‘ಒಪ್ಪೋ ರೆನೋ 5ಎ ಜಪಾನ್‌ ನಲ್ಲಿ ಬಿಡುಗಡೆ..! ಭಾರತದಲ್ಲಿ ಯಾವಾಗ..?


Team Udayavani, May 25, 2021, 3:11 PM IST

oppo-reno-5a-smartphone-know-the-specifications

ನವ ದೆಹಲಿ : ಒಪ್ಪೋ  ಹೊಸ ಸ್ಮಾರ್ಟ್‌ ಫೋನ್ ‘ಒಪ್ಪೋ ರೆನೋ 5 ಎ ನನ್ನು ಜಪಾನ್‌ ನಲ್ಲಿ ಬಿಡುಗಡೆ ಮಾಡಿದೆ. ಈ ಫೋನ್ ವಾಟರ್ ಪ್ರೂಫ್ ಆಗಿದ್ದು,  ಐಪಿ 68 ರೇಟಿಂಗ್ ಹೊಂದಿದ್ದು ಅತ್ಯಾಕರ್ಷಕವಾಗಿದೆ.

ಒಪ್ಪೋ ಈ ಸ್ಮಾರ್ಟ್‌ ಫೋನ್ ನನ್ನು ಸದ್ಯಕ್ಕೆ ಜಪಾನ್‌ ನಲ್ಲಿ ಬಿಡುಗಡೆ ಮಾಡಿದ್ದು, ಸದ್ಯಕ್ಕೇ ಭಾರತದಲ್ಲಿ ಬಿಡುಗಡೆ ಮಾಡಲಾಗುವುದಿಲ್ಲ ಎಂದು ಕಂಪನಿ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.

ಇದನ್ನೂ ಓದಿ :  ಪಡುಅಲೆವೂರಿಗೆ ಲಸಿಕೆ ಕೇಂದ್ರ ಶಿಫ್ಟ್ : ವೈದ್ಯಾಧಿಕಾರಿ ವಿರುದ್ಧ ಗ್ರಾಮಸ್ಥರ ಆಕ್ರೋಶ

ಕೋವಿಡ್ ಸೋಂಕಿನ  ರೂಪಾಂತರಿ ಅಲೆಯ ಕಾರಣದಿಂದಾಗಿ ಮಾರುಕಟ್ಟೆಯ ಮೇಲೂ ಪರಿಣಾಮ ಬೀರಬಹುದೆಂಬ ದೃಷ್ಟಿಯಿಂದ ಮೂರರಿಂದ ಆರು ತಿಂಗಳುಗಳ ಬಳಿಕ ಭಾರತದಲ್ಲಿ ಈ ಸ್ಮಾರ್ಟ್ ಫೋನ್ ನನ್ನು ಬಿಡುಗಡೆ ಮಾಡಲಾಗುವುದು ಎಂದು ಕಂಪನಿಯ ಆಂತರಿಕ ಮೂಲಗಳು ತಿಳಿಸಿವೆ.

ಒಪ್ಪೋ ಜಪಾನ್ ನಲ್ಲಿ ಬಿಡಗಡೆ ಮಾಡಿರುವ ಈ ಸ್ಮಾರ್ಟ್ ಫೋನ್ ನಾಲ್ಕು ಹಿಂದಿನ ಕ್ಯಾಮೆರಾಗಳನ್ನು ಹೊಂದಿದ್ದು, 90Hz ರಿಫ್ರೆಶ್ ರೇಟ್ ಡಿಸ್ಪ್ಲೇ ಹೊಂದಿ ನೋಡಲು ಅತ್ಯಾಕರ್ಷಕವಾಗಿದೆ.

ಒಪ್ಪೋ ರೆನೋ 5 ಎ ಬೆಲೆ ಮತ್ತು ಲಭ್ಯತೆ :

ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 765 ಜಿ ಪ್ರೊಸೆಸರ್ನಲ್ಲಿ ಒಪ್ಪೊ ರೆನೋ 5 ಎ ನನ್ನು ಪರಿಚಯಿಸಲಾಗಿದ್ದು, 128 ಜಿಬಿ ಸ್ಟೋರೇಜ್ ಸೌಲಭ್ಯವನ್ನು ಒಳಗೊಂಡಿದೆ. ಈ ಸ್ಮಾರ್ಟ್ ಫೋನ್ ನ ಬೆಲೆಯ ಬಗ್ಗೆ ಕಂಪನಿಯು ಯಾವುದೇ ಅಧಿಕೃತ ಪ್ರಕಟಣೆ ನೀಡಿಲ್ಲ. ಹಾಗೂ ಭಾರತದಲ್ಲಿ ಬಿಡುಗಡೆಯಾದರೇ ಎಷ್ಟು ಬೆಲೆಗೆ ಮಾರಾಟ ಮಾಡಲಾಗುತ್ತದೆ ಎನ್ನುವ ಸುಳಿವನ್ನೂ ಕೂಡ ಬಿಟ್ಟುಕೊಡಲಿಲ್ಲ. ಒಪ್ಪೋ ರೆನೋ 5 ಎ ನ ಮಾರಾಟ ಮುಂದಿನ ತಿಂಗಳು ಅಂದರೇ,  ಜೂನ್‌ ನಲ್ಲಿ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ.

