Udayavni Special

ಒಲಿಂಪಿಕ್ಸ್ ನಲ್ಲೂ ಹೊಸ ತಂತ್ರಜ್ಞಾನ ಅಳವಡಿಸಲಿರುವ ಜಪಾನ್ ಏನೆಲ್ಲಾ ವಿಶೇಷತೆಗಳಿವೆ..?  

ಟೋಕಿಯೋ ಒಲಿಂಪಿಕ್ಸ್ ನಲ್ಲಿ ಬಳಕೆಯಾಗಲಿರುವ ಗೆಜೆಟ್ – ತಂತ್ರಜ್ಞಾನ  

Team Udayavani, Jul 22, 2021, 1:13 PM IST

Use of Technology in Tokyo Olympics 2020

ಟೋಕಿಯೋ ಒಲಿಂಪಿಕ್ಸ್‌ ಗೆ ಕೌಂಟ್‌ ಡೌನ್ ಈಗಾಗಲೇ ಪ್ರಾರಂಭವಾಗಿದೆ. 2020ರಲ್ಲಿಯೇ ನಡೆಯಬೇಕಿದ್ದ ಟೋಕಿಯೋ ಒಲಿಂಪಿಕ್ಸ್ ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಮುಂದೂಡಲಾಗಿತ್ತು. ಇದೀಗ ಒಲಿಂಪಿಕ್ಸ್ ನಡೆಸಲು ಜಪಾನ್ ಸರ್ಕಾರ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ವಿಶ್ವ ಆರೋಗ್ಯ ಸಂಸ್ಥೆಯ ಎಲ್ಲಾ ಕೋವಿಡ್ ಪ್ರೊಟೋಕಾಲ್ ಗಳನ್ನು ಅನುಸರಿಸಿಕೊಂಡು ಕ್ರೀಡಾಕೂಟ ನಡೆಯಲಿದೆ.

ಚೀನಾದ ಪ್ರಾಬಲ್ಯ ಈ ಬಾರಿಯೂ ಮುಂದುವರೆಯುತ್ತಾ? ಭಾರತ ಎಷ್ಟು ಪದಕಗಳನ್ನು ಗೆಲ್ಲಬಹುದು? ಎಂಬ ಲೆಕ್ಕಾಚಾರಗಳು ಒಂದೆಡೆಯಾದರೆ, ಈ ಬಾರಿಯ ಒಲಿಂಪಿಕ್ಸ್ ನಲ್ಲಿ ಏನೆಲ್ಲ ತಂತ್ರಜ್ಞಾನಗಳನ್ನು ಅಳವಡಿಸಲಾಗಿದೆ? ಯಾವೆಲ್ಲಾ ಗೆಜೆಟ್‌ ಗಳನ್ನು ಬಳಸಲಾಗಿದೆ  ? ಎಂಬ ಕುತೂಹಲಗಳು ಮತ್ತೊಂದೆಡೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಜಪಾನ್ ಎಷ್ಟು ಮುಂದುವರೆದಿದೆ ಎಂಬುವುದು ಎಲ್ಲರಿಗೂ ತಿಳಿದಿರುವಂತದ್ದೆ. ಒಲಿಂಪಿಕ್ಸ್ ನಲ್ಲೂ ಹೊಸ, ಸುಧಾರಿತ ತಂತ್ರಜ್ಞಾನಗಳು ಅಳವಡಿಸಿ, ಕ್ರೀಡಾಪಟುಗಳಿಗೆ ಹೆಚ್ಚು ನವೀನ ಅನುಭವ ನೀಡಲು ಜಪಾನ್ ಸರ್ಕಾರ ಮುಂದಾಗಿದೆ.

