ಹುವಾವೇ ಗೆ ತಲ್ಲಣ ಮೂಡಿಸಿದ ಅಮೆರಿಕಾ ನಿರ್ಧಾರ


Team Udayavani, May 29, 2019, 11:40 AM IST

Mobile-seeme-huawei-banned

ಚೀನಾದ ದೈತ್ಯ ಕಂಪೆನಿ ಹುವಾವೇ ಉತ್ಪನ್ನಗಳಿಗೆ ಅಮೆರಿಕಾ ಕಂಪೆನಿಗಳು ನೀಡುತ್ತಿರುವ ತಾಂತ್ರಿಕ ನೆರವನ್ನು ನಿಲ್ಲಿಸಬೇಕು ಎಂದು ‌ ಡೊನಾಲ್ಡ್‌ ಟ್ರಂಪ್‌ ಸರ್ಕಾರ ಆದೇಶಿಸಿದೆ. ಇದರ ಪ್ರಕಾರ ಹುವಾವೇ ಜೊತೆ ಅಮೆರಿಕಾ ಕಂಪೆನಿಗಳುಯಾವುದೇ ಸಂಬಂಧ ಇಟ್ಟುಕೊಳ್ಳುವಂತಿಲ್ಲ.

ಅಮೆರಿಕದ ಟ್ರಂಪ್‌ ಸರ್ಕಾರ ಹೊರಡಿಸಿರುವ ಹೊಸ ಆದೇಶವೊಂದು ಮೊಬೈಲ್‌ ಫೋನ್‌ ಕ್ಷೇತ್ರದಲ್ಲಿ ಅತ್ಯಂತ ಪ್ರಮುಖ ಸುದ್ದಿಯಾಗಿ ಎಲ್ಲೆಡೆ ಹರಿದಾಡುತ್ತಿದೆ. ಅಮೆರಿಕದ ಈ ನಿರ್ಧಾರ ಅಮೇರಿಕೇತರ ಕಂಪೆನಿಗಳು ತಮ್ಮ ನಡೆಯನ್ನು ಪುನರ್‌ಪರಿಶೀಲಿಸಿಕೊಳ್ಳುವಂತೆ ಮಾಡಿದೆ. ತಮ್ಮ ಉತ್ಪನ್ನಗಳಿಗೆ ಅಮೆರಿಕವನ್ನು ಅವಲಂಬಿಸಿದರೆ ಮುಂದೊಂದು ದಿನ ನಮಗೂ ಇದೇ ಗತಿ ಬಂದೊದಗಬಹುದು ಎಂದು ಅಮೇರಿಕೇತರ ಕಂಪೆನಿಗಳು ಯೋಚಿಸುವಂತಾಗಿದೆ.

ಅದೇನೆಂದು ಗ್ಯಾಜೆಟ್‌ಗಳ ಬಗ್ಗೆ ಆಸಕ್ತಿಯಿರುವ ಅನೇಕರಿಗೆ ಈಗಾಗಲೇ ಗೊತ್ತಿರಲಿಕ್ಕೂ ಸಾಕು. ಚೀನಾದ ದೈತ್ಯ ಕಂಪೆನಿ ಹುವಾವೇ ಉತ್ಪನ್ನಗಳಿಗೆ ಅಮೆರಿಕಾ ಕಂಪೆನಿಗಳು ನೀಡುತ್ತಿರುವ ತಾಂತ್ರಿಕ ನೆರವನ್ನು ನಿಲ್ಲಿಸಬೇಕು ಎಂದು ಡೊನಾಲ್ಡ್‌ ಟ್ರಂಪ್‌ ಸರ್ಕಾರ ಆದೇಶಿಸಿದೆ. ಇದರ ಪ್ರಕಾರ ಹುವಾವೇ ಕಂಪೆನಿ ಅಮೆರಿಕಾ ಜೊತೆ ಯಾವುದೇ ವ್ಯವಹಾರ ನಡೆಸುವಂತಿಲ್ಲ. ಮತ್ತು ಅಮೆರಿಕಾ ಕಂಪೆನಿಗಳು ಹುವಾವೇ ಜೊತೆ ಯಾವುದೇ ಸಂಬಂಧ ಇಟ್ಟುಕೊಳ್ಳುವಂತಿಲ್ಲ.

