ಹೊಸ ಮೊಬೈಲ್‍ ಬಿಡುಗಡೆ ಮಾಡಿದ ನೋಕಿಯಾ

Team Udayavani, Jul 7, 2021, 2:49 PM IST

ಹೊಸ ಮೊಬೈಲ್‍ ಬಿಡುಗಡೆ ಮಾಡಿದ ನೋಕಿಯಾ

ನವದೆಹಲಿ: ಎಚ್‍ಎಂಡಿ ಗ್ಲೋಬಲ್‍ ಕಂಪೆನಿ ನೋಕಿಯಾ ಜಿ20 ಎಂಬ ಹೊಸ ಮೊಬೈಲ್‍ ಅನ್ನು ಇಂದು ಭಾರತದಲ್ಲಿ ಬಿಡುಗಡೆ ಮಾಡಿದೆ.

ನೋಕಿಯಾ ಫೋನ್‍ಗಳ ಹೊಸ ಜಿ-ಸರಣಿಯು ಬಳಕೆದಾರರಿಗೆ ಅನುಕೂಲಕರವಾದ ವೈಶಿಷ್ಟ್ಯಗಳನ್ನು ಮಿತವ್ಯಯದ ದರದಲ್ಲಿ ನೀಡುವ ಬದ್ಧತೆ ಹೊಂದಿದೆ ಎಂದು ಕಂಪೆನಿ ತಿಳಿಸಿದೆ.

ಹೊಸ ನೋಕಿಯಾ ಜಿ20 5050 ಎಂಎಎಚ್‍ ಬ್ಯಾಟರಿ ಹೊಂದಿದೆ. ಎರಡು ವರ್ಷಗಳ  ಆಂಡ್ರಾಯ್ಡ್ ಓಎಸ್‍ನ ಖಚಿತ ನವೀಕರಣಗಳ ಜೊತೆಗೆ ನಿಮ್ಮ ದತ್ತಾಂಶಗಳನ್ನೆಲ್ಲ ಸಾಧ್ಯವಾದಷ್ಟು ಸುರಕ್ಷಿತವಾಗಿಡಲು ಸಹಾಯ ಮಾಡಲು ಮೂರು ವರ್ಷಗಳ ಸೆಕ್ಯುರಿಟಿ ಅಪ್ ಡೇಟ್‍ ನೀಡುತ್ತದೆ.  ವೈಡ್-ಆ್ಯಂಗಲ್ ಮತ್ತು ಮ್ಯಾಕ್ರೊ ಲೆನ್‌ಸ್, ಶಕ್ತಿಯುತ ಎಐ ಇಮೇಜಿಂಗ್ ಮೋಡ್‌ಗಳು,  ಒಜೆಡ್‌ಒ ಆಡಿಯೊ ಮತ್ತು ಗರಿಷ್ಠ ಸಂಗ್ರಹಣಾ ಸಾಮರ್ಥ್ಯ ಒಳಗೊಂಡಿರುವ 48 ಎಂಪಿ (ಕಾರ್ಲ್ ಜಿಯಸ್‍) ನಾಲ್ಕು ಲೆನ್ಸ್ ಕ್ಯಾಮರಾ ಹೊಂದಿದೆ. 8 ಮೆ.ಪಿ. ಸೆಲ್ಫೀ ಕ್ಯಾಮರಾ ಇದೆ.

ನೋಕಿಯಾ ಜಿ20 ಮೊಬೈಲ್ 2021ರಲ್ಲಿನ ನಮ್ಮ ಪ್ರಮುಖ ಮೊಬೈಲ್‌ಗಳಲ್ಲಿ ಒಂದಾಗಿದೆ. ನೋಕಿಯ ಅಭಿಮಾನಿಗಳ ಪಾಲಿಗೆ ಇದೊಂದು ಸಮಗ್ರ ಸ್ವರೂಪದ ಸಾಧನವಾಗಿದೆ. ಸ್ಮಾರ್ಟ್‌ಫೋನ್ ಬಳಕೆದಾರರ ಎಲ್ಲ ಅವಶ್ಯಕತೆಗಳಾದ ಅಂದರೆ ಪ್ರೀಮಿಯಂ ವಿನ್ಯಾಸ, ಇತ್ತೀಚಿನ ವೈಶಿಷ್ಟ್ಯಗಳು ಮತ್ತು ರಾಜಿಯಾಗದ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ನಾವು ಈ ಸಾಧನವನ್ನು ವಿನ್ಯಾಸಗೊಳಿಸಿ ತಯಾರಿಸಿದ್ದೇವೆ. ಎಚ್‌ಎಂಡಿಯಲ್ಲಿ, ನಾವು ನಾವೀನ್ಯತೆಗೆ ಮೊದಲ ಆದ್ಯತೆ ನೀಡುತ್ತಿದ್ದೇವೆ ಎಂದು ಎಚ್‌ಎಂಡಿ ಗ್ಲೋಬಲ್ ಉಪಾಧ್ಯಕ್ಷ ಸನ್ಮಿತ್ ಸಿಂಗ್ ಕೊಚ್ಚರ್ ತಿಳಿಸಿದ್ದಾರೆ.