ಇದನ್ನೂ ಓದಿ : ಹೈಕಮಾಂಡ್ ‌ಯಾವುದೇ ನಿರ್ಧಾರ ತೆಗೆದುಕೊಂಡರು ಅದಕ್ಕೆ ನಾವು ಬದ್ಧ: ಸಚಿವ ಗೋಪಾಲಯ್ಯ

ಸ್ವಯಂ ಚಾಲಿತ ವಾಹನಗಳು

ಟೋಕಿಯೊದಲ್ಲಿ, ಪ್ರಮುಖವಾಗಿ ಒಲಿಂಪಿಕ್ಸ್ ಕ್ರೀಡಾಕೂಟ ನಡೆಯುವ ಪ್ರದೇಶಗಳಲ್ಲಿ, ಕ್ರೀಡೆಗೆ ಸಂಬಂಧಿತ ಮಾರ್ಗಗಳಲ್ಲಿ ಸ್ವಯಂ ಚಾಲಿತ ವಾಹನಗಳನ್ನು ಬಳಸಲಾಗುತ್ತಿದೆ. ವರದಿಗಳ ಪ್ರಕಾರ, ಒಲಿಂಪಿಕ್ಸ್ ನಡೆಯುವ ದಿನಗಳಲ್ಲಿ ಸುಮಾರು 100 ಸ್ವಯಂ ಚಾಲಿತ ವಾಹನಗಳನ್ನು ಸೇವೆಯಲ್ಲಿಡಲು ಸರ್ಕಾರ ಯೋಜಿಸಿದೆ.

ನಿಯೋಫೇಸ್ ಫೇಸ್ ರೆಕಗ್ನಿಷನ್ ಸಿಸ್ಟಮ್ (ಮುಖ ಗುರುತಿಸುವ ವ್ಯವಸ್ಥೆ)

ಕ್ರೀಡೆ ನಡೆಯುವ ಸ್ಥಳಗಳಲ್ಲಿ ಮುಖ ಗುರುತಿಸುವ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಕ್ರೀಡಾಪಟುಗಳು, ಸಿಬ್ಬಂದಿಗಳು ಮತ್ತು ಇತರ ವ್ಯಕ್ತಿಗಳ ಭದ್ರತಾ ತಪಾಸಣೆ-ಸಂಬಂಧಿತ ಕಾರ್ಯಗಳಿಗಾಗಿ ಇದನ್ನು ಬಳಸಲಾಗುತ್ತಿದೆ. ಈ ವರ್ಷದ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಇರುವ ಕಾರಣ, ಕ್ರೀಡಾಪಟುಗಳು ಹಾಗೂ ಅವರ ಸಿಬ್ಬಂದಿಗಳನ್ನು ಹೊರತುಪಡಿಸಿ, ಇತರರ ಪ್ರವೇಶವನ್ನು ನಿರ್ಬಂಧಿಸಲಾಗುತ್ತಿದೆ. ಭದ್ರತಾ ಉದ್ದೇಶ ಮಾತ್ರವಲ್ಲದೆ ಕೋವಿಡ್ ಮಾರ್ಗಸೂಚಿಗಳನ್ವಯ ಸ್ಪರ್ಶರಹಿತ ಭದ್ರತಾ ಸ್ಕ್ರೀನಿಂಗ್ ಪ್ರಕ್ರಿಯೆ ಜಾರಿಗೊಳಿಸಲು ಇದನ್ನು ಬಳಸಲಾಗುತ್ತಿದೆ. ವ್ಯಕ್ತಿಯಲ್ಲಿ ಕೋವಿಡ್ ಸೋಂಕು ಇರುವುದರ ಬಗ್ಗೆಯೂ ಇದು ಪತ್ತೆ ಹಚ್ಚಲಿದೆ.

