Udayavni Special

ಪಬ್ಜಿ ಗೀಳು : ಅಜ್ಜನ ಪೆನ್ಶನ್ ಖಾತೆಯಿಂದ 2 ಲಕ್ಷ ಬೋಳಿಸಿದ ಮೊಮ್ಮಗ..!

Team Udayavani, Jul 6, 2020, 1:25 PM IST

ಪಬ್ಜಿ ಗೀಳು : ಅಜ್ಜನ ಪೆನ್ಶನ್ ಖಾತೆಯಿಂದ 2 ಲಕ್ಷ ಬೋಳಿಸಿದ ಮೊಮ್ಮಗ..!

ಪಂಜಾಬ್ : ಭಾರತದಲ್ಲಿ ಹೆಚ್ಚಿನ ಹದಿಹರೆಯದವರನ್ನು ತನ್ನ ತೆಕ್ಕೆಯಲ್ಲಿ  ಸೆಳೆದಿಟ್ಟಿರುವ ಪಬ್ಜಿ ಮೊಬೈಲ್ ಗೇಮ್ ನಿಂದ ಪೋಷಕರು ಹೈರಾಣಾಗಿದ್ದಾರೆ. ಪಬ್ಜಿ ಗೇಮ್ ಆಡುವ ಭರದಲ್ಲಿ 15 ವರ್ಷದ ಹುಡುಗನೊಬ್ಬ ತನ್ನ ಅಜ್ಜನ ಬ್ಯಾಂಕ್ ಖಾತೆಯಿಂದ ಬರೋಬ್ಬರಿ 2 ಲಕ್ಷ ರೂಪಾಯಿಯನ್ನು ವ್ಯಯಿಸಿರುವ ಘಟನೆ ಪಂಜಾಬ್ ನ ಮೊಹಾಲಿಯಲ್ಲಿ ನಡೆದಿದೆ.

ಸ್ಥಳೀಯ ಪತ್ರಿಕೆಯೊಂದರಲ್ಲಿ ವರದಿಯಾಗಿರುವ ಪ್ರಕಾರ ಕಳೆದ ಜನವರಿಯಿಂದ ಪಬ್ಜಿ ಗೇಮ್ ಆಡಲು ಶುರು ಮಾಡಿದ್ದ ಹುಡುಗ ಹೆಚ್ಚಿನ ಸಮಯವನ್ನು ಗೇಮ್ ಆಡುವುದರಲ್ಲೇ ಕಳೆಯುತ್ತಿದ್ದ. ಆತ ತನ್ನ ಶಾಲೆಯ ಹಿರಿಯ ಹುಡುನೊಬ್ಬನಿಂದ ಪಬ್ಜಿ ಆಡುವ ಪರಿಣತಿ ಹಾಗೂ ಹೇಗೆ ಗೇಮ್ ನಲ್ಲಿ ಹೆಚ್ಚಿನ ಸೌಲಭ್ಯವನ್ನು ಪಡೆಯಲು ಹಣವನ್ನು ಬಳಸಬೇಕು ಎನ್ನುವುದನ್ನು ಹೇಳಿಕೊಟ್ಟಿದ್ದಾನೆ ಎಂದು ಹುಡುಗನ ಅಂಕಲ್ ಹೇಳಿದ್ದಾರೆ.