ಅಮೆರಿಕಾ ಮತ್ತು ಚೀನಾ ಸರ್ಕಾರಗಳ ನಡುವಿನ ಮುಸುಕಿನ ಗುದ್ದಾಟ ಚೀನಾದ ಕಂಪೆನಿಗಳ ಮೇಲೆ ಅಮೆರಿಕಾ ಕೆಂಗಣ್ಣಿಗೆ ಕಾರಣವಾಗಿದೆ É. ಪ್ರಪಂಚದ ಸ್ಮಾರ್ಟ್‌ಫೋನ್‌ ಮಾರಾಟದಲ್ಲಿ ಎರಡನೇ ಸ್ಥಾನದಲ್ಲಿರುವ ಹುವಾವೇ ಕಂಪೆನಿಯ ಸ್ಮಾರ್ಟ್‌ಫೋನ್‌ ಮಾರಾಟಕ್ಕೆ ಇದುವರೆಗೂ ಅಮೆರಿಕಾ ಅನುಮತಿ ನೀಡಿಲ್ಲ. ಹೀಗಾಗಿ ಹುವಾವೇ ಅಮೆರಿಕಾ ಹೊರತುಪಡಿಸಿ ಇನ್ನಿತರ ದೇಶಗಳಲ್ಲಿ ತನ್ನ ಮೊಬೈಲ್‌ಗ‌ಳನ್ನು ಮಾರಾಟ ಮಾಡುತ್ತಿದೆ. ಅಮೆರಿಕಾದಲ್ಲಿ ಮಾರಾಟ ನಿಷೇಧವಾಗಿದ್ದಾಗ್ಯೂ ಇನ್ನಿತರ ದೇಶಗಳನ್ನಷ್ಟೇ ಅವಲಂಬಿಸಿ ಎರಡನೇ ಸ್ಥಾನಕ್ಕೇರಿದೆ. ಮೊದಲ ಸ್ಥಾನದಲ್ಲಿರುವ ಸ್ಯಾಮ್‌ ಸಂಗ್‌ ಹಾಗೂ ಹುವಾವೆಯ ಮಾರಾಟ ಪ್ರಮಾಣದಲ್ಲಿ ಇನ್ನು ಶೇ. 4ರಷ್ಟು ಮಾತ್ರ ಅಂತರವಿದೆ. ಕಳೆದ ವರ್ಷ ಎರಡನೇ ಸ್ಥಾನದಲ್ಲಿದ್ದ ಅಮೆರಿಕಾದ ಆಪಲ್‌ ಕಂಪೆನಿಯನ್ನು ಹಿಂದಿಕ್ಕಿ, ಈಗ ಪ್ರಥಮ ಸ್ಥಾನಕ್ಕೆ ದಾಪುಗಾಲು ಹಾಕಲು ಹುವಾವೇ ಯತ್ನಿಸುತ್ತಿದೆ. ಇಂಥ ಸನ್ನಿವೇಶದಲ್ಲಿ ಟ್ರಂಪ್‌ ಸರ್ಕಾರ ತನ್ನ ದೇಶದಲ್ಲಿ ಮಾರಾಟ ಮಾಡಲು ಅವಕಾಶ ನೀಡದೇ ಇರುವುದರ ಜೊತೆಗೆ ದೊಡ್ಡ ಬಾಂಬ್‌ ಅನ್ನೇ ಹುವಾವೇ ಮೇಲೆ ಹಾಕಿದೆ.