ರೋಬೋಟ್‌ ಗಳು

ಒಲಿಂಪಿಕ್ಸ್ ಗ್ರಾಮದಲ್ಲಿ, ಕ್ರೀಡಾಪಟುಗಳಿಗೆ ಸಹಾಯ ಮಾಡಲೆಂದೇ ವಿಶೇಷ ರೋಬೋಟ್‌ಗಳನ್ನು ತಯಾರಿಸಲಾಗಿದೆ. ವಿವಿಧ ಪ್ರಕಾರದ ರೋಬೋಟ್‌ಗಳಿರಲಿದ್ದು, ಎಲ್ಲರಿಗೂ ಸಹಾಯ ಮಾಡಲಿದೆ. ಕ್ರೀಡಾಗ್ರಾಮದ ಬಗ್ಗೆ ಮಾರ್ಗದರ್ಶನ ಮಾಡಲು, ಸಾಮಾಗ್ರಿಗಳನ್ನು ಸಾಗಿಸಲು, ನಡೆಯುವ ಈವೆಂಟ್‌ ಗಳ ಬಗ್ಗೆ ಮಾಹಿತಿ ನೀಡಲು ರೋಬೋಟ್ ಸಹಕಾರಿಯಾಗಲಿದೆ. ಈ ರೋಬೋಟ್‌ಗಳನ್ನು ಟೋಕಿಯೋ ನಗರದ ಪ್ರತಿನಿಧಿಗಳಾಗಿ ಕಾರ್ಯನಿರ್ವಹಿಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಕೆಲವು ರೋಬೋಟ್‌ಗಳು ಕ್ರೀಡಾಂಗಣ/ಮೈದಾನದಲ್ಲೂ ಇರಲಿದ್ದು, ಶಾಟ್‌ ಪುಟ್, ಡಿಸ್ಕಸ್, ಜಾವೆಲಿನ್ ಇತ್ಯಾದಿ ಕ್ರೀಡೆಗಳಲ್ಲಿ ಕ್ರೀಡಾಪಟುಗಳು ಎಸೆದಿರುವುದನ್ನು ಸಂಯೋಜಕರ ಕೈಗೆ ತಂದುಕೊಡಲಿದೆ.

ವರ್ಚುವಲ್ ರಿಯಾಲಿಟಿ ಲೈವ್ ವೀಕ್ಷಣೆ

ಕ್ರೀಡಾಂಗಣದೊಳಗೆ ಪ್ರೇಕ್ಷಕರಿಗೆ ಅನುಮತಿ ಇಲ್ಲದಿರುವುದರಿಂದ ಕ್ರೀಡಾಪ್ರೇಮಿಗಳಿಗೆ ಬೇಸರ ಆಗಿರುವುದಂತು ನಿಜ. ಆದರೆ, ಅದಕ್ಕೆ ಪರಿಹಾರ ಎಂಬಂತೆ, ಎಲ್ಲಾ ಈವೆಂಟ್‌ಗಳು ವರ್ಚುವಲ್ ರಿಯಾಲಿಟಿ ಮೋಡ್‌ನಲ್ಲಿ ಲೈವ್ ಆಗಲಿದ್ದು, ಕ್ರೀಡಾಂಗಣದಲ್ಲಿಯೇ ಕೂತು ವೀಕ್ಷಿಸಿದ ಅನುಭವ ಸಿಗುತ್ತದೆ. 8ಕೆ ರೆಸಲ್ಯೂಷನ್ ಇಮೇಜಿಂಗ್ ತಂತ್ರಜ್ಞಾನದೊಂದಿಗೆ ಒಲಿಂಪಿಕ್ಸ್ ಕ್ರೀಡಾಕೂಟ ಪ್ರಸಾರಗೊಳ್ಳಲಿದೆ.

ತ್ವರಿತ ಭಾಷಾ ಅನುವಾದಕ ಸಾಫ್ಟವೇರ್‌ಗಳು

ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟ ಅಂದಮೇಲೆ ಅಲ್ಲಿ ವಿವಿಧ ದೇಶದ ವಿವಿಧ ಭಾಷಿಕರು ಸೇರಿರುತ್ತಾರೆ. ಅಂತಹವರಿಗೆ ಸಂವಹನ ನಡೆಸಲು ಭಾಷೆ ಅಡ್ಡಿ ಆಗಬಾರದೆಂಬ ಉದ್ದೇಶದಿಂದ ಅತ್ಯಾಧುನಿಕ, ತ್ವರಿತ ಭಾಷಾ ಅನುವಾದಕವನ್ನು ಪರಿಚಯಿಸಲು ಜಪಾನ್ ಸರ್ಕಾರ ಮುಂದಾಗಿದೆ. ಅದನ್ನು ಸ್ಮಾರ್ಟ್‌ ಫೋನ್‌ನಲ್ಲಿ ಇನ್‌ಸ್ಟಾಲ್ ಮಾಡಿದರೆ, ರಿಯಲ್ ಟೈಮ್ ಟ್ರಾನ್ಸ್‌ಲೇಶನ್ ಮಾಡಲಿದೆ. ಇದು ಸಂವಹನವನ್ನೂ ಸುಲಭಗೊಳಿಸಲಿದೆ.

