ಮಾರ್ಚ್ ನಲ್ಲಿ ಮಾರುಕಟ್ಟೆಗೆ OPPO X3 ಪ್ರೋ ಸ್ಮಾರ್ಟ್ ಪೋನ್: ಆಸಕ್ತಿದಾಯಕ ಫೀಚರ್ ಗಳು !
Team Udayavani, Jan 14, 2021, 2:06 PM IST
ನವದೆಹಲಿ: ವಿಶ್ವದ ಪ್ರಸಿದ್ಧ ಸ್ಮಾರ್ಟ್ ಪೋನ್ ಕಂಪನಿಯಾಗಿರುವ OPPO ಇತೀಚೆಗಷ್ಟೆ ತನ್ನ X2 ಆವೃತ್ತಿಯ ಮೊಬೈಲ್ ಪೋನ್ ಅನ್ನು ಬಿಡುಗಡೆಗೊಳಿಸಿದ್ದು, ಈ ನಡುವೆ ಮುಂಬರುವ ಮಾರ್ಚ್ ನಲ್ಲಿ ಇನ್ನೊಂದು ಹೊಸ ಆವೃತ್ತಿಯ ಫೈಂಡ್ X3 ಪ್ರೋ ಸ್ಮಾರ್ಟ್ ಫೋನ್ ಅನ್ನು ಬಿಡುಗಡೆಗೊಳಿಸಲು ತಯಾರಿ ನಡೆಸಿದೆ. ಈ ಕುರಿತಾದ ಮಾಹಿತಿಯನ್ನು ಕಂಪನಿ ಅಧಿಕೃತವಾಗಿ ಹಂಚಿಕೊಳ್ಳುವ ಮೊದಲೇ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಸೋರಿಕೆಯಾಗಿದೆ.
ಈ ಹೊಸ ಆವೃತ್ತಿಯ ಸ್ಮಾರ್ಟ್ ಪೋನ್ ಹಿಂಭಾಗದಲ್ಲಿ ವಿಶಿಷ್ಟವಾದ ಕ್ಯಾಮರಾ ಬಂಪ್ ಇರಲಿದ್ದು, ಇದು ಐಪೋನ್ -12 ಆವೃತ್ತಿಯ ಕ್ಯಾಮರಾವನ್ನು ಹೋಲಲಿದೆ ಎಂದು ಹೇಳಲಾಗುತ್ತಿದೆ.
OPPO X3 ನ ವೈಶಿಷ್ಟ್ಯತೆಗಳು
ಹೊಸ ಮಾದರಿಯಲ್ಲಿ ಮಾರುಕಟ್ಟೆಗೆ ತಲುಪಲಿರುವ ಫೈಂಡ್ OPPO X3 ಪ್ರೋ ಸ್ಮಾರ್ಟ್ ಪೋನ್ ತನ್ನ ಹಳೆಯ ಆವೃತ್ತಿಗಳಿಗಿಂತ ಹಲವಾರು ವಿಭಿನ್ನ ವೈಶಿಷ್ಟ್ಯತೆಗಳನ್ನು ಹೊಂದಿರಲಿದೆ ಎನ್ನಲಾಗಿದೆ. ಇದು ಬರೋಬ್ಬರಿ 6.7 ಇಂಚಿನ ಕರ್ವ್ಡ್ ಡಿಸ್ ಪ್ಲೇ ಅನ್ನು ಒಳಗೊಂಡಿರಲಿದ್ದು, 1440p OLED ಸ್ಕ್ರೀನ್ ಅನ್ನು ಒಳಗೊಂಡಿರಲಿದೆ.