ಹುವಾವೇ ಸೇರಿದಂತೆ ಎಲ್ಲ ಅಂಡ್ರಾಯ್ಡ ಮೊಬೈಲ್‌ಗ‌ಳೂ ಬಳಸುತ್ತಿರುವುದು ಗೂಗಲ್‌ ಕಾರ್ಯಾಚರಣಾ ವ್ಯವಸ್ಥೆಯನ್ನು. ಗೂಗಲ್‌ ಅಮೆರಿಕಾ ಕಂಪೆನಿ. ಅಮೆರಿಕಾ ಸರ್ಕಾರದ ಆದೇಶವನ್ನು ಗೂಗಲ್‌ ಪಾಲಿಸಲೇಬೇಕಾಗಿದೆ. ಹೀಗಾಗಿ ಗೂಗಲ್‌ ತನ್ನ ಸಾಫ್ಟ್ವೇರ್‌ ಲೈಸೆನ್ಸ್‌ ಅನ್ನು ಹುವಾವೇಗೆ ನೀಡುವಂತಿಲ್ಲ. ಇದರಿಂದಾಗಿ ಹುವಾವೇ ಮೊಬೈಲ್‌ಗ‌ಳಲ್ಲಿ ಗೂಗಲ್‌ನ ಉತ್ಪನ್ನಗಳಾದ ಪ್ಲೇಸ್ಟೋರ್‌, ಯೂಟ್ಯೂಬ್‌, ಜಿಮೇಲ್‌ ಇತ್ಯಾದಿ ಇರುವಂತಿಲ್ಲ! ಆದರೆ ಈಗಾಗಲೇ ತಯಾರಾಗಿ ಲೈಸೆನ್ಸ್‌ ಪಡೆದಿರುವ ಹುವಾವೇ ಆನರ್‌ ಮೊಬೈಲ್‌ ಫೋನ್‌ಗಳಿಗೆ ಗೂಗಲ್‌ ಅಪ್‌ಡೇಟ್‌ ನೀಡಬಹುದು. ಹಾಗೆಯೇ ಮೊಬೈಲ್‌ ಫೋನ್‌ಗಳಲ್ಲಿ ಬಹುಮುಖ್ಯ ಬಿಡಿಭಾಗವಾದ ಸ್ನಾಪ್‌ಡ್ರಾಗನ್‌ ಪ್ರೊಸೆಸರ್‌ ಅನ್ನು ಹುವಾವೇಗೆ ನೀಡುವಂತಿಲ್ಲ. (ಹುವಾವೇ ಈಗಾಗಲೇ ತನ್ನದೇ ಸ್ವತಂತ್ರ ಕಿರಿನ್‌ ಪ್ರೊಸೆಸರ್‌ ಬಳಸುತ್ತಿದೆ)

ಯಾಕೀ ಬ್ಯಾನ್‌ ಘೋಷಣೆ?: ಹುವಾವೇ ಉತ್ಪನ್ನಗಳಲ್ಲಿ ಅಮೆರಿಕಾದ ರಾಷ್ಟ್ರೀಯ ಭದ್ರತೆಗೆ ಅಪಾಯ ಉಂಟು ಮಾಡುವ ಅಂಶಗಳಿವೆ. ಬಳಕೆದಾರರ ಮಾಹಿತಿ ಸೋರಿಕೆಯಾಗಬಹುದಾಗಿದೆ ಎಂಬ ಆತಂಕ ಅಮೆರಿಕಾ ಸರ್ಕಾರದ್ದು. ಹೀಗಾಗಿಯೇ ಹುವಾವೇ ಫೋನ್‌ಗಳ ಮಾರಾಟಕ್ಕೆ ಅಮೆರಿಕಾದಲ್ಲಿ ಅವಕಾಶ ನೀಡಿಲ್ಲ.

ಅಮೆರಿಕಾದ ಆತಂಕಕ್ಕೆ ಕಾರಣ?: ಅಮೆರಿಕಾದ ಈ ಆದೇಶದಲ್ಲಿ ಅಡಗಿರುವುದು ಪಕ್ಕಾ ವಾಣಿಜ್ಯ ಉದ್ದೇಶ ಎಂಬುದು ಅಮೆರಿಕಾ ಬಲ್ಲವರಿಗೆ ಗೊತ್ತು. ಹುವಾವೇ ಕಂಪೆನಿ ಕೇವಲ ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸುತ್ತಿಲ್ಲ. ಇಡೀ ಮೊಬೈಲ್‌ ಫೋನ್‌ ತಾಂತ್ರಿಕತೆಗೆ ಮೂಲಬೇರಾದ ನೆಟ್‌ವರ್ಕಿಂಗ್‌ನಲ್ಲಿ ಹುವಾವೇ ಪ್ರಮುಖ ಸ್ಥಾನ ಪಡೆದಿದೆ. ಮೊಬೈಲ್‌ ಫೋನ್‌ ತಂತ್ರಜ್ಞಾನಕ್ಕೆ ಮೂಲ ತರಂಗಾಂತರಗಳು. ಆ ತರಂಗಾಂತರ ತಂತ್ರಜ್ಞಾನ, ಬೇಸ್‌ಸ್ಟೇಷನ್‌ (ಟವರ್‌ ಅಂತೀವಲ್ಲ ಅದು) ವ್ಯವಹಾರದಲ್ಲಿ ಜಗತ್ತಿನಲ್ಲಿ ಇರೋದು ಮೂರೇ ಕಂಪೆನಿಗಳು. 1. ನೋಕಿಯಾ 2. ಎರಿಕ್‌ಸನ್‌ 3. ಹುವಾವೇ.

ಈಗ 5ಜಿ ತಂತ್ರಜ್ಞಾನ ಜಗತ್ತಿನೆಲ್ಲೆಡೆ ದಾಪುಗಾಲಿಡಲು ಬರುತ್ತಿದೆ. 5ಜಿಯಲ್ಲಿ ಹುವಾವೇ ನೋಕಿಯಾ, ಎರಿಕ್ಸನ್‌ಗಿಂತಲೂ ಮುಂದಿದೆ. ಜಗತ್ತಿನ ಅನೇಕ ದೇಶಗಳು (ಭಾರತ ಸೇರಿದಂತೆ) ತಮ್ಮ ದೇಶದ 5ಜಿ ತಂತ್ರಜ್ಞಾನ ಒದಗಿಸಲು ಹುವಾವೇ ಜೊತೆ ಒಪ್ಪಂದ ಮಾಡಿಕೊಂಡಿವೆ. ಇದಕ್ಕೆ ಕಾರಣ ಹುವಾವೇ ನೋಕಿಯಾ ಮತ್ತು ಎರಿಕ್ಸನ್‌ಗಿಂತ ಕಡಿಮೆ ವೆಚ್ಚದಲ್ಲಿ ತಂತ್ರಜ್ಞಾನ ಒದಗಿಸಲು ಸಿದ್ಧವಾಗಿರುವುದು. ಹೀಗೆ ಹುವಾವೇ, ನೆಟ್‌ವರ್ಕ್‌ ಕ್ಷೇತ್ರದಲ್ಲಿ ಜಗತ್ತಿನಾದ್ಯಂತ ದೈತ್ಯನಾಗಿ ಬೆಳೆದರೆ, ಅಮೆರಿಕಾ ಕಂಪೆನಿಗಳಿಗೂ ಸೆಡ್ಡು ಹೊಡೆದರೆ ಗತಿಯೇನು? ಇದರಿಂದಾಗಿ ಚೀನಾದ ಕಂಪೆನಿಯೊಂದು ಆರ್ಥಿಕವಾಗಿ ಬೆಳೆದರೆ ತಮಗೇ ತೊಂದರೆ ಎಂಬುದು ಅಮೆರಿಕಾ ಆತಂಕ ತನ್ನ ಫೋನ್‌ಗಳಲ್ಲಾಗಲೀ, ಇತರ ಉತ್ಪನ್ನಗಳಲ್ಲಾಗಲೀ ಅಮೆರಿಕಾದ ಭದ್ರತೆಗೆ ತೊಂದರೆಯುಂಟಾಗುವ ಅಂಶಗಳಿದ್ದರೆ ಅದನ್ನು ಸಾಬೀತು ಮಾಡಲಿ ಎಂಬುದು ಹುವಾವೇ ವಾದ. ತನ್ನ ಮೊಬೈಲ್‌ ಫೋನ್‌ ಸಾಫ್ಟ್ವೇರ್‌ನ ಸಂಪೂರ್ಣ ಸೋರ್ಸ್‌ ಕೋಡನ್ನು ಅಮೆರಿಕಾದ ಮಾಧ್ಯಮಗಳಿಗೆ ನೀಡುವುದಾಗಿಯೂ, ಅಮೆರಿಕಾದ ಯಾವುದೇ ಮಾಧ್ಯಮ ಒಂದು ವೇದಿಕೆಯಲ್ಲಿ ಇದನ್ನು ಪರಿಶೀಲಿಸಿ, ಭದ್ರತೆಗೆ ಅಪಾಯವುಂಟಾಗುವ ಅಂಶಗಳನ್ನು ಪತ್ತೆ ಮಾಡಬಹುದು, ಈ ಬಗ್ಗೆ ಚರ್ಚೆಗೆ ಸಿದ್ಧ ಎಂದು ಹುವಾವೇ ಆಹ್ವಾನ ನೀಡಿತ್ತು.

ಮುಂದ??: ಹುವಾವೇ ಮೇಲಿನ ತನ್ನ ಆದೇಶವನ್ನು ಅಮೆರಿಕಾ ಹಿಂತೆಗೆದುಕೊಳ್ಳದಿದ್ದರೆ ಏನಾಗಬಹುದು? ಈಗಿರುವ ಹುವಾವೇ ಆನರ್‌ ಫೋನ್‌ ಬಳಕೆದಾರರಿಗೆ ಯಾವುದೇ ಆತಂಕವಿಲ್ಲ. ಮುಂದೆ ತಯಾರಾಗುವ ಹುವಾವೇ-ಆನರ್‌ ಫೋನ್‌ಗಳು ಅಂಡ್ರಾಯ್ಡ ಆಪರೇಟಿಂಗ್‌ ಸಿಸ್ಟಂ ಬಳಸಲಾಗುವುದಿಲ್ಲ. ಅದರಲ್ಲಿ ಗೂಗಲ್‌ ಪ್ಲೇ ಸ್ಟೋರ್‌ ಇರುವುದಿಲ್ಲ. ಯೂಟ್ಯೂಬ್‌ ಬರುವುದಿಲ್ಲ, ಜಿಮೇಲ್‌ ಆ್ಯಪ್‌ ಇರಲ್ಲ. ಸ್ನಾಪ್‌ಡ್ರಾಗನ್‌ ಪ್ರೊಸೆಸರ್‌ ಹಾಕುವ ಹಾಗಿಲ್ಲ ಇತ್ಯಾದಿ.
ಅಮೆರಿಕಾ ಕಂಪೆನಿಗಳನ್ನು ನಂಬಿಕೊಂಡರೆ ಮುಂದೊಂದು ದಿನ ಕೈಗೊಡಬಹುದು ಎಂದು ಹುವಾವೇ ಬಹಳ ಹಿಂದೆಯೇ ಎಚ್ಚೆತ್ತುಕೊಂಡಿದೆ. ಈಗಾಗಲೇ ತನ್ನ ಎಲ್ಲ ಫೋನ್‌ಗಳಲ್ಲಿ ತನ್ನದೇ ಸ್ವಂತ ತಯಾರಿಕೆಯಾದ ಹೈಸಿಲಿಕಾನ್‌ ಕಿರಿನ್‌ ಪ್ರೊಸೆಸರ್‌ಗಳನ್ನು ಬಳಸುತ್ತಿದೆ ಮತ್ತವು ಯಶಸ್ವಿಯಾಗಿವೆ. ಇನ್ನು ಅಂಡ್ರಾಯ್ಡ ಓಎಸ್‌ಗೆ ಪರ್ಯಾಯವಾಗಿ ತನ್ನದೇ ಹೋಂಗ್‌ಮೆಂಗ್‌ ಓಎಸ್‌ ಅನ್ನು ಅಭಿವೃದ್ಧಿಪಡಿಸುತ್ತಿದೆ. ಇದು ಪ್ಲಾನ್‌ ಬಿ ಅಷ್ಟೇ. (ಅಮೆರಿಕಾ ಜೊತೆ ಸಂಧಾನ ನಡೆಸಿ ಮತ್ತೆ ಗೂಗಲ್‌ ಲೈಸೆನ್ಸ್‌ ಪಡೆಯುವ ಸಾಧ್ಯತೆಯೂ ಇದೆ.)

ಆದರೆ ಪ್ಲೇಸ್ಟೋರ್‌ ನದೇ ಹುವಾವೇಗೆ ಸಮಸ್ಯೆಯಾಗಬಹುದು. ಈಗಾಗಲೇ ಹುವಾವೇ ಫೋನ್‌ಗಳಲ್ಲಿ ಪ್ಲೇಸ್ಟೋರ್‌ ಜೊತೆ ಆ್ಯಪ್‌ ಗ್ಯಾಲರಿ ಎಂಬ ಪರ್ಯಾಯ ಇದೆ. ಗ್ರಾಹಕರು ಅಲ್ಲಿಂದಲೂ ಆಪ್‌ಗ್ಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಆದರೆ ಗೂಗಲ್‌ ಪ್ಲೇ ಸ್ಟೋರ್‌ ದೈತ್ಯವಾಗಿ ಬೆಳೆದಿದ್ದು, ಅದರಲ್ಲಿ ದೊರಕುವಷ್ಟು ಆ್ಯಪ್‌ಗ್ಳು ದೊರಕಲಾರವು.

ಉಳಿದ ಕಂಪೆನಿಗಳಿಗೂ ಆತಂಕ: ಅಮೆರಿಕಾದ ಈ ನಿರ್ಧಾರ ಕೇವಲ ಹುವಾವೇಗಷ್ಟೇ ತಲೆನೋವಾಗಿಲ್ಲ. ಚೀನಾದ ಒಪ್ಪೋ,ಒನ್‌ಪ್ಲಸ್‌, ಶಿಯೋಮಿ ಜೊತೆಗೆ ಸ್ಯಾಮ್‌ಸಂಗ್‌ ಗೂ ಆತಂಕ ಮೂಡಿಸಿರಲಿಕ್ಕೂ ಸಾಕು. ಹೀಗಾಗಿಯೇ ಸ್ಯಾಮ್‌ಸಂಗ್‌ ತನ್ನದೇ ಟೈಜನ್‌ ಓಎಸ್‌ ಸೃಷ್ಟಿ ಮಾಡಿತ್ತು. ಹುವಾವೇಗೆ ತನ್ನದೇ ಕಿರಿನ್‌ ಪ್ರೊಸೆಸರ್‌ ಇದೆ. ಸ್ಯಾಮ್‌ಸಂಗ್‌ ಕೂಡ ತನ್ನದೇ ಎಕ್ಸಿನಾಸ್‌ ಪ್ರೊಸೆಸರ್‌ ಬಳಸುತ್ತಿದೆ. ಒನ್‌ಪ್ಲಸ್‌, ಶಿಯೋಮಿ ಅಮೆರಿಕಾದ ಸ್ನಾಪ್‌ಡ್ರಾಗನ್‌ ಅನ್ನೇ ನೆಚ್ಚಿಕೊಂಡಿವೆ. ನಿನ್ನೆ ಝಡ್‌ಟಿಇ, ಇಂದು ಹುವಾವೇ, ಮುಂದೊಂದು ದಿನ ಅಮೆರಿಕಾ ಸರ್ಕಾರ ಚೀನಾದ ಯಾವುದೇ ಕಂಪೆನಿಗೂ ಅಮೆರಿಕಾ ಜೊತೆ ವ್ಯವಹಾರ ರದ್ದು ಪಡಿಸುವ ನಿಲುವು ತೆಗೆದುಕೊಂಡರೆ?!

ಮೂರು ತಿಂಗಳ ತಾತ್ಕಾಲಿಕ ನಿರಾಳ: ತನ್ನ ಆದೇಶ ಹೊರಬಿದ್ದ ಕೆಲವೇ ಗಂಟೆಗಳಲ್ಲಿ ಮತ್ತೆ, ಅಮೆರಿಕಾ ಸರ್ಕಾರ ತನ್ನ ಈ ಆದೇಶವನ್ನು ತಾತ್ಕಾಲಿಕವಾಗಿ ಮೂರು ತಿಂಗಳವರೆಗೆ ತಡೆ ಹಿಡಿದಿರುವುದಾಗಿ ಪ್ರಕಟಿಸಿದೆ. ಈ ಮೂರು ತಿಂಗಳ ಅವಧಿಯಲ್ಲಿ ಏನಾಗುತ್ತದೋ ಗೊತ್ತಿಲ್ಲ.