ಪಬ್ಜಿ ಆಟದಲ್ಲಿ ಅನೌನ್ ಕ್ಯಾಶ್ ಎನ್ನುವ ಆಯ್ಕೆಯೊಂದು ಇದೆ ಅದನ್ನು ಆಯ್ದುಕೊಂಡು ಆಟದಲ್ಲಿ ಬೇಕಿರುವ ಕೆಲ ವಸ್ತಗಳನ್ನು ಹಣಕೊಟ್ಟು ಆ್ಯಪ್ ಗಳ ಮೂಲಕ ಪಡೆಯಬೇಕಾಗಿರುತ್ತದೆ. ಅವುಗಳನ್ನು ಪಡೆಯಲು ಆಟ ಆಡುತ್ತಿದ್ದ ಹುಡುಗ ಕಳೆದ ಎರಡು ತಿಂಗಳಿನಲ್ಲಿ 30 ಬಾರಿ ಬ್ಯಾಂಕ್ ವಹಿವಾಟು ನಡೆಸಿ 55,000 ಸಾವಿರ ರೂಪಾಯಿಯನ್ನು ವ್ಯಯಿಸಿದ್ದಾನೆ. ಯುಸಿ ಕ್ರೆಡಿಟ್ ಪಡೆಯಲು ಹುಡುಗ ಅಜ್ಜನ ಹೆಸರಿನಲ್ಲಿ ಪೇಟಿಯಮ್  ಖಾತೆಯನ್ನು ತೆರೆದು ಅಜ್ಜನ ದಾಖಲೆಯನ್ನು ಕೊಟ್ಟು ಖಾತೆಯನ್ನು ಪರಿಶೀಲಿಸಿ ಖಾತೆ ಪ್ರಕ್ರಿಯೆಯನ್ನು ಪೂರ್ತಿ ಮಾಡಿದ್ದಾನೆ. ಅಜ್ಜನ ಖಾತೆಯಲ್ಲಿ ಪಿಂಚಣಿ ಹಣ ಜಮಾವಣೆಯಾಗಿತ್ತು ಎಂದು ವರದಿ ತಿಳಿಸಿದೆ.

ಹುಡುಗನ ಪೋಷಕರು ಬ್ಯಾಂಕ್ ಖಾತೆಯ ವಿವರವನ್ನು ಪರಿಶೀಲಿಸಿದಾಗ ಖಾತೆಯಲ್ಲಿದ್ದ ಹಣವನ್ನು ತೆಗೆದಿರುವುದು ತಿಳಿಯುತ್ತದೆ. ವಿಷಯ ಅರಿತ ಪೋಷಕರು ಹುಡುಗನ ಬಳಿ ವಿಚಾರಿಸಿದಾಗ ಆತ ಪಬ್ಜಿ ಆಟಕ್ಕಾಗಿ 2 ಲಕ್ಷ ರೂಪಾಯಿ ಅಜ್ಜನ ಖಾತೆಯಿಂದ ವ್ಯಯಿಸಿದ್ದಾನೆ ಎಂದು ಸತ್ಯವನ್ನು ಹೇಳುತ್ತಾನೆ. ಘಟನೆಯ ಕುರಿತು ಹುಡುಗನ ಪೋಷಕರು ಮೊಹಾಲಿಯ ಪೊಲೀಸ್ ಅಧಿಕಾರಿ ಕುಲದೀಪ್ ಸಿಂಗ್ ಚಹಲ್ ರಿಗೆ ಇಮೈಲ್ ಮಾಡಿ ವಿವರಣೆಯನ್ನು ನೀಡಿದ್ದಾರೆ. ಪಬ್ಜಿ ಬಗ್ಗೆ ಆಸಕ್ತಿ ಹುಟ್ಟಿಸಿದ ಶಾಲೆಯ ಹಿರಿಯ ಹುಡುಗನ ವಿರುದ್ದ ಆರೋಪ ಮಾಡಿದ್ದಾರೆ. ಆತ ಕೂಡ ಖಾತೆಯ ಹಣದಿಂದ ಯುಸಿಯನ್ನು ಪಡೆದಿದ್ದ ಎನ್ನಲಾಗಿದೆ. ಹುಡುಗನ ಪಬ್ಜಿ ಚಟ ಎಷ್ಟಿತ್ತು ಅಂದರೆ ಆತ ಅದಕ್ಕಾಗಿ ಹೊಸ ಸೀಮ್ ಕಾರ್ಡ್ ತೆಗೆದುಕೊಂಡಿದ್ದ ಎಂದು ವರದಿಯಾಗಿದೆ.

ಕೆಲ ದಿನಗಳ ಹಿಂದೆ ಪಂಜಾಬ್ ನಲ್ಲಿ 17 ವರ್ಷದ ಹುಡುಗನೊಬ್ಬ ಇದೇ ಪಬ್ಜಿ  ಗೀಳಿನಿಂದ ಪೋಷಕರ ಖಾತೆಯಿಂದ ಬರೋಬ್ಬರಿ 16 ಲಕ್ಷ ರೂಪಾಯಿಯನ್ನು ವ್ಯಯಿಸಿದ್ದರ ಕುರಿತು ವರದಿಯಾಗಿತ್ತು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

Bell-01

ಅಯೋಧ್ಯಾ ರಾಮನಿಗೆ 2.1 ಟನ್‌ನ ಭಾವೈಕ್ಯ ಗಂಟೆ !