ಈ ಸ್ಮಾರ್ಟ್ ಪೋನ್ ಡಿಸ್ ಪ್ಲೇನ ಎಡಭಾಗದಲ್ಲಿ ಪಂಚ್ ಹೋಲ್ ಇರಲಿದ್ದು, 25 X ಮೈಕ್ರೋ ಸ್ಕೊಪ್ ಮ್ಯಾಕ್ರೋ ಲೆನ್ಸ್ ಸುತ್ತಲೂ ಲೈಟ್ ರಿಂಗ್ ಅನ್ನು ಹೊಂದಿರಲಿದೆ. ಅಲ್ಲದೆ ಇದರಲ್ಲಿ ಕ್ವಾಲ್ ಕಾಂ ಸ್ನ್ಯಾಪ್ ಡ್ರ್ಯಾಗನ್ 888 ಪ್ರೊಸೆಸರ್ ಅನ್ನು ಅಳವಡಿಸಲಾಗಿದೆ.
ಕ್ಯಾಮರಾ: ಈ ಮೊಬೈಲ್ ಪೋನಿನ 2 ಕ್ಯಾಮರಾಗಳು ಸೋನಿ ಸೆನ್ಸರ್ ಅನ್ನು ಒಳಗೊಂಡಿರಲಿದೆ ಎನ್ನಲಾಗುತ್ತಿದ್ದು, ಒಂದು ಕ್ಯಾಮರಾದಲ್ಲಿ 50 MP ಕಸ್ಟಮ್ ಮೈನ್ ಸೆನ್ಸರ್ ಹಾಗೂ ಇನ್ನೊಂದು ಕ್ಯಾಮಾರಾದಲ್ಲಿ ಅಲ್ಟ್ರಾವೈಡ್ ಸೆನ್ಸರ್ ಇರಲಿದೆಯಂತೆ. ಇನ್ನು ಮೂರನೇ ಕ್ಯಾಮರಾ ಜೂಮ್ ಲೆನ್ಸ್ ಅನ್ನು ಒಳಗೊಂಡಿರಲಿದ್ದು, 2X ಅಥವಾ 3x ಆಪ್ಟಿಕಲ್ ಜೂಮ್ ಅನ್ನು ಹೊಂದಿರಲಿದೆ. ಈ ನಡುವೆ ತನ್ನ X2 ಆವೃತ್ತಿಯ ಸ್ಮಾರ್ಟ್ ಪೋನ್ ನಲ್ಲಿ ಕಂಡುಬಂದಂತಹ ಟೆಲಿಫೋಟೋವನ್ನು ಇದು ಹೊಂದಿರುವುದಿಲ್ಲ ಎನ್ನಲಾಗಿದೆ.
ಇದನ್ನೂ ಓದಿ:ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಮಾಸ್ಕ್ ಪೋನ್ ಹೆಡ್ ಸೆಟ್
ಚಾರ್ಜಿಂಗ್ ಸೌಲಭ್ಯ
ಫೈಂಡ್ OPPO X3 ಪ್ರೋ ಆವೃತ್ತಿಯ ಸ್ಮಾರ್ಟ್ ಪೋನ್ ವಯರ್ ಲೆಸ್ ಚಾರ್ಜಿಂಗ್ ವ್ಯವಸ್ಥೆಯನ್ನು ಹೊಂದಿರಲಿದ್ದು, ಇದರ ಜೊತೆ ಜೊತೆಗೆ ವಯರ್ ಒಳಗೊಂಡ ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆಯನ್ನೂ ಮಾಡಲಾಗಿದೆ.
ಬಣ್ಣಗಳ ಲಭ್ಯತೆ
ಈ ಹೊಸ ಮೊಬೈಲ್ ಪೋನ್ ಬಿಳಿ, ಕಪ್ಪು ಬಣ್ಣಗಳನ್ನು ಒಳಗೊಂಡಂತೆ ಗೋಲ್ಡನ್ ಕಲರ್ ನಲ್ಲಿಯೂ ಗ್ರಾಹಕರಿಗೆ ಲಭ್ಯವಾಲಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಟಾಟಾ ಆಲ್ಟ್ರೋಜ್ ಟರ್ಬೋ ಅನಾವರಣ : ನಾಳೆಯಿಂದ ಬುಕಿಂಗ್‌ಗೆ ಅವಕಾಶ
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿಗ್ನಲ್ಗೆ ಈಗ ಡಿಮ್ಯಾಂಡಪ್ಪೋ ಡಿಮ್ಯಾಂಡು!
ಸ್ಟೇಟಸ್ ಮೂಲಕ ಬಳಕೆದಾರರಿಗೆ ‘ಪ್ರೈವೆಸಿ ಪಾಠ’ ಮಾಡಿದ ವಾಟ್ಸಾಪ್
ಮುಗಿಯದ ವಾಟ್ಸಾಪ್ ಗೋಳು: ಗೂಗಲ್ ಸರ್ಚ್ ನಲ್ಲಿ ‘ಮಿಂಚಿ ಮರೆಯಾದ’ ನಿಮ್ಮ ಮೊಬೈಲ್ ನಂಬರ್ !
ನೂತನ ನಿಯಮ ಗೊಂದಲ: ಅಪ್ ಡೇಟ್ ಮುಂದೂಡಿ ಮಹತ್ವದ ನಿರ್ಧಾರ ಕೈಗೊಂಡ ವಾಟ್ಸಾಪ್
ಲ್ಯಾಂಡ್ ಲೈನ್ ಬಳಕೆದಾರರ ಗಮನಕ್ಕೆ: ಇನ್ನು ಮುಂದೆ ಮೊಬೈಲ್ ಗೆ ಕರೆಮಾಡುವ ಮುನ್ನ ‘0’ ಕಡ್ಡಾಯ
MUST WATCH
KBCಯಲ್ಲಿ 12.5 ಲಕ್ಷ ಗೆದ್ದು ಬಡ ಮಕ್ಕಳ ಆಶಾಕಿರಣವಾದ ರವಿ ಕಟಪಾಡಿ | Udayavani
Whatsapp ಅನ್ನು ಓವರ್ ಟೇಕ್ ಮಾಡಿದ ಸಿಗ್ನಲ್!!??
ದ.ಕ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ವಿತರಣೆ ಅಭಿಯಾನಕ್ಕೆ ಕೋಟ ಶ್ರೀನಿವಾಸ ಪೂಜಾರಿ ಚಾಲನೆ
ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ 19 ಲಸಿಕೆ ಅಭಿಯಾನ; ಪ್ರಥಮ ಡೋಸ್ ನೀಡಿ ಚಾಲನೆ
ಉಡುಪಿಯಲ್ಲಿ ಕೋರೋನಾ ಲಸಿಕೆ ಪಡೆದ ಮೊದಲ ವ್ಯಕ್ತಿಯ ಮಾತು
ಹೊಸ ಸೇರ್ಪಡೆ
ಕೃಷಿ ಸಚಿವರಿಂದ ಬಿಡುಗಡೆಕಾರ್ಲಕಜೆ ಅಕ್ಕಿ
ಬೆಳಗಾವಿ ನಮ್ಮದು, ನೀವೊಬ್ಬರು ಮುಖ್ಯಮಂತ್ರಿ ಎಂದು ಮರೆಯಬೇಡಿ; ಮಹಾ ಸಿಎಂ ಗೆ ಸಿದ್ದರಾಮಯ್ಯ
ಸಿಎಂಗೆ ಪತ್ರ ಬರೆದಿಟ್ಟು ಅರಣ್ಯ ಇಲಾಖೆಯ ಅರೆಕಾಲಿಕ ನೌಕರ ಕಚೇರಿಯಲ್ಲಿ ನೇಣಿಗೆ ಶರಣು
2ಲಕ್ಷಕ್ಕೂ ಅಧಿಕ ಮಂದಿಗೆ ಲಸಿಕೆ, 447 ಫಲಾನುಭವಿಗಳಲ್ಲಿ ಅಡ್ಡಪರಿಣಾಮ ಪತ್ತೆ: ಕೇಂದ್ರ
ಮಹಾರಾಷ್ಟ್ರದಲ್ಲಿ ಸಾವಿರ ಮುಖ್ಯಮಂತ್ರಿ ಬಂದರೂ ಬೆಳಗಾವಿ ಕರ್ನಾಟದಲ್ಲೇ ಇರುತ್ತದೆ: ಸವದಿ