-ಕೆ.ಎಸ್‌. ಬನಶಂಕರ ಆರಾಧ್ಯ

ಟಾಪ್ ನ್ಯೂಸ್

1947ರ ಸ್ವಾತಂತ್ರ್ಯೋತ್ಸವದಲ್ಲಿ ಆರೋಹಣಗೊಂಡ ರಾಷ್ಟ್ರಧ್ವಜ ಕಲ್ಮಾಡಿ ಮನೆಯಲ್ಲಿ ಇಂದಿಗೂ ಸುರಕ್ಷಿತ

1947ರ ಸ್ವಾತಂತ್ರ್ಯೋತ್ಸವದಲ್ಲಿ ಆರೋಹಣಗೊಂಡ ರಾಷ್ಟ್ರಧ್ವಜ ಕಲ್ಮಾಡಿ ಮನೆಯಲ್ಲಿ ಸುರಕ್ಷಿತ

ಸ್ವಾತಂತ್ರ್ಯ ದಿನಾಚರಣೆ: ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಚಾಮರಾಜಪೇಟೆ ಮೈದಾನ

ಸ್ವಾತಂತ್ರ್ಯ ದಿನಾಚರಣೆ: ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಚಾಮರಾಜಪೇಟೆ ಮೈದಾನ

ಅಮರಸುಳ್ಯ ದಂಗೆ ದೇಶದ ಮೊದಲ ಸ್ವಾತಂತ್ರ್ಯ ಸಂಗ್ರಾಮ

ಅಮರಸುಳ್ಯ ದಂಗೆ ದೇಶದ ಮೊದಲ ಸ್ವಾತಂತ್ರ್ಯ ಸಂಗ್ರಾಮ

ಕೊಡಗು, ದ.ಕ. ಗಡಿಯಲ್ಲಿ ಮತ್ತೆ ಭೂ ಕಂಪನ ಅನುಭವ

ಕೊಡಗು, ದ.ಕ. ಗಡಿಯಲ್ಲಿ ಮತ್ತೆ ಭೂ ಕಂಪನ ಅನುಭವ

ಗಂಗಾವತಿ ಭಾಗದಲ್ಲಿ ನಡೆಯಿತು ಎರಡು ಸ್ವಾತಂತ್ರ್ಯ ಹೋರಾಟ

ಗಂಗಾವತಿ ಭಾಗದಲ್ಲಿ ನಡೆಯಿತು ಎರಡು ಸ್ವಾತಂತ್ರ್ಯ ಹೋರಾಟ

ತ್ಯಾಗ, ಬಲಿದಾನ, ನಿರಂತರ ಹೋರಾಟದ ಫಲವಾಗಿ ಭಾರತಕ್ಕೆ ಸ್ವಾತಂತ್ರ್ಯ ದಕ್ಕಿದೆ : ಪ್ರಧಾನಿ ಮೋದಿ

ಮುಂದಿನ ಪೀಳಿಗೆಗಾಗಿ ನವಭಾರತದ ನಿರ್ಮಾಣ :ಕೆಂಪುಕೋಟೆಯಲ್ಲಿ ದೇಶವನ್ನುದ್ದೇಶಿಸಿ ಪ್ರಧಾನಿ ಭಾಷಣ

ಆ. 18ರಿಂದ ಕರಾವಳಿಯ 15 ಥಿಯೇಟರ್‌ನಲ್ಲಿ “ಅಬತರ’ ತುಳು ಸಿನೆಮಾ ತೆರೆಗೆ

ಆ. 18ರಿಂದ ಕರಾವಳಿಯ 15 ಥಿಯೇಟರ್‌ನಲ್ಲಿ “ಅಬತರ’ ತುಳು ಸಿನೆಮಾ ತೆರೆಗೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಮಂಗಳೂರು: ಕುದ್ರೋಳಿಯಲ್ಲಿ 900 ಕೆ.ಜಿ ಧವಸ ಧಾನ್ಯದಿಂದ ತಿರಂಗಾ ಕಲಾಕೃತಿ ರಚನೆ |

udayavani youtube

ಮರೆತುಹೋದ ಅಗೆಲು ಸೇವೆಯ ಪ್ರಸಾದದ ಊಟ ಮೂರು ದಿನವಾದ್ರೂ ಹಾಳಾಗಿರಲಿಲ್ಲ.. |ಕೊರಗಜ್ಜ ಸ್ವಾಮಿ

udayavani youtube

ಷೇರು ಮಾರುಕಟ್ಟೆ ದಿಗ್ಗಜ ರಾಕೇಶ್ ಜುಂಜುನ್‌ವಾಲಾ ಇನ್ನಿಲ್ಲ

udayavani youtube

ಉಬ್ಬು ಶಿಲ್ಪದಲ್ಲಿ ಅರಳಿದೆ ಅಮರ ಸುಳ್ಯ ಕ್ರಾಂತಿಯ ಚರಿತ್ರೆ

udayavani youtube

ಕಬ್ಬಿನಾಲೆ ಫಾಲ್ಸ್.. ಇದು ಹೆಬ್ರಿಯ ನಿಗೂಢ ಜಲಪಾತ!

ಹೊಸ ಸೇರ್ಪಡೆ

1947ರ ಸ್ವಾತಂತ್ರ್ಯೋತ್ಸವದಲ್ಲಿ ಆರೋಹಣಗೊಂಡ ರಾಷ್ಟ್ರಧ್ವಜ ಕಲ್ಮಾಡಿ ಮನೆಯಲ್ಲಿ ಇಂದಿಗೂ ಸುರಕ್ಷಿತ

1947ರ ಸ್ವಾತಂತ್ರ್ಯೋತ್ಸವದಲ್ಲಿ ಆರೋಹಣಗೊಂಡ ರಾಷ್ಟ್ರಧ್ವಜ ಕಲ್ಮಾಡಿ ಮನೆಯಲ್ಲಿ ಸುರಕ್ಷಿತ

ಸ್ವಾತಂತ್ರ್ಯ ದಿನಾಚರಣೆ: ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಚಾಮರಾಜಪೇಟೆ ಮೈದಾನ

ಸ್ವಾತಂತ್ರ್ಯ ದಿನಾಚರಣೆ: ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಚಾಮರಾಜಪೇಟೆ ಮೈದಾನ

ಮೂಲ್ಕಿ-ಮೂಡುಬಿದಿರೆ 30 ಕಿ.ಮೀ. ತಿರಂಗಾ ಯಾತ್ರೆ ಸಂಪನ್ನ : 100 ಮೀ. ಉದ್ದದ ಧ್ವಜ ಬಳಕೆ

ಮೂಲ್ಕಿ-ಮೂಡುಬಿದಿರೆ 30 ಕಿ.ಮೀ. ತಿರಂಗಾ ಯಾತ್ರೆ ಸಂಪನ್ನ : 100 ಮೀ. ಉದ್ದದ ಧ್ವಜ ಬಳಕೆ

ಅಮರಸುಳ್ಯ ದಂಗೆ ದೇಶದ ಮೊದಲ ಸ್ವಾತಂತ್ರ್ಯ ಸಂಗ್ರಾಮ

ಅಮರಸುಳ್ಯ ದಂಗೆ ದೇಶದ ಮೊದಲ ಸ್ವಾತಂತ್ರ್ಯ ಸಂಗ್ರಾಮ

ಕೊಡಗು, ದ.ಕ. ಗಡಿಯಲ್ಲಿ ಮತ್ತೆ ಭೂ ಕಂಪನ ಅನುಭವ

ಕೊಡಗು, ದ.ಕ. ಗಡಿಯಲ್ಲಿ ಮತ್ತೆ ಭೂ ಕಂಪನ ಅನುಭವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.