Udayavni Special

ಆಡಿಯೋ ಪ್ರಿಯರು ಕಾತುರದಿಂದ ಕಾಯುತ್ತಿದ್ದ ನಥಿಂಗ್‍ ಇಯರ್ (1) ಬಿಡುಗಡೆ: ಇದರ ವಿಶೇಷವೇನು?

ಒನ್‍ಪ್ಲಸ್‍ ಮಾಜಿ ಸಹ ಸಂಸ್ಥಾಪಕ ಕಾರ್ಲ್‍ ಪೇನ ನಥಿಂಗ್‍ ಕಂಪೆನಿಯ ಮೊದಲ ಉತ್ಪನ್ನ

Team Udayavani, Jul 29, 2021, 9:50 AM IST

nothing ear 1

ಒನ್‍ ಪ್ಲಸ್‍ ಕಂಪೆನಿಯ ಸಹ ಸ್ಥಾಪಕರಾಗಿದ್ದ ಕಾರ್ಲ್‍ ಪೇ ಕಳೆದ ವರ್ಷ ಆ ಕಂಪೆನಿಯಿಂದ ಹೊರ ಬಂದು ನಥಿಂಗ್‍ ಎಂಬ ಆಡಿಯೋ ಉತ್ಪನ್ನಗಳ ಕಂಪೆನಿ ಸ್ಥಾಪಿಸಿದರು. ಆ ಕಂಪೆನಿಯ ಮೊದಲ ಉತ್ಪನ್ನ ನಥಿಂಗ್‍ ವೈರ್ ಲೆಸ್‍ ಇಯರ್ ಬಡ್‍, ಇಯರ್ (1) ಅನ್ನು ಇದೀಗ ಬಿಡುಗಡೆ ಮಾಡಲಾಗಿದೆ.

ಈ ಹೊಸ ಇಯರ್ ಬಡ್‍ ಬಗ್ಗೆ ಗ್ಯಾಜೆಟ್‍ ಪ್ರಿಯರು ಕಾತರದಿಂದ ಕಾಯುತ್ತಿದ್ದರು. ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿರುವ ಇಯರ್ ಬಡ್‍ ಗಳಿಗಿಂತ ಇದು ಬಹಳ ಭಿನ್ನವಾಗಿದೆ.

ಪಾರದರ್ಶಕ ವಿನ್ಯಾಸ ಹಾಗೂ ಪ್ರೀಮಿಯಮ್‌ ಬಳಕೆಯ ಅನುಭವ ನೀಡುವ, ಟ್ರೂ ವೈರ್‌ಲೆಸ್‌ ಇಯರ್‌ಬಡ್‌ ‘ಇಯರ್‌ (1) ಕೇಸ್‌ 34 ಗಂಟೆಗಳ ಬ್ಯಾಟರಿ ಹೊಂದಿದೆ ಇದರ ಶಕ್ತಿಶಾಲಿ 11.6 ಎಂಎಂ ಡ್ರೈವರ್‌ ಮತ್ತು ಆಕ್ಟೀವ್‍ ನಾಯ್ಸ್ ಕ್ಯಾನ್ಸಲೇಷನ್‍ ಹೊಂದಿರುವ ನಥಿಂಗ್‌ ಇಯರ್‌ (1) ಕೇವಲ 5,999 ರೂ.ಗಳಿಗೆ ಪರಿಶುಧ್ಧ ಧ್ವನಿಯ ಅನುಭವ ನೀಡುತ್ತದೆ ಎಂದು ಕಂಪೆನಿ ತಿಳಿಸಿದೆ.

ಇದನ್ನೂ ಓದಿ:ಇನ್ಸ್ಟಾ ಗ್ರಾಂನಲ್ಲಿ ಇನ್ನು 1 ನಿಮಿಷದ ವಿಡಿಯೋ ಅಪ್‌ಲೋಡ್‌ ಮಾಡುವ ಅವಕಾಶ!

ಈ ವಿನೂತನ ಉತ್ಪನ್ನದ ವಿವರ ನೀಡಿದ ನಥಿಂಗ್‌ನ ಸಿಇಒ ಹಾಗೂ ಸಹ ಸಂಸ್ಥಾಪಕ ಕಾರ್ಲ್ ಪೇ, “ಹೊಸತನವಿಲ್ಲದ ಮಾರುಕಟ್ಟೆಗೆ ನಥಿಂಗ್‌ ಇಯರ್ (1) ಒಂದು ತಾಜಾ ಅನುಭವ ಪರಿಚಯಿಸುತ್ತಿದೆ. ಇದು ನಂಬಲಸಾಧ್ಯವಾದ ದರದಲ್ಲಿ ಸುಧಾರಿತ ತಂತ್ರಜ್ಞಾನ, ಉತ್ತಮ ಇಂಜಿನಿಯರಿಂಗ್‌, ವಿನೂತನ ವಿನ್ಯಾಸ ನೀಡುತ್ತಿದೆ’ ಎಂದಿದ್ದಾರೆ.

