ಇನ್ಮುಂದೆ ಟ್ವಿಟರ್ ನಲ್ಲೂ ಸಿಗಲಿವೆ ಇಮೋಜಿ
ಹೊಸ ಫೀಚರ್ ಪರಿಚಯಿಸಲಿದೆ ಟ್ವಿಟರ್..!
Team Udayavani, Mar 27, 2021, 2:53 PM IST
ಬಹು ಬಳಕೆದಾರರನ್ನು ಹೊಂದಿರುವ ಟ್ವಿಟರ್ ದಿನದಿಂದ ದಿನಕ್ಕೆ ಅಪ್‍ಡೇಟ್ ಆಗುತ್ತಿದೆ. ತನ್ನ ಬಳಕೆದಾರರಿಗೆ ಹೊಸತನ ನೀಡುವ ನಿಟ್ಟಿನಲ್ಲಿ ಹೊಸ ಹೊಸ ಪ್ರಯೋಗಕ್ಕೆ ಕೈ ಹಾಕುತ್ತಿದೆ. ಇದೀಗ ಬಳಕೆದಾರರ ಸ್ನೇಹಿ ಮತ್ತೊಂದು ಫೀಚರ್ ಪರಿಚಯಿಸಲು ಮುಂದಾಗಿದೆ.
ಇನ್ಮುಂದೆ ಟ್ವಿಟರ್ ನಲ್ಲಿ ಇಮೋಜಿಗಳು ಲಭ್ಯವಾಗಲಿವೆ. ಭಾವನೆಗಳನ್ನು ವ್ಯಕ್ತಪಡಿಸುವ ಇಮೋಜಿಗಳ ಗೊಂಚಲು ಟ್ವಿಟರ್ ನಲ್ಲಿ ಸಿಗಲಿದೆ. ನಗು ಮೊಗದ, ಅಳು ಮುಖದ, ಯೋಚನಾ ರೀತಿಯ, ಕೋಪ ಮಾಡಿಕೊಂಡ ರೀತಿಯ ಇಮೋಜಿಗಳನ್ನು ಟ್ವಿಟರ್ ಅಳವಡಿಸಿಕೊಳ್ಳಲು ಮುಂದಾಗಿದೆ. ಈಗಾಗಲೇ ಜನಪ್ರೀಯ ಸಾಮಾಜಿಕ ಜಾಲತಾಣ ಫೇಸ್‍ಬುಕ್ ಹಾಗೂ ವಾಟ್ಸಪ್‍ನಲ್ಲಿ ಇಮೋಜಿ ಫೀಚರ್ ಇದೆ. ಇದೇ ರೀತಿ ಟ್ವಿಟರ್ ಅಳವಡಿಸಿಕೊಳ್ಳಲು ಬಯಸಿದೆ.
ಇನ್ನು ಇಮೋಜಿಗಳ ಜತೆಗೆ ಸಮ್ಮತಿ (ಮೆಚ್ಚುಗೆ)-ಅಸಮ್ಮತಿ (ನಿರಾಕರಣೆ) ಸೂಚಿಸುವ ಸಿಂಬಾಲ್ ಪರಿಚಯಿಸುವ ಯೋಜನೆ ಹಾಕಿಕೊಂಡಿದೆ. ಸಮ್ಮತಿ ಸೂಚಿಸಲು ಹಸಿರು ಬಣ್ಣದ ಸಿಂಬಾಲ್ ಹಾಗೂ ನಿರಾಕರಣೆ ಅಥವಾ ಅಸಮ್ಮತಿ ಸೂಚಿಸಲು ಕೆಂಪು ಬಣ್ಣದ ಸಿಂಬಾಲ್ ನೀಡಲಿದೆ.
2015 ರಲ್ಲಿ ಫೇಸ್‍ಬುಕ್ ಇಮೋಜಿಗಳನ್ನು ಪರಿಚಯಿಸಿತ್ತು. ಇವು ತುಂಬಾ ಪರಿಣಾಮಕಾರಿಯಾಗಿ ಬಳಕೆಯಾಗುತ್ತಿವೆ. ಜನರು ಅಕ್ಷರ ರೂಪದಲ್ಲಿ ಹೇಳಲಾಗದ್ದನ್ನು ಇಮೋಜಿಗಳ ಮೂಲಕ ವ್ಯಕ್ತಪಡಿಸುತ್ತಾರೆ.
