ಮಿವಿ ಯಿಂದ ಹೊಸ ಸ್ಮಾರ್ಟ್ ವಾಚ್ ‘ಮಾಡೆಲ್ ಇ’ ಬಿಡುಗಡೆ: ಬೆಲೆ ಎಷ್ಟು ಗೊತ್ತಾ?
Team Udayavani, Dec 5, 2022, 6:51 PM IST
ಬೆಂಗಳೂರು: ಆಡಿಯೋ ಉತ್ಪನ್ನಗಳಿಗೆ ಹೆಸರಾದ ಭಾರತದ ಸ್ವದೇಶಿ ಕಂಪೆನಿ ಮಿವಿ ಸ್ಮಾರ್ಟ್ ವಾಚ್ ಗಳ ವಿಭಾಗಕ್ಕೆ ಕಾಲಿಟ್ಟಿದ್ದು, ಸಂಪೂರ್ಣವಾಗಿ ಭಾರತದಲ್ಲೇ ತಯಾರಾದ ‘ಮಾಡೆಲ್ ಇ’ ಹೆಸರಿನ ಹೊಸ ವಾಚನ್ನು ಬಿಡುಗಡೆ ಮಾಡಿದೆ.
ಈ ವಾಚು 1.69 ಇಂಚಿನ ಚೌಕಾಕಾರದ ಎಚ್‍ಡಿ ಪರದೆ ಹೊಂದಿದೆ. 500 ನಿಟ್ಸ್ ಬ್ರೈಟ್‍ನೆಸ್ ಇದ್ದು, 7 ದಿನಗಳ ಬ್ಯಾಟರಿ ಬಾಳಿಕೆ ಹೊಂದಿದೆ. ಸೈಕ್ಲಿಂಗ್, ಜಾಗಿಂಗ್,ನಡಿಗೆ, ಯೋಗ ಆಟ, ವ್ಯಾಯಾಮ ಸೇರಿದಂತೆ 120 ಮೋಡ್‍ಗಳನ್ನು ಒಳಗೊಂಡಿದ್ದು, ನೀರು ಮತ್ತು ಧೂಳು ನಿರೋಧಕಕ್ಕಾಗಿ ಐಪಿ 68 ರೇಟಿಂಗ್ ಹೊಂದಿದೆ. ಬ್ಯಾಟರಿ ಸಂಪೂರ್ಣವಾಗಿ 1.5 ಗಂಟೆಯಲ್ಲಿ ಚಾರ್ಜ್ ಆಗುತ್ತದೆ, 28 ಭಾಷೆಗಳನ್ನು ಬೆಂಬಲಿಸುತ್ತದೆ ಎಂದು ಕಂಪೆನಿ ತಿಳಿಸಿದೆ.
ನಿದ್ದೆ, ಹೃದಯ ಬಡಿತ, ರಕ್ತದೊತ್ತಡ, ಆಮ್ಲಜನಕ ಸ್ಯಾಚುರೇಶನ್, ವ್ಯಾಯಾಮದ ದತ್ತಾಂಶವನ್ನೂ ದಾಖಲಿಸುತ್ತದೆ. ಋತುಚಕ್ರ ಟ್ರ್ಯಾಕ್ ಮಹಿಳೆಯರಿಗೆ ಅನುಕೂಲಕರವಾಗಿದೆ.
ಮಾಡೆಲ್ ಇ ವಾಚು ಸಿಲಿಕಾನ್ ಸ್ಟ್ರಾಪ್ ಹಾಗೂ ಸ್ಟೈನ್‍ಸ್ಟೀಲ್ ಡಯಲ್ ಹೊಂದಿರುವುದು ವಿಶೇಷ. ಇದು ಆಂಡ್ರಾಯ್ಡ್ ಮತ್ತು ಐಓಎಸ್ ಎರಡರಲ್ಲೂ ಕಾರ್ಯಾಚರಿಸುತ್ತದೆ.
ಪೂರ್ಣ ಸಂಗೀತ ನಿಯಂತ್ರಣ, ಡಯಲ್ ಆಯ್ಕೆ, ಮೆಸೇಜ್ ಪುಷ್, ದೈನಿಕ ಅಲಾರಾಂ ಕ್ಲಾಕ್, ಹವಾಮಾನ ಮಾಹಿತಿಯನ್ನೂ ಒದಗಿಸುತ್ತದೆ.
ಗುಲಾಬಿ, ನೀಲಿ, ಕೆಂಪು, ಬೂದು, ಹಸಿರು ಮತ್ತು ಕಪ್ಪು ಬಣ್ಣದಲ್ಲಿ ಈ ವಾಚು ಲಭ್ಯವಿದೆ. ಇದು ಫ್ಲಿಪ್‍ಕಾರ್ಟ್ ನಲ್ಲಿ ಮಾತ್ರ ಲಭ್ಯವಿದ್ದು, ದರ 1,499 ರೂ.
ಇದನ್ನೂ ಓದಿ: ರಾಜಕೀಯ ಪುನರ್ ಜನ್ಮ?; ಸರ್ವ ಸಿದ್ಧತೆಯಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