ಪಾರದರ್ಶಕ ವಿನ್ಯಾಸ: ಹಿಂದೆಂದೂ ನೋಡಿರದ ಮಾದರಿಯಲ್ಲಿ, ಇಯರ್‌ (1) ಅನ್ನು ರೂಪಿಸಲಾಗಿದೆ. ಇಂಜಿನಿಯರಿಂಗ್‌ ವಿಧಾನವನ್ನು ತೋರಿಸುವ ಪಾರದರ್ಶಕತೆ, ಮೈಕ್ರೋಫೋನ್‌, ಮ್ಯಾಗ್ನೆಟ್‌ಗಳು ಮತ್ತು ಸರ್ಕ್ಯೂಟ್‌ ಬೋರ್ಡ್‌ ವೈಶಿಷ್ಟ್ಯಗಳನ್ನು ಪರಿಚಯಿಸಿದೆ. ಇಯರ್‌ (1)ನಲ್ಲಿ ಅಳವಡಿಸಿರುವ ಎಲ್ಲಾ ಅಂಶಗಳು ಒಂದು ಉದ್ದೇಶವನ್ನು ಒಳಗೊಂಡಿದೆ. ಇದರಲ್ಲಿನ ತಕ್ಷಣ ಗುರುತಿಸಬಲ್ಲ ವಿನ್ಯಾಸ, ಬಲ ಹಾಗೂ ಎಡಕಿವಿಯ ಬಳಕೆಗೆ ಕೆಂಪು ಬಣ್ಣದ ಸೂಚಕ ವಿಭಿನ್ನವಾಗಿ ಕಾಣುತ್ತದೆಯಲ್ಲದೆ, ಇದನ್ನು ಸುಧಾರಿತ ಆರಾಮಕ್ಕಾಗಿ ತಯಾರಿಸಲಾಗಿದೆ. ಪ್ರತಿ ಇಯರ್‌ಬಡ್‌ ಕೇವಲ 4.7 ಗ್ರಾಂ ತೂಕವಿದ್ದು, ಒತ್ತಡ-ನಿವಾರಿಸುವ ವೆಂಟ್‌ಗಳು, ಎರ್ಗೋಮಿಕ್‌ ಹೊಂದಿಕೆ ಮತ್ತು ಮೂರು ಅಳತೆಯ ಸಿಲಿಕಾನ್‌ ಟಿಪ್‍ಗಳನ್ನು ಹೊಂದಿದೆ.

ಶುದ್ಧಧ್ವನಿ: ಇದರ ದೊಡ್ಡ ಡ್ರೈವರ್‌ ಶುದ್ಧ ಧ್ವನಿ ನೀಡುತ್ತದೆ. ಇದು 11.6 ಎಂಎಂ ಅಷ್ಟು ದೊಡ್ಡದಿದೆ. ಸಮತೋಲಿತ ಧ್ವನಿ, ಮಧ್ಯಮ ಮತ್ತು ಕಂಪನದ ಕಾರ್ಯಕ್ಷಮತೆಗಾಗಿ ಸಾಫ್ಟ್‌ವೇರ್‌ ಮತ್ತು ಹಾರ್ಡ್‌ವೇರ್‌ಗಳನ್ನು ಹೊಂದಿದೆ. ಇದರ ಇತ್ತೀಚಿನ ಬ್ಲೂಟೂತ್‌ 5.2 ಕನೆಕ್ಟಿವಿಟಿ, ನೀವು ಯಾವುದೇ ಬೀಟ್‌ ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳುತ್ತದೆ.