ಇನ್ನು ಈಗಾಗಲೇ ಪೋಸ್ಟ್ ಮಾಡಿದ ಟ್ವೀಟ್ ಅನ್ನು ರದ್ದುಗೊಳಿಸುವ ಫೀಚರ್ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವ ನಿಟ್ಟಿನಲ್ಲಿ ಟ್ವಿಟರ್ ಕಾರ್ಯನಿರತವಾಗಿದೆ. ಆದರೆ, ಈ ಫೀಚರ್ ಮೂಲಕ ಬಳಕೆದಾರರು ತಮ್ಮ ಟ್ವೀಟ್‌ಗಳನ್ನು ಸೀಮಿತ ಅವಧಿಯೊಳಗೆ ರದ್ದುಗೊಳಿಸಲು ಅನುಮತಿಸುತ್ತದೆ ಎಂದು ಹೇಳಲಾಗುತ್ತಿದೆ.
ಟ್ವೀಟ್ ಎಡಿಟ್ ಆಯ್ಕೆಗೆ ಹೆಚ್ಚು ಬೇಡಿಕೆ ಇದ್ದು, ಆದರೆ ಸದ್ಯ ಟ್ವಿಟ್ಟರ್ ಎಡಿಟ್ ಫೀಚರ್ ಬದಲು ರದ್ದುಗೊಳಿಸುವ (Undo Tweet) ವೈಶಿಷ್ಟ್ಯವನ್ನು ಪರಿಚಯಿಸಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಓಲಾ ಎಲೆಕ್ಟ್ರಿಕ್ ಅನಾವರಣ; ನಾಲ್ಕೇ ಸೆಕೆಂಡಿಗೆ ವೇಗ ಹೆಚ್ಚಿಸಿಕೊಳ್ಳುವ ಕಾರು
ಪರಿಸರಸ್ನೇಹಿ, ಸುಲಲಿತ ತಂತ್ರಜ್ಞಾನ ಸಾಧನ ಇ-ಪ್ಯಾಡ್
ಸ್ವಿಫ್ಟ್ ಎಸ್-ಸಿಎನ್ಜಿ ಬಿಡುಗಡೆ;1 ಕೆ.ಜಿ. ಸಿಎನ್ಜಿಗೆ 30.90ಕಿ.ಮೀ ಮೈಲೇಜ್
ಭಾರತದಲ್ಲಿ ವಿಎಲ್ ಸಿ ಮೀಡಿಯಾ ಪ್ಲೇಯರ್ ನಿಷೇಧ… ಸೈಬರ್ ಸೆಕ್ಯುರಿಟಿ ತಜ್ಞರ ಆರೋಪವೇನು?
ಫೇಸ್‍ಬುಕ್ ಮಂಡಿಸಿರುವ ಪ್ರಸ್ತಾವನೆಗೆ ಗೂಗಲ್ ಸಂಸ್ಥೆ ವಿರೋಧ
MUST WATCH
ಹೊಸ ಸೇರ್ಪಡೆ
ಮಂಗಳೂರು : ಕೊಟ್ಟಿಗೆಯಿಂದ ದನ ಕಳವು : ಐವರು ಆರೋಪಿಗಳ ಬಂಧನ
3 ಅಮೆರಿಕನ್ ರಾಜ್ಯಗಳಲ್ಲಿ ಆ. 15 ಭಾರತೀಯ ದಿನ
ವನಿತಾ ಕ್ರಿಕೆಟ್ ವಾರ್ಷಿಕ ವೇಳಾಪಟ್ಟಿ: ಭಾರತ ಆಯೋಜಿಸಲಿದೆ 4 ಸರಣಿ
ಮತ್ತಷ್ಟು ವಸ್ತುಗಳ ಜಿಎಸ್ಟಿ ಹೆಚ್ಚಳ? ಸಿಎಂ ಬೊಮ್ಮಾಯಿ ನೇತೃತ್ವದ ಸಮಿತಿಯ ಪರಾಮರ್ಶೆ
ಸಾಧನೆ ಆಧರಿಸಿ ಅನುದಾನ; ಕಾರ್ಯಕ್ಷಮತೆ ಆಧಾರದಲ್ಲಿ ರಾಜ್ಯಗಳಿಗೆ “ಆಯುಷ್ಮಾನ್’ ಹಣ ಬಿಡುಗಡೆ