Udayavni Special

ವಾಟ್ಸಾಪ್ OTP Scam 2020: ಮೈಮರೆತರೇ ನಿಮ್ಮ ಪ್ರತಿಯೊಂದು ಮಾಹಿತಿ ಹ್ಯಾಕರ್ ಗಳ ಪಾಲು !


Team Udayavani, Nov 26, 2020, 5:02 PM IST

whatsapp

ನವದೆಹಲಿ: ಭಾರತ ಸೇರಿದಂತೆ ವಿಶ್ವದಾದ್ಯಂತ ಇಂದು ವಾಟ್ಸಾಪ್ ಸಕ್ರಿಯ ಬಳಕೆದಾರರ ಸಂಖ್ಯೆ ಹೆಚ್ಚುತ್ತಿದೆ.  ಪರಿಣಾಮವೆಂಬಂತೆ ಹ್ಯಾಕರ್ ಗಳ ದೃಷ್ಟಿ ಕೂಡ ಅದರತ್ತ ತಿರುಗಿದ್ದು, ಖಾಸಗಿ ಮಾಹಿತಿಗಳಿಗೆ ಕನ್ನ ಹಾಕಲು ವ್ಯವಸ್ಥಿತ ಸಂಚು ಹೂಡುತ್ತಿದ್ದಾರೆ.

ಕೆಲದಿನಗಳಿಂದ ವಾಟ್ಸಾಪ್ OTP ಸ್ಕ್ಯಾಮ್ ಎನ್ನುವುದು ಸದ್ದು ಮಾಡುತ್ತಿದ್ದು, ಹ್ಯಾಕರ್ ಗಳು ಓಟಿಪಿಯನ್ನೇ ಬಂಡವಾಳ ಮಾಡಿಕೊಂಡು ಜನರ ಅಕೌಂಟ್ ಗಳಿಗೆ ಲಗ್ಗೆಯಿಡುತ್ತಿದ್ದಾರೆ. ಆ ಮೂಲಕ ಹಲವು ಮಹತ್ವದ ಮಾಹಿತಿಗಳನ್ನು ಪಡೆದು ದುರುಪಯೋಪಯೋಗ ಪಡಿಸಿಕೊಳ್ಳುತ್ತಿರುವ ವ್ಯವಸ್ಥಿತ ಜಾಲ ಪತ್ತೆಯಾಗುತ್ತಿದೆ.

ಏನಿದು OTP ಸ್ಕ್ಯಾಮ್ :

ಹ್ಯಾಕರ್ ಗಳು ಮೊದಲಿಗೆ ನಿಮ್ಮ ಮೊಬೈಲ್ ಸಂಖ್ಯೆಗೆ ಸಂದೇಶವೊಂದನ್ನು ರವಾನಿಸಿ ಸ್ನೇಹಿತರನ್ನಾಗಿ ಮಾಡಿಕೊಳ್ಳುತ್ತಾರೆ.  ಕೆಲಕಾಲಗಳ ಬಳಿಕ ಮತ್ತೊಂದು ಸಂದೇಶ ಕಳುಹಿಸಿ ‘ಅಚಾನಕ್ಕಾಗಿ ವಾಟ್ಸಾಪ್ ವೇರಿಫಿಕೇಶನ್ ಸಂದರ್ಭದಲ್ಲಿ ನಿಮ್ಮ ನಂಬರ್ ನಮೂದಿಸಿದ್ದರಿಂದ OTP ನಿಮಗೆ ಬಂದಿದೆ. ಅದನ್ನು ಈ ಕೂಡಲೇ ಕಳುಹಿಸಬಹುದೇ ?” ಎಂದು ಭಿನ್ನವಿಸಿಕೊಳ್ಳುತ್ತಾರೆ.

ಈ ವೇಳೆ ಮೈಮರೆತು ನೀವು OTP ಕೋಡ್ ಕಳುಹಿಸಿದ್ದೇ ಆದಲ್ಲಿ ನಿಮ್ಮ ವಾಟ್ಸಾಪ್ ನಲ್ಲಿರುವ ಸಂಪೂರ್ಣ ಮಾಹಿತಿ ಹ್ಯಾಕರ್ ಗಳ ಪಾಲಾಗುತ್ತದೆ. ಮಾತ್ರವಲ್ಲದೆ ನಿಮ್ಮ ಅಕೌಂಟ್ ಕೂಡ ಲಾಕ್ ಆಗುವುದು. ವಾಟ್ಸಾಪ್ ಭದ್ರತಾ ನಿಯಮದ ಪ್ರಕಾರ ‘ಒಂದೇ ನಂಬರ್ ನಿಂದ ಎರಡು ಕಡೆ ವಾಟ್ಸಾಪ್ ಅಪ್ಲಿಕೇಶನ್ ಬಳಸಲು ಸಾಧ್ಯವಾಗುದಿಲ್ಲ’. (ವೆಬ್ ಹೊರತುಪಡಿಸಿ) ಹೀಗಾಗಿ OTP  ಕಳುಹಿಸಿದ ತಕ್ಷಣ ನಿಮ್ಮ ಅಕೌಂಟ್ ಕೂಡ ತೆರೆಯಲು ಸಾಧ್ಯವಾಗುವುದಿಲ್ಲ.

ಇದನ್ನೂ ಓದಿ:ಕೋವಿಡ್ ಹೆಸರಲ್ಲಿ ಹಿಂಸೆ ಸಲ್ಲದು; ಪೊಲೀಸರು ಮತ್ತು ಅಧಿಕಾರಿಗಳಿಗೆ ‘ಯೋಗಿ ಖಡಕ್ ಸೂಚನೆ’

ಇಂತಹ ಸಂದರ್ಭದಲ್ಲಿ ಏನು ಮಾಡಬೇಕು?

ನಿಮಗೆ ಇಂತಹ ಯಾವುದಾದರೂ ಸಂದೇಶಗಳು ಬಂದಲ್ಲಿ, ಅದಕ್ಕೆ ಪ್ರತಿಕ್ರಿಯೆ ನೀಡದಿರುವುದು ಸೂಕ್ತ. ಒಟಿಪಿ ಎನ್ನುವಂಥದ್ದು ಅತ್ಯಂತ ಗೌಪ್ಯವಾದ ಮಾಹಿತಿ. ಹೀಗಾಗಿ ನಿಮ್ಮ ಆತ್ಮೀಯ ಗೆಳೆಯರ ಹೆಸರಿನಲ್ಲೇ, ಈ ತೆರನಾದ  ಸಂದೇಶ ಬಂದರೂ ಕೂಡಾ ಒಟಿಪಿ ಸಂಖ್ಯೆಯನ್ನು ನೀಡದಿರುವುದು ಈ ಸ್ಕ್ಯಾಮ್ ತಡೆಗಟ್ಟಲು ಸಹಾಯಕವಾಗುತ್ತದೆ. ಆ ಮೂಲಕ ಅತ್ಯಮೂಲ್ಯ ಮಾಹಿತಿಯ ಸೋರಿಕೆಯಾಗದಂತೆ ತಡೆಯಬಹುದು.

ವಾಟ್ಸಾಪ್ ಸುರಕ್ಷಿತವಾಗಿರಿಸಿಕೊಳ್ಳುವುದು ಹೇಗೆ?

ಹ್ಯಾಕರ್ ಗಳಿಂದ ನಿಮ್ಮ ವಾಟ್ಸಾಪ್ ಖಾತೆಯನ್ನು ಸುರಕ್ಷಿತವಾಗಿಡಲು ನೀವು ‘To step verification’  ಎಂಬ ಫೀಚರ್ ಬಳಸಬಹುದು. ಸೆಟ್ಟಿಂಗ್ಸ್ ನಲ್ಲಿ ಈ ಆಯ್ಕೆಯಿದ್ದು  ಪಿನ್ ನಂಬರ್ ಹಾಗೂ ಇಮೇಲ್ ವಿಳಾಸವನ್ನು ನಮೂದಿಸಬೇಕು. ಆ ಮೂಲಕ  ಹ್ಯಾಕರ್ ಗಳು  OTP ಪಡೆದರೂ  ಲಾಗಿನ್ ಆಗಲು ಅವಕಾಶವಿರದಂತೆ ಮಾಡಬಹುದು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

Untitled-1

ಥಾಯ್ಲೆಂಡ್‌ ಬ್ಯಾಡ್ಮಿಂಟನ್‌: ಸಾತ್ವಿಕ್‌-ಚಿರಾಗ್‌ಗೆ ಸೋಲು

Untitled-1

ಜೋ ಬೈಡನ್ ನನಗೆ ಹಿಂದಿನಿಂದಲೂ ಪರಿಚಯ : ಅಶೋಕ ಖೇಣಿ

ಕೋವಿಡ್ ಲಸಿಕೆ ನೀಡಿದ್ದಕ್ಕೆ ಭಾರತಕ್ಕೆ ಬ್ರೆಜಿಲ್‌, ವಿಶ್ವಸಂಸ್ಥೆ ಅಭಿನಂದನೆ

ಕೋವಿಡ್ ಲಸಿಕೆ ನೀಡಿದ್ದಕ್ಕೆ ಭಾರತಕ್ಕೆ ಬ್ರೆಜಿಲ್‌, ವಿಶ್ವಸಂಸ್ಥೆ ಅಭಿನಂದನೆ

ಕೋವಿಡ್ ಹಿನ್ನೆಲೆ: ಬಜೆಟ್‌ ಗಾತ್ರ ತಗ್ಗಿಸುವುದು ಅನಿವಾರ್ಯ: ಸಿಎಂ

ಕೋವಿಡ್ ಹಿನ್ನೆಲೆ: ಬಜೆಟ್‌ ಗಾತ್ರ ತಗ್ಗಿಸುವುದು ಅನಿವಾರ್ಯ: ಸಿಎಂ

ಕೆಪಿಎಸ್‌ಸಿ ಪ್ರಶ್ನೆ ಪತ್ರಿಕೆ ಸೋರಿಕೆ-ಆರು ಮಂದಿ ಬಂಧನ

ಕೆಪಿಎಸ್‌ಸಿ ಪ್ರಶ್ನೆ ಪತ್ರಿಕೆ ಸೋರಿಕೆ-ಆರು ಮಂದಿ ಬಂಧನ

ಮಂಡ್ಯ ಅಕ್ರಮ ಗಣಿಗಾರಿಕೆಗಳ ಮೇಲೆ ಪೊಲೀಸರ ದಾಳಿ : ಸ್ಫೋಟಕ ವಸ್ತುಗಳ ವಶ

ಮಂಡ್ಯ ಅಕ್ರಮ ಗಣಿಗಾರಿಕೆಗಳ ಮೇಲೆ ಪೊಲೀಸರ ದಾಳಿ : ಸ್ಫೋಟಕ ವಸ್ತುಗಳ ವಶ

fire

ರಸ್ತೆಗೆ ಹಾಕಿದ ಹುರುಳಿಕಾಳು ಸಿಪ್ಪೆ ಕಾರಿನ ಚಕ್ರಕ್ಕೆ ಸಿಲುಕಿ ಬೆಂಕಿ: ಹೊತ್ತಿ ಉರಿದ ಕಾರುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೋವಿಡ್ ಲಸಿಕೆ ನೀಡಿದ್ದಕ್ಕೆ ಭಾರತಕ್ಕೆ ಬ್ರೆಜಿಲ್‌, ವಿಶ್ವಸಂಸ್ಥೆ ಅಭಿನಂದನೆ

ಕೋವಿಡ್ ಲಸಿಕೆ ನೀಡಿದ್ದಕ್ಕೆ ಭಾರತಕ್ಕೆ ಬ್ರೆಜಿಲ್‌, ವಿಶ್ವಸಂಸ್ಥೆ ಅಭಿನಂದನೆ

ಗಡಿಯಲ್ಲಿ ಮತ್ತೊಂದು ಸುರಂಗ ಪತ್ತೆ : 10 ದಿನಗಳಲ್ಲಿ ಪತ್ತೆಯಾದ 2ನೇ ಸುರಂಗ

ಗಡಿಯಲ್ಲಿ ಮತ್ತೊಂದು ಸುರಂಗ ಪತ್ತೆ : 10 ದಿನಗಳಲ್ಲಿ ಪತ್ತೆಯಾದ 2ನೇ ಸುರಂಗ

LDN-L-DINE

ಫೆಬ್ರವರಿಯಿಂದ ರೈಲುಗಳಲ್ಲೇ ದೊರೆಯಲಿದೆ ಆಹಾರ; 10 ತಿಂಗಳುಗಳ ಬಳಿಕ ಸೇವೆ ಪುನರಾರಂಭ

ಮಹಾರಾಷ್ಟ್ರ:  400 ಅಡಿ ಕಮರಿಗೆ ಬಿದ್ದ ವಾಹನ: 6 ಸಾವು, 18 ಮಂದಿ ಗಾಯ

ಮಹಾರಾಷ್ಟ್ರ:  ಖಾಡ್ಕಿ ಘಾಟ್‌ ನಲ್ಲಿ ಪ್ರಪಾತಕ್ಕೆ ಬಿದ್ದ ವಾಹನ: 6 ಸಾವು, 18 ಮಂದಿ ಗಾಯ

ಜ.25ಕ್ಕೆ ಕಲ್ಯಾಣ್‌ – ಡೊಂಬಿವಿಲಿ ಸಂಪರ್ಕ ಕಲ್ಪಿಸುವ ಪತ್ರಿ ಪೂಲ್‌ ಸೇತುವೆ ಲೋಕಾರ್ಪಣೆ 

ಜ.25ಕ್ಕೆ ಕಲ್ಯಾಣ್‌ – ಡೊಂಬಿವಿಲಿ ಸಂಪರ್ಕ ಕಲ್ಪಿಸುವ ಪತ್ರಿ ಪೂಲ್‌ ಸೇತುವೆ ಲೋಕಾರ್ಪಣೆ 

MUST WATCH

udayavani youtube

ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಚಾಲಕನ ಅವಾಂತರ: ನೂರಾರು ಮಂದಿಯ ಪ್ರಾಣ ಉಳಿಸಿದ ಕಾಪು ಎಸ್ಐ

udayavani youtube

ಅಹಿತಕರ ಬೆಳವಣಿಗೆಗಳು ಕಂಡುಬಂದರೆ ವಾಟ್ಸಾಪ್ ಮೂಲಕ ಮಾಹಿತಿ ಹಂಚಿಕೊಳ್ಳಿ; Compol ಶಶಿಕುಮಾರ್

udayavani youtube

ತಲೆಕೂದಲು, ಮೀಸೆ ಬೋಳಿಸುವಂತೆ ರಾಗಿಂಗ್: ಮಂಗಳೂರಿನಲ್ಲಿ 9 ವಿದ್ಯಾರ್ಥಿಗಳ ಬಂಧನ

udayavani youtube

ನೇತಾಜಿಯವರ ಜನ್ಮ ದಿನದಂದು ಅವರ ಆಪ್ತರ ಪುತ್ರಿಯಾದ ಜೊತೆ ಉಡುಪಿಯಲ್ಲಿ ಮಾತುಕತೆ,

udayavani youtube

ಮಂಗಳೂರು ಪೊಲೀಸರ ಭರ್ಜರಿ ಬೇಟೆ: 44 ಕೆಜಿ ಗಾಂಜಾ ವಶ, ಏಳು ಆರೋಪಿಗಳ ಬಂಧನ

ಹೊಸ ಸೇರ್ಪಡೆ

ಸಮ್ಮೇಳನ ಕನ್ನಡದ ಮನಸ್ಸುಗಳು ಒಂದಾಗುವ ಉತ್ಸವ

ಸಮ್ಮೇಳನ ಕನ್ನಡದ ಮನಸ್ಸುಗಳು ಒಂದಾಗುವ ಉತ್ಸವ

ಕಲೆಕ್ಟರ್ ಗೇಟ್‌ ಜಂಕ್ಷನ್‌: ಹಳೆ ಕಟ್ಟಡಕ್ಕೆ ಶೀಘ್ರ ಮುಕ್ತಿ?

ಕಲೆಕ್ಟರ್ ಗೇಟ್‌ ಜಂಕ್ಷನ್‌: ಹಳೆ ಕಟ್ಟಡಕ್ಕೆ ಶೀಘ್ರ ಮುಕ್ತಿ?

ಮೂಡುಬಿದಿರೆ: ಪೊಲೀಸ್‌ ನಗರ ಸಂಚಾರ

ಮೂಡುಬಿದಿರೆ: ಪೊಲೀಸ್‌ ನಗರ ಸಂಚಾರ

ಕಾರ್ಕಳ ತಾ| 17ನೇ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆ

ಕಾರ್ಕಳ ತಾ| 17ನೇ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆ

ಮರ್ದಾಳ: ಮುಂಚಿಕಾಪಿನಲ್ಲಿ ಜಮೀನು ಕಾದಿರಿಸಲು ಸಿದ್ಧತೆ

ಮರ್ದಾಳ: ಮುಂಚಿಕಾಪಿನಲ್ಲಿ ಜಮೀನು ಕಾದಿರಿಸಲು ಸಿದ್ಧತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.