ಆಕ್ಟೀವ್‍ ನಾಯ್ಸ್ ಕ್ಯಾನ್ಸಲೇಷನ್‍: ಇಯರ್‌ (1)ರಲ್ಲಿನ ಆಕ್ಟೀವ್‍ ನಾಯ್ಸ್ ಕ್ಯಾನ್ಸಲೇಷನ್‍ ವ್ಯವಸ್ಥೆ ಮೂರು ಹೈ ಡೆಫಿನೇಷನ್‌ ಮೈಕ್‌ಗಳನ್ನು ಒಳಗೊಂಡಿದೆ, ಇದರಿಂದಾಗಿ ಕರೆಗಳನ್ನು ಮಾಡಿದಾಗ ಆ ಕಡೆಯವರು ಸ್ಪಷ್ಟವಾಗಿ ನಿಮ್ಮ ಧ್ವನಿಯನ್ನು ಆಲಿಸಬಹುದಾಗಿದೆ. ಗಾಳಿ ಬಡಿತದಲ್ಲೂ ನಿಮ್ಮ ಮಾತು ಆ ಕಡೆಯವರಿಗೆ ಸರಿಯಾಗಿ ಕೇಳಿಸುತ್ತದೆ ಎಂದು ಕಂಪೆನಿ ತಿಳಿಸಿದೆ.

ಚಾರ್ಜಿಂಗ್‍ ಕೇಸ್‍: ಇಯರ್‌ (1) ನಲ್ಲಿ ಬ್ಯಾಟರಿ 5.7 ಗಂಟೆಗಳವರೆಗೆ ಬಾಳಿಕೆ ಬರುತ್ತದೆ. ಅಲ್ಲದೆ ಅದರ ಕೇಸ್‌ನೊಂದಿಗೆ 34 ಗಂಟೆಗಳವರೆಗೆ ಬಳಸಬಹುದು. ಇದರ ಕಾಂಪ್ಯಾಕ್ಟ್‌ ಪವರ್‌ ವೇಗದ ಚಾರ್ಜಿಂಗ್‌ ಒದಗಿಸುತ್ತದೆ. 10 ನಿಮಿಷದ ಕೇಸ್‌ ಚಾರ್ಜ್ ಮಾಡುವುದು 8 ಗಂಟೆಗಳ ಬ್ಯಾಟರಿ ನೀಡುತ್ತದೆ. ನಥಿಂಗ್‌ ಇಯರ್‌ (1) ವೈರ್‌ಲೆಸ್‌ ನಲ್ಲೂ ಚಾರ್ಜ್‍ ಮಾಡಬಹುದಾಗಿದೆ. ಕ್ಯೂಐ ಚಾರ್ಜರ್‌ಗಳಿಗೆ ಹೊಂದಿಕೊಳ್ಳುತ್ತದೆ.

ಹೆಚ್ಚುವರಿ ಫೀಚರ್‌ಗಳೆಂದರೆ- ಇಯರ್‌ (1) ಆ್ಯಪ್‌ ಮೂಲಕ ಫೈಂಡ್‌ ಮೈ ಇಯರ್‌ಬಡ್, ಈಕ್ವಲೈಸರ್‍, ಗೆಸ್ಚರ್‌ ಕಂಟ್ರೋಲ್‌ ಕಸ್ಟಮೈಸೇಷನ್‌ ಹಾಗೂ ಇನ್‌-ಇಯರ್‌ ಡಿಟೆಕ್ಷನ್‌ ಮತ್ತು ಫಾಸ್ಟ್‌ ಪೇರಿಂಗ್‌ ಮಾಡಬಹುದು. ಇಯರ್‌ (1) ಇಯರ್‌ ಬಡ್‌ಗಳು ಬೆವರು ಹಾಗೂ ನೀರು ನಿರೋಧಕವಾಗಿವೆ.

ನಥಿಂಗ್‌ ಇಯರ್ (1) ಭಾರತದಲ್ಲಿ ಆಗಸ್ಟ್‌ 17ರ ಮಧ್ಯಾಹ್ನ 12ರಿಂದ ಫ್ಲಿಪ್‌ಕಾರ್ಟ್‌ ನಲ್ಲಿ ದೊರಕಲಿದೆ.