ಈ ಮೊಬೈಲ್‍ ಮೀಡಿಯಾಟೆಕ್ ಜಿ35 ಪ್ರೊಸೆಸರ್ ಹೊಂದಿದೆ. ಆಂಡ್ರಾಯ್ಡ್ 11 ಓಎಸ್‍ ಇದ್ದು ಸೈಡ್ ಫಿಂಗರ್‌ಪ್ರಿಂಟ್ ಅನ್‌ಲಾಕ್‌ ಒಳಗೊಂಡಿದೆ. ನೀರಿನ ಹನಿಯ ಡಿಸ್‌ಪ್ಲೇ, 6.5 ಇಂಚಿನ ಎಚ್‌ಡಿ + ಪರದೆಯನ್ನು ಸಹ ಹೊಂದಿದೆ.

ನೋಕಿಯಾ ಜಿ20 ಹಗುರವಾದ, ಸ್ಲಿಮ್-ಲೈನ್, ಬಾಳಿಕೆ ಬರುವ ಕವಚವನ್ನು ಹೊಂದಿದೆ.

ನೋಕಿಯಾ ಜಿ20, 4ಜಿಬಿ  ರ್ಯಾಮ್‍ ಮತ್ತು  64 ಜಿಬಿ ಆಂತರಿಕ ಸಂಗ್ರಹದ ಒಂದೇ ಆವೃತ್ತಿ ಹೊಂದಿದೆ. ಬೆಳ್ಳಿ ಮತ್ತು ಕಡುನೀಲಿ ಎರಡು ಬಣ್ಣದಲ್ಲಿ ದೊರಕುತ್ತದೆ.  ದರ. 12,999. ಜುಲೈ 15 ರಿಂದ ನೋಕಿಯಾ.ಡಾಟ್‌ಕಾಮ್ ಮತ್ತು ಅಮೆಜಾನ್‌ನಲ್ಲಿ ಖರೀದಿಗೆ ಲಭ್ಯವಿರುತ್ತದೆ.

ನೋಕಿಯಾ ಜಿ20ನ ಮುಂಗಡ ಬುಕಿಂಗ್ ಇಂದಿನಿಂದ ಅಮೆಜಾನ್. ಇನ್ ಮತ್ತು ನೋಕಿಯಾ.ಡಾಟ್‌ಕಾಂನಲ್ಲಿ ಪ್ರಾರಂಭವಾಗಿದೆ. ಮೊದಲೇ ಬುಕ್‍ ಮಾಡುವ ಗ್ರಾಹಕರಿಗೆ 500 ರೂ. ರಿಯಾಯಿತಿ ಇದೆ ಎಂದು ಎಚ್‍ಎಂಡಿ ಗ್ಲೋಬಲ್‍ ಪ್ರಕಟಣೆ ತಿಳಿಸಿದೆ.

ಟಾಪ್ ನ್ಯೂಸ್

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

Mahindra XUV 300 ಹೆಸರು ಬದಲು…ಈಗ XUV 3XO; ಏ.29ಕ್ಕೆ ಮಾರುಕಟ್ಟೆಗೆ ಬಿಡುಗಡೆ

Mahindra XUV 300 ಹೆಸರು ಬದಲು…ಈಗ XUV 3XO; ಏ.29ಕ್ಕೆ ಮಾರುಕಟ್ಟೆಗೆ ಬಿಡುಗಡೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

11-

Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ  

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.