ಭಾರತದಲ್ಲಿ ರಿಯಲ್‌ಮಿ 10 ಪ್ರೊ ಸರಣಿಯ 5ಜಿ ಸ್ಮಾರ್ಟ್‌ಫೋನ್‌ಗಳ ಬಿಡುಗಡೆ
Team Udayavani, Dec 9, 2022, 8:08 PM IST
ನವದೆಹಲಿ: ರಿಯಲ್‌ಮಿ ಬ್ರಾಂಡ್ ಎರಡು ಸ್ಮಾರ್ಟ್‌ಫೋನ್‌ಗಳನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ರಿಯಲ್‌ಮಿ 10 ಪ್ರೊ ಪ್ಲಸ್ 5ಜಿ ಮತ್ತು ರಿಯಲ್‌ಮಿ 10 ಪ್ರೊ 5ಜಿ ಫೋನ್‌ಗಳನ್ನು ಹೊರತಂದಿದೆ.
ಆಕರ್ಷಕ ವಿನ್ಯಾಸ, ಡಿಸ್‌ಪ್ಲೇ, ಉತ್ತಮ ಕ್ಯಾಮೆರಾ, ಶಕ್ತಿಶಾಲಿ 5ಜಿ ಪ್ರೊಸೆಸರ್‌ಗಳನ್ನು ಒಳಗೊಂಡಿದ್ದು, ಆಂಡ್ರಾಯ್ಡ್ 13 ಆಧಾರಿತ ರಿಯಲ್‌ಮಿ ಯುಐ 4.0 ಕಾರ್ಯಾಚರಣಾ ವ್ಯವಸ್ಥೆಯೊಂದಿಗೆ ಬಂದಿವೆ.
ಎರಡು ಫೋನ್‌ಗಳ ಬಿಡುಗಡೆ ಸಂದರ್ಭ ಮಾತನಾಡಿದ ರಿಯಲ್‌ಮಿ ಇಂಡಿಯಾದ ಸಿಇಒ ಮಾಧವ ಸೇಠ್, ರಿಯಲ್‌ಮಿ 10 ಪ್ರೊ ಸರಣಿಯ 5ಜಿ ಫೋನ್‌ಗಳೊಂದಿಗೆ, ಬಳಕೆದಾರರಿಗೆ ಪ್ರೀಮಿಯಂ ಮಟ್ಟದ ಅನುಭವವನ್ನು ಒದಗಿಸುವುದು ನಮ್ಮ ಗುರಿ. ಈ ಎರಡೂ ಫೋನ್‌ಗಳಲ್ಲಿ ಫ್ಲ್ಯಾಗ್‌ಶಿಪ್ ಮಟ್ಟದ ಡಿಸ್‌ಪ್ಲೇ ತಂತ್ರಜ್ಞಾನಗಳು ಮತ್ತು ಶಕ್ತಿಶಾಲಿ 5ಜಿ ಪ್ರೊಸೆಸರ್‌ಗಳಿದ್ದು, ಭಾರತದಲ್ಲಿ 5ಜಿಯನ್ನು ಜನರಿಗೆ ತಲುಪಿಸುವ ನಮ್ಮ ಬದ್ಧತೆಯನ್ನು ದೃಢಪಡಿಸುತ್ತದೆ ಎಂದರು.
ಈಗಾಗಲೇ ರಿಯಲ್‌ಮಿ ಕಂಪನಿಯು ಜಿಯೋ ಜೊತೆಗೆ ಕೈಜೋಡಿಸಿ 5ಜಿ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಸಾಕಷ್ಟು ಆವಿಷ್ಕಾರಗಳಲ್ಲಿ ಭಾಗಿಯಾಗಿದೆ. ಜಿಯೋ ಜೊತೆ ಪಾಲುದಾರಿಕೆಯೊಂದಿಗೆ ಟ್ರೂ 5ಜಿ ಅನುಭವಕ್ಕಾಗಿ ಉತ್ತಮ ಕೊಡುಗೆಗಳನ್ನು ನೀಡಲು ನಾವು ಪ್ರಯತ್ನಿಸುತ್ತಿದ್ದೇವೆ. ಅಲ್ಲದೆ ಕೆಲವು ಆಯ್ದ ರಿಯಲ್‌ಮಿ ಶೋರೂಂಗಳಲ್ಲಿ ಟ್ರೂ 5ಜಿ ಅನುಭವ ಕೇಂದ್ರಗಳನ್ನು ಸ್ಥಾಪಿಸಲು ಜಿಯೋ ಜೊತೆ ಸಹಯೋಗ ನೀಡಿದ್ದೇವೆ. ಇದರಿಂದ ಪ್ರತಿಯೊಬ್ಬರೂ ರಿಯಲ್‌ಮಿ 10 ಪ್ರೊ ಸರಣಿಯು ಒದಗಿಸುವ ಸಂಪರ್ಕತೆಯ ಹೊಸ ಶಕೆಯನ್ನು ಅನುಭವಿಸುವಂತಾಗಲಿದೆ ಎಂದು ಅವರು ಹೇಳಿದರು.