-ಕೆ.ಎಸ್‍. ಬನಶಂಕರ ಆರಾಧ್ಯ

ಟಾಪ್ ನ್ಯೂಸ್

ಉಳ್ಳಾಲ: ಕ್ರೈಸ್ತ ಧರ್ಮ ಪ್ರಚೋದಿಸುವ ಪತ್ರಗಳು ಪತ್ತೆ, ಮತಾಂತರ ಕುಮ್ಮಕ್ಕು ಆರೋಪ

ಉಳ್ಳಾಲ: ಕ್ರೈಸ್ತ ಧರ್ಮ ಪ್ರಚೋದಿಸುವ ಪತ್ರಗಳು ಪತ್ತೆ, ಮತಾಂತರ ಕುಮ್ಮಕ್ಕು ಆರೋಪ

ಬಾಂಬೆ ಷೇರುಪೇಟೆ ಇತಿಹಾಸದಲ್ಲೇ ಪ್ರಥಮ ಬಾರಿಗೆ 60,000 ಗಡಿ ದಾಟಿದ ಸೆನ್ಸೆಕ್ಸ್

ಬಾಂಬೆ ಷೇರುಪೇಟೆ ಇತಿಹಾಸದಲ್ಲೇ ಪ್ರಥಮ ಬಾರಿಗೆ 60,000 ಗಡಿ ದಾಟಿದ ಸೆನ್ಸೆಕ್ಸ್

23-dvg-22

ಶಾಲಾ ಶಿಕ್ಷಕಿಯ ಶಪಥ: ಅಂತೂ ರಾಂಪುರಕ್ಕೆ ಬಂತು ಸರ್ಕಾರಿ ಬಸ್‌!

ರೆಡ್‍ ಮಿ 10 ಪ್ರೈಮ್‍: ಬಜೆಟ್‍ ದರದಲ್ಲಿ ಉತ್ತಮ ಸ್ಪೆಸಿಫಿಕೇಷನ್‍

ರೆಡ್‍ ಮಿ 10 ಪ್ರೈಮ್‍: ಬಜೆಟ್‍ ದರದಲ್ಲಿ ಉತ್ತಮ ಸ್ಪೆಸಿಫಿಕೇಷನ್‍

vbgfxgdf

ನಿತ್ಯ ಸ್ನಾನ ಮಾಡದ ಹೆಂಡತಿಗೆ ತಲಾಖ್ ನೀಡಲು ಮುಂದಾದ ಪತಿ

ಆರ್ ಸಿಬಿ ಪಂದ್ಯಕ್ಕೂ ಮುನ್ನ ಧೋನಿ ಪಡೆಗೆ ಗಾಯದ ಬರೆ: ಪ್ರಮುಖ ಆಟಗಾರ ತಂಡದಿಂದ ಔಟ್?

ಆರ್ ಸಿಬಿ ವಿರುದ್ಧ ಪಂದ್ಯಕ್ಕೂ ಮುನ್ನ ಧೋನಿ ಪಡೆಗೆ ಗಾಯದ ಬರೆ: ಪ್ರಮುಖ ಆಟಗಾರ ತಂಡದಿಂದ ಔಟ್?

ಖಂಡ್ರೆ, ಖರ್ಗೆ, ಧರಂ 50 ವರ್ಷ ಆಳಿದ್ದಾರೆ, ಅಭಿವೃದ್ಧಿ ಮಾಡಿಲ್ಲ: ಯತ್ನಾಳ್‌

ಖಂಡ್ರೆ, ಖರ್ಗೆ, ಧರಂ 50 ವರ್ಷ ಆಳಿದ್ದಾರೆ, ಅಭಿವೃದ್ಧಿ ಮಾಡಿಲ್ಲ: ಯತ್ನಾಳ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರೆಡ್‍ ಮಿ 10 ಪ್ರೈಮ್‍: ಬಜೆಟ್‍ ದರದಲ್ಲಿ ಉತ್ತಮ ಸ್ಪೆಸಿಫಿಕೇಷನ್‍

