ವಾಟ್ಸ್‌ಆ್ಯಪ್ ತೊರೆದು ಸಿಗ್ನಲ್, ಟೆಲಿಗ್ರಾಮ್ !
Team Udayavani, Jan 10, 2021, 6:20 AM IST
ಹೊಸದಿಲ್ಲಿ: ನಮ್ಮ “ಖಾಸಗಿ’ ನಿಯಮಗಳನ್ನು ಒಪ್ಪಿಕೊಳ್ಳಿ, ಇಲ್ಲದಿದ್ದರೆ ಬಿಟ್ಟು ಹೋಗಿ…ಇದು ಫೇಸ್‌ಬುಕ್ ಅಧೀನದಲ್ಲಿ ರುವ ಪ್ರಸಿದ್ಧ ಮೆಸೆಂಜರ್ ವೇದಿಕೆ ವಾಟ್ಸ್‌ಆ್ಯಪ್ ಬಳಕೆದಾರರಿಗೆ ನೀಡಿರುವ ಸೂಚನೆ. ಖಾಸಗಿತನದ ನಿಯಮಗಳಿಗೆ ಸಂಬಂಧಿಸಿ ಅದು ಹೊಸ ಷರತ್ತುಗಳನ್ನು ವಿಧಿಸಿದ್ದು, ಒಪ್ಪಿಕೊಳ್ಳದಿದ್ದರೆ ತ್ಯಜಿಸಬಹುದು ಎಂದು ಪರೋಕ್ಷ ಸೂಚನೆ ನೀಡಿದೆ.
ಇದಕ್ಕೆ ತಿರುಗಿಬಿದ್ದಿರುವ ಗ್ರಾಹಕರು ಟೆಲಿಗ್ರಾಂ ಮತ್ತು ಸಿಗ್ನಲ್ ಸಂದೇಶವಾಹಕಗಳತ್ತ ತಿರುಗುತ್ತಿದ್ದಾರೆ. ವಾಟ್ಸ್‌ಆ್ಯಪ್ ಹೊಸ ಷರತ್ತು ಎಂದರೆ, ಬಳಕೆದಾರರ ಎಲ್ಲ ಮಾಹಿತಿಗಳನ್ನು ಫೇಸ್‌ಬುಕ್ ಪೇಮೆಂಟ್ಸ್ ಇಂಕ್, ಫೇಸ್‌ಬುಕ್ ಪೇಮೆಂಟ್ಸ್ ಇಂಟರ್‌ನ್ಯಾಷನಲ್ ಲಿ., ಒನಾವೋ, ಫೇಸ್‌ಬುಕ್ ಟೆಕ್ನಾಲಜೀಸ್, ಎಲ್‌ಎಲ್‌ಸಿ ಆ್ಯಂಡ್ ಫೇಸ್‌ಬುಕ್ ಟೆಕ್ನಾಲಜೀಸ್ ಐರ್ಲೆಂಡ್ ಲಿ., ವಾಟ್ಸ್‌ಆ್ಯಪ್ ಇಂಕ್, ವಾಟ್ಸ್ ಆ್ಯಪ್ ಐರ್ಲೆಂಡ್ ಲಿ. ಮತ್ತು ಕ್ರೌಡ್‌ಟ್ಯಾಂಗಲ್‌ನೊಂದಿಗೆ ಹಂಚಿಕೊಳ್ಳುವುದು.
ವಾಟ್ಸ್ ಆ್ಯಪ್‌ನ ಹೊಸ ನೀತಿ 2021ರ ಫೆ. 8ರಿಂದ ಜಾರಿಗೆ ಬರಲಿದೆ. ಅಲ್ಲಿಯ ವರೆಗೆ ಗ್ರಾಹಕರಿಗೆ ಅಪ್‌ಡೇಟ್ ನೀಡುವ ಮೂಲಕ ತನ್ನ ಹೊಸ ಷರತ್ತುಗಳಿಗೆ ಒಪ್ಪಿಗೆ ಪಡೆಯುವ ಕೆಲಸವನ್ನು ಕಂಪೆನಿ ಮಾಡಲಿದೆ.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೋವಿಡ್ ಲಸಿಕೆ ನೀಡಿದ್ದಕ್ಕೆ ಭಾರತಕ್ಕೆ ಬ್ರೆಜಿಲ್, ವಿಶ್ವಸಂಸ್ಥೆ ಅಭಿನಂದನೆ
ಗಡಿಯಲ್ಲಿ ಮತ್ತೊಂದು ಸುರಂಗ ಪತ್ತೆ : 10 ದಿನಗಳಲ್ಲಿ ಪತ್ತೆಯಾದ 2ನೇ ಸುರಂಗ
ಫೆಬ್ರವರಿಯಿಂದ ರೈಲುಗಳಲ್ಲೇ ದೊರೆಯಲಿದೆ ಆಹಾರ; 10 ತಿಂಗಳುಗಳ ಬಳಿಕ ಸೇವೆ ಪುನರಾರಂಭ
ಮಹಾರಾಷ್ಟ್ರ: ಖಾಡ್ಕಿ ಘಾಟ್ ನಲ್ಲಿ ಪ್ರಪಾತಕ್ಕೆ ಬಿದ್ದ ವಾಹನ: 6 ಸಾವು, 18 ಮಂದಿ ಗಾಯ
ಜ.25ಕ್ಕೆ ಕಲ್ಯಾಣ್ – ಡೊಂಬಿವಿಲಿ ಸಂಪರ್ಕ ಕಲ್ಪಿಸುವ ಪತ್ರಿ ಪೂಲ್ ಸೇತುವೆ ಲೋಕಾರ್ಪಣೆ