OnePlus 11 5G: ಈ ಫ್ಲ್ಯಾಗ್ ಶಿಪ್ ಫೋನ್ ಬಳಕೆಯಲ್ಲಿ ಹೇಗಿದೆ? ಡೀಟೇಲ್ಸ್ ಇಲ್ಲಿದೆ!


Team Udayavani, May 23, 2023, 11:20 AM IST

OnePlus 11 5G: ಈ ಫ್ಲ್ಯಾಗ್ ಶಿಪ್ ಫೋನ್ ಬಳಕೆಯಲ್ಲಿ ಹೇಗಿದೆ? ಡೀಟೇಲ್ ಇಲ್ಲಿದೆ!

ಒನ್ ಪ್ಲಸ್ ಬ್ರಾಂಡ್ ವಿವಿಧ ಸೆಗ್ ಮೆಂಟ್ ನಲ್ಲಿ ತನ್ನ ಫೋನ್ ಗಳನ್ನು ಬಿಡುಗಡೆ ಮಾಡುತ್ತಿದೆ. ಸಾಮಾನ್ಯವಾಗಿ ವರ್ಷದ ಮೊದಲ ತ್ರೈಮಾಸಿಕದಲ್ಲಿ ಅದು ತನ್ನ ಶ್ರೇಣಿಯ ಅತ್ಯುನ್ನತ ವೈಶಿಷ್ಟ್ಯಗಳುಳ್ಳ ಫ್ಲ್ಯಾಗ್ ಶಿಪ್ ಫೋನ್ ಗಳನ್ನು ಬಿಡುಗಡೆ ಮಾಡುತ್ತದೆ. ಇದು ಅದರ ಸೆಗ್ ಮೆಂಟ್‌ನಲ್ಲಿ ಅತ್ಯುನ್ನತ ಪ್ರೊಸೆಸರ್, ಕ್ಯಾಮರಾ, ಬಿಲ್ಡ್ ಕ್ವಾಲಿಟಿಯುಳ್ಳ ಫೋನಾಗಿರುತ್ತದೆ. ಈ ವರ್ಷದ ಅದರ ಫ್ಲಾಗ್ ಶಿಪ್ ಫೋನ್. OnePlus 11 5G. ಈ ಫೋನ್ ನ ಕಾರ್ಯಾಚರಣೆ ಹೇಗಿದೆ? ಇದರ ವಿಶೇಷಗಳೇನು? ಎಂಬುದರ ಸವಿವರ ಮಾಹಿತಿ ಇಲ್ಲಿದೆ.

ವಿನ್ಯಾಸ: OnePlus 11 5G ಕಳೆದ ವರ್ಷದ OnePlus 10 Pro 5G ಹೋಲುತ್ತದೆ.  ಒಂದು ಬದಲಾವಣೆಯೆಂದರೆ ಹಿಂಬದಿಯ ಕ್ಯಾಮರಾ ಮಾಡ್ಯೂಲ್ ಚೌಕಾಕಾರದ ಬದಲಿಗೆ ವೃತ್ತಾಕಾರವಾಗಿದೆ. Hasselblad ಲೋಗೋವನ್ನು ಈಗ ಒಂದು ಬದಿಗೆ ಬದಲಾಗಿ ನಾಲ್ಕು ಕ್ಯಾಮೆರಾ ಲೆನ್ಸ್ ನಡುವೆ ಅಡ್ಡಲಾಗಿ ಇರಿಸಲಾಗಿದೆ.

