Udayavni Special

ಸ್ಮಾರ್ಟ್‌ ಕಾರ್‌! ಹುಂಡೈ ಎಲಾಂಟ್ರಾ ಫೇಸ್‌ಲಿಫ್ಟ್ ಮಾದರಿಯಲ್ಲಿ…


Team Udayavani, Nov 18, 2019, 5:27 AM IST

CAR.

ಇಂದು ಸ್ಮಾರ್ಟ್‌ಫೋನಿಂದಲೇ ಜಗತ್ತು ನಡೆಯುತ್ತಿರುವುದು. ಸ್ಮಾರ್ಟ್‌ಫೋನಿನಿಂದ ಎಲ್ಲವನ್ನೂ ಕುಳಿತಲ್ಲಿಂದಲೇ ನಿಯಂತ್ರಿಸಬಹುದಾದ ಕಾಲವಿದು. ಇದೀಗ ಫೋನ್‌ನಿಂದ ಕಾರನ್ನೂ ನಿಯಂತ್ರಿಸಬಹುದು. ಹುಂಡೈ ಮಾರುಕಟ್ಟೆಗೆ ತಂದಿರುವ ಎಲಾಂಟ್ರಾದ ಫೇಸ್‌ಲಿಫ್ಟ್ ಮಾದರಿಯಲ್ಲಿ ಅಂಥದ್ದೊಂದು ವ್ಯವಸ್ಥೆ ಇದೆ.

ಇತ್ತೀಚೆಗೆ ಹೊಸ ಕಾರುಗಳ ಬಿಡುಗಡೆಗಿಂತ ಹೆಚ್ಚಾಗಿ, ಹಳೆ ಕಾರುಗಳು ಫೇಸ್‌ಲಿಫr… ಮಾದರಿಯಲ್ಲಿ ಹೊಸ ರೂಪ ಪಡೆದುಕೊಂಡು ಬರುತ್ತಿರುವ ಪ್ರವೃತ್ತಿಯನ್ನು ಗಮನಿಸಬಹುದು. ಇದೀಗ ಹೊಸ ತಂತ್ರಜ್ಞಾನ, ಹೊಸ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಬಂದಿದೆ ಹುಂಡೈ ಎಲಾಂಟ್ರಾ ಕಾರು.

ಸ್ಮಾರ್ಟ್‌ಫೋನ್‌ ನಿಯಂತ್ರಣ ಮೂಲಕ ಕಾರು ಸ್ಟಾರ್ಟ್‌
ಇದರಲ್ಲೊಂದು ವಿಶೇಷವಿದೆ, ಈ ಕಾರು ಚಾಲನೆ ಮಾಡಬೇಕಾದರೆ, ನೀವು ಕಾರಿನ ಬಳಿಗೆ ಹೋಗಿ, ಡ್ರೈವರ್‌ ಸೀಟಿನಲ್ಲಿ ಕುಳಿತು ಗಾಡಿ ಸ್ಟಾರ್ಟ್‌ ಮಾಡಬೇಕು ಅಂತೇನಿಲ್ಲ. ನೀವು ಕುಳಿತಲ್ಲಿಯೇ ನಿಮ್ಮ ಸ್ಮಾರ್ಟ್‌ಫೋನ್‌ ಮೂಲಕ ಕಾರನ್ನು ಸ್ಟಾರ್ಟ್‌ ಮಾಡಬಹುದು. ಅದೇ ರೀತಿ ಕಾರಿನ ಒಳಗಿನ ವೆದರ್‌ ಅನ್ನೂ ಸೆಟ್‌ ಮಾಡಬಹುದು. ಸದ್ಯ, ಈ ಕಾರಿಗೆ ಮಾರುಕಟ್ಟೆಯಲ್ಲಿ ಹೊಂಡಾ ಸಿವಿಕ್‌ ಮತ್ತು ಟೊಯೋಟಾ ಕೊರೊಲ್ಲಾ ಆಲ್ಟಿàಸ್‌ ಪ್ರತಿಸ್ಪರ್ಧಿಗಳಾಗಿವೆ. ಈ ಕಾರುಗಳು ಸಹ ಅತ್ಯುತ್ತಮ ತಂತ್ರಜ್ಞಾನ ಒಳಗೊಂಡ ಸೆಡಾನ್‌ಗಳಾಗಿದ್ದು, ದರ ಕೂಡ ಹೆಚ್ಚು ಕಡಿಮೆ ಒಂದೇ ರೇಂಜಿನಲ್ಲಿದೆ. ಈಗ ಬಂದಿರುವ ಎಲಾಂಟ್ರಾ ಕಾರು ಪೆಟ್ರೋಲ್‌ ಎಂಜಿನ್‌ ಮಾದರಿಯದ್ದು. ಇದು ಬಿಎಸ್‌6ಗೆ ಅಪ್‌ಡೇಟ್‌ ಆಗಿದೆ. ಮೈಲೇಜ್‌ ಮಾತ್ರ ಪ್ರತಿ ಲೀ.ಗೆ 14.6 ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಎಲ್ಲರೂ ಹೇಳುವಂತೆ ಬಿಎಸ್‌6ನಲ್ಲಿ ಮೈಲೇಜ್‌ ಡ್ರಾಪ್‌ ಆಗುತ್ತದೆ ಎಂಬ ಮಾತುಗಳಿವೆ. ಆದರೆ, ಈ ಕಾರಿನ ಮೈಲೇಜ್‌ ವಿಷಯದಲ್ಲಿ ಅಷ್ಟೇನೂ ಸಮಸ್ಯೆಯಾಗುವುದಿಲ್ಲ ಎಂದು ಕಂಪನಿಯೇ ಹೇಳಿಕೊಂಡಿದೆ. ಅಂದ ಹಾಗೆ, ಈ ಮಾದರಿಯಲ್ಲಿ ಡೀಸೆಲ್‌ ಮಾಡೆಲ್‌ ಲಭ್ಯವಿಲ್ಲ.

ವಿನ್ಯಾಸದ ಲೆಕ್ಕಾಚಾರದಲ್ಲಿ ಹೇಳುವುದಾದರೆ, ಕಾರಿನ ಮುಂಭಾಗ ಮತ್ತು ಹಿಂಭಾಗದಲ್ಲಿ ಹೊಸ ಸ್ಟೈಲಿಷ್‌ ಡಿಸೈನ್‌ಅನ್ನು ಹೊಂದಿದೆ. ತ್ರಿಕೋನಾಕೃತಿಯ ಡಿಆರ್‌ಎಲ್‌ಗ‌ಳು, ಫಾಗ್‌ ಲ್ಯಾಂಪ್ಸ್‌ ನಾಲ್ಕು ಪ್ರೊಜೆಕ್ಟರ್‌ನ ಹೆಡ್‌ಲ್ಯಾಂಪ್ಸ್‌ ಗಮನ ಸೆಳೆಯುತ್ತವೆ. ಹಿಂಬದಿಯಲ್ಲಿ ಹೊಸ ಡಿಸೈನ್‌ನ ಟೇಲ್‌ಲ್ಯಾಂಪ್‌ಗ್ಳಿವೆ. ಇನ್ನು ಒಳಗೆ ಬಂದರೆ, ಹೊಸ ಮಾದರಿಯ ಸ್ಟೇರಿಂಗ್‌, ಎಂಟರ್‌ಟೈನ್‌ಮೆಂಟ್‌ ಕನ್ಸೋಲ್‌ ಕೂಡ ಹೊಸ ತೆರನಾಗಿದ್ದು, ಇನ್ಫಿನಿಟಿ ಮ್ಯೂಸಿಕ್‌ ಸಿಸ್ಟಮ್‌ ಆಂಡ್ರಾಯ್ಡ್ ಆಟೋ ಮತ್ತು ಆಪಲ್‌ ಏರ್‌ಪ್ಲೇಗೆ ಹೊಂದಿಕೊಳ್ಳುವ ಮತ್ತು ಉತ್ತಮವಾದ 8 ಇಂಚಿನ ಟಚ್‌ಸ್ಕ್ರೀನ್‌, ವೈರ್‌ಲೆಸ್‌ ಮೊಬೈಲ್‌ ಚಾರ್ಜರ್‌ ಇದೆ. ಸಾಮರ್ಥ್ಯದ ವಿಷಯಕ್ಕೆ ಬಂದರೆ, ಕೇವಲ ಅರ್ಧ ಸೆಕೆಂಡ್‌ನ‌ಲ್ಲಿ ಕಾರು 100 ಕಿ.ಮೀ. ಸ್ಪೀಡ್‌ಅನ್ನು ತಲುಪುತ್ತದೆ.

ನಾಲ್ಕು ಮೋಡ್‌ಗಳು
ಇದರಲ್ಲಿ ಇಕೋ, ನ್ಪೋರ್ಟ್ಸ್, ನಾರ್ಮಲ್‌ ಮತ್ತು ಸ್ಮಾರ್ಟ್‌ ಎಂಬ ನಾಲ್ಕು ಮೋಡ್‌ಗಳಿವೆ. ಇಕೋ ಮೋಡ್‌ನ‌ಲ್ಲೂ ಗಾಡಿಯ ಸಾಮರ್ಥ್ಯವೇನೂ ಕಡಿಮೆಯಾಗುವುದಿಲ್ಲ ಎಂಬುದು ಇದನ್ನು ಪರೀಕ್ಷಿಸಿರುವ ಪರಿಣಿತರ ಅಭಿಪ್ರಾಯ. ಹಾಗೆಯೇ ಸ್ಮಾರ್ಟ್‌ ಮತ್ತು ನ್ಪೋರ್ಟ್ಸ್ ಮೋಡ್‌ನ‌ಲ್ಲಿ ಕಾರಿನ ಸಾಮರ್ಥ್ಯ ಹೆಚ್ಚುತ್ತದೆ.

ಸುರಕ್ಷತಾ ಸವಲತ್ತುಗಳು
ಈ ಕಾರು ಅನೇಕ ಸುರಕ್ಷತಾ ಸವಲತ್ತುಗಳನ್ನು ಒಳಗೊಂಡಿದೆ. ಸಾಮಾನ್ಯವಾಗಿ ಕಾರುಗಳಲ್ಲಿ ಮುಂದಿನ ಎರಡು ಸೀಟುಗಳ ಪ್ರಯಾಣಿಕರಿಗೆ ಏರ್‌ಬ್ಯಾಗುಗಳನ್ನು ಒದಗಿಸಲಾಗಿರುತ್ತದೆ. ಅದಕ್ಕಿಂತ ಹೆಚ್ಚು ಏರ್‌ಬ್ಯಾಗುಗಳನ್ನು ಹೈಎಂಡ್‌ ಮಾದರಿಗಳಲ್ಲಿ ಮಾತ್ರವೇ ನೀಡಲಾಗುತ್ತಿತ್ತು. ಆದರೆ, ಈ ಕಾರಿನ ಎಲ್ಲಾ ಮಾದರಿಗಳಲ್ಲೂ ಆರು ಏರ್‌ಬ್ಯಾಗ್‌ಗಳನ್ನು ನೀಡಲಾಗಿದೆ. ಎಬಿಎಸ್‌, ಇಎಸ್ಸಿ, ಪಾರ್ಕಿಂಗ್‌ ಸೆನ್ಸರ್‌(ಫ್ರಂಟ್‌ ಆಂಡ್‌ ರೇರ್‌), ಹಿಲ್‌ ಸ್ಟಾರ್ಟ್‌ ಅಸಿಸ್ಟ್‌, ರೇರ್‌ ವ್ಯೂ ಕ್ಯಾಮೆರಾ, ಫ್ರಂಟ್‌ ಬೆಲ್ಟ್‌  ರಿಮೈಂಡರ್‌, ಸ್ಪೀಡ್‌ ಅಲರ್ಟ್‌ ವಾರ್ನಿಂಗ್‌, ಟೈರ್‌ ಪ್ರಷರ್‌ ಮಾನಿಟರ್‌ನಂಥ ಭದ್ರತಾ ಫೀಚರ್‌ಗಳನ್ನು ಈ ಕಾರು ಒಳಗೊಂಡಿದೆ.

ಹುಂಡೈನ ಹೊಸ ಸೆಡಾನ್‌ಗೆ ನಾಮಕರಣ
ಜಾಗತಿಕ ಮಟ್ಟದಲ್ಲಿ ವಿಶ್ವಾಸಾರ್ಹ ಬ್ರ್ಯಾಂಡ್‌ ಆಗಿರುವ ಹುಂಡೈ ಕಾರು ಕಂಪನಿ, ಹೊಸ ಸೆಡಾನ್‌ವೊಂದನ್ನು ಮಾರುಕಟ್ಟೆಗೆ ಬಿಡಲಿದೆ ಎಂಬ ಸುದ್ದಿ ಹರಿದಾಡುತ್ತಲೇ ಇತ್ತು. ಇದೀಗ, ಆ ಸೆಡಾನ್‌ ಕಾರಿಗೆ “ಔರಾ’ ಎಂಬ ಹೆಸರನ್ನಿಟ್ಟಿರುವ ಸಂಗತಿ ಹೊರಬಿದ್ದಿದೆ. ಹುಂಡೈ ಕಂಪನಿ, ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿದೆ. ವಿಶೇಷವೆಂದರೆ, ಹೆಸರೊಂದನ್ನು ಬಿಟ್ಟು ಇನ್ಯಾವ ಮಾಹಿತಿಯೂ ಹೊರಬಿದ್ದಿಲ್ಲ. ಭಾರತೀಯ ಗ್ರಾಹಕರು, ಅದರಲ್ಲೂ ಯುವಕರನ್ನು ಗುರಿಯಾಗಿಸಿಕೊಂಡು ಈ ಹೆಸರನ್ನಿಟ್ಟಿದೆ ಎಂದೇ ಹೇಳಲಾಗುತ್ತಿದೆ. ಆರಾಮ, ಸುರಕ್ಷತೆ, ವಿನ್ಯಾಸ ಮತ್ತು ಹೊಂದಿಕೊಳ್ಳುವಂಥ ತಾಂತ್ರಿಕತೆ ಇದರಲ್ಲಿದ್ದು ಸವಾರರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಸಂಸ್ಥೆ ಹೇಳಿದೆ.

ಎಂಜಿನ್‌- 1999 ಸಿಸಿ, 4 ಸಿಲಿಂಡರ್‌, ಪೆಟ್ರೋಲ್‌
ಟ್ರಾನ್ಸ್‌ಮಿಷನ್‌- 6 ಸ್ಪೀಡ್‌ ಆಟೋ
ಮೈಲೇಜ್‌- 14.6
ಪವರ್‌- 150 ಬಿ.ಎಚ್‌.ಪಿ, 6200 ಆರ್‌.ಪಿ.ಎಂ
ವೀಲ್‌ ಬೇಸ್‌ -2700 ಎಂ.ಎಂ
ದರ- 20.39 ಲಕ್ಷ ರೂ. (ಎಕ್ಸ್‌ ಶೋರೂಂ ಬೆಲೆ)

-ಸೋಮಶೇಖರ ಸಿ.ಜೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಮಳೆಗೆ ಮತ್ತೆ ಒಡೆದ ವಿಜಯನಗರ ಕಾಲುವೆ ಅತಂತ್ರದಲ್ಲಿ ಭತ್ತದ ನಾಟಿ ಕಾರ್ಯ