3ಡಿ ಅಥ್ಲೆಟ್ ಟ್ರ್ಯಾಕಿಂಗ್ (3ಡಿಎಟಿ)

ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ 3ಡಿ ಅಥ್ಲೆಟ್ ಟ್ರ‍್ಯಾಕಿಂಗ್ (3 ಡಿಎಟಿ) ನಂತಹ ತಂತ್ರಜ್ಞಾನವು ಹೊಸ ರೀತಿಯ ಅನುಭವ ನೀಡಲಿದೆ. ಇದು ಅಥ್ಲೆಟಿಕ್ ಟ್ರ್ಯಾಕ್‌ನಲ್ಲಿ ಎಲ್ಲಾ ದಿಕ್ಕಿನಿಂದಲೂ ಸ್ಪರ್ಧಿಯ ದೃಶ್ಯಗಳನ್ನು ಸೆರೆ ಹಿಡಿಯಲಿದ್ದು, ವೀಕ್ಷಕರಿಗೂ, ಕ್ರೀಡಾ ಕೋಚ್‌ಗಳಿಗೂ ಸಹಕಾರಿಯಾಗಲಿದೆ. ಕ್ರೀಡಾಪಟುಗಳು ಎಲ್ಲಿ ಎಡವಿದರು ಎಂಬುವುದನ್ನೂ ಗಮನಿಸಬಹುದಾಗಿದೆ. ಇಂಟೆಲ್ ಅಭಿವೃದ್ಧಿಪಡಿಸಿರುವ ಈ ತಂತ್ರಜ್ಞಾನವು, ಕ್ರೀಡಾಪಟುಗಳ ಚಲನೆ-ವಲನೆಯ ಬಯೋಮೆಕ್ಯಾನಿಕ್ಸ್ಅನ್ನು ಸೆರೆಹಿಡಿಯಲಿದೆ. ಅವು ಮರುಪ್ರಸಾರಕ್ಕೆ ಸೂಕ್ತವಾಗುವಂತೆ ರೆಕಾರ್ಡ್ ಮಾಡಲಾಗುತ್ತದೆ.

ಇದಲ್ಲದೆ, ಡೌ ಟೆಕ್ನಾಲಜಿ ಫಾರ್ ರೆಟ್ರೊಫಿಟ್ ಸ್ಟ್ರಕ್ಚರ್ಸ್, ಮ್ಯಾನ್-ಮೇಡ್ ಉಲ್ಕಾಪಾತ, ಮ್ಯಾಗ್ಲೆವ್ ರೈಲುಗಳು, ಮತ್ತು ಇನ್ನೂ ಅನೇಕ ವಿನೂತನ ತಂತ್ರಜ್ಞಾನಗಳು ಟೋಕಿಯೋ ಒಲಿಂಪಿಕ್ಸ್ 2021 ರ ಭಾಗವಾಗಲಿವೆ. ಈ ಕಾರಣಕ್ಕಾಗಿಯೇ ಟೋಕಿಯೋ ಒಲಿಂಪಿಕ್ಸ್ ಹಲವರಿಗೆ ಕುತೂಹಲವನ್ನೂ ಮೂಡಿಸಿದೆ. ಮುಂದಿನ ದಿನಗಳಲ್ಲಿ ಜಗತ್ತಿನಾದ್ಯಂತ ಕ್ರಾಂತಿಯನ್ನುಂಟು ಮಾಡುವ ನವನವೀನ ತಂತ್ರಜ್ಞಾನಗಳನ್ನು ಅನಾವರಣಗೊಳಿಸುವ ವೇದಿಕೆಯಾಗಿಯೂ ಈ ಬಾರಿಯ ಒಲಿಂಪಿಕ್ಸ್ ತೋರಲಿದೆ.

-ಇಂದುಧರ ಹಳೆಯಂಗಡಿ

ಇದನ್ನೂ ಓದಿ : ವರಿಷ್ಠರ ತೀರ್ಮಾನವೇ ಅಂತಿಮ: ಸ್ವಾಮೀಜಿಗಳ ಭೇಟಿ ವೇಳೆ ಯಡಿಯೂರಪ್ಪ ಹೇಳಿಕೆ

ಟಾಪ್ ನ್ಯೂಸ್

fgdg

ಕಂದನ ಜೊತೆಗಿನ ಮುದ್ದಾದ ಫೋಟೊ ಹಂಚಿಕೊಂಡ ನಟಿ ಮೇಘನಾ ರಾಜ್

ಹೇಗಿತ್ತು ಆಸೀಸ್ ವಿರುದ್ಧ ಭಾರತದ ಗೆಲುವಿಗೆ ಕಾರಣವಾದ ಆ ಗೋಲು: ವಿಡಿಯೋ ನೋಡಿ

ಹೇಗಿತ್ತು ಆಸೀಸ್ ವಿರುದ್ಧ ಭಾರತದ ಗೆಲುವಿಗೆ ಕಾರಣವಾದ ಆ ಗೋಲು: ವಿಡಿಯೋ ನೋಡಿ

Curfew Extended In Goa

ಆ. 09 ರ ತನಕ ಕೋವಿಡ್ ಕರ್ಫ್ಯೂ ವಿಸ್ತರಣೆ ಮಾಡಿದ ಗೋವಾ ಸರ್ಕಾರ

dfgh

ಸ್ಯಾಂಡಲ್ವುಡ್ ನಟಿ ನೇಹಾ ಶೆಟ್ಟಿ ತಂದೆ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ

‘Centre ceded thousands of km of Indian land to China’, alleges Rahul Gandhi

ಮೋದಿ, ಮತ್ತವರ ಗುಲಾಮರು ದೇಶದ ಭೂಮಿಯನ್ನು ಚೀನಾಕ್ಕೆ ಬಿಟ್ಟುಕೊಟ್ಟಿದ್ದಾರೆ :  ರಾಹುಲ್ ಕಿಡಿ

ಕಾಣಿಪಾಕಂನ ವರಸಿದ್ಧಿ ವಿನಾಯಕ ದೇಗುಲಕ್ಕೆ ಭೇಟಿ ನೀಡಿದ ಡಿ ಕೆ ಶಿವಕುಮಾರ್

ಕಾಣಿಪಾಕಂನ ವರಸಿದ್ಧಿ ವಿನಾಯಕ ದೇಗುಲಕ್ಕೆ ಭೇಟಿ ನೀಡಿದ ಡಿ ಕೆ ಶಿವಕುಮಾರ್

ghyghjgh

ಇನ್ಮುಂದೆ ಈ ಪ್ರಕರಣ ಬಗ್ಗೆ ನಾನು ಮಾತಾಡೋಲ್ಲ : ನಟಿ ಶಿಲ್ಪಾ ಶೆಟ್ಟಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pegasus is a spyware developed by NSO Group, an Israeli surveillance firm, that helps spies hack into phones.