OnePlus 11 5G 8.53mm ನಷ್ಟು ಸ್ಲಿಮ್ ಆಗಿದೆ. 205 ಗ್ರಾಂ ತೂಕವಿದೆ. ಅಲ್ಯೂಮಿನಿಯಂ ಫ್ರೇಮ್‌ ಹೊಂದಿದೆ. ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಅನ್ನು ಬ್ಯಾಕ್ ಪ್ಯಾನೆಲ್‌ ಹೊಂದಿದೆ.  ಸ್ವಲ್ಪ ತರಿತರಿಯಾದ ಹಿಂಬದಿ ಪ್ಯಾನೆಲ್ ಇದ್ದು, ಒಟ್ಟಾರೆ ಮೊಬೈಲ್ ಫೋನ್ ಸ್ಲಿಮ್ ಆಗಿದ್ದು, ಜೊತೆಯಲ್ಲಿ ನೀಡಿರುವ ರಬ್ಬರ್ ಕವರ್ ಹಾಕಿಕೊಳ್ಳುವುದು ಸೂಕ್ತ.

ಪರದೆ: ಇದು 6.7-ಇಂಚಿನ 2K 120Hz ಸೂಪರ್ ಫ್ಲೂಯಿಡ್ AMOLED ಎಲ್ ಟಿ ಪಿ ಓ 3.0 ಡಿಸ್‌ಪ್ಲೇ ಹೊಂದಿದೆ. OnePlus 11 5G ಡಾಲ್ಬಿ ವಿಷನ್‌ ಎಚ್ ಡಿ ಆರ್ ಹೊಂದಿದ ಮೊದಲ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಇದೂ ಒಂದಾಗಿದೆ.  ಪರದೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ರಕ್ಷಣೆಯಿದೆ. ಡಿಸ್ ಪ್ಲೇ ಅತ್ಯುತ್ತಮವಾಗಿದ್ದು, ಬಣ್ಣಗಳ ಹೊಂದಾಣಿಕೆ ಚೆನ್ನಾಗಿದೆ. ಯೂಟ್ಯೂಬ್ ವೀಕ್ಷಣೆ, ಫೋಟೋಗಳ ವೀಕ್ಷಣೆ ಎಲ್ಲದರಲ್ಲೂ ಸಹಜ ಬಣ್ಣಗಳು ತೋರುತ್ತವೆ. ಪ್ರಖರ ಬಿಸಿಲಿನಲ್ಲೂ ಡಿಸ್ ಪ್ಲೇ ನಿಚ್ಚಳವಾಗಿ ಕಾಣುತ್ತದೆ.

ಕಾರ್ಯಾಚರಣೆ: OnePlus 11 5G ನಲ್ಲಿರುವ Snapdragon 8 Gen 2 ಪ್ರೊಸೆಸರ್ ಹೊಂದಿದೆ.  ಇದು ಸದ್ಯದ ಆಂಡ್ರಾಯ್ಡ್ ಫೋನ್ ಗಳಲ್ಲಿ ಅತ್ಯುನ್ನತ ಪ್ರೊಸೆಸರ್ ಆಗಿದ್ದು, ಸ್ಯಾಮ್‌ಸಂಗ್‌ನ S23 ಸರಣಿ ಸೇರಿ ಕೆಲವೇ ಫ್ಲಾಗ್ ಶಿಪ್ ಫೋನ್ ಗಳಲ್ಲಿದೆ.

ಈ ಫೋನ್ Android 13 ಕಾರ್ಯಾಚರಣೆ ವ್ಯವಸ್ಥೆ ಹೊಂದಿದ್ದು, ಇದಕ್ಕೆ ಒನ್ ಪ್ಲಸ್ ನ OxygenOS 13 ಸ್ಕಿನ್ ಅನ್ನು ಹೊಂದಾಣಿಕೆ ಮಾಡಲಾಗಿದೆ. ಇದು RAM-Vita ದಂತಹ ಕೆಲವು ಹೊಸ ವಿಶೇಷಗಳನ್ನು ಹೊಂದಿದೆ. ಇದು ಹೆಚ್ಚು ಅಗತ್ಯ ಬೇಡುವ ಆಪ್ ಗಳಿಗೆ RAM ಹಂಚಿಕೆಯನ್ನು ಆಪ್ಟಿಮೈಜ್ ಮಾಡುತ್ತದೆ. 16GB ವರೆಗೂ RAM ಸಾಮರ್ಥ್ಯ ಹೊಂದಿದೆ. ಇದರಿಂದ ಒಮ್ಮೆಲೆ 44 ಆಪ್ ಗಳನ್ನು ಕಾರ್ಯಾಚರಿಸಬಹುದು. OnePlus 11 5G ನಾಲ್ಕು ವರ್ಷಗಳ ಆಂಡ್ರಾಯ್ಡ್ ಅಪ್ ಡೇಟ್ ಮತ್ತು ಐದು ವರ್ಷಗಳ ಸೆಕ್ಯುರಿಟ್ ಅಪ್ ಡೇಟ್ ನೀಡುತ್ತದೆ.

