ಹೊಸ ವರ್ಷದ ಮೊದಲ ದಿನದಿಂದಲೇ ಕಾರುಗಳ ಬೆಲೆ ಏರಿಕೆ
Team Udayavani, Dec 8, 2022, 8:30 AM IST
ಹೊಸದಿಲ್ಲಿ: ಜನವರಿಯಿಂದ ಕಾರುಗಳ ಬೆಲೆಯಲ್ಲಿ ಕೊಂಚ ಏರಿಕೆಯಾಗಲಿದೆ ಎಂದುಮರ್ಸಿಡಿಸ್-ಬೆನ್ಜ್, ಆಡಿ, ರಿನಾಲ್ಟ್, ಕಿಯಾ ಇಂಡಿಯಾ ಮತ್ತು ಎಂಜಿ ಮೋಟರ್ ಕಂಪೆನಿಗಳು ಬುಧವಾರ ಘೋಷಿಸಿವೆ.
ತಯಾರಿಕ ವೆಚ್ಚ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಕಂಪೆನಿಗಳು ತಿಳಿಸಿವೆ.
ಈಗಾಗಲೇ ಜನವರಿಯಿಂದ ಕಾರುಗಳ ಬೆಲೆಯಲ್ಲಿ ಏರಿಕೆಯಾಗಲಿದೆ ಎಂದು ಮಾರುತಿ ಸುಜುಕಿ ಮತ್ತು ಟಾಟಾ ಮೋಟರ್ ಕೆಲವು ದಿನಗಳ ಹಿಂದೆ ತಿಳಿಸಿತ್ತು.
ಮುಂದಿನ ತಿಂಗಳಿಂದ ಆಡಿ ಕಾರುಗಳ ಬೆಲೆಯಲ್ಲಿ ಶೇ.1.7ರಷ್ಟು, ಮರ್ಸಿಡಿಸ್ ಬೆನ್j ಕಾರುಗಳ ಬೆಲೆಯಲ್ಲಿ ಶೇ.5ರಷ್ಟು, ಕಿಯಾ ಕಾರುಗಳ ಬೆಲೆ 50,000 ರೂ.ಗಳವರೆಗೆ ಏರಿಕೆಯಾಗಲಿದೆ. ಅದೇ ರೀತಿ ಎಂಜಿ ಕಾರುಗಳ ಬೆಲೆಯಲ್ಲಿ ಶೇ.2-3ರಷ್ಟು ಏರಿಕೆಯಾಗಲಿದೆ ಎಂದು ಪ್ರಕಟನೆ ತಿಳಿಸಿದೆ.