ಪೊಕೊ ಸಿ3 : ಒಂದು ಮಿಲಿಯನ್ ಯೂನಿಟ್‌ಗಳ ಮಾರಾಟ
Team Udayavani, Jan 22, 2021, 4:34 PM IST
ಬೆಂಗಳೂರು: ಭಾರತದ 3ನೇ ಅತ್ಯಂತ ದೊಡ್ಡ ಆನ್‌ಲೈನ್ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ಪೊಕೊ, ಪೊಕೊ ಸಿ3 ಯ 1 ಮಿಲಿಯನ್ (10 ಲಕ್ಷ) ಗೂ ಅಧಿಕ ಯೂನಿಟ್‌ಗಳು ಮಾರಾಟವಾಗಿವೆ.
ಇತ್ತೀಚೆಗೆ ಬಿಡುಗಡೆಯಾದ ಪೊಕೊ ಸಿ3 ರೂ.10000ಕ್ಕಿಂತ ಕಡಿಮೆ ಬೆಲೆಯ ದರಪಟ್ಟಿಯಲ್ಲಿ ತನ್ನದೇ ಆದ ಸ್ಥಾನ ಪಡೆದಿದೆ. 6.53 ಇಂಚು ಎಚ್.ಡಿ+ಎಲ್‌ಸಿಡಿ ಡಿಸ್ ಪ್ಲೇ, ಹೀಲಿಯೊ ಜಿ35 ಚಿಪ್‌ಸೆಟ್, 5,000 ಎಂಎಎಚ್ ಬ್ಯಾಟರಿ ಸಾಮರ್ಥ್ಯ ಹೊಂದಿರುವ ಈ ಮಾಡಲ್ ಹಣಕ್ಕೆ ತಕ್ಕ ಮೌಲ್ಯ ಒದಗಿಸುತ್ತದೆ. ಇದು 13ಎಂಪಿ ತ್ರಿವಳಿ ಕ್ಯಾಮರಾ ಮತ್ತು 5 ಎಂಪಿ ಸೆಲ್ಫಿ ಕ್ಯಾಮರಾವನ್ನು ಹೊಂದಿದೆ.
ಇದನ್ನೂ ಓದಿ:ಸರ್ಚಿಂಗ್ ನಿಷ್ಕ್ರಿಯಗೊಳಿಸ್ತೇವೆ: ಆಸ್ಟ್ರೇಲಿಯಾ ಸರ್ಕಾರ v\s ಗೂಗಲ್ ಜಟಾಪಟಿ!
ಕೈಗೆಟುಕುವ ದರದಲ್ಲಿ ಉತ್ತಮ ಫೋನ್ ನೀಡುವ ಮೂಲಕ ಗ್ರಾಹಕರ ಮೆಚ್ಚುಗೆ ಪಡೆದ ಪೊಕೊ ಸಿ3 ದೇಶದಲ್ಲಿ ಆನ್‌ಲೈನ್‌ನಲ್ಲಿ ಅತ್ಯಂತ ಹೆಚ್ಚು ಮಾರಾಟವಾಗುವ ಟಾಪ್ 3 ಫೋನ್‌ಗಳ ಪಟ್ಟಿಯಲ್ಲಿ ಸೇರಿದೆ.
ಇದರ ನಿಯಮಿತ ಮಾರಾಟ ಬೆಲೆ ರೂ.8,499 (4/64ಜಿಬಿ) ಮತ್ತು ರೂ.7,499 (3/32ಜಿಬಿ). ಪ್ರಸ್ತುತ ವಿಶೇಷ ರಿಯಾಯಿತಿ ಬೆಲೆ ರೂ.7,999 ಮತ್ತು ರೂ.6,999ಗಳಿಗೆ ದೊರೆಯುವುದಲ್ಲದೆ, ಇದರ ಜೊತೆಗೆ ಎಚ್‍ಡಿಎಫ್‍ಸಿ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡಿಗೆ ಶೇ. 10ರಷ್ಟು ರಿಯಾಯಿತಿ ಸಹ ಲಭ್ಯವಿದೆ.
ಈ ಕಾರ್ಡ್ ರಿಯಾಯಿತಿ ಸೇರಿದರೆ ಪೊಕೊ ಸಿ3ಯ 3ಜಿಬಿ/32ಜಿ ಆವೃತ್ತಿಯನ್ನು ರೂ.6,2999 ಗೆ ಮತ್ತು 4ಜಿಬಿ/64ಜಿಬಿ ಆವೃತ್ತಿಯನ್ನು ಅನ್ನು ರೂ.7,199ಕ್ಕೆ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಸಬಹುದಾಗಿದೆ. ಈ ಆಫರ್ ಜನವರಿ 24ರವರೆಗೆ ಲಭ್ಯವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಸುಶಾಂತ್ ಸಿಂಗ್ ಡ್ರಗ್ ಪ್ರಕರಣ: 33 ಜನರ ಹೆಸರು, 30 ಸಾವಿರ ಪುಟಗಳ ಚಾರ್ಜ್ ಶೀಟ್!
ಸಿದ್ದರಾಮಯ್ಯ ಯಾವ ಹಿನ್ನೆಲೆಯಿಂದ ಬಂದಿದ್ದಾರೆ? ಅವರ ಹಿನ್ನೆಲೆ ಏನು? ಯಡಿಯೂರಪ್ಪ
‘ರೈಮ್ಸ್’ ಮೇಲೆ ಅಜಿತ್ ಜಯರಾಜ್ ಕನಸು
ಅಭಿಮಾನಿಗಳ ಹಬ್ಬಕ್ಕೆ ದಿನಗಣನೆ: ತರುಣ್ ಬಿಚ್ಚಿಟ್ಟರು ರಾಬರ್ಟ್ ಸೀಕ್ರೇಟ್!
ಶಾಲೆಗಳು ಮುಚ್ಚಿದ್ದರಿಂದಾಗಿ 247 ಮಿಲಿಯನ್ ಭಾರತೀಯ ವಿದ್ಯಾರ್ಥಿಗಳ ಮೇಲೆ ಪರಿಣಾಮ..!