ಇದನ್ನೂ ಓದಿ:ನಮ್ಮದು ಉತ್ತಮ ತಂಡವಲ್ಲ, ಪ್ಲೇ ಆಫ್ ಆಡಲು ನಾವು ಅರ್ಹರಲ್ಲ: ಆರ್ ಸಿಬಿ ನಾಯಕ Faf du Plessis

ಪ್ರೊಸೆಸರ್ ನ ವೇಗದ ಕಾರ್ಯಾಚರಣೆಯ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಯಾವುದೇ ಹಂತದಲ್ಲೂ ಫೋನ್ ಲ್ಯಾಗ್ ಆಗುವುದಿಲ್ಲ. ಗೇಮ್ ಗಳಿರಬಹುದು, ಇಮೇಲ್, ವಾಟ್ಸಪ್, ಫೇಸ್ ಬುಕ್ ಸೇರಿದಂತೆ ಇನ್ನಿತರ ಆಪ್ ಗಳ ಬಳಕೆಯಿರಬಹುದು ವೇಗವಾಗಿ ಕೆಲಸ ಮಾಡುತ್ತದೆ. ಸಾಮಾನ್ಯವಾಗಿ ಒನ್ ಪ್ಲಸ್ ಫೋನ್ ಗಳು ಮೂಲ ಆಂಡ್ರಾಯ್ಡ್ ಇಂಟರ್ ಫೇಸ್ ಅನ್ನೇ ಹೆಚ್ಚು ಬಳಸಿಕೊಂಡಿರುವುದರಿಂದ, ಪರದೆಯ ಮೇಲೆ ಆಪ್ ಗಳ ವಿನ್ಯಾಸ, ಸೆಟಿಂಗ್ ವಿನ್ಯಾಸ ಎಲ್ಲವೂ ನೀಟ್ ಆಗಿದೆ. ಫೋನ್ ಜೊತೆ ನಮಗೆ ಬೇಡವಾದ ಅನಗತ್ಯ ಆಪ್ ಗಳ ಕಿರಿಕಿರಿ ಇಲ್ಲ. ಗೇಮ್ ನಂತಹ ಕಠಿಣ ಬಳಕೆಗೂ ದಣಿವರಿಯದೇ ಅನಾಯಾಸವಾಗಿ ಕಾರ್ಯಾಚರಿಸುತ್ತದೆ. ಪರದೆಯ ಮೇಲೇ ಇರುವ ಬೆರಳಚ್ಚು ಸಂವೇದಕ ತ್ವರಿತ ಮತ್ತು ನಿಖರವಾಗಿದೆ. ಆಪ್ ಅಥವಾ ವಿಷಯದ ಆಧಾರದ ಮೇಲೆ ಪರದೆಯ ರೆಸಲ್ಯೂಶನ್ ಫುಲ್-HD+ ನಿಂದ QHD+ ಗೆ ಸ್ವಯಂಚಾಲಿತವಾಗಿ ಬದಲಾಯಿಸುವ ಆಯ್ಕೆ ಹೊಂದಿದೆ.