ಈ ಸ್ಮಾರ್ಟ್ ಫೋನ್ ನನ್ನು ಐಸ್ ಬ್ಲೂ ಮತ್ತು ಸಿಲ್ವರ್ ಬ್ಲ್ಯಾಕ್ ಬಣ್ಣ ಆಯ್ಕೆಗಳಲ್ಲಿ ಒಪ್ಪೋ ತನ್ನ ಗ್ರಾಹಕರಿಗೆ ನೀಡುಯತ್ತಿದೆ. ಒಪ್ಪೋ ರೆನೋ 5 ಎ ಕಳೆದ ವರ್ಷ ಬಿಡುಗಡೆಯಾದ ಒಪ್ಪೋ ರೆನೋ 3 ಎ ಯ ಯಶಸ್ವಿ ರೂಪಾಂತರವಾಗಿದ್ದು, ಇದರ ಬೆಲೆ ಜೆಪಿವೈ 39,800 ಅಂದರೆ ಸುಮಾರು 26,600 ರೂಪಾಯಿಗಳು ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ.

ಒಪ್ಪೋ ರೆನೋ 5 ಎ ಯ  ವಿಶೇಷತೆಗಳೇನು..?

ಒಪ್ಪೋ ರೆನೋ 5 ಎ ಆಂಡ್ರಾಯ್ಡ್ 11 ಆಧಾರಿತ ColorOS 11 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 6.5-ಇಂಚಿನ ಫುಲ್ ಎಚ್‌ಡಿ + ಡಿಸ್ಪ್ಲೇ ಹೊಂದಿದ್ದು, 1,080 × 2,400 ಪಿಕ್ಸೆಲ್‌ ಗಳ ಸ್ಕ್ರೀನ್ ರೆಸಲ್ಯೂಶನ್ ಮತ್ತು 20: 9 ಆಕಾರ ಅನುಪಾತವನ್ನು ಹೊಂದಿದೆ.

ಪವರ್ ಬ್ಯಾಕಪ್‌ ಗಾಗಿ ಫೋನ್ 4,000mAh ಬ್ಯಾಟರಿಯನ್ನು ಹೊಂದಿದೆ, ಇದು 18W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ನೊಂದಿಗೆ ಗ್ರಾಹಕರಿಗೆ ಲಭ್ಯವಾಗುತ್ತದೆ.

ಈ ಫೋನಿನ ಕ್ಯಾಮರಾ ಬಗ್ಗೆ ಹೇಳುವುದಾದರೆ,  ಒಪ್ಪೊ ರೆನೋ 5 ಎ (Oppo Reno 5A) ನಲ್ಲಿ ಛಾಯಾಗ್ರಹಣಕ್ಕಾಗಿ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ನೀಡಲಾಗಿದೆ.

ಇದನ್ನೂ ಓದಿ : 2ನೇ ಡೋಸ್ ಗೆ ಮುಂದುವರಿದ ಅಲೆದಾಟ; ವಾರದ ನಂತರವೂ ಎಲ್ಲರಿಗೂ ಸಿಗುವುದು ಅನುಮಾನ

ಟಾಪ್ ನ್ಯೂಸ್

2-fusion-dog

UV Fusion: ನಂಬಿಕೆಗಿಂತ ದೊಡ್ಡದು ಬೇರೇನಿಲ್ಲ

1-Tuesday

Daily Horoscope: ಸಜ್ಜನರ ಸೋಗುಹಾಕಿದ ವಂಚಕರ ಬಗ್ಗೆ ಎಚ್ಚರ, ಉದ್ಯೋಗಸ್ಥರಿಗೆ ಕೈತುಂಬಾ ಕೆಲಸ

Govt-b

KSRTC Bus: ಬಾಗಿಲಿದ್ದರೂ ಮುಚ್ಚುವವರಿಲ್ಲ! ಪ್ರಾಣಕ್ಕೆ ಎರವಾಗುತ್ತಿದೆ ಅಜಾಗರೂಕತೆ

Mullugudde ಕೊರಗಜ್ಜ ಪಾವಡ; ನಾಪತ್ತೆ ಯುವಕ ಅಜ್ಜನ ಸನ್ನಿಧಾನದಲ್ಲಿ ಪ್ರಾಥ೯ನೆ

Mullugudde ಕೊರಗಜ್ಜನ ಪವಾಡ; ನಾಪತ್ತೆ ಯುವಕ ಅಜ್ಜನ ಸನ್ನಿಧಾನದಲ್ಲಿ ಪ್ರಾರ್ಥನೆ

ಹಿಂದೂ ಸಂಘಟನೆಗಳ ಆಕ್ಷೇಪ; ಗೊಂದಲವಿಲ್ಲ: ಸಂಘ

Mangaluru ಹಿಂದೂ ಸಂಘಟನೆಗಳ ಆಕ್ಷೇಪ; ಗೊಂದಲವಿಲ್ಲ: ಸಂಘ

Robbery case: ಕೇರಳದಲ್ಲಿ ಓರ್ವನ ಬಂಧನ?

Robbery case: ಕೇರಳದಲ್ಲಿ ಓರ್ವನ ಬಂಧನ?

Ullal ರೈಲಿಗೆ ತಲೆ ಕೊಟ್ಟು ಅವಿವಾಹಿತ ಆತ್ಮಹತ್ಯೆ

Ullal ರೈಲಿಗೆ ತಲೆ ಕೊಟ್ಟು ಅವಿವಾಹಿತ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

boult

Boult: ಬೌಲ್ಟ್‌ನಿಂದ ಬಜೆಟ್ ದರದಲ್ಲಿ 3 ಇಯರ್‌ಬಡ್‌ಗಳ ಬಿಡುಗಡೆ

alchohol

AI News: ಮದ್ಯ ಸಂಸ್ಥೆಗೆ ಎಐ CEO

2-amazon-business

Amazon Business: ಭಾರತದಲ್ಲಿ ಆರು ವರ್ಷ ಪೂರೈಸಿದ ಅಮೆಜಾನ್ ಬ್ಯುಸಿನೆಸ್

viv

Vivo T-2 ಪ್ರೋ 5ಜಿ- 22 ನಿಮಿಷದಲ್ಲಿ 50 ಪರ್ಸೆಂಟ್‌ ಚಾರ್ಜಿಂಗ್‌

ನೂತನ ಸುಧಾರಿತ ಟಾಟಾ ನೆಕ್ಸಾನ್‌, ನೆಕ್ಸಾನ್‌ ಇವಿ ಮಾರುಕಟ್ಟೆಗೆ

Tata Motors ನೂತನ ಸುಧಾರಿತ ಟಾಟಾ ನೆಕ್ಸಾನ್‌, ನೆಕ್ಸಾನ್‌ ಇವಿ ಮಾರುಕಟ್ಟೆಗೆ

MUST WATCH

udayavani youtube

ಕಾಪುವಿಗೆ ಬಂದವರು ಈ ಹೋಟೆಲ್ ಗೊಮ್ಮೆ ಮಿಸ್ ಮಾಡದೆ ಭೇಟಿ ನೀಡಿ

udayavani youtube

Asian Games: ಸೀರೆ,ಕುರ್ತಾದಲ್ಲಿ ಮಿಂಚಿದ ಭಾರತದ ಕ್ರೀಡಾಳುಗಳು

udayavani youtube

ಮೈಸೂರಿನ ಕೃಷ್ಣಧಾಮಕ್ಕೆ ವಿಧಾನಸಭೆ ಸ್ಪೀಕರ್ ಯು ಟಿ ಖಾದರ್ ಭೇಟಿ

udayavani youtube

ಓಡಿಸ್ಸಾದ ಮರಳಿನಲ್ಲಿ ಅರಳಿದ ಸ್ಟೀಲ್ ಗಣಪ

udayavani youtube

ಯಾಕಾಗಿ ಗಣೇಶ ಹಲವು ಕೈಗಳನ್ನು ಹೊಂದಿದ್ದಾನೆ ?

ಹೊಸ ಸೇರ್ಪಡೆ

2-fusion-dog

UV Fusion: ನಂಬಿಕೆಗಿಂತ ದೊಡ್ಡದು ಬೇರೇನಿಲ್ಲ

1-Tuesday

Daily Horoscope: ಸಜ್ಜನರ ಸೋಗುಹಾಕಿದ ವಂಚಕರ ಬಗ್ಗೆ ಎಚ್ಚರ, ಉದ್ಯೋಗಸ್ಥರಿಗೆ ಕೈತುಂಬಾ ಕೆಲಸ

Govt-b

KSRTC Bus: ಬಾಗಿಲಿದ್ದರೂ ಮುಚ್ಚುವವರಿಲ್ಲ! ಪ್ರಾಣಕ್ಕೆ ಎರವಾಗುತ್ತಿದೆ ಅಜಾಗರೂಕತೆ

Mullugudde ಕೊರಗಜ್ಜ ಪಾವಡ; ನಾಪತ್ತೆ ಯುವಕ ಅಜ್ಜನ ಸನ್ನಿಧಾನದಲ್ಲಿ ಪ್ರಾಥ೯ನೆ

Mullugudde ಕೊರಗಜ್ಜನ ಪವಾಡ; ನಾಪತ್ತೆ ಯುವಕ ಅಜ್ಜನ ಸನ್ನಿಧಾನದಲ್ಲಿ ಪ್ರಾರ್ಥನೆ

ಹಿಂದೂ ಸಂಘಟನೆಗಳ ಆಕ್ಷೇಪ; ಗೊಂದಲವಿಲ್ಲ: ಸಂಘ

Mangaluru ಹಿಂದೂ ಸಂಘಟನೆಗಳ ಆಕ್ಷೇಪ; ಗೊಂದಲವಿಲ್ಲ: ಸಂಘ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.