಿಲ್ಲದೆ ಕೊಲ್ಲುವ ಕಾಯಿಲೆ

Untitled-1

ಕ್ಯಾನ್ಸರ್‌ಗೆ 6 ಬಾರಿ ಸಿಕ್ಸರ್‌ ಹೊಡೆದ ಜೇಮ್ಸ್‌ ಬಾಂಡ್‌ ಜಯಂತ್‌!

Untitled-1

ಶಿರಾಡಿ ಘಾಟಿ ಸುರಂಗ ಮಾರ್ಗ ಅನಿವಾರ್ಯ 

ಆಗಸ್ಟ್‌ 4ರಿಂದ ಪದವಿ ಪ್ರವೇಶ ಆರಂಭ 

ಆಗಸ್ಟ್‌ 4ರಿಂದ ಪದವಿ ಪ್ರವೇಶ ಆರಂಭ 

ಬುಧ-ಗುರುವಾರ ಸಚಿವರ ಪ್ರಮಾಣ?

ಬುಧ-ಗುರುವಾರ ಸಚಿವರ ಪ್ರಮಾಣ?

ವಿಪಕ್ಷಗಳ ಹಠಕ್ಕೆ ಆಪೋಶನವಾಯಿತು ಮೇಲ್ಮನೆ ಕಲಾಪ

ವಿಪಕ್ಷಗಳ ಹಠಕ್ಕೆ ಆಪೋಶನವಾಯಿತು ಮೇಲ್ಮನೆ ಕಲಾಪಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

instagram parent guide

ಇನ್ಸ್ಟಾಗ್ರಾಮ್ ನಿಂದ ಕನ್ನಡದಲ್ಲಿ ಪೇರೆಂಟ್ಸ್ ಗೈಡ್ ಆರಂಭ

7 ಕೋಟಿ ದಾಟಿದ ಮೋದಿ ಟ್ವಿಟರ್‌ ಫಾಲೋವರ್‌ಗಳ ಸಂಖ್ಯೆ

7 ಕೋಟಿ ದಾಟಿದ ಮೋದಿ ಟ್ವಿಟರ್‌ ಫಾಲೋವರ್‌ಗಳ ಸಂಖ್ಯೆ

nothing ear 1

ಆಡಿಯೋ ಪ್ರಿಯರು ಕಾತುರದಿಂದ ಕಾಯುತ್ತಿದ್ದ ನಥಿಂಗ್‍ ಇಯರ್ (1) ಬಿಡುಗಡೆ: ಇದರ ವಿಶೇಷವೇನು?

ಇನ್ಸ್ಟಾ ಗ್ರಾಂನಲ್ಲಿ ಇನ್ನು 1 ನಿಮಿಷದ ವಿಡಿಯೋ ಅಪ್‌ಲೋಡ್‌ ಮಾಡುವ ಅವಕಾಶ!

ಇನ್ಸ್ಟಾ ಗ್ರಾಂನಲ್ಲಿ ಇನ್ನು 1 ನಿಮಿಷದ ವಿಡಿಯೋ ಅಪ್‌ಲೋಡ್‌ ಮಾಡುವ ಅವಕಾಶ!

ಭಾರತದಲ್ಲಿ “ಗ್ಯಾಲಾಕ್ಸಿ ಎ 22′ ಬಿಡುಗಡೆ

ಭಾರತದಲ್ಲಿ “ಗ್ಯಾಲಾಕ್ಸಿ ಎ 22′ ಬಿಡುಗಡೆ

MUST WATCH

udayavani youtube

ಕೋವಿಡ್ ಹೆಚ್ಚಳಕ್ಕೆ ಪರೋಕ್ಷವಾಗಿ ಜನರೇ ಕಾರಣರಾಗುತ್ತಿದ್ದಾರೆ : ಜಿಲ್ಲಾಧಿಕಾರಿ ಜಿ. ಜಗದೀಶ್

udayavani youtube

ಅತಿವೃಷ್ಟಿ ಹೊಡೆತಕ್ಕೆ ನಲುಗಿದ ರೈತರು

udayavani youtube

ಮನೆಯ ದೀಪ ಆರಿಸಿದವನಿಗೆ ಶಿಕ್ಷೆ ಆಗಲೇ ಬೇಕು: ಅಜೇಂದ್ರ ಶೆಟ್ಟಿ ತಂದೆ ಹೇಳಿಕೆ

udayavani youtube

ಅದು ಹೇಳಿದ್ರೆ ಅವರಿಗೂ , ನನಗೂ ಒಳ್ಳೇದಲ್ಲ !

udayavani youtube

ಸತತ 4ನೇ ದಿನವೂ ಭಾರತದಲ್ಲಿ ಕೋವಿಡ್ ಪ್ರಕರಣ ಹೆಚ್ಚಳ

ಹೊಸ ಸೇರ್ಪಡೆ

ಇಂದಿನ ದಿನ ಭವಿಷ್ಯ: ಈ ರಾಶಿಯವರಿಗಿಂದು ದಾಂಪತ್ಯದಲ್ಲಿ ತಾಳ್ಮೆ ಅಗತ್ಯ!

ಇಂದಿನ ದಿನ ಭವಿಷ್ಯ: ಈ ರಾಶಿಯವರಿಗಿಂದು ದಾಂಪತ್ಯದಲ್ಲಿ ತಾಳ್ಮೆ ಅಗತ್ಯ!

Untitled-1

ದೀರ್ಘ‌ಕಾಲೀನ ಹೆಪಟೈಟಿಸ್‌: ಸದ್ದಿಲ್ಲದೆ ಕೊಲ್ಲುವ ಕಾಯಿಲೆ

Untitled-1

ಕ್ಯಾನ್ಸರ್‌ಗೆ 6 ಬಾರಿ ಸಿಕ್ಸರ್‌ ಹೊಡೆದ ಜೇಮ್ಸ್‌ ಬಾಂಡ್‌ ಜಯಂತ್‌!

Untitled-1

ಶಿರಾಡಿ ಘಾಟಿ ಸುರಂಗ ಮಾರ್ಗ ಅನಿವಾರ್ಯ 

ಆಗಸ್ಟ್‌ 4ರಿಂದ ಪದವಿ ಪ್ರವೇಶ ಆರಂಭ 

ಆಗಸ್ಟ್‌ 4ರಿಂದ ಪದವಿ ಪ್ರವೇಶ ಆರಂಭ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.