ಮುಂದಿನ ಪ್ರಧಾನಿ ಮೋದಿಯೇ ಆಗಲಿ ; ಇಂಡಿಯಾ ಟುಡೇ-ಕಾರ್ವಿ ಇನ್‌ಸೈಟ್ಸ್‌ ಸಮೀಕ್ಷಾ ವರದಿ

ಮುಂದಿನ ಪ್ರಧಾನಿ ಮೋದಿಯೇ ಆಗಲಿ ; ಇಂಡಿಯಾ ಟುಡೇ-ಕಾರ್ವಿ ಇನ್‌ಸೈಟ್ಸ್‌ ಸಮೀಕ್ಷಾ ವರದಿ

School-Children-01

ಚಿಂತನೆ: ಹೊಸ ಶಿಕ್ಷಣ ನೀತಿ ಒಂದು ಐತಿಹಾಸಿಕ ಹೆಜ್ಜೆ

ಮೊಬೈಲ್‌ ಆ್ಯಪ್‌ ಬಳಸಿ ರೈತರಿಂದಲೇ ಬೆಳೆ ಸಮೀಕ್ಷೆ

ಮೊಬೈಲ್‌ ಆ್ಯಪ್‌ ಬಳಸಿ ರೈತರಿಂದಲೇ ಬೆಳೆ ಸಮೀಕ್ಷೆ

ಕನ್ನಡ ಚಿತ್ರಗಳಿಗೆ ಪ್ರತ್ಯೇಕ OTT: ಚಿಂತನೆ

ಕನ್ನಡ ಚಿತ್ರಗಳಿಗೆ ಪ್ರತ್ಯೇಕ OTT: ಚಿಂತನೆ

ಇನ್ನು ಸೈಕಲ್‌ ಜತೆ ಬಸ್‌ ಪ್ರಯಾಣ ಸಾಧ್ಯ! ; ಬೆಂಗಳೂರಿನಲ್ಲೊಂದು ವಿನೂತನ ಯೋಜನೆ

ಇನ್ನು ಸೈಕಲ್‌ ಜತೆ ಬಸ್‌ ಪ್ರಯಾಣ ಸಾಧ್ಯ! ; ಬೆಂಗಳೂರಿನಲ್ಲೊಂದು ವಿನೂತನ ಯೋಜನೆ

ಮಲೆನಾಡಿನಲ್ಲಿ ಮಳೆ ಶಾಂತ; ಕರಾವಳಿಯಲ್ಲಿ ಬಿರುಸು

ಮಲೆನಾಡಿನಲ್ಲಿ ಮಳೆ ಶಾಂತ; ಕರಾವಳಿಯಲ್ಲಿ ಬಿರುಸು
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bell-01

ಅಯೋಧ್ಯಾ ರಾಮನಿಗೆ 2.1 ಟನ್‌ನ ಭಾವೈಕ್ಯ ಗಂಟೆ !

