
ಶೀಘ್ರದಲ್ಲಿ ಬರಲಿವೆ ಸ್ಯಾಮ್ ಸಂಗ್ S20 5G ಸರಣಿ: 48MP ಸೆಲ್ಫಿ ಕ್ಯಾಮಾರ,ಹಲವು ವಿಶೇಷತೆಗಳು
Team Udayavani, Jan 19, 2020, 10:27 AM IST

ನ್ಯೂಯಾರ್ಕ್ : ಸ್ಯಾಮ್ ಸಂಗ್ ತನ್ನ ಬಹುನಿರೀಕ್ಷಿತ ಗ್ಯಾಲಕ್ಸಿ S20 ಸರಣಿಯನ್ನು ಶೀಘ್ರದಲ್ಲಿ ಬಿಡುಗಡೆ ಮಾಡಲಿದ್ದು ಇದೀಗ ಈ ಸ್ಮಾರ್ಟ್ ಪೋನ್ ನ ವಿಶೇಷ ಫೀಚರ್ ಗಳ ಕುರಿತಾದ ಮಾಹಿತಿ ಸೋರಿಕೆಯಾಗಿದೆ.
ಹೌದು, ಸ್ಯಾಮ್ ಸಂಗ್ 5G ಮೋಡೆಲ್ ನ ಮೂರು ಸ್ಮಾರ್ಟ್ ಪೋನ್ ಗಳು ಬಿಡುಗಡೆಯಾಗಲಿದ್ದು ಗ್ಯಾಲಕ್ಸಿ S20 5G, ಗ್ಯಾಲಕ್ಸಿ S20+5G ಮತ್ತು ಗ್ಯಾಲಕ್ಸಿ S20 Ultra 5G ಎಂದು ಹೆಸರಿಸಲಾಗಿದೆ. ಈ ಮೂರು ಮೊಬೈಲ್ ಗಳು 120Hz ಡಿಸ್ ಪ್ಲೇ ಸಾಮಾರ್ಥ್ಯ ಹೊಂದಿದೆ. ಮಾತ್ರವಲ್ಲದೆ ಎಕ್ಸಿನೋಸ್ 990nm ಚಿಪ್ ಸೆಟ್ಸ್ ಹೊಂದಿದ್ದು, ವಾಟರ್ ರೆಸಿಸ್ಟೆನ್ಸ್ ನೊಂದಿಗೆ ಆಂಡ್ರಾಯ್ಡ್ 10 ಫೀಚರ್ ಅನ್ನು ಒಳಗೊಂಡಿದೆ. ಆದರೂ ಗ್ಯಾಲಕ್ಸಿ S20 Ultra 5G ಉಳಿದೆರಡೂ ಸ್ಮಾರ್ಟ್ ಫೋನ್ ಗಳಿಗಿಂತ ಅತೀ ವಿಶೇಷ ಫೀಚರ್ ಗಳನ್ನು ಒಳಗೊಂಡಿದೆ.
ಗ್ಯಾಲಕ್ಸಿ S20 Ultra 5G ವಿಶೇಷತೆಗಳು:
ಈ ಸ್ಮಾರ್ಟ್ ಫೋನ್ 6.9 ಇಂಚಿನ WQHD+Infinity-O ಡಿಸ್ ಪ್ಲೇ ಸಾಮಾರ್ಥ್ಯ ಹೊಂದಿದೆ. ಇದರಲ್ಲಿ 128 ಜಿಬಿ ಮತ್ತು 512 ಜಿಬಿ ಸ್ಟೋರೆಜ್ ಸಾಮಾರ್ಥ್ಯವಿದ್ದು ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 1 ಟಿಬಿ ವರೆಗೂ ವಿಸ್ತರಿಸಬಹುದು. ಕ್ಯಾಮಾರ ವಿಭಾಗ ಅತ್ಯುತ್ತಮವಾಗಿದ್ದು 108 ಮೆಗಾಫಿಕ್ಸೆಲ್ ಪ್ರಾಥಮಿಕ ಸೆನ್ಸಾರ್, 48 ಮೆಗಾಫಿಕ್ಸೆಲ್ ಟೆಲಿಫೋಟೋ ಲೆನ್ಸ್, 12 ಮೆಗಾಫಿಕ್ಸೆಲ್ ಅಲ್ಟ್ರಾ ವೈಡ್ ಆ್ಯಂಗಲ್ ಲೆನ್ಸ್ ಮತ್ತು ಹಿಂಭಾಗದಲ್ಲಿ ToF ಸೆನ್ಸಾರ್ ಇರುವುದು ವಿಶೇಷ.
ಸೆಲ್ಫಿ ಕ್ಯಾಮಾರದಲ್ಲಿ ಸ್ಯಾಮ್ ಸಂಗ್ ಚರಿತ್ರೆ ಸೃಷ್ಟಿಸಲು ಮುಂದಾಗಿದ್ದು 48 ಮೆಗಾಫಿಕ್ಸೆಲ್ ಮುಂಭಾಗ ಕ್ಯಾಮರಾ ಹೊಂದಿದೆ. ಮತ್ತೂ ವಿಶೇಷವೆಂದರೇ 5,000 mAh ಬ್ಯಾಟರಿ ಸಾಮರ್ಥ್ಯ ಪಡೆದಿದೆ.
ಗ್ಯಾಲಕ್ಸಿ S20 5G , ಗ್ಯಾಲಕ್ಸಿ S20+5G ವಿಶೇಷತೆಗಳು:
ಗ್ಯಾಲಕ್ಸಿ S20 5G ಸ್ಮಾರ್ಟ್ ಪೋನ್ 6.3 ಇಂಚಿನ WQHD + ಡಿಸ್ ಪ್ಲೇ ಸಾಮರ್ಥ್ಯ ಪಡೆದರೆ ಗ್ಯಾಲಕ್ಸಿ S20 ಪ್ಲಸ್ 5ಜಿ ಅತೀ ಹೆಚ್ಚಿನ 6.7 ಇಂಚಿನ ಸ್ಕ್ರೀನ್ ಅನ್ನು ಒಳಗೊಂಡಿದೆ. ಈ ಎರಡೂ ಫೋನ್ ಗಳು 128 ಜಿಬಿ ಇನ್ ಬಿಲ್ಟ್ ಸ್ಟೋರೇಜ್ ಹೊಂದಿದ್ದು 1ಟಿಬಿ ವರೆಗೂ ವಿಸ್ತರಿಸಬಹುದು. ಫೋಟೋಗ್ರಫಿಗಾಗಿ ಗ್ಯಾಲಕ್ಸಿ S20, ಗ್ಯಾಲಕ್ಸಿ S20+ 5G ನಲ್ಲಿ 12 ಮೆಗಾಫಿಕ್ಸೆಲ್ ಪ್ರಾಥಮಿಕ ಸೆನ್ಸಾರ್, 64 ಮೆಗಾಫಿಕ್ಸೆಲ್ ಟೆಲಿಫೋಟೋ ಲೆನ್ಸ್, 12 ಮೆಗಾಫಿಕ್ಸೆಲ್ ಅಲ್ಟ್ರಾ ವೈಡ್ ಆ್ಯಂಗಲ್ ಲೆನ್ಸ್ ಮತ್ತು ಟಿಓಎಫ್ ಸೆನ್ಸಾರ್ ಅನ್ನು ಒಳಗೊಂಡಿದೆ.
ಸೆಲ್ಫಿ ಕ್ಯಾಮಾರ ಕೂಡ ಸಾಧಾರಣವಾಗಿದ್ದು 10 ಮೆಗಾಫಿಕ್ಸೆಲ್ ಸಾಮಾರ್ಥ್ಯ ಪಡೆದಿದೆ. ಈ ಸ್ಮಾರ್ಟ್ ಫೋನ್ ಕ್ರಮವಾಗಿ 4,000 mAh ಮತ್ತು 4,500 mAh ಬ್ಯಾಟರಿ ವೈಶಿಷ್ಟ್ಯವನ್ನು ಹೊಂದಿರುವುದು ವಿಶೇಷ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
