
ಒಡಿಸ್ಸಿ ವಾಡೆರ್ ಎಲೆಕ್ಟ್ರಿಕ್ ಬೈಕ್; 7 ಇಂಚಿನ ಆ್ಯಂಡ್ರಾಯ್ಡ್ ಡಿಸ್‌ಪ್ಲೇ
Team Udayavani, Apr 1, 2023, 8:00 AM IST

ಒಡಿಸ್ಸಿ ಎಲೆಕ್ಟ್ರಿಕ್ ವಾಹನಗಳ ಕಂಪನಿಯು ವಾಡೆರ್ ಎಲೆಕ್ಟ್ರಿಕ್ ಬೈಕ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿದ್ದು, ಆರಂಭಿಕ ಎಕ್ಸ್-ಶೋರೂಮ್ ಬೆಲೆ 1.10 ಲಕ್ಷ ರೂ.(ಅಹಮದಾಬಾದ್) ಇದೆ.
ಬ್ಯಾಟರಿ ಮತ್ತು ಪವರ್‌ಟ್ರೈನ್‌ಗೆ 3 ವರ್ಷದ ವ್ಯಾರಂಟಿ ಇದೆ. 999 ರೂ. ಪಾವತಿಸಿ ಬುಕ್ಕಿಂಗ್ ಮಾಡಬಹುದಾಗಿದೆ. ಜುಲೈ ನಂತರ ಬೈಕ್ ಡೆಲಿವರಿ ಆಗಲಿದೆ. 7 ಇಂಚು ಆ್ಯಂಡ್ರಾಯ್ಡ್ ಡಿಸ್‌ಪ್ಲೇ ಹೊಂದಿರುವ ದೇಶದ ಮೊದಲ ಬೈಕ್ ಇದಾಗಿದೆ.
ಆ್ಯಪ್ ಮತ್ತು ಬ್ಲೂಟೂಥ್ ಕನೆಕ್ಟಿವಿಟಿ ಹೊಂದಿದೆ. ಒಮ್ಮೆ ಚಾರ್ಜ್ ಮಾಡಿದರೆ 125 ಕಿ.ಮೀ. ಸಂಚರಿಸಬಹುದಾಗಿದೆ. 4 ಗಂಟೆಗಳಲ್ಲಿ ಬ್ಯಾಟರಿ ಪೂರ್ಣ ಚಾರ್ಜ್ ಆಗಲಿದೆ ಎಂದು ಕಂಪನಿ ತಿಳಿಸಿದೆ.
ಟಾಪ್ ನ್ಯೂಸ್