ಮಳೆಗೆ ಮತ್ತೆ ಒಡೆದ ವಿಜಯನಗರ ಕಾಲುವೆ: ಅತಂತ್ರದಲ್ಲಿ ಭತ್ತದ ನಾಟಿ ಕಾರ್ಯ

ಇಂದು ಸಂಜೆ 3.30ಕ್ಕೆ ಎಸ್ಎಸ್ಎಲ್ ಸಿ ಪರೀಕ್ಷೆ ಫಲಿತಾಂಶ: ಪೋಷಕರಿಗೆ ಸಚಿವರ ಕಿವಿಮಾತು

ಇಂದು ಸಂಜೆ 3.30ಕ್ಕೆ ಎಸ್ಎಸ್ಎಲ್ ಸಿ ಪರೀಕ್ಷೆ ಫಲಿತಾಂಶ: ಪೋಷಕರಿಗೆ ಸಚಿವರ ಕಿವಿಮಾತು

ನೆಮ್ಮಾರ್ ಬಳಿ ಕುಸಿದ ರಸ್ತೆ: ಶೃಂಗೇರಿ ಕಾರ್ಕಳ ರಸ್ತೆಯನ್ನು ತಾತ್ಕಾಲಿಕ ಬಂದ್

ನೆಮ್ಮಾರ್ ಬಳಿ ಕುಸಿದ ರಸ್ತೆ: ಶೃಂಗೇರಿ ಕಾರ್ಕಳ ರಸ್ತೆ ತಾತ್ಕಾಲಿಕ ಬಂದ್

ವಾಷಿಂಗ್ಟನ್ ಡಿಸಿ: ಪಾರ್ಟಿಯ ಮೇಲೆ ಗುಂಡಿನ ದಾಳಿ, ಓರ್ವ ಸಾವು 20ಕ್ಕೂ ಹೆಚ್ಚು ಮಂದಿಗೆ ಗಾಯ

ವಾಷಿಂಗ್ಟನ್ ಡಿಸಿ: ಪಾರ್ಟಿಯ ಮೇಲೆ ಗುಂಡಿನ ದಾಳಿ, ಓರ್ವ ಸಾವು 20ಕ್ಕೂ ಹೆಚ್ಚು ಮಂದಿಗೆ ಗಾಯ

Bell-01

ಅಯೋಧ್ಯಾ ರಾಮನಿಗೆ 2.1 ಟನ್‌ನ ಭಾವೈಕ್ಯ ಗಂಟೆ !

ಮುಂದಿನ ಪ್ರಧಾನಿ ಮೋದಿಯೇ ಆಗಲಿ ; ಇಂಡಿಯಾ ಟುಡೇ-ಕಾರ್ವಿ ಇನ್‌ಸೈಟ್ಸ್‌ ಸಮೀಕ್ಷಾ ವರದಿ

ಮುಂದಿನ ಪ್ರಧಾನಿ ಮೋದಿಯೇ ಆಗಲಿ ; ಇಂಡಿಯಾ ಟುಡೇ-ಕಾರ್ವಿ ಇನ್‌ಸೈಟ್ಸ್‌ ಸಮೀಕ್ಷಾ ವರದಿ

School-Children-01

ಚಿಂತನೆ: ಹೊಸ ಶಿಕ್ಷಣ ನೀತಿ ಒಂದು ಐತಿಹಾಸಿಕ ಹೆಜ್ಜೆ
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾರ್‌ಗೆ ನಮಸ್ಕಾರ ; ಲಾಕ್‌ಡೌನ್‌ ವೇಳೆ ಧೂಳೆಬ್ಬಿಸಿದ ಕಾರ್‌ಗಳು

ಕಾರ್‌ಗೆ ನಮಸ್ಕಾರ ; ಲಾಕ್‌ಡೌನ್‌ ವೇಳೆ ಧೂಳೆಬ್ಬಿಸಿದ ಕಾರ್‌ಗಳು

ಜಂಟಿ ಖಾತೆಯಿಂದ ಹೆಸರನ್ನು ಕೈಬಿಡುವ ಪರಿ ; ಜಾಯಿಂಟ್‌ ಪೇನ್‌

ಜಂಟಿ ಖಾತೆಯಿಂದ ಹೆಸರನ್ನು ಕೈಬಿಡುವ ಪರಿ ; ಜಾಯಿಂಟ್‌ ಪೇನ್‌

ಕಾರ್ಡು ರಕ್ಷಿಸಿ; ಕ್ರೆಡಿಟ್‌ ಕಾರ್ಡ್‌ ಮಿಸ್ಸಿಂಗ್‌ ಆದಾಗ…

ಕಾರ್ಡು ರಕ್ಷಿಸಿ; ಕ್ರೆಡಿಟ್‌ ಕಾರ್ಡ್‌ ಮಿಸ್ಸಿಂಗ್‌ ಆದಾಗ…

Discount

ಡಿಸ್ಕೌಂಟ್‌; ಬ್ಯುಸಿನೆಸ್‌ನ ಮೋಡಿ

ಮೊಬೈಲು ಸೀಮೆ : ಕಡಿಮೆ ಕಾಸಿಗೆ ಗೆಲಾಕ್ಸಿ

ಮೊಬೈಲು ಸೀಮೆ : ಕಡಿಮೆ ಕಾಸಿಗೆ ಗೆಲಾಕ್ಸಿ

MUST WATCH

udayavani youtube

ಅಮೃತ’ ಗಾನ ಧಾರೆ: ಮದುವೆ ಔತಣ ಕೂಟದಲ್ಲಿ ಪತಿ-ಪತ್ನಿ ‘ಯಕ್ಷ ಗಾನ ವೈಭವ’

udayavani youtube

ರಾಂಬೂಟಾನ್ ಬೆಳೆಯುವ ಸೂಕ್ತ ವಿಧಾನ | How To Grow Rambutan Fruit | FULL INFORMATION

udayavani youtube

ಟೇಬಲ್ ಟಾಪ್ ರನ್ ವೇ ಏಕೆ ಸವಾಲು?

udayavani youtube

ಜೇನುನೊಣಗಳ ಸಂತತಿ ಇಲ್ಲವಾದರೆ ಇಡೀ ಜೀವ ಸಂಕುಲವೇ ನಶಿಸಿಹೋಗುತ್ತದೆ | Udayavani

udayavani youtube

VP NAGARAದ 75 CENTS ಜಾಗದಲ್ಲಿ ಮಾದರಿ ಕೃಷಿ ತೋಟ| Udayavaniಹೊಸ ಸೇರ್ಪಡೆ

ಭಾರತದ ಮಾಜಿ ಫ‌ುಟ್ಬಾಲಿಗ ಮನಿತೋಂಬಿ ಸಿಂಗ್‌ ನಿಧನ

ಭಾರತದ ಮಾಜಿ ಫ‌ುಟ್ಬಾಲಿಗ ಮನಿತೋಂಬಿ ಸಿಂಗ್‌ ನಿಧನ

ಮಳೆಗೆ ಮತ್ತೆ ಒಡೆದ ವಿಜಯನಗರ ಕಾಲುವೆ ಅತಂತ್ರದಲ್ಲಿ ಭತ್ತದ ನಾಟಿ ಕಾರ್ಯ

ಮಳೆಗೆ ಮತ್ತೆ ಒಡೆದ ವಿಜಯನಗರ ಕಾಲುವೆ: ಅತಂತ್ರದಲ್ಲಿ ಭತ್ತದ ನಾಟಿ ಕಾರ್ಯ

ಸೋಂಕಿತರ ಸಂಖ್ಯೆ 2,603ಕ್ಕೇರಿಕೆ

ಸೋಂಕಿತರ ಸಂಖ್ಯೆ 2,603ಕ್ಕೇರಿಕೆ

hasan-tdy-1

ಕ್ವಿಟ್‌ ಇಂಡಿಯಾ ನೆನಪು ಕಾರ್ಯಕ್ರಮ

ನರಸಾಪುರ ಗ್ರಾಮದ ನಾಲ್ವರಿಗೆ ಕೋವಿಡ್ ಪಾಸಿಟಿವ್‌

ನರಸಾಪುರ ಗ್ರಾಮದ ನಾಲ್ವರಿಗೆ ಕೋವಿಡ್ ಪಾಸಿಟಿವ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.