ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ04; ಮಿಂಟ್ ಗ್ರೀನ್ ಸೇರಿ 4 ಬಣ್ಣಗಳಲ್ಲಿ ಲಭ್ಯ
Team Udayavani, Dec 10, 2022, 8:00 AM IST
ಸ್ಯಾಮ್‌ಸಂಗ್ ಕಂಪನಿಯು ಭಾರತದಲ್ಲಿ ತನ್ನ ಹೊಸ ಅಗ್ಗದ ದರದ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆಗೊಳಿಸಿದೆ. ಕಂಪನಿಯ ಕೈಗೆಟಕುವ ಬೆಲೆಯ “ಎಂ’ ಸರಣಿಯ ಫೋನ್‌ಗೆ ಈಗ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ04 ಕೂಡ ಸೇರ್ಪಡೆಗೊಂಡಿದೆ.
ದೇಶದಲ್ಲಿ 4ಜಿಬಿ/64ಜಿಬಿ ಮಾಡೆಲ್‌ನ ಫೋನ್‌ಗೆ 8,499 ರೂ. ನಿಗದಿಪಡಿಸಲಾಗಿದೆ. ಇದೇ ವೇಳೆ, 128 ಜಿಬಿಯ ಮಾಡೆಲ್ ಅನ್ನೂ ಸ್ಯಾಮ್‌ಸಂಗ್ ಅನಾವರಣಗೊಳಿಸಿದ್ದು, ಅದು ಕೆಲ ತಿಂಗಳುಗಳ ಬಳಿಕ ಮಾರುಕಟ್ಟೆಗೆ ಬರಲಿದೆ.
ಗ್ಯಾಲಕ್ಸಿ ಎಂ04 ಇದೇ 16ರಂದು ಮಧ್ಯಾಹ್ನ 12ರಿಂದ ಅಮೆಜಾನ್‌ನಲ್ಲಿ ಮಾರಾಟಕ್ಕೆ ಲಭ್ಯವಿರಲಿದೆ. ಮಿಂಟ್ ಗ್ರೀನ್, ಗೋಲ್ಡ್, ವೈಟ್ ಮತ್ತು ಬ್ಲೂ ಬಣ್ಣದಲ್ಲಿ ಫೋನ್ ಲಭ್ಯವಿದ್ದು, 64 ಜಿಬಿ ಮತ್ತು 128 ಜಿಬಿ ಸ್ಟೋರೇಜ್ ಇದ್ದು ಅದನ್ನು 1ಟಿಬಿ ವರೆಗೂ ವಿಸ್ತರಿಸಬಹುದು. ವಿಶೇಷವೆಂದರೆ, ಈ ಫೋನ್‌ನಲ್ಲಿ ಫಿಂಗರ್‌ಪ್ರಿಂಟ್ ರೀಡರ್ ಇರುವುದಿಲ್ಲ.