
ಟಾಟಾದಿಂದ ಐಫೋನ್ ಉತ್ಪಾದನೆ? ವಿಸ್ಟ್ರಾನ್ ಕಾರ್ಪ್ ಜತೆಗೆ ಮಾತುಕತೆ
Team Udayavani, Sep 10, 2022, 8:00 AM IST

ನವದೆಹಲಿ: ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿ ಮಾಡಬೇಕೆಂದು ಹೇಳಿರುವ ಭಾರತದ ಪ್ರಸಿದ್ಧ ಟಾಟಾ ಗ್ರೂಪ್ ಸಂಸ್ಥೆಯು ಭಾರತದಲ್ಲಿ ಆ್ಯಪಲ್ ಸಂಸ್ಥೆಯ ಐಫೋನ್‌ಗಳನ್ನು ತಯಾರಿಸುವ ಚಿಂತನೆ ಹೊಂದಿದೆ.
ಹಾಗಾಗಿ ಅದು ಆ್ಯಪಲ್ ಸಂಸ್ಥೆಗೆ ವಿತರಕರಾಗಿರುವ ತೈವಾನ್ ಮೂಲದ ವಿಸ್ಟ್ರಾನ್ ಕಾರ್ಪ್ ಜತೆ ಮಾತುಕತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಒಂದು ವೇಳೆ ಟಾಟಾ ಸಂಸ್ಥೆಯು ಐಫೋನ್ ಉತ್ಪಾದನೆಯಲ್ಲಿ ತೊಡಗಿಸಿಕೊಂಡರೆ ಐಫೋನ್ ಉತ್ಪಾದನೆಯಲ್ಲಿ ತೊಡಗಿಸಿಕೊಂಡ ಮೊದಲ ಭಾರತೀಯ ಕಂಪನಿ ಎನ್ನುವ ಖ್ಯಾತಿಗೆ ಸಂಸ್ಥೆ ಭಾಗಿಯಾಗಲಿದೆ. ಈಗಾಗಲೇ ವಿದೇಶಿ ಕಂಪನಿಗಳಾದ ಫಾಕ್ಸ್‌ಕಾನ್ ಮತ್ತು ವಿಸ್ಟ್ರಾನ್, ಚೀನ ಹಾಗೂ ಭಾರತದಲ್ಲಿ ಐಫೋನ್‌ಗಳನ್ನು ತಯಾರಿಸುತ್ತಿವೆ.
ಭಾರತದಲ್ಲಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಸಾಧನಗಳ ಉತ್ಪಾದನೆ ಹಾಗೂ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಹಿಡಿತ ಸಾಧಿಸುವುದು ಕಂಪನಿಯ ಗುರಿಯಾಗಿದೆ ಎಂದು ಟಾಟಾ ಗ್ರೂಪ್‌ನ ಅಧ್ಯಕ್ಷರಾಗಿರುವ ನಟರಾಜನ್ ಚಂದ್ರಶೇಖರನ್ ಅವರು ಹೇಳಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸ್ಯಾಮ್ ಸಂಗ್ ಗೆಲಾಕ್ಸಿ ಎ 14 5ಜಿ: ಇದೀಗ ತಾನೇ ಬಿಡುಗಡೆಯಾಗಿರುವ ಈ ಫೋನು ಹೀಗಿದೆ ನೋಡಿ..

ದೇಶದಲ್ಲಿ ಆ್ಯಂಡ್ರಾಯ್ಡ ವ್ಯವಸ್ಥೆ ಬದಲು; ಬದಲಾವಣೆ ಏನು?

ಆರ್ಥಿಕ ಹಿಂಜರಿತದ ಭೀತಿ: ಗೂಗಲ್, ಅಮೆಜಾನ್ ಬಳಿಕ ಐಬಿಎಂನಿಂದ 3,900 ಉದ್ಯೋಗಿಗಳ ವಜಾ

ಮೈಕ್ರೋಸಾಫ್ಟ್ ಸರ್ವರ್ ಡೌನ್ … ಸಮಸ್ಯೆ ಎದುರಿಸಿದ ಭಾರತದ ಔಟ್ ಲುಕ್, MS ಟೀಮ್ಸ್ ಬಳಕೆದಾರರು!

ಸ್ಟೆಲ್ಲಾ ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಬೈಕ್ ಮಾರುಕಟ್ಟೆಗೆ
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
