ಟಿಕ್ ಟಾಕ್ ಒಡೆತನದ ಬೈಟೆಡಾನ್ಸ್ ಕಂಪೆನಿಯಿಂದ ಹೊಸ ಸ್ಮಾರ್ಟ್ ಫೋನ್: ಇದರ ವಿಶೇಷತೆಯೇನು ?
Team Udayavani, Nov 3, 2019, 11:54 AM IST
ಜನಪ್ರಿಯ ಟಿಕ್ ಟಾಕ್ ಆ್ಯಪ್ ಕಂಡುಹಿಡಿದ ಬೈಟೆಡಾನ್ಸ್ ಕಂಪೆನಿ ಸ್ಮಾರ್ಟ್ ಫೋನ್ ತಯಾರಿಸುವ ಕುರಿತು ಈ ಹಿಂದೆಯೇ ಸುಳಿವು ನೀಡಿತ್ತು. ಅದರೀಗ ಸ್ಮಾರ್ಟಿಸನ್ ಜಿಯಾಂಗ್ ಪ್ರೊ 3 ಹೆಸರಿನ ಹೊಸ ಸ್ಮಾರ್ಟ್ ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಲು ಸಿದ್ಧತೆ ಮಾಡಿಕೊಂಡಿದೆ ಎಂಬ ಅಧಿಕೃತ ಮಾಹಿತಿ ಲಭ್ಯವಾಗಿದೆ.
ಮೂಲಗಳು ಪ್ರಕಾರ 2020 ರಲ್ಲಿ ಈ ಫೋನ್ ಮಾರುಕಟ್ಟೆಗೆ ಬರಲಿದೆ. ಹಲವು ಹೊಸ ಫೀಚರ್ ಗಳು ಈ ಫೋನ್ ನಲ್ಲಿರಲಿದ್ದು ಗ್ರಾಹಕರ ಮನಗೆಲ್ಲುವಲ್ಲಿ ಯಶಸ್ವಿಯಾಗಲಿದೆ ಎಂದು ತಿಳಿದು ಬಂದಿದೆ.
ಮಾರುಕಟ್ಟೆಗೆ ಬಿಡುಗಡೆಯಾಗಲಿರುವ ಸ್ಮಾರ್ಟಿಸನ್ ಜಿಯಾಂಗು ಪ್ರೋ 3 ಸ್ಮಾರ್ಟ್ ಫೋನ್ ಸ್ನ್ಯಾಪ್ ಡ್ರ್ಯಾಗನ್ 855+ ಎಸ್ ಒಸಿ ಪ್ರೊಸೆಸರ್ ಹೊಂದಿದ್ದು, 4 ಕ್ಯಾಮಾರಗಳನ್ನು ಅಳವಡಿಸಲಾಗಿದೆ. ಜೊತೆಗೆ ಟಿಕ್ ಟಾಕ್ ಆ್ಯಪ್ ಅನ್ನು ಇಲ್ಲಿ ಇನ್ ಬಿಲ್ಟ್ ಆಗಿ ನೀಡಲಾಗಿದೆ. ಮಾತ್ರವಲ್ಲದೆ ಸಿಂಗಲ್ ಸ್ವೈಪ್ ಲಾಕ್ ಆಯ್ಕೆಯನ್ನು ಹೊಂದಿದೆ.
ಸ್ಮಾರ್ಟಿಸನ್ ಜಿಯಾಂಗು ಪ್ರೊ 3 ಬೆಲೆ:
ಈ ಸ್ಮಾರ್ಟ್ ಫೋನ್ ಮೂರು ಕಾನ್ಫಿಗರೇಶನ್ ನಲ್ಲಿ ಲಭ್ಯವಾಗಲಿದ್ದು ಬೆಲೆಗಳಲ್ಲೂ ಏರಿಳಿಗೊಂಡಿದೆ. ಕ್ರಮವಾಗಿ 8ಜಿಬಿ ರ್ಯಾಮ್ + 128 ಜಿಬಿ ಸ್ಟೊರೇಜ್ ಹೊಂದಿರುವ ಸ್ಮಾರ್ಟಿಸನ್ ಜಿಯಾಂಗು ಪ್ರೊ 3 ಬೆಲೆ 29 ಸಾವಿರ ಎಂದು ಅಂದಾಜಿಸಲಾಗಿದೆ.
