
ಸಪ್ಟೆಂಬರ್ ನಲ್ಲಿ ಜಿಯೋಫೋನ್ ನೆಕ್ಸ್ಟ್ ಮಾರುಕಟ್ಟೆಗೆ ಲಗ್ಗೆ..!?
Team Udayavani, Jun 24, 2021, 5:20 PM IST

ಟೆಲಿಕಾಂ ನೆಟ್ ವರ್ಕ್ ನ ದೈತ್ಯ ಸಂಸ್ಥೆ ರಿಲಯನ್ಸ್ ಜಿಯೋ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಜಿಯೋಫೋನ್ ನೆಕ್ಸ್ಟ್ ಸ್ಮಾರ್ಟ್ ಫೋನ್ ನನ್ನು ಘೋಷಣೆ ಮಾಡಿದ್ದು, ಜೀಯೋ ಸಂಸ್ಥೆ ಘೋಷಣೆ ಮಾಡಿದ ಸ್ಮಾರ್ಟ್ ಫೋನ್ ಸಪ್ಟೆಂಬರ್ ನಲ್ಲಿ ಕೈಗೆ ಸಿಗಲಿದೆ ಎಂದು ಸಂಸ್ತೆ ಹೇಳಿದೆ.
ಟೆಕ್ ದೈತ್ಯ ಗೂಗಲ್ ಸಂಸ್ಥೆಯೊಂದಿಗೆ ಭಾಗಿಯಾಗಿ ರಿಲಯನ್ಸ್ ಜಿಯೋ ಜಿಯೋಫೋನ್ ನೆಕ್ಸ್ಟ್ ಸ್ಮಾರ್ಟ್ ಫೋನ್ ನನ್ನು ಅಭಿವೃದ್ಧಿ ಪಡಿಸಿದೆ.
ಆ್ಯಂಡ್ರಾಯ್ಡ್ ಸ್ಮಾರ್ಟ್ ಫೋನ್ ಆಗಿದ್ದು, ಪ್ಲೇ ಸ್ಟೋರ್ ಗೆ ಸಂಪೂರ್ಣ ಪ್ರವೇಶವನ್ನು ನೀಡುತ್ತದೆ. ಇದರ ಮೂಲಕ ಅಪ್ಲಿಕೇಶನ್ ಗಳನ್ನು ಡೌನ್ ಲೋಡ್ ಮಾಡುವುದಕ್ಕೆ ಅನುವು ಮಾಡಿಕೊಡುತ್ತದೆ.
ಇದನ್ನೂ ಓದಿ : ನನಗೆ ಸಿಎಂ ಸ್ಥಾನ ಸಿಕ್ಕರೆ ನಿಷ್ಠೆಯಿಂದ ಕೆಲಸ ಮಾಡತ್ತೇನೆ: ಎಸ್.ಆರ್.ಪಾಟೀಲ್
ವಾರ್ಷಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದ ರಿಲಯನ್ಸ್ ಸಂಸ್ಥೆಯ ಮುಖ್ಯಸ್ಥ ಮುಖೇಶ್ ಅಂಬಾನಿ, ಕೈಗೆಟಕುವ 4ಜಿ ಸ್ಮಾರ್ಟ್ ಫೋನ್ ಸಹಾಯದಿಂದ 300 ಮಿಲಿಯನ್ 2ಜಿ ಬಳಕೆದಾರರನ್ನ 4ಜಿಗೆ ಅಪ್ ಗ್ರೇಡ್ ಮಾಡುವ ಗುರಿಯನ್ನು ಹೊಂದಿದೆ.
ಚಂದಾದಾರರ ಹೆಚ್ಚಳವೂ ಇದರ ಮುಖ್ಯ ಉದ್ದೇಶವಾಗಿದೆ. ಮುಂದಿನ ದಿನಗಳಲ್ಲಿ ಬಳಕದಾರರ ಸಂಖ್ಯೆ ಹೆಚ್ಚಳ ಮಾಡುವುದಕ್ಕೆ ಸಂಸ್ಥೆ ಗಮನ ನೀಡುತ್ತದೆ ಎಂದು ಅವರು ಹೇಳಿದ್ದಾರೆ.
ಜೀಯೋಫೋನ್ ಯಾವಾಗ ಬಿಡುಗಡೆ ..?
ಸೆಪ್ಟೆಂಬರ್ 1 0ರಿಂದ ಖರೀದಿಗೆ ಲಭ್ಯವಿರುತ್ತದೆ. ಆದರೇ, ಸ್ಮಾಟ್ ಫೋನ್ ಬೆಲೆ ಇನ್ನೂ ಬಹಿರಂಗವಾಗಿಲ್ಲ. ಗ್ರಾಹಕರಿಗೆ ಕೈ ಗೆಟುಕುವ ದರದಲ್ಲಿ ಈ ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ಕಾಲಿಡಲಿದೆ ಎಂದು ಅವರು ಭರವಸೆ ನೀಡಿದ್ದಾರೆ.
ಇನ್ನು, ಜಿಯೋಫೋನ್ ನೆಕ್ಸ್ಟ್ ಭಾರತದಲ್ಲಿ ಮತ್ತು ಜಾಗತಿಕವಾಗಿ ಅತ್ಯಂತ ಒಳ್ಳೆಯ ಸ್ಮಾರ್ಟ್ಫೋನ್ಗಳಲ್ಲಿ ಒಂದಾಗಲಿದೆ ಎಂದು ಹೇಳಿದ್ದಾರೆ.
ಈ ನೂತನ ಸ್ಮಾರ್ಟ್ ಫೋನ್ ನ ವಿಶೇಷತೆಗಳೇನು..?
ಈ ಕುರಿತಾಗಿ ಮಾತನಾಡಿದ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರು ಜಿಯೋಫೋನ್ ನೆಕ್ಸ್ಟ್ ‘ಅಲ್ಟ್ರಾ-ಕೈಗೆಡುವ’ ಸ್ಮಾರ್ಟ್ಫೋನ್ ಆಗಿರಲಿದೆ. ಸ್ಮಾರ್ಟ್ ಕ್ಯಾಮೆರಾ ವಿಶೇಷತೆ ಗ್ರಾಹಕರನ್ನು ಸೆಳೆಯಲಿದೆ ಎಂದರು.
ಇದನ್ನೂ ಓದಿ : ಟೆಸ್ಟ್ ಚಾಂಪಿಯನ್ ಶಿಪ್ ಗೆ ಮೂರು ಪಂದ್ಯಗಳ ಫೈನಲ್ ಬೇಕಿತ್ತು: ಸೋಲಿನ ಬಳಿಕ ವಿರಾಟ್
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು
