ವಾಟ್ಸಾಪ್‍ನಿಂದ ಹೊಸ ಫೀಚರ್ ಬಿಡುಗಡೆ: ಏನಿದರ ವೈಶಿಷ್ಟ್ಯ

Team Udayavani, Nov 6, 2021, 6:28 PM IST

22whatsapp

ವಿಶ್ವದ ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ‘ವಾಟ್ಸಾಪ್‌’ ದೀಪಾವಳಿ ಪ್ರಯುಕ್ತ ತನ್ನ ಬಳಕೆದಾರರಿಗೆ ಹೊಸ ಫೀಚರ್ ಬಿಡುಗಡೆ ಮಾಡಿದೆ.

ವಾಟ್ಸಾಪ್‌ ಬಳಕೆದಾರರು ಹಲವು ತಿಂಗಳುಗಳಿಂದ ಕಾಯುತ್ತಿದ್ದ, ಬಹು ನಿರೀಕ್ಷಿತ ಫೀಚರ್ಸ್‌ ಅನ್ನು ಪರಿಚಯಿಸಿದೆ. ಈಗ ಮಲ್ಟಿ ಡಿವೈಸ್ ವೈಶಿಷ್ಟ್ಯವನ್ನು ಹೊರತಂದಿರುವ ವಾಟ್ಸಾಪ್‌​, ಇನ್ನು ಮುಂದೆ ವಾಟ್ಸಾಪ್‌ ವೆಬ್​ಗಾಗಿ ಸ್ಮಾರ್ಟ್​ಫೋನ್​ ಅನ್ನು ಆನ್​ಲೈನ್​ನಲ್ಲಿ ಇಡುವ ಅಗತ್ಯವಿಲ್ಲ. ತನ್ನ ಮಲ್ಟಿ ಡಿವೈಸ್‌ ಕನೆಕ್ಟ್‌ ಫೀಚರ್ಸ್‌ ಅನ್ನು ಇದೀಗ ಆಂಡ್ರಾಯ್ಡ್‌ ಮತ್ತು ಐಓಎಸ್ ಎರಡೂ ಆವೃತ್ತಿಗಳಲ್ಲಿಯೂ ಕೂಡ ಅಪ್ಡೇಟ್‌ ಮಾಡಿದೆ.

ಈ ಹಿಂದೆ ವಾಟ್ಸಾಪ್‌ ವೆಬ್ ಬಳಸಬೇಕಾದರೆ ಪ್ರತಿ ಬಾರಿ ಫೋನ್‌ನೊಂದಿಗೆ ಲಾಗಿನ್ ಮಾಡಬೇಕಾಗಿತ್ತು. ಆದರೆ ಈಗ ಬೀಟಾ ಪ್ರೋಗ್ರಾಂನಿಂದ ಹೊರಬರುವ ಮಲ್ಟಿ-ಡಿವೈಸ್ ವೈಶಿಷ್ಟ್ಯದಿಂದ ಸ್ಮಾರ್ಟ್​ಫೋನ್​ ಸಹಾಯವಿಲ್ಲದೆ ಲಾಗಿನ್​ ಆಗಬಹುದಾಗಿದೆ.

ಈ ಹೊಸ ಫೀಚರ್‍ ನಲ್ಲಿ ಮಲ್ಟಿ ಡಿವೈಸ್ ಮೂಲಕ ಒಬ್ಬರು ಒಂದೇ ಸಮಯದಲ್ಲಿ ವಾಟ್ಸಾಪ್‌ ಆಕೌಂಟ್ ಅನ್ನು ನಾಲ್ಕು ಡಿವೈಸ್‍ಗಳಿಗೆ ಲಿಂಕ್ ಮಾಡಲು ಅವಕಾಶ ನೀಡಲಿದೆ.

ಹೊಸ ಫೀಚರ್ ನಲ್ಲಿ ವಾಟ್ಸಾಪ್ ಅನ್ನು ಯಾವುದೆ ಡಿವೈಸ್ ಮೂಲಕ ಕೂಡ ಕನೆಕ್ಟ್ ಮಾಡಿ, ಚಾಟ್ ಮಾಡಬಹುದಾಗಿದೆ. ಇದರಿಂದಾಗಿ ನಮ್ಮ ಚಾಟ್‍ಗಳು ಸುಕ್ಷಿತವಾಗಿರಲಿದೆ ಎಂದು ವಾಟ್ಸಾಪ್‌ ದೃಢಪಡಿಸಿದೆ.