ಜಿಯೋ ಪ್ಲ್ಯಾಟ್‌ಫಾರಂಸ್ ಲಿ. ಸಿಇಒ ಕಿರಣ್ ಥಾಮಸ್ ಮಾತನಾಡಿ, ನಮ್ಮ ಪ್ರಮುಖ ಪಾಲುದಾರ ರಿಯಲ್‌ಮಿ ಜೊತೆಗೆ ಮತ್ತೊಂದು ಮೈಲಿಗಲ್ಲಾಗಬಲ್ಲ ಪಾಲುದಾರಿಕೆಗೆ ನಮಗೆ ನಿಜಕ್ಕೂ ಹರ್ಷವಾಗುತ್ತಿದೆ. ರಿಯಲ್‌ಮಿ 10 ಪ್ರೊ ಪ್ಲಸ್‌ನಂತಹಾ ಶಕ್ತಿಶಾಲಿ 5ಜಿ ಸ್ಮಾರ್ಟ್‌ಫೋನ್‌ನ ನಿಜವಾದ ಸಾಮರ್ಥ್ಯವನ್ನು ಜಿಯೋದಂತಹ ಟ್ರೂ 5ಜಿ ನೆಟ್‌ವರ್ಕ್‌ನಿಂದ ಮಾತ್ರ ತಿಳಿಯಬಹುದು. ಈ ಪಾಲುದಾರಿಕೆಯ ಉದ್ದೇಶವೇ ಇದು. ಜಿಯೋ ಟ್ರೂ 5ಜಿ ಎಂಬುದು ಭಾರತದಲ್ಲಿ ಮಾತ್ರವೇ ಅಲ್ಲ, ಜಗತ್ತಿನಲ್ಲೇ ಅತ್ಯಾಧುನಿಕವಾದ ನೆಟ್‌ವರ್ಕ್ ಆಗಿದೆ. ಭಾರತದ ಏಕೈಕ ಟ್ರೂ 5ಜಿ ನೆಟ್‌ವರ್ಕ್ ಎಂದನ್ನಿಸಲು ಜಿಯೋ ಟ್ರೂ 5ಜಿಯಲ್ಲಿ ಮೂರು ಪಟ್ಟು ಹೆಚ್ಚು ಸೌಕರ್ಯಗಳಿವೆ ಎಂದರು.
● ರಿಯಲ್‌ಮಿ 10 ಪ್ರೊ ಪ್ಲಸ್ 5ಜಿ ಫೋನ್, ಫ್ಲ್ಯಾಗ್‌ಶಿಪ್ ಮಟ್ಟದ 120Hz ಬಾಗಿದ ಅಂಚಿನ ಡಿಸ್‌ಪ್ಲೇ (ಸ್ಕ್ರೀನ್) ಇರುವ, ಭಾರತದಲ್ಲೇ ಮೊದಲ ಬಾರಿಗೆ 2160Hz ಡಿಮ್ಮಿಂಗ್ ವೈಶಿಷ್ಟ್ಯವುಳ್ಳ ಫೋನ್
● ಡೈಮೆನ್ಸಿಟಿ 1080 5ಜಿ ಚಿಪ್‌ಸೆಟ್, ತೀರಾ ಹಗುರವಾದ ಫೋನ್ (173 ಗ್ರಾಂ), ಭರ್ಜರಿ 5000mAh ಬ್ಯಾಟರಿ, ಫ್ಲ್ಯಾಗ್‌ಶಿಪ್ ಮಟ್ಟದ 108MP ಪ್ರೋ-ಲೈಟ್ ಕ್ಯಾಮೆರಾ ಇರುವ ರಿಯಲ್‌ಮಿ 10 ಪ್ರೊ ಪ್ಲಸ್ 5ಜಿ ಫೋನ್ ಮೂರು ಬಣ್ಣಗಳಲ್ಲಿ (ಗೋಲ್ಡ್, ಬ್ಲ್ಯಾಕ್ ಹಾಗೂ ನೆಬ್ಯುಲಾ ಬ್ಲೂ), ಎರಡು ಸ್ಟೋರೇಜ್ ಮಾದರಿಗಳಲ್ಲಿ ಲಭ್ಯ. 6GB+128GB ಮಾದರಿಗೆ Rs 24,999 ಹಾಗೂ 8GB+128GB ಮಾದರಿಯ ಬೆಲೆ Rs 25,999
● ಮೊದಲ ಮಾರಾಟವು ಡಿಸೆಂಬರ್ 14ರಂದು ಮಧ್ಯಾಹ್ನ 12ರಿಂದ ರಿಯಲ್‌ಮಿ ಡಾಟ್ ಕಾಂ, ಫ್ಲಿಪ್‌ಕಾರ್ಟ್ ಹಾಗೂ ಸಮೀಪದ ಮಳಿಗೆಗಳಲ್ಲಿ ನಡೆಯಲಿದೆ. ರಿಯಲ್‌ಮಿ 10 ಪ್ರೊ ಪ್ಲಸ್ 5ಜಿ (6ಜಿಬಿ+128ಜಿಬಿ) ಆವೃತ್ತಿಗೆ ಬ್ಯಾಂಕ್ ಕೊಡುಗೆಗಳಿಂದ Rs 1000 ರಿಯಾಯಿತಿ ಹಾಗೂ 6 ತಿಂಗಳವರೆಗೆ ಯಾವುದೇ ವೆಚ್ಚವಿಲ್ಲದ ಇಎಂಐ ಕೂಡ ಲಭ್ಯವಿದೆ. (ಷರತ್ತುಗಳು ಅನ್ವಯ).
● ರಿಯಲ್‌ಮಿ 10 ಪ್ರೊ 5ಜಿ ಸ್ನ್ಯಾಪ್‌ಡ್ರ್ಯಾಗನ್ 695 5ಜಿ ಪ್ರೊಸೆಸರ್ ಇದ್ದು, 108 ಮೆ.ಪಿ. ಪ್ರೊಲೈಟ್ ಕ್ಯಾಮೆರಾ, 16ಮೆಪಿ ಸೆಲ್ಫೀ ಕ್ಯಾಮೆರಾ ಇದೆ.
● ರಿಯಲ್‌ಮಿ 10 ಪ್ರೊ 5ಜಿ ಮೂರು ಬಣ್ಣಗಳಲ್ಲಿ (ಹೈಪರ್‌ಸ್ಪೇಸ್ ಗೋಲ್ಡ್, ಡಾರ್ಕ್ ಮ್ಯಾಟರ್, ನೆಬ್ಯುಲಾ ಬ್ಲೂ) ಮತ್ತು ಎರಡು ಸ್ಟೋರೇಜ್ ಮಾದರಿಗಳಲ್ಲಿ ಲಭ್ಯವಿದೆ. 6+128ಜಿಬಿ ಮಾದರಿ ಬೆಲೆ ₹18,999 ಹಾಗೂ 8ಜಿಬಿ+128ಜಿಬಿ ಮಾದರಿಯ ಬೆಲೆ 19,999 ರೂ. ಇದರ ಮೊದಲ ಮಾರಾಟ ಪ್ರಾರಂಭವಾಗುವುದು ಡಿಸೆಂಬರ್ 16ರಂದು ಮಧ್ಯಾಹ್ನ 12ರಿಂದ ರಿಯಲ್‌ಮಿ ಡಾಟ್ ಕಾಂ, ಫ್ಲಿಪ್‌ಕಾರ್ಟ್ ಮತ್ತು ಸಮೀಪದ ಮಳಿಗೆಗಳಲ್ಲಿ ದೊರಕಲಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ಗೆ ಓವಲ್ ಆತಿಥ್ಯ
ರಣಜಿ ಟ್ರೋಫಿ ಸೆಮಿಫೈನಲ್: ಕಾಡಿದ ಸೌರಾಷ್ಟ್ರ; ಕಾಪಾಡಿದ ಅಗರ್ವಾಲ್
ಸುರತ್ಕಲ್: ಕ್ಷುಲ್ಲಕ ಕಾರಣಕ್ಕೆ ಎರಡು ತಂಡಗಳ ನಡುವೆ ಮಾರಾಮಾರಿ: ಪೊಲೀಸ್ ಬಿಗಿ ಬಂದೋಬಸ್ತ್
ಸಂಸತ್ನಲ್ಲಿ ಅದಾನಿ ವಿಚಾರ ಸದ್ದು, ಮೋದಿ ವಿರುದ್ಧ ಖರ್ಗೆ ಗುಡುಗು
ಭಗವಂತನಿಗಿಂತ ಮೊದಲೇ ಕುಮಾರಸ್ವಾಮಿಗೆ ತಿಳಿಯುತ್ತದೆ: ಸಿ.ಸಿ.ಪಾಟೀಲ್