ಮುಂದಿನ ಪ್ರಧಾನಿ ಮೋದಿಯೇ ಆಗಲಿ ; ಇಂಡಿಯಾ ಟುಡೇ-ಕಾರ್ವಿ ಇನ್‌ಸೈಟ್ಸ್‌ ಸಮೀಕ್ಷಾ ವರದಿ

ಮುಂದಿನ ಪ್ರಧಾನಿ ಮೋದಿಯೇ ಆಗಲಿ ; ಇಂಡಿಯಾ ಟುಡೇ-ಕಾರ್ವಿ ಇನ್‌ಸೈಟ್ಸ್‌ ಸಮೀಕ್ಷಾ ವರದಿ

ಟಿಟಿಡಿಯ ಒಟ್ಟು 743 ಸಿಬ್ಬಂದಿಗಳಲ್ಲಿ ಕೋವಿಡ್ ಸೋಂಕು ದೃಢ! 402 ಮಂದಿ ಗುಣಮುಖ

ಟಿಟಿಡಿಯ ಒಟ್ಟು 743 ಸಿಬ್ಬಂದಿಗಳಲ್ಲಿ ಕೋವಿಡ್ ಸೋಂಕು ದೃಢ! 402 ಮಂದಿ ಗುಣಮುಖ

ರಾಜಸ್ಥಾನ : 11 ಮಂದಿ ಹಿಂದೂ ವಲಸಿಗರ ಕುಟುಂಬ ಸದಸ್ಯರ ಸಾವು! ಕಾರಣ ನಿಗೂಢ

ರಾಜಸ್ಥಾನ : 11 ಮಂದಿ ಹಿಂದೂ ವಲಸಿಗರ ಕುಟುಂಬ ಸದಸ್ಯರ ಸಾವು! ಕಾರಣ ನಿಗೂಢ

ಭಾರತದಲ್ಲಿ ಕೋಮು ಗಲಭೆ ಸೃಷ್ಟಿಸಲು ಐಎಸ್ಐ ಸಂಚು!

ಭಾರತದಲ್ಲಿ ಕೋಮು ಗಲಭೆ ಸೃಷ್ಟಿಸಲು ಐಎಸ್ಐ ಸಂಚು!

MUST WATCH

udayavani youtube

ರಾಂಬೂಟಾನ್ ಬೆಳೆಯುವ ಸೂಕ್ತ ವಿಧಾನ | How To Grow Rambutan Fruit | FULL INFORMATION

udayavani youtube

ಟೇಬಲ್ ಟಾಪ್ ರನ್ ವೇ ಏಕೆ ಸವಾಲು?

udayavani youtube

ಜೇನುನೊಣಗಳ ಸಂತತಿ ಇಲ್ಲವಾದರೆ ಇಡೀ ಜೀವ ಸಂಕುಲವೇ ನಶಿಸಿಹೋಗುತ್ತದೆ | Udayavani

udayavani youtube

VP NAGARAದ 75 CENTS ಜಾಗದಲ್ಲಿ ಮಾದರಿ ಕೃಷಿ ತೋಟ| Udayavani

udayavani youtube

ಹೈನುಗಾರಿಕೆಯಿಂದ ಬದುಕು ಕಟ್ಟಿಕೊಂಡ ಕುಟುಂಬ | Interview with successful Dairy Farmerಹೊಸ ಸೇರ್ಪಡೆ

Bell-01

ಅಯೋಧ್ಯಾ ರಾಮನಿಗೆ 2.1 ಟನ್‌ನ ಭಾವೈಕ್ಯ ಗಂಟೆ !

ಮುಂದಿನ ಪ್ರಧಾನಿ ಮೋದಿಯೇ ಆಗಲಿ ; ಇಂಡಿಯಾ ಟುಡೇ-ಕಾರ್ವಿ ಇನ್‌ಸೈಟ್ಸ್‌ ಸಮೀಕ್ಷಾ ವರದಿ

ಮುಂದಿನ ಪ್ರಧಾನಿ ಮೋದಿಯೇ ಆಗಲಿ ; ಇಂಡಿಯಾ ಟುಡೇ-ಕಾರ್ವಿ ಇನ್‌ಸೈಟ್ಸ್‌ ಸಮೀಕ್ಷಾ ವರದಿ

School-Children-01

ಚಿಂತನೆ: ಹೊಸ ಶಿಕ್ಷಣ ನೀತಿ ಒಂದು ಐತಿಹಾಸಿಕ ಹೆಜ್ಜೆ

ಮೊಬೈಲ್‌ ಆ್ಯಪ್‌ ಬಳಸಿ ರೈತರಿಂದಲೇ ಬೆಳೆ ಸಮೀಕ್ಷೆ

ಮೊಬೈಲ್‌ ಆ್ಯಪ್‌ ಬಳಸಿ ರೈತರಿಂದಲೇ ಬೆಳೆ ಸಮೀಕ್ಷೆ

ಕನ್ನಡ ಚಿತ್ರಗಳಿಗೆ ಪ್ರತ್ಯೇಕ OTT: ಚಿಂತನೆ

ಕನ್ನಡ ಚಿತ್ರಗಳಿಗೆ ಪ್ರತ್ಯೇಕ OTT: ಚಿಂತನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.