ಕ್ಯಾಮರಾ: ಇದು ಹ್ಯಾಸೆಲ್ ಬ್ಲಾಡ್ ಟ್ರಿಪಲ್-ಕ್ಯಾಮೆರಾ ಹೊಂದಿದ್ದು, IMX890 50MP ಮುಖ್ಯ ಲೆನ್ಸ್, IMX709 32MP ಪೋಟ್ರೇಟ್ ಲೆನ್ಸ್ ಮತ್ತು IMX581 48MP ಅಲ್ಟ್ರಾ-ವೈಡ್ ಲೆನ್ಸ್ ಹೊಂದಿದೆ. ಸೆಲ್ಫೀಗಾಗಿ 16 ಮೆ.ಪಿ. ಕ್ಯಾಮರಾ ಹೊಂದಿದೆ.

ಮುಖ್ಯ ಕ್ಯಾಮರಾ 10 Pro 5G ಗಿಂತ ಸ್ವಲ್ಪ ಹೆಚ್ಚು ರೆಸಲ್ಯೂಶನ್ (50 ಮೆಗಾಪಿಕ್ಸೆಲ್‌ಗಳು) ಹೊಂದಿದೆ. ಫೋಕಲ್ ಲೆಂತ್ 1mm ಹೆಚ್ಚಾಗಿದೆ. ಎರಡನೇ ಕ್ಯಾಮರಾ ಹಿಂದಿಗಿಂತ ಅಪ್ ಗ್ರೇಡ್ ಆಗಿದೆ.

ಮೂರನೇ ಹಿಂಬದಿಯ ಕ್ಯಾಮೆರಾವು 32-ಮೆಗಾಪಿಕ್ಸೆಲ್ ಸೋನಿ IMX709 ಸಂವೇದಕವಾಗಿದ್ದು 2X ಆಪ್ಟಿಕಲ್ ಜೂಮ್ ಮತ್ತು ವಿಶಾಲವಾದ f/2.0 ಅಪರ್ಚರ್ ಹೊಂದಿದೆ. ಹಿಂದಿನ ಫೋನ್ ಗಿಂತ ರೆಸಲ್ಯೂಶನ್ ಹೆಚ್ಚಿದ್ದರೂ ಗರಿಷ್ಠ ಜೂಮ್ ಮಟ್ಟವು 20X ಆಗಿದೆ, ಇದು 8-ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾವನ್ನು ಹೊಂದಿರುವ OnePlus 10 Pro ನಲ್ಲಿದ್ದ 30X ಜೂಮ್ ಗಿಂತ ಕಡಿಮೆಯಿದೆ. ಸೆಲ್ಫಿಗಳಿಗಾಗಿ, OnePlus ತನ್ನ ಹಳೆಯ Sony IMX471 16-ಮೆಗಾಪಿಕ್ಸೆಲ್ ಲೆನ್ಸ್ ನೀಡಿದೆ.

ಇದರಿಂದ ಸೆರೆಹಿಡಿಯಲಾದ ಫೋಟೋಗಳು ಹ್ಯಾಸೆಲ್‌ ಬ್ಲಾಡ್ ನ ನೈಸರ್ಗಿಕ’ ಬಣ್ಣ ವ್ಯವಸ್ಥೆ ಹಾಗೂ ಕ್ಯಾಮೆರಾ ಅಪ್ಲಿಕೇಶನ್ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಮೂಲಕ ದೃಶ್ಯಗಳ ನೋಟವನ್ನು ಹೊಂದಾಣಿಕೆ ಸಹ ಮಾಡುತ್ತದೆ.

