ಸ್ಟೇಟಸ್ ಮೂಲಕ ಬಳಕೆದಾರರಿಗೆ ‘ಪ್ರೈವೆಸಿ ಪಾಠ’ ಮಾಡಿದ ವಾಟ್ಸಾಪ್
Team Udayavani, Jan 17, 2021, 9:30 PM IST
ನವದೆಹಲಿ: ಕೆಲದಿನಗಳ ಹಿಂದೆ ಬಳಕೆದಾರರ ಮಾಹಿತಿಗಳನ್ನು ಫೇಸ್ ಬುಕ್ ಜೊತೆ ಹಂಚಿಕೊಳ್ಳಲಿದೆ ಎಂಬ ಆರೋಪವನ್ನು ಎದುರಿಸಿದ್ದ ವಾಟ್ಸಾಪ್ , ಇದೀಗ ತನ್ನ ಸ್ಟೇಟಸ್ ಅಪ್ ಡೇಟ್ ಮೂಲಕ ಯಾವುದೇ ಬಳಕೆದಾರರ ಮಾಹಿತಿಗಳನ್ನು ಫೇಸ್ ಬುಕ್ ಜೊತೆ ಹಂಚಿಕೊಳ್ಳುವುದಿಲ್ಲ ಎಂದು ತಿಳಿಸಿದೆ.
ತನ್ನ ಮೇಲೆ ಬಂದಿರುವ ಆರೋಪದಿಂದ ಮುಕ್ತವಾಗಲು ಹಲವಾರು ಮಾಧ್ಯಮಗಳ ಮೂಲಕ ತನ್ನ ಬಳಕೆದಾರರಿಗೆ ಮಾಹಿತಿ ನೀಡಿರುವ ವಾಟ್ಸಾಪ್, ಇದೀಗ ತನ್ನ ಸ್ಟೇಟಸ್ ಮೂಲಕವೂ ಬಳಕೆದಾರರನ್ನು ತಲುಪಲು ಮುಂದಾಗಿದೆ.
ಒಟ್ಟು ನಾಲ್ಕು ಸ್ಟೇಟಸ್ ಪೋಸ್ಟ್ ಮಾಡಿರುವ ವಾಟ್ಸಾಪ್, ನಾವು ನಿಮ್ಮ ಖಾಸಗಿತನವನ್ನು ರಕ್ಷಿಸಲು ಬದ್ಧರಾಗಿದ್ದೇವೆ. ಬಳಕೆದಾರರ ವೈಯಕ್ತಿಕ ಮಾಹಿತಿ ಅಥವಾ ಚಾಟ್ ಗಳನ್ನು ಯಾರಿಂದಲೂ ಓದಲು ಸಾಧ್ಯವಿಲ್ಲ. ಎಲ್ಲಾ ವೈಯಕ್ತಿಕ ಮಾಹಿತಿಗಳು ಎಂಡ್ ಟು ಎಂಡ್ ಎನ್ ಕ್ರಿಪ್ಷನ್ ಆಗಿವೆ ಎಂದಿದ್ದು, ಜೊತೆಗೆ ನೀವು ಶೇರ್ ಮಾಡಿರುವ ಯಾವುದೇ ಲೊಕೇಷನ್ ಅನ್ನು ವಾಟ್ಸಾಪ್ ಸಂಸ್ಥೆ ಕೂಡಾ ನೋಡಲು ಸಾಧ್ಯವಿಲ್ಲ ಮತ್ತು ನಾವು ನಿಮ್ಮ ಕಾಂಟಾಕ್ಟ್ ಸಂಖ್ಯೆಗಳನ್ನು ಫೇಸ್ ಬುಕ್ ಜೊತೆ ಹಂಚಿಕೊಳ್ಳುವುದಿಲ್ಲ ಎಂದಿದೆ.
ಇದನ್ನೂ ಓದಿ:ಖ್ಯಾತ ಹಿಂದೂಸ್ತಾನಿ ಗಾಯಕ, ಪದ್ಮವಿಭೂಷಣ ಉಸ್ತಾದ್ ಗುಲಾಂ ಮುಸ್ತಾಫಾಖಾನ್ ವಿಧಿವಶ
ಹೊಸ ಅಪ್ ಡೇಟ್ ಮುಂದೂಡಿಕೆ
ನೂತನ ಪ್ರೈವೆಸಿ ಅಪ್ ಡೇಟ್ ಗೆ ಸಂಬಂಧಿಸಿದಂತೆ ವಿವಾದಕ್ಕೆ ಒಳಗಾಗಿದ್ದ ವಾಟ್ಸಾಪ್, ತನ್ನ ಹೊಸ ಅಪ್ ಡೇಟ್ ಅನ್ನು ಮುಂದಿನ ಮೇ ತಿಂಗಳಿಗೆ ಮುಂದೂಡಿದೆ. ಅಲ್ಲದೆ ಫೆಬ್ರವರಿ 8 ರಂದು ಯಾವುದೇ ಖಾತೆಗಳನ್ನು ನಿಷ್ಕ್ರಿಯಗೊಳಿಸುವುದಿಲ್ಲ ಎಂದು ತಿಳಿಸಿದೆ.
ಇದನ್ನೂ ಓದಿ:ಭದ್ರಾವತಿ ಕಾರ್ಯಕ್ರಮದಲ್ಲಿ ಕನ್ನಡ ಭಾಷೆ ಕಡೆಗಣನೆ; ತೀವ್ರವಾಗಿ ಖಂಡಿಸುತ್ತೇನೆ ಎಂದ ಸಿದ್ದು
ಪ್ರಸ್ತುತ ಫೇಸ್ ಬುಕ್ ಒಡೆತನದಲ್ಲಿರುವ ವಾಟ್ಸಾಪ್ ತನ್ನ ಹೊಸ ಅಪ್ ಡೇಟ್ ಅನ್ನು ಎಲ್ಲಾ ಬಳಕೆದಾರರು ಬಳಸಲೇಬೇಕು ಎಂದು ಹೇಳಿದ್ದು ವಿವಾದಕ್ಕೆ ಎಡೆಮಾಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಾಸನದ ಮಗುವನ್ನು 5 ಲಕ್ಷ ರೂ. ಗೆ ಕಾರ್ಕಳದಲ್ಲಿ ಮಾರಾಟ: ಇಬ್ಬರು ಮಹಿಳೆಯರು ಸೇರಿ ಮೂವರ ಬಂಧನ
ಇಬ್ಬರು ಒಪ್ಪಿದ್ದಾರೆ, ಅದು ಅತ್ಯಾಚಾರವಾಗಲ್ಲ: ಜಾರಕಿಹೊಳಿ ಬೆಂಬಲಕ್ಕೆ ರೇಣುಕಾಚಾರ್ಯ
ಟೆಸ್ಲಾ ಕಂಪೆನಿಗೆ ಪ್ರೋತ್ಸಾಹ ಧನ ನೀಡಲು ಭಾರತ ಸಿದ್ಧ : ಗಡ್ಕರಿ
ತಮಿಳುನಾಡು: ನೀತಿ ಸಂಹಿತೆ ಉಲ್ಲಂಘನೆ, ರಾಹುಲ್ ವಿರುದ್ಧ ಬಿಜೆಪಿ ಕಿಡಿ
ಬಾಂಡ್ v/s ಈಕ್ವಿಟಿ: ಮುಂಬಯಿ ಷೇರುಮಾರುಕಟ್ಟೆ ಸೆನ್ಸೆಕ್ಸ್ ಸೂಚ್ಯಂಕ 440 ಅಂಕ ಕುಸಿತ