ಅಮೆಜಾನ್ ನಿಂದ ಸಮ್ಮರ್ ಸೇಲ್‍: ಮೊಬೈಲ್, ಟಿವಿ, ಗೃಹೋಪಯೋಗಿ ಉಪಕರಣ ಕೊಳ್ಳಲು ಸದಾವಕಾಶ

Team Udayavani, May 2, 2022, 3:34 PM IST

ಅಮೆಜಾನ್ ನಿಂದ ಸಮ್ಮರ್ ಸೇಲ್‍: ಮೊಬೈಲ್, ಟಿವಿ, ಗೃಹೋಪಯೋಗಿ ಉಪಕರಣ ಕೊಳ್ಳಲು ಸದಾವಕಾಶ

ಬೆಂಗಳೂರು: ವಿಶೇಷ ಸಂದರ್ಭಗಳಲ್ಲಿ ರಿಯಾಯಿತಿ ಮಾರಾಟದ ಸೇಲ್‍ ಗಳನ್ನು ನಡೆಸಿ ಗ್ರಾಹಕರಿಗೆ ಆಫರ್‍ ಗಳನ್ನು ನೀಡುವ ಅಮೆಜಾನ್‍ ಇಂಡಿಯಾ ಮೇ 04, 2022 ರಿಂದ ‘ಸಮ್ಮರ್ ಸೇಲ್’ ಅನ್ನು ಘೋಷಿಸಿದೆ.

ಈ ಸಮ್ಮರ್ ಸೇಲ್‌ನಲ್ಲಿ, ಒನ್‌ಪ್ಲಸ್‌, ಎಲ್‌ಜಿ, ಇಂಟೆಲ್‌, ಟೆಕ್ನೋ, ಫುಜಿತ್ಸು, ರಿನೀ ಮತ್ತು ಶುಗರ್‌ ಸೇರಿದಂತೆ ಹಲವು ಬ್ರ್ಯಾಂಡ್‌ಗಳಿಂದ ಭಾರಿ ಉಳಿತಾಯವನ್ನು ಗ್ರಾಹಕರು ಪಡೆಯಬಹುದು. ಇದೇ ಮೊದಲ ಬಾರಿಗೆ ಕೌಂಟ್‌ಡೌನ್‌ ಡೀಲ್‌ಗಳನ್ನು ಅಮೆಜಾನ್‌ ಪರಿಚಯಿಸುತ್ತಿದೆ. ಇದು ಎಲ್ಲ ಗ್ರಾಹಕರಿಗೆ ಮುಕ್ತವಾಗಲಿದೆ ಮತ್ತು ಆಯ್ದ ಕೊಡುಗೆಗಳನ್ನು ಮೇ 3 ರ ವರೆಗೆ ವಿಶಾಲ ಉತ್ಪನ್ನಗಳ ಶ್ರೇಣಿಗಳಿಗೆ ಮೊದಲೇ ಆಕ್ಸೆಸ್‌ ನೀಡಲಾಗುತ್ತದೆ. ಈ ಕೊಡುಗೆಗಳು ರಿಯಲ್‌ಮಿ, ಆ್ಯಪಲ್‌, ಸ್ಯಾಮ್‌ಸಂಗ್‌, ಒಪ್ಪೊ, ಬೋಟ್‌, ನಾಯ್ಸ್‌, ಫಾಸಿಲ್‌, ಫಾಸ್ಟ್ರಾಕ್‌, ಟೈಮೆಕ್ಸ್‌, ಅಮೆರಿಕನ್‌ ಟೂರಿಸ್ಟರ್, ಸಫಾರಿ, ಸ್ಕ್ಯಾಬ್ಯಾಗ್ಸ್‌, ಯುರೇಕಾ ಫೋರ್ಬ್ಸ್‌, ಫಿಲಿಪ್ಸ್‌, ಹೀರೋ ಸೈಕಲ್ಸ್‌ ಇತ್ಯಾದಿ ಬ್ರ್ಯಾಂಡ್‌ಗಳಮೇಲೆ ಲಭ್ಯವಿವೆ.

ಐಸಿಐಸಿಐ ಬ್ಯಾಂಕ್‌, ಕೊಟ್ಯಾಕ್ ಮತ್ತು ಆರ್‌ಬಿಎಲ್‌ ಕ್ರೆಡಿಟ್‌/ಡೆಬಿಟ್ ಕಾರ್ಡ್‌ಗಳು, ಕ್ರೆಡಿಟ್/ಡೆಬಿಟ್‌ ಇಎಂಐ ವಹಿವಾಟುಗಳ ಮೇಲೆ ಹೆಚ್ಚುವರಿ 10% ತಕ್ಷಣದ ಬ್ಯಾಂಕ್‌ ರಿಯಾಯಿತಿ ದೊರಕುತ್ತದೆ; ಡೆಬಿಟ್ ಮತ್ತು ಕ್ರೆಡಿಟ್‌ ಕಾರ್ಡ್‌ಗಳ ಮೇಲೆ ನೋ ಕಾಸ್ಟ್‌ ಇಎಂಐ ಮತ್ತು ಬಜಾಜ್‌ ಫಿನ್‌ಸರ್ವ್‌, ಎಕ್ಸ್‌ಚೇಂಜ್‌ ಕೊಡುಗೆಗಳು, ಇತರ ಪ್ರಮುಖ ಕ್ರೆಡಿಟ್‌/ಡೆಬಿಟ್‌ ಕಾರ್ಡ್‌ಗಳ ಮೇಲೆ ಆಕರ್ಷಕ ಕೊಡುಗೆಗಳು ಲಭ್ಯವಿದ್ದು ಗ್ರಾಹಕರು ಹೆಚ್ಚು ಉಳಿತಾಯ ಮಾಡಬಹುದು. ಅಮೆಜಾನ್‌ ಪೇ ಐಸಿಐಸಿಐ ಬ್ಯಾಂಕ್‌ ಕ್ರೆಡಿಟ್ ಕಾರ್ಡ್‌ ಮೂಲಕ ಗ್ರಾಹಕರು ಶಾಪಿಂಗ್‌ ಮೇಲೆ 5% ವರೆಗೆ ಉಳಿತಾಯ ಮಾಡಬಹುದು. ಕಾರ್ಡ್‌ ಹೊಂದಿಲ್ಲದ ಅರ್ಹ ಗ್ರಾಹಕರು ರೂ. 2,000 ವರೆಗೆ ರಿವಾರ್ಡ್‌ಗಳನ್ನು ಪಡೆಯಬಹುದು.

ಗ್ರಾಹಕರಿಗೆ ದೊರಕಲಿರುವ ಆಫರ್ ಗಳು:

ಒನ್‌ಪ್ಲಸ್‌, ಶಿಯೋಮಿ, ಸ್ಯಾಮ್‌ಸಂಗ್‌, ರೆಡ್ಮಿ, ರಿಯಲ್‌ಮಿ, ಐಕ್ಯೂ, ಆ್ಯಪಲ್‌, ಟೆಕ್ನೋ, ಒಪ್ಪೊದಿಂದ 16 ಹೊಸ ಬಿಡುಗಡೆಗಳು

ಇಂಟೆಲ್, ಸ್ಯಾಮ್‌ಸಂಗ್‌, ಆ್ಯಪಲ್‌, ಬೋಟ್‌, ಎಚ್‌ಪಿ, ಸೋನಿ ಸೇರಿದಂತೆ ಅಗ್ರ ಬ್ರ್ಯಾಂಡ್‌ಗಳ ಅಕ್ಸೆಸರಿಗಳು ಮತ್ತು ಎಲೆಕ್ಟ್ರಾನಿಕ್ಸ್‌ ಮೇಲೆ 70% ವರೆಗೆ ರಿಯಾಯಿತಿ

ಎಲ್‌ಜಿ, ಒನ್‌ಪ್ಲಸ್‌, ರೆಡ್ಮಿ, ಸ್ಯಾಮ್‌ಸಂಗ್‌, ಎಂಐ, ಸೋನಿ, ವು ಅಗ್ರ ಬ್ರ್ಯಾಂಡ್‌ಗಳ ಟಿವಿಗಳ ಮೇಲೆ 50% ವರೆಗೆ ರಿಯಾಯಿತಿ

ಅಮೆಜಾನ್ ಫ್ಯಾಷನ್‌ ಮೇಲೆ 70% ವರೆಗೆ ರಿಯಾಯಿತಿ – ಅಲೆನ್ ಸೊಲಿ, ಬಿಬಾ, ಅಡಿಡಾಸ್, ಫಾಸ್‌ಟ್ರ್ಯಾಕ್‌, ಅಮೆರಿಕನ್‌ ಟೂರಿಸ್ಟರ್, ಗಿವಾ, ಫಾಸಿಲ್‌, ಟೈಟನ್‌, ಕ್ಯಾಸಿಯೋ, ಲವೀ, ಬ್ಯಾಗಿಟ್‌, ಹೈಡಿಸೈನ್

ಅಮೆಜಾನ್‌ ಫ್ರೆಶ್‌ನಿಂದ ದಿನಸಿ ಮೇಲೆ 50% ವರೆಗೆ ರಿಯಾಯಿತಿ

ಹ್ಯಾಪಿಲೋ, ಕೋಲ್ಗೇಟ್‌, ಬಿಗ್‌ ಮಸಲ್ಸ್‌, ಪೆಡಿಗ್ರೀ, ಪ್ಯಾಂಪರ್ಸ್‌ ಬ್ರ್ಯಾಂಡ್‌ನ ದೈನಂದಿನ ಅಗತ್ಯ ಸಾಮಗ್ರಿಗಳ ಮೇಲೆ 60% ವರೆಗೆ ರಿಯಾಯಿತಿ

ಮ್ಯಾಗಿ, ಟಾಟಾ ಟೀ, ಕ್ವಾಕರ್, ಹ್ಯಾಪಿಲೋ, ಬೋರ್ಹಸ್‌ ಬ್ರ್ಯಾಂಡ್‌ಗಳ ಆಹಾರ ಮತ್ತು ಪಾನೀಯಗಳ ಮೇಲೆ ಮೇಲೆ 60% ವರೆಗೆ ರಿಯಾಯಿತಿ

ಅಮೆಜಾನ್‌ ಎಕೋ, ಫೈರ್‌ ಟಿವಿ ಮತ್ತು ಕಿಂಡಲ್‌ ಸಾಧನಗಳ ಮೇಲೆ 50% ವರೆಗೆ ರಿಯಾಯಿತಿ

ಸಣ್ಣ ಉದ್ಯಮಗಳಿಗೆ ನೇರ ಮಾರಾಟದ ಸೌಲಭ್ಯ: ಈ ಸಮ್ಮರ್ ಸೇಲ್‌ನಲ್ಲಿ, ಭಾರತದ ಸಣ್ಣ ಮತ್ತು ಮಧ್ಯಮ ಉದ್ಯಮಗಳು, ಭಾರತೀಯ ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುವ ಸ್ಟಾರ್ಟಪ್‌ಗಳು, ನೆರೆಹೊರೆ ಸ್ಟೋರ್‌ಗಳು ಮತ್ತು ಮಹಿಳಾ ಉದ್ಯಮಿಗಳು ಒದಗಿಸುವ ವಿಶಾಲ ಶ್ರೇಣಿಯ ಸಾಮಗ್ರಿಗಳನ್ನು ಗ್ರಾಹಕರು ನೋಡಬಹುದು ಮತ್ತು ಖರೀದಿ ಮಾಡಬಹುದು. ಫ್ಯಾಷನ್‌ ಮತ್ತು ಬ್ಯೂಟಿ ಅಗತ್ಯ ಸಾಮಗ್ರಿಗಳು, ಅಕ್ಸೆಸರಿಗಳು, ಸ್ಮಾರ್ಟ್‌ ವೇರಬಲ್‌ಗಳು, ಕಚೇರಿ ಸಾಮಗ್ರಿಗಳು ಮತ್ತು ಸ್ಟೇಷನರಿಗಳು, ಮನೆ ಮತ್ತು ಅಡುಗೆಮನೆ ಮತ್ತು ಕ್ರೀಡಾ ಉತ್ಪನ್ನಗಳು, ಪೀಠೋಪಕರಣ, ದಿನಸಿ, ಆಟಿಕೆಗಳು ಮತ್ತು ಮಕ್ಕಳ ಆರೈಕೆ ಉತ್ಪನ್ನಗಳು ಸೇರಿದಂತೆ ಇತರ ವಿಭಾಗಗಳಲ್ಲಿ ಭಾರತೀಯ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಾಮಗ್ರಿಗಳನ್ನು ಖರೀದಿ ಮಾಡಿ, ಬೆಂಬಲಿಸಿ. ಹೈಕ್ಸ್‌, ಉಪಾಕರ್ಮ, ಗೋಮೆಕಾನಿಕ್‌, ಹಿಮಾಲಯನ್ ಒರಿಜಿನ್ಸ್‌, ಸತ್‌ಪುರುಷ್‌ ಮತ್ತು ಇತರೆ ಪ್ರಮುಖ ಸಣ್ಣ ಉದ್ಯಮ ಬ್ರ್ಯಾಂಡ್‌ಗಳ ಮೇಲೆ ಕೊಡುಗೆಗಳು ಲಭ್ಯವಿವೆ.

ಬನಾರಸಿ, ಹ್ಯಾಂಡ್‌ ಬ್ಲಾಕ್‌ ಪ್ರಿಂಟಿಂಗ್‌, ಜಮ್‌ದನಿ, ಬಿದಿರು ಕರಕುಶಲ ಸಾಮಗ್ರಿಗಳು, ಮರದ ಕರಕುಶಲ ಸಾಮಗ್ರಿಗಳು ಸೇರಿದಂತೆ ಇನ್ನಿತರ ದೇಶದ ವಿವಿಧ ರಾಜ್ಯಗಳ ಜನಪ್ರಿಯ ಕರಕುಶಲ ಸಂಪ್ರದಾಯದಿಂದ ನೇಕಾರರು ಮತ್ತು ಕಲಾಕಾರರಿಂದ ಉತ್ಪನ್ನಗಳನ್ನು ಗ್ರಾಹಕರು ಖರೀದಿ ಮಾಡಬಹುದು.

ಬ್ಯುಸಿನೆಸ್ ಗ್ರಾಹಕರಿಗೆ ಭಾರಿ ಉಳಿತಾಯ: ಬ್ಯುಸಿನೆಸ್ ಪೂರೈಕೆಗಳು ಮತ್ತು ಸಗಟು ಖರೀದಿಗೆ ಕೂಡ ಭಾರಿ ಉಳಿತಾಯವನ್ನು ಸಮ್ಮರ್ ಸೇಲ್‌ನಲ್ಲಿ ಮಾಡಬಹುದು. ಜಿಎಸ್‌ಟಿ ಇನ್ವಾಯ್ಸ್‌ ಸಹಿತ 28% ವರೆಗೆ ಹೆಚ್ಚುವರಿ ಉಳಿತಾಯ ಮತ್ತು ಬಲ್ಕ್‌ ಖರೀದಿ ರಿಯಾಯಿತಿಗಳೊಂದಿಗೆ 40% ವರೆಗೆ ಹೆಚ್ಚು ಉಳಿತಾಯವನ್ನು ಅಮೆಜಾನ್‌ ಬ್ಯುಸಿನೆಸ್ ಗ್ರಾಹಕರು ಮಾಡಬಹುದು. ಲೆನೊವೊ, ಕ್ಯಾನನ್‌, ಗೋದ್ರೇಜ್‌, ಬೋಟ್‌, ಬಾಷ್‌ ಮತ್ತು ಇತರೆ ಬ್ರ್ಯಾಂಡ್‌ಗಳಿಂದ ಲ್ಯಾಪ್‌ಟಾಪ್‌ಗಳು, ಹೆಡ್‌ಫೋನ್‌ಗಳು, ನೆಟ್‌ವರ್ಕಿಂಗ್ ಸಾಧನಗಳು, ಪಿಸಿ ಕಾಂಪೊನೆಂಟ್‌ಗಳು, ವೈಯಕ್ತಿಕ ಮತ್ತು ವರ್ಕ್‌ಪ್ಲೇಸ್‌ ಸುರಕ್ಷತೆ ಪ್ರಾಡಕ್ಟ್‌ಗಳು, ಪವರ್ ಟೂಲ್‌ಗಳು, ಪೀಠೋಪಕರಣ, ಸ್ಟೇಷನರಿ ಪ್ರಾಡಕ್ಟ್‌ಗಳಂತಹ 10 ಸಾವಿರಕ್ಕೂ ಹೆಚ್ಚು ಪ್ರಾಡಕ್ಟ್‌ಗಳ ಮೇಲೆ ಎಕ್ಸ್‌ಕ್ಲೂಸಿವ್ ಡೀಲ್‌ಗಳನ್ನು ಬ್ಯುಸಿನೆಸ್ ಗ್ರಾಹಕರು ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.

ಟಾಪ್ ನ್ಯೂಸ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

Mahindra XUV 300 ಹೆಸರು ಬದಲು…ಈಗ XUV 3XO; ಏ.29ಕ್ಕೆ ಮಾರುಕಟ್ಟೆಗೆ ಬಿಡುಗಡೆ

Mahindra XUV 300 ಹೆಸರು ಬದಲು…ಈಗ XUV 3XO; ಏ.29ಕ್ಕೆ ಮಾರುಕಟ್ಟೆಗೆ ಬಿಡುಗಡೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.