ವಾಟ್ಸ್‌ಆ್ಯಪ್ ಚಾಟಿಂಗ್ ಹಿಸ್ಟರಿ ರವಾನೆ ಇನ್ನು ಸುಲಭ
ಖಾಸಗಿ ವೈ-ಫೈ ಮೂಲಕ ವರ್ಗಾಯಿಸಲು ಅವಕಾಶ ಕಲ್ಪಿಸಲಾಗುತ್ತದೆ
Team Udayavani, Jan 24, 2022, 2:50 PM IST
ನವದೆಹಲಿ: ವಾಟ್ಸ್‌ಆ್ಯಪ್‌ನ ಚಾಟಿಂಗ್ ಹಿಸ್ಟರಿಯನ್ನು ಆ್ಯಂಡ್ರಾಯ್ಡ ಫೋನ್‌ಗಳಿಂದ ಆ್ಯಪಲ್ ಫೋನ್‌ಗಳಿಗೆ ವರ್ಗಾಯಿಸುವಂಥ ಸೌಲಭ್ಯವೊಂದು ಸದ್ಯದಲ್ಲೇ ಸಿಗಲಿದೆ. ಇದರಿಂದ, ಆ್ಯಂಡ್ರಾಯ್ಡ ಫೋನ್ ಗಳಿಂದ ಆ್ಯಪಲ್ ಫೋನ್‌ಗಳಿಗೆ ಶಿಫ್ಟ್ ಆಗುವ ಗ್ರಾಹಕರಿಗೆ ಅನುಕೂಲವಾಗಲಿದೆ.
ಈ ಸೌಲಭ್ಯವನ್ನು ಅಭಿವೃದ್ಧಿಪಡಿಸುವಲ್ಲಿ ವಾಟ್ಸ್ ಆ್ಯಪ್ ತಂತ್ರಜ್ಞರು ನಿರತರಾಗಿದ್ದಾರೆ. ಹೀಗೆ, ಆ್ಯಂಡ್ರಾಯ್ಡನಿಂದ ಆ್ಯಪಲ್ ಫೋನ್‌ಗಳಿಗೆ ವಾಟ್ಸ್‌ಆ್ಯಪ್ ಚಾಟ್ ವರ್ಗಾಯಿಸಬೇಕಾದರೆ ಎರಡೂ ಮೊಬೈಲ್‌ಗಳನ್ನು ಹೊಂದಿರಬೇಕು ಹಾಗೂ ಎರಡರಲ್ಲೂ ವಾಟ್ಸ್ ಆ್ಯಪ್ ಇರಲೇಬೇಕು. ಜೊತೆಗೆ, ಚಾಟ್ ಹಿಸ್ಟರಿ ವರ್ಗಾವಣೆಯನ್ನು ಕೇಬಲ್ ಮೂಲಕ ಅಥವಾ ಖಾಸಗಿ ವೈ-ಫೈ ಮೂಲಕ ವರ್ಗಾಯಿಸಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ಹೇಳಲಾಗಿದೆ.
ಯುಎಇ: 30 ದಿನ ಡ್ರೋನ್ ಬ್ಯಾನ್
ಮುಂದಿನ ಒಂದು ತಿಂಗಳ ಕಾಲ ಯುಎಇ ವ್ಯಾಪ್ತಿಯಲ್ಲಿ ಡ್ರೋನ್ ಬಳಕೆ ಮಾಡುವುದನ್ನು ಅಲ್ಲಿನ ಸರ್ಕಾರ ನಿಷೇಧಿಸಿದೆ. ಕೆಲ ದಿನಗಳ ಹಿಂದಷ್ಟೇ ಯೆಮೆನ್ ಹೌತಿ ಬಂಡುಕೋರರು ಅಬುಧಾಬಿಯ ತೈಲ ಸಂಗ್ರಹಾಗಾ ರಗಳ ಮೇಲೆ ಡ್ರೋನ್ ದಾಳಿ ನಡೆಸಿದ್ದರಿಂದ, ಇಬ್ಬರು ಭಾರತೀಯರು ಸೇರಿದಂತೆ ಮೂವರು ಅಸುನೀಗಿದ ಘಟನೆ ಬಳಿಕ ಈ ತೀರ್ಮಾನ ಕೈಗೊಳ್ಳಲಾಗಿದೆ. ಆದರೆ, ಸರ್ಕಾರದ ನಿರ್ಧಾರಕ್ಕೆ ಸಂಬಂಧಿಸಿದಂತೆ ಇರುವ ಅಧಿಕೃತ ಆದೇಶದಲ್ಲಿ ದಾಳಿಯ ಅಂಶವನ್ನು ಉಲ್ಲೇಖಿಸಲಾಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಟಿವಿಎಸ್ ನಿಂದ ಹೊಸ ಮಾದರಿಯ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಗಳ ಬಿಡುಗಡೆ
ಜಿಯೋ ಫೋನ್ ನೆಕ್ಸ್ಟ್ನ ಸೀಮಿತ ಅವಧಿಯ ‘ಎಕ್ಸ್ಚೇಂಜ್ ಟು ಅಪ್ಗ್ರೇಡ್’ ಕೊಡುಗೆ
ವಿವೋ ಹೊಸ ಫೋನ್ ಬಿಡುಗಡೆ; 5000 ಎಂಎಎಚ್ ಬ್ಯಾಟರಿ ಸಾಮರ್ಥ್ಯ
ಸ್ಯಾಮ್ ಸಂಗ್ ಗೆಲಾಕ್ಸಿ ಎಫ್ 23 5ಜಿ ಮೊಬೈಲ್: ಉತ್ತಮ ಸ್ಪೆಸಿಫಿಕೇಷನ್ ಕಡಿಮೆ ಬೆಲೆ
ಮೊಟೊರೊಲಾ ಎಡ್ಜ್ 30 ಬಿಡುಗಡೆ; ಮೇ 19ರಿಂದ ಮಾರುಕಟ್ಟೆಯಲ್ಲಿ ಲಭ್ಯ
MUST WATCH
ಹೊಸ ಸೇರ್ಪಡೆ
ಮಾರ್ಕೋನಹಳ್ಳಿ ಜಲಾಶಯ ಭರ್ತಿ: ರೈತರಲ್ಲಿ ಮಂದಹಾಸ, ಜಲಾಶಯದ ಒಳಹರಿವು 2200 ಕ್ಯೂಸೆಕ್ಸ್
ಟಿವಿಎಸ್ ನಿಂದ ಹೊಸ ಮಾದರಿಯ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಗಳ ಬಿಡುಗಡೆ
ತೈಲ ಸೋರಿಕೆಯಿಂದ ಕಪ್ಪಾದ ಸುಂದರ ಗೋವಾ ಬೀಚ್ : ಓಡಾಡುವುದೇ ಕಷ್ಟಕರ
ಜಾರಿಗೆಬೈಲು ಕಳ್ಳರ ಕೈಚಳಕ : 95 ಸಾವಿರ ಮೌಲ್ಯದ ನಗದು, ಸೊತ್ತು ಕಳವು
ಎಸ್ ಎಸ್ ಎಲ್ ಸಿ ಫಲಿತಾಂಶ; ಏನೇ ಬರಲಿ, ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ: ಸಚಿವ ಸುಧಾಕರ್