8ಜಿಬಿ ರ್ಯಾಮ್ + 256 ಸ್ಟೊರೇಜ್ ಹೊಂದಿರುವ ಸ್ಮಾರ್ಟ್ಫೋನ್ ಬೆಲೆ 32 ಸಾವಿರ.
ಹಾಗೂ 12ಜಿಬಿ ರ್ಯಾಮ್ ಮತ್ತು 256ಜಿಬಿ ಸ್ಟೊರೇಜ್ ಹೊಂದಿರುವ ಸ್ಮಾರ್ಟಿಸನ್ ಜಿಯಾಂಗು ಪ್ರೊ 3 ಬೆಲೆ 36 ಸಾವಿರ ಎಂದು ಅಂದಾಜಿಸಲಾಗಿದೆ.
ಸ್ಮಾರ್ಟಿಸನ್ ಜಿಯಾಂಗು ಪ್ರೊ 3 ವಿಶೇಷತೆ:
ಸ್ಮಾರ್ಟಿಸನ್ ಜಿಯಾಂಗು ಪ್ರೊ 3 ಎರಡು ಸಿಮ್ ಸ್ಲಾಟ್ (ನ್ಯಾನೋ ಸಿಮ್ ), ಸ್ಮಾರ್ಟ್ಫೋನ್ 6.39 ಇಂಚಿನ ಫುಲ್ ಹೆಚ್ಡಿ+ ಅಮೋಲ್ಡ್ ಡಿಸ್ಪ್ಲೇ ನೀಡಲಾಗಿದೆ. ಸ್ನಾಪ್ಡ್ರ್ಯಾಗನ್ 855+ ಎಸ್ಒಸಿ ಪ್ರೊಸೆಸರ್ನಿಂದ ಕಾರ್ಯ ನಿರ್ವಹಿಸಲಿದೆ. ಗ್ರಾಹಕರಿಗಾಗಿ 8GB RAM + 128GB ಸ್ಟೊರೇಜ್ ಆಯ್ಕೆಯಲ್ಲಿ, 8GB RAM + 256 ಸ್ಟೊರೇಜ್ನಲ್ಲಿ ಮತ್ತು 12GB RAM ಮತ್ತು 256GB ಸ್ಟೊರೇಜ್ನಲ್ಲಿ ಸಿಗಲಿದೆ.
ನೂತನ ಸ್ಮಾರ್ಟ್ಫೋನಿನಲ್ಲಿ 48 ಮೆಗಾಫಿಕ್ಸೆಲ್ ಕ್ಯಾಮೆರಾವನ್ನು + 13 ಮೆಗಾಫಿಕ್ಸೆಲ್ ವೈಡ್ ಆ್ಯಂಗಲ್ ಕ್ಯಾಮೆರಾ + 8 ಮೆಗಾಫಿಕ್ಸೆಲ್ ಟೆಲಿಫೋಟೋ + 5 ಮೆಗಾಫಿಕ್ಸೆಲ್ ಮಾಕ್ರೊ ಕ್ಯಾಮೆರಾ ನೀಡಲಾಗಿದೆ. ಸೆಲ್ಫಿಗಾಗಿ 20 ಮೆಗಾಫಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇದರ ಜೊತೆಗೆ 4G LTE, ಬ್ಲೂಟೂತ್( v5.0,), ವೈ-ಫೈ, ಜಿಪಿಎಸ್( a/b/g/n/ac) ನೀಡಲಾಗಿದೆ. 4000mAh ಬ್ಯಾಟರಿ ಅಳವಡಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
History TV18ನಲ್ಲಿ ವಿಶ್ವದ ಮೊದಲ ಬ್ರೈಲ್ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ
HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ
Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ
Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?
Mahindra XUV 300 ಹೆಸರು ಬದಲು…ಈಗ XUV 3XO; ಏ.29ಕ್ಕೆ ಮಾರುಕಟ್ಟೆಗೆ ಬಿಡುಗಡೆ