ಪ್ರಪಂಚವನ್ನೇ ತಲ್ಲಣಗೊಳಿಸುತ್ತಿರುವ ಪೆಗಾಸಸ್ ಸ್ಪೈವೇರ್ ಕುರಿತು ನಿಮಗೆಷ್ಟು ತಿಳಿದಿದೆ..?

f

ಅತ್ಯಾಧುನಿಕ ಸ್ವದೇಶಿ ಹೆಡ್‌ಫೋನ್‌ ತಯಾರಿಕೆಗೆ ವಾಣಿಜ್ಯ ನಗರಿ ವೇದಿಕೆ

instagram parent guide

ಇನ್ಸ್ಟಾಗ್ರಾಮ್ ನಿಂದ ಕನ್ನಡದಲ್ಲಿ ಪೇರೆಂಟ್ಸ್ ಗೈಡ್ ಆರಂಭ

7 ಕೋಟಿ ದಾಟಿದ ಮೋದಿ ಟ್ವಿಟರ್‌ ಫಾಲೋವರ್‌ಗಳ ಸಂಖ್ಯೆ

7 ಕೋಟಿ ದಾಟಿದ ಮೋದಿ ಟ್ವಿಟರ್‌ ಫಾಲೋವರ್‌ಗಳ ಸಂಖ್ಯೆ

nothing ear 1

ಆಡಿಯೋ ಪ್ರಿಯರು ಕಾತುರದಿಂದ ಕಾಯುತ್ತಿದ್ದ ನಥಿಂಗ್‍ ಇಯರ್ (1) ಬಿಡುಗಡೆ: ಇದರ ವಿಶೇಷವೇನು?

MUST WATCH

udayavani youtube

ಮಸ್ಕಿಯಲ್ಲೊಬ್ಬ ವಾನರ ಪ್ರೇಮಿ : ಮಸ್ಕಿ‌ ಪಟ್ಟಣದಲ್ಲಿ‌ ನಿತ್ಯವೂ ನಡೆಯುತ್ತಿರುವ ದೃಶ್ಯವಿದು

udayavani youtube

ರಸ್ತೆ ಮಧ್ಯೆಯೇ ಕಾರು ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಯುವತಿ

udayavani youtube

ಟೋಕಿಯೋ ಒಲಿಂಪಿಕ್ಸ್‌: ಕಂಚಿನ ಪದಕ ಗೆದ್ದ ಪಿವಿ ಸಿಂಧೂ!

udayavani youtube

ಜೋಗ ಜಲಪಾತಕ್ಕೆ ಹರಿದು ಬಂದ ಜನ ಸಾಗರ

udayavani youtube

ತನ್ನದೇ ಶಾಲೆ ಮುಂದೆ ವಿದ್ಯಾರ್ಥಿ ಹಸುಗಳ ಮಧ್ಯೆ! |

ಹೊಸ ಸೇರ್ಪಡೆ

fgdg

ಕಂದನ ಜೊತೆಗಿನ ಮುದ್ದಾದ ಫೋಟೊ ಹಂಚಿಕೊಂಡ ನಟಿ ಮೇಘನಾ ರಾಜ್

ಹೇಗಿತ್ತು ಆಸೀಸ್ ವಿರುದ್ಧ ಭಾರತದ ಗೆಲುವಿಗೆ ಕಾರಣವಾದ ಆ ಗೋಲು: ವಿಡಿಯೋ ನೋಡಿ

ಹೇಗಿತ್ತು ಆಸೀಸ್ ವಿರುದ್ಧ ಭಾರತದ ಗೆಲುವಿಗೆ ಕಾರಣವಾದ ಆ ಗೋಲು: ವಿಡಿಯೋ ನೋಡಿ

Curfew Extended In Goa

ಆ. 09 ರ ತನಕ ಕೋವಿಡ್ ಕರ್ಫ್ಯೂ ವಿಸ್ತರಣೆ ಮಾಡಿದ ಗೋವಾ ಸರ್ಕಾರ

dfgh

ಸ್ಯಾಂಡಲ್ವುಡ್ ನಟಿ ನೇಹಾ ಶೆಟ್ಟಿ ತಂದೆ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ

‘Centre ceded thousands of km of Indian land to China’, alleges Rahul Gandhi

ಮೋದಿ, ಮತ್ತವರ ಗುಲಾಮರು ದೇಶದ ಭೂಮಿಯನ್ನು ಚೀನಾಕ್ಕೆ ಬಿಟ್ಟುಕೊಟ್ಟಿದ್ದಾರೆ :  ರಾಹುಲ್ ಕಿಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.