ರೆಡ್‍ ಮಿ 10 ಪ್ರೈಮ್‍: ಬಜೆಟ್‍ ದರದಲ್ಲಿ ಉತ್ತಮ ಸ್ಪೆಸಿಫಿಕೇಷನ್‍

ಫೋಕ್ಸ್‌ವ್ಯಾಗನ್‌ ಟೈಗುನ್‌ ಭಾರತದ ಮಾರುಕಟ್ಟೆಗೆ ಬಿಡುಗಡೆ

ಫೋಕ್ಸ್‌ವ್ಯಾಗನ್‌ ಟೈಗುನ್‌ ಭಾರತದ ಮಾರುಕಟ್ಟೆಗೆ ಬಿಡುಗಡೆ

cgdfgdr

ಇನ್ಮುಂದೆ ಆ್ಯಪಲ್ ಸೇರಿ ಎಲ್ಲಾ ಮೊಬೈಲ್‍ಗಳಿಗೆ ‘ಟೈಪ್ ಸಿ’ ಚಾರ್ಜರ್  

ವೈಜೆಡ್‌ಎಫ್-ಆರ್‌15 ವಿ4.0 ಯಮಹಾ ಬೈಕುಗಳ ಬಿಡುಗಡೆ

ವೈಜೆಡ್‌ಎಫ್-ಆರ್‌15 ವಿ4.0 ಯಮಹಾ ಬೈಕುಗಳ ಬಿಡುಗಡೆ

ಡುಕಾಟಿ ಮಾನ್‌ಸ್ಟರ್‌ ಬೈಕ್‌ ಗಳ ಬುಕಿಂಗ್‌ ಶುರು : ಬೆಲೆ ಎಷ್ಟು ಗೊತ್ತಾ ?

ಡುಕಾಟಿ ಮಾನ್‌ಸ್ಟರ್‌ ಬೈಕ್‌ ಗಳ ಬುಕಿಂಗ್‌ ಶುರು : ಬೆಲೆ ಎಷ್ಟು ಗೊತ್ತಾ?

MUST WATCH

udayavani youtube

ಕುಣಬಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ವಿಧಾನ ಪರಿಷತ್ ಸದಸ್ಯ ಘೋಟ್ನೇಕರ್ ಆಗ್ರಹ

udayavani youtube

ಕೇಂದ್ರ ಹಾಗೂ ರಾಜ್ಯ ಸರಕಾರದ ಜನವಿರೋಧಿ ನೀತಿ ಖಂಡಿಸಿ ಯುವ ಕಾಂಗ್ರೆಸ್ ಪ್ರತಿಭಟನೆ

udayavani youtube

ಗದ್ದಲದ ಗೂಡಾದ ಉದ್ಯಾವರ ಗ್ರಾಮ ಸಭೆ

udayavani youtube

6 ನದಿಗಳನ್ನು ದಾಟಿ ಆಶ್ರಮಕ್ಕೆ ತಲುಪುತ್ತಿದ್ದೆ

udayavani youtube

ಪೊಲೀಸರ ಮೇಲೆಯೇ ದಾಳಿ ನಡೆಸಿದ ಅಕ್ರಮ ಬಾಂಗ್ಲಾದೇಶಿಗರು

ಹೊಸ ಸೇರ್ಪಡೆ

ಮೈಷುಗರ್‌: ಸ್ಪಷ್ಟ ನಿರ್ಧಾರ ಪ್ರಕಟಿಸದ ಸರ್ಕಾರ

ಮೈಷುಗರ್‌: ಸ್ಪಷ್ಟ ನಿರ್ಧಾರ ಪ್ರಕಟಿಸದ ಸರ್ಕಾರ

ಉಳ್ಳಾಲ: ಕ್ರೈಸ್ತ ಧರ್ಮ ಪ್ರಚೋದಿಸುವ ಪತ್ರಗಳು ಪತ್ತೆ, ಮತಾಂತರ ಕುಮ್ಮಕ್ಕು ಆರೋಪ

ಉಳ್ಳಾಲ: ಕ್ರೈಸ್ತ ಧರ್ಮ ಪ್ರಚೋದಿಸುವ ಪತ್ರಗಳು ಪತ್ತೆ, ಮತಾಂತರ ಕುಮ್ಮಕ್ಕು ಆರೋಪ

ತಿಮ್ಮಪ್ಪನಾಯಕನ ಕೆರೆಗೆ ಬೇಕಿದೆ ಕಾಯಕಲ್ಪ

ತಿಮ್ಮಪ್ಪನಾಯಕನ ಕೆರೆಗೆ ಬೇಕಿದೆ ಕಾಯಕಲ್ಪ

ಬಾಂಬೆ ಷೇರುಪೇಟೆ ಇತಿಹಾಸದಲ್ಲೇ ಪ್ರಥಮ ಬಾರಿಗೆ 60,000 ಗಡಿ ದಾಟಿದ ಸೆನ್ಸೆಕ್ಸ್

ಬಾಂಬೆ ಷೇರುಪೇಟೆ ಇತಿಹಾಸದಲ್ಲೇ ಪ್ರಥಮ ಬಾರಿಗೆ 60,000 ಗಡಿ ದಾಟಿದ ಸೆನ್ಸೆಕ್ಸ್

23-dvg-22

ಶಾಲಾ ಶಿಕ್ಷಕಿಯ ಶಪಥ: ಅಂತೂ ರಾಂಪುರಕ್ಕೆ ಬಂತು ಸರ್ಕಾರಿ ಬಸ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.