ಹಗಲಿನಲ್ಲಿ ಮುಖ್ಯ ಕ್ಯಾಮರಾದಿಂದ ಚಿತ್ರೀಕರಿಸಿದ ಚಿತ್ರಗಳು ತುಂಬಾ ಚೆನ್ನಾಗಿವೆ. ಬಣ್ಣಗಳು ಎದ್ದುಕಾಣುತ್ತವೆ. HDR ಅನ್ನು ಉತ್ತಮವಾಗಿ ನಿರ್ವಹಿಸಲಾಗಿದೆ ಮತ್ತು ಆಟೋಫೋಕಸ್ ಸಮರ್ಪಕವಾಗಿದೆ. ಲ್ಯಾಂಡ್‌ಸ್ಕೇಪ್ ಶಾಟ್‌ಗಳಲ್ಲಿ, OnePlus 10 Pro 5G ಯೊಂದಿಗೆ ತೆಗೆದ ಶಾಟ್‌ಗಳಿಗೆ ಹೋಲಿಸಿದರೆ ದೂರದ ವಸ್ತುಗಳ ಮೇಲಿನ ಸೂಕ್ಷ್ಮ ವಿವರಗಳು ಸ್ವಲ್ಪ ಉತ್ತಮವಾದ ವ್ಯಾಖ್ಯಾನವನ್ನು ಹೊಂದಿವೆ. ಕ್ಲೋಸ್-ಅಪ್‌ಗಳು ಉತ್ತಮವಾಗಿ ಕಾಣುತ್ತವೆ. ಅಲ್ಟ್ರಾ-ವೈಡ್ ಕ್ಯಾಮೆರಾ ಕಳೆದ ವರ್ಷದ 10 Pro 5G ಗಿಂತ ಗಮನಾರ್ಹ ಸುಧಾರಣೆಯಾಗಿದೆ. ವಸ್ತುಗಳ ಬಣ್ಣಗಳು ಮತ್ತು ಟೆಕ್ಸ್ ಚರ್ ಸ್ಪಷ್ಟವಾಗಿವೆ. ಕಡಿಮೆ-ಬೆಳಕಿನ ಫೋಟೋಗಳು ಸಹ ಉತ್ತಮವಾಗಿ ಕಾಣುತ್ತವೆ.

ಸೆಲ್ಫಿ ಕ್ಯಾಮೆರಾ ಹಗಲಿನಲ್ಲಿ ಮತ್ತು ಮಂದ ಬೆಳಕಿನಲ್ಲೂ ಉತ್ತಮ ಫೋಟೋ ನೀಡುತ್ತದೆ. ಇದರ ವಿಡಿಯೋ ಆಯ್ಕೆಯಲ್ಲಿ 8K 24fps ವರೆಗೆ ವೀಡಿಯೊವನ್ನು ರೆಕಾರ್ಡ್ ಮಾಡಬಹುದು. ವಿಡಿಯೋ ಗುಣಮಟ್ಟ ಚೆನ್ನಾಗಿದೆ. ಆರಂಭಿಕ ಯೂಟ್ಯೂಬರ್ ಗಳು, ನಮ್ಮ ಸಮಾರಂಭಗಳ ಚಿತ್ರೀಕರಣ, ಪ್ರವಾಸ, ಇತ್ಯಾದಿಗಳ ಚಿತ್ರೀಕರಣ ಗುಣಮಟ್ಟದ ವಿಡಿಯೋ ನೀಡುತ್ತದೆ.

ಬ್ಯಾಟರಿ: ಇದರಲ್ಲಿ ಬಾಕ್ಸ್ ಜೊತೆಗೆ ಕೇಬಲ್ ಮತ್ತು ಚಾರ್ಜಿಂಗ್ ಅಡಾಪ್ಟರ್ ಬರುತ್ತದೆ. ಇದೊಂದು ಒಳ್ಳೆಯ ಸಂಗತಿ. ಇತ್ತೀಚಿಗೆ ಕೆಲವು ಬ್ರಾಂಡ್ ಗಳು ಮೊಬೈಲ್ ಜೊತೆಗೆ ಅಡಾಪ್ಟರ್ ನೀಡುತ್ತಿಲ್ಲ. ಗ್ರಾಹಕ ಪ್ರತ್ಯೇಕವಾಗಿ ಖರೀದಿಸಬೇಕು. ಇದಕ್ಕಾಗಿ 1 ರಿಂದ 2 ಸಾವಿರ ರೂ. ಹೆಚ್ಚುವರಿಯಾಗಿ ನೀಡಬೇಕು. 5000 ಎಂಎಎಚ್ ನ ಬ್ಯಾಟರಿಯಿದ್ದು, 100 ವ್ಯಾಟ್ಸ್ SuperVOOC ವೇಗದ ಚಾರ್ಜಿಂಗ್ ಸೌಲಭ್ಯ ಹೊಂದಿದೆ. ಬ್ಯಾಟರಿ ಕೇವಲ 25-26 ನಿಮಿಷದಲ್ಲಿ ಶೂನ್ಯದಿಂದ ಶೇ.100 ರಷ್ಟು ಚಾರ್ಜ್ ಆಗುತ್ತದೆ. ಮನೆಯಿಂದ ಹೊರಡುವ ಹತ್ತು ನಿಮಿಷಕ್ಕೆ ಚಾರ್ಜ್ ಗೆ ಇಟ್ಟರೂ ಫಟಾಫಟ್ ಚಾರ್ಜ್ ಆಗುತ್ತದೆ.

ಇದರ ದರ: 8+128GB ಆವೃತ್ತಿಗೆ 56,999 ರೂ. ಮತ್ತು 16+256GB ಆವೃತ್ತಿಗೆ 61,999 ರೂ ಇದೆ.

ಇಂದು ಮಾರುಕಟ್ಟೆಯಲ್ಲಿ ಅತ್ಯುನ್ನತ ಫ್ಲಾಗ್ ಶಿಪ್ ಫೋನ್ ಗಳ ದರ 95 ಸಾವಿರದಿಂದ 1.5 ಲಕ್ಷದವರೆಗೆ ಇದೆ. ಅವುಗಳಲ್ಲಿರುವ ಪ್ರೊಸೆಸರ್, ಅಷ್ಟೇ ಉನ್ನತವಾದ ಕ್ಯಾಮರಾವನ್ನು ಒನ್ ಪ್ಲಸ್ 11 5ಜಿ ಹೊಂದಿದೆ. ಒಂದು ಉತ್ತಮ ಫ್ಲಾಗ್ ಶಿಪ್ ಫೋನ್ ಇರಬೇಕು. ದರವೂ ಮಿತವ್ಯಯಕಾರಿಯಾಗಿರಬೇಕು ಎಂದು ಬಯಸುವ, ಹಣಕ್ಕೆ ತಕ್ಕ ಮೌಲ್ಯ ಬಯಸುವ ಗ್ರಾಹಕರಿಗೆ ಹೊಂದುವ ಫೋನ್ ಇದು.

ಕೆ.ಎಸ್. ಬನಶಂಕರ ಆರಾಧ್ಯ

ಟಾಪ್ ನ್ಯೂಸ್

1-dsad

Odisha ಭೀಕರ ರೈಲು ಅವಘಡ; ಕನಿಷ್ಠ 50 ಮೃತ್ಯು, 350ಕ್ಕೂ ಹೆಚ್ಚು ಮಂದಿಗೆ ಗಾಯ

HDK

ಸಿದ್ದರಾಮಯ್ಯ ಯುವಕರ ಹಣೆಗೆ ತುಪ್ಪ ಸವರಿದ್ದಾರೆ: ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ

1-dsasa

WFI ಬ್ರಿಜ್ ಭೂಷಣ್ ಬಂಧಿಸಲು ಗಡುವು ವಿಧಿಸಿದ ಖಾಪ್ ಮಹಾಪಂಚಾಯತ್

imran-khan

Pakistan ಇಮ್ರಾನ್ ಖಾನ್‌ಗೆ ಭಯೋತ್ಪಾದನಾ ನಿಗ್ರಹ ನ್ಯಾಯಾಲಯದಿಂದ ಜಾಮೀನು

1-dsad

Train ಅವಘಡ; ಬಾಲಸೋರ್ ನಲ್ಲಿ ಎಕ್ಸ್‌ಪ್ರೆಸ್ ರೈಲು ಗೂಡ್ಸ್ ರೈಲಿಗೆ ಢಿಕ್ಕಿ

1-SADSAASD

Nithin Gopi: 39 ರ ಹರೆಯದಲ್ಲೇ ನಟ ನಿತಿನ್​ ಗೋಪಿ ವಿಧಿವಶ

1-sdasdasd

Congress Guarantee ನನ್ನ ಹೆಂಡತಿಗೂ ಸಿಗುತ್ತೆ ರೀ; ಸಿದ್ದರಾಮಯ್ಯ ಹಾಸ್ಯ ಚಟಾಕಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewqewq

Amazon ಫ್ಯಾಷನ್‌ನಿಂದ ವಾರ್ಡ್‌ರೋಬ್‌ ರಿಫ್ರೆಶ್‌ ಸೇಲ್‌ ಆರಂಭ

thumb-2

ಪ್ರವಾಹ ಮುನ್ಸೂಚನೆ ನೀಡುವ ಗೂಗಲ್‌ನ ಫ್ಲಡ್‌ ಹಬ್‌

Amazon.in ನಲ್ಲಿ ಜೂನ್ 1 ರಿಂದ ಜೂನ್ 4 ರವರೆಗೆ ಹೋಮ್ ಶಾಪಿಂಗ್ ಮೇಳ

Amazon.in ನಲ್ಲಿ ಜೂನ್ 1 ರಿಂದ ಜೂನ್ 4 ರವರೆಗೆ ಹೋಮ್ ಶಾಪಿಂಗ್ ಮೇಳ

3-samsung

ಬಜೆಟ್ ದರದಲ್ಲಿ 5G ಫೋನ್: Samsung Galaxy M14 5G

ಮೊಬೈಲ್‌ ಬಳಕೆದಾರರ ನೆರವಿಗಾಗಿ ಸಂಚಾರ್‌ ಸಾಥಿ

ಮೊಬೈಲ್‌ ಬಳಕೆದಾರರ ನೆರವಿಗಾಗಿ ಸಂಚಾರ್‌ ಸಾಥಿ

MUST WATCH

udayavani youtube

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

udayavani youtube

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

udayavani youtube

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

ಹೊಸ ಸೇರ್ಪಡೆ

12-sadsad

Davanagere ವೃದ್ಧರೊಬ್ಬನ್ನು ಅಪಹರಿಸಿ ಭಾರಿ ಹಣಕ್ಕೆ ಬೇಡಿಕೆ; ಐವರ ಬಂಧನ

1-sddasd

SNM ಪಾಲಿಟೆಕ್ನಿಕ್ NSS ನವರಿಂದ ಬಡವರ ಮನೆಗಳಿಗೆ ಕಾಯಕಲ್ಪ

1-wewqewq

Amazon ಫ್ಯಾಷನ್‌ನಿಂದ ವಾರ್ಡ್‌ರೋಬ್‌ ರಿಫ್ರೆಶ್‌ ಸೇಲ್‌ ಆರಂಭ

1-dsad

Odisha ಭೀಕರ ರೈಲು ಅವಘಡ; ಕನಿಷ್ಠ 50 ಮೃತ್ಯು, 350ಕ್ಕೂ ಹೆಚ್ಚು ಮಂದಿಗೆ ಗಾಯ

1-qwwqeqwe

Mahalingpur ಗಾಳಿ ಮಳೆಗೆ ವ್ಯಾಪಕ ನಷ್ಟ; ಹಲವು ಮನೆಗಳಿಗೆ ಹಾನಿ, ಪರದಾಟ