ಟಿಕ್ಟಾಕ್ಗೆ ಅಧಿಕೃತವಾಗಿ ಗುಡ್ಬೈ ಹೇಳಿದ ಸಿಇಒ ಕೆವಿನ್ ಮೇಯರ್ !
Team Udayavani, Aug 28, 2020, 8:39 AM IST
ನ್ಯೂಯಾರ್ಕ್: ಟಿಕ್ಟಾಕ್ ಸಿಇಓ ಕೆವಿನ್ ಮೇಯರ್ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಹೀಗಾಗಿ ಮಧ್ಯಂತರ ಸಿಇಒ ಆಗಿ ಟಿಕ್ಟಾಕ್ ಜನರಲ್ ಮ್ಯಾನೇಜರ್ ವನೆಸ್ಸಾ ಪಪ್ಪಾಸ್ ಅವರನ್ನು ನೇಮಕ ಮಾಡಲಾಗಿದೆ.
ಅಮೆರಿಕದಲ್ಲಿ ಟಿಕ್ಟಾಕ್ ನಿಷೇಧ ಕುರಿತಾದ ಮಾತುಕತೆ ಮತ್ತು ಹಣಕಾಸು ವ್ಯವಹಾರದ ಮೇಲಿನ ನಿರ್ಬಂಧದಿಂದಾಗಿ ಈ ಬೆಳವಣಿಗೆ ಸಂಭವಿಸಿದೆ ಎನ್ನಲಾಗಿದೆ. ಸಿಇಓ ಕೆವಿನ್ ಮೇಯರ್ ಈ ಕುರಿತು ತಮ್ಮ ಕಂಪೆನಿ ಉದ್ಯೋಗಿಗಳಿಗೆ ಪತ್ರ ಬರೆದಿದ್ದು ‘ಇತ್ತೀಚಿನ ಕೆಲ ರಾಜಕೀಯ ಬೆಳವಣಿಗೆ ಮತ್ತು ಸನ್ನಿವೇಶಕ್ಕೆ ಅನುಗುಣವಾಗಿ, ಅಗತ್ಯ ಬದಲಾವಣೆ ಏನು ಬೇಕಾಗಿದೆ ಮತ್ತು ನನ್ನ ಪಾತ್ರವೇನು ಎನ್ನುವುದನ್ನು ನಾನು ನಿರ್ವಹಿಸಿದ್ದೇನೆ. ಜತೆಗೆ ಭಾರವಾದ ಹೃದಯದೊಂದಿಗೆ ಕಂಪನಿ ತೊರೆದು ಹೋಗುತ್ತಿರುವುದಾಗಿ ಕೆವಿನ್ ಹೇಳಿದ್ದಾರೆ.
ಡಿಸ್ನಿಯಲ್ಲಿ ಸುದೀರ್ಘ ಮತ್ತು ಯಶಸ್ವಿ ವೃತ್ತಿಜೀವನದ ನಂತರ ಕಳೆದ ಜೂನ್ನಲ್ಲಿ ಕೆವಿನ್ ಮೇಯರ್ ಟಿಕ್ಟಾಕ್ ಸಿಒಒ ಹುದ್ದೆಯನ್ನು ವಹಿಸಿಕೊಂಡಿದ್ದರು.
ಬೈಟ್ಡ್ಯಾನ್ಸ್ ಸಿಇಒ ಮತ್ತು ಸ್ಥಾಪಕ ಯಿಮಿಂಗ್ ಝಾಂಗ್ ಕೂಡ ಪ್ರತ್ಯೇಕ ಪತ್ರ ಬರೆದಿದ್ದು, ಭಾರತ ಮತ್ತು ಅಮೆರಿಕದಲ್ಲಿ ಕಂಪನಿ ಮತ್ತೆ ಕಾರ್ಯನಿರ್ವಹಿಸುವಂತಾಗಲು ಸೂಕ್ತ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MIT: ಮಾ.27ರಿಂದ 31ರವರೆಗೆ ಸೋಲಾರ್ ಎಲೆಕ್ಟ್ರಿಕ್ ವೆಹಿಕಲ್ ಚಾಂಪಿಯನ್ಶಿಪ್
Microsoft Windows ಮುಖ್ಯಸ್ಥರಾಗಿ ಐಐಟಿ ಮದ್ರಾಸ್ ಪದವೀಧರ ಪವನ್ ದಾವುಲೂರಿ
Sony Float Run: ಓಟ, ವಾಕಿಂಗ್, ಜಿಮ್ ಮಾಡುವವರಿಗೆ ವಿನ್ಯಾಸಗೊಳಿಸಿದ ಹೆಡ್ ಫೋನ್
STEAG: ಸೇನೆಯಲ್ಲಿ ಹೈಟೆಕ್ ತಂತ್ರಜ್ಞಾನ ಅಧ್ಯಯನಕ್ಕೆ “ಸ್ಟೀಗ್’ ತಂಡ!
AI; ನಿಮ್ಮ ಮಕ್ಕಳ ‘ಧ್ವನಿ’ ಕೇಳಿ ಮೋಸ ಹೋಗದಿರಿ ಜೋಕೆ!
MUST WATCH
ಹೊಸ ಸೇರ್ಪಡೆ
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ
Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!
Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್ ಮಧ್ವರಾಜ್
Hassan Lok sabha Constituency: ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