ಈ ಹೊಸ ಫೀಚರ್ ಆರಂಭಿಕ ಹಂತದಲ್ಲಿದೆ. ವಾಟ್ಸಾಪ್‌ ನಲ್ಲಿರುವ ಲಿಂಕ್ಡ್ ಡಿವೈಸಸ್ ಸೆಟ್ಟಿಂಗ್‍ನಿಂದ ಬೀಟಾ ಎಂದು ಲೇಬಲ್ ಮಾಡಲಾದ ವೈಶಿಷ್ಟ್ಯವನ್ನು ಬಳಕೆದಾರರು ಆಯ್ಕೆ ಮಾಡಬೇಕು. ಈ ಹೋಸ ಫೀಚರ್ ಬಳಸುವ ವೇಳೆ ಬಳಕೆದಾರರು ಆನ್‍ಲೈನ್‍ನಲ್ಲಿ ಇದ್ದಾರೆಯೆ ಎಂದು ಖಚಿತಪಡಿಸಿಕೊಳ್ಳಬೇಕಾಗಿಲ್ಲ. ಸ್ಮಾರ್ಟ್ ಫೋನ್ ಆಫ್ ಲೈನ್ ಹೋದ 14 ದಿನಗಳ ವರೆಗೆ ಸಂದೇಶಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ಸಾಧ್ಯವಾಗುತ್ತದೆ. ಒಂದು ವೇಳೆ ಮೊಬೈಲ್ ಚಾರ್ಜ್ ಖಾಲಿಯಾದರೂ ವಾಟ್ಸಾಪ್‌ ವೆಬ್ ಕಾರ್ಯನಿರತವಾಗಿರುತ್ತದೆ.

ವಾಟ್ಸ್ಆ್ಯಪ್ ಡಿವೈಸ್ ಬಳಕೆ ಹೇಗೆ?

  1. ಮೊದಲಿಗೆ ಫೋನ್‌ನಲ್ಲಿ ವಾಟ್ಸಾಪ್‌​​ ತೆರೆದು, ನಂತರ ಮೇಲಿನ ಬಲ ಮೂಲೆಯಲ್ಲಿರುವ ಮೂರು-ಚುಕ್ಕೆಗಳ ಐಕಾನ್ ಮೇಲೆ ಟ್ಯಾಪ್ ಮಾಡಬೇಕು.
  2. ಲಿಂಕ್ಡ್ ಡಿವೈಸ್ ಮೇಲೆ ಟ್ಯಾಪ್ ಮಾಡಬೇಕು.
  3. ನಂತರ “ಮಲ್ಟಿ-ಡಿವೈಸ್ ಬೀಟಾ” ಮೇಲೆ ಟ್ಯಾಪ್ ಮಾಡಿ, ಇದರಲ್ಲಿ ವಾಟ್ಸಾಪ್‌ ಒಂದು ಪೇಜ್‌ ಅನ್ನು ಡಿಸ್‌ ಪ್ಲೇ ಮಾಡಲಿದೆ.
  4. ಇದೀಗ “ಜಾಯಿನ್‌ ಬೀಟಾ” ಬಟನ್ ಮೇಲೆ ಟ್ಯಾಪ್ ಮಾಡಿ ಮತ್ತು “ಕಂಟಿನ್ಯೂ” ಬಟನ್ ಒತ್ತಬೇಕು.
  5. ಇದಾದ ನಂತರ ಕ್ಯುಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಸ್ಮಾರ್ಟ್‌ಫೋನ್ ಅನ್ನು ವಾಟ್ಸಾಪ್‌​​ ವೆಬ್‌ಗೆ ಲಿಂಕ್ ಮಾಡಬೇಕು.

ಟಾಪ್ ನ್ಯೂಸ್

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

11

ಕ್ರಿಕೆಟ್‌ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್‌11ನಲ್ಲಿ ಒಲಿಯಿತು 1.5 ಕೋಟಿ

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qwewweq

K. Jayaprakash Hegde; ಮೀನುಗಾರಿಕೆ, ಪ್ರವಾಸೋದ್ಯಮದ ಅಭಿವೃದ್ದಿಗೆ ಹೆಚ್ಚಿನ ಆಧ್ಯತೆ 

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

11

ಕ್ರಿಕೆಟ್‌ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್‌11ನಲ್ಲಿ ಒಲಿಯಿತು 1.5 ಕೋಟಿ

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

1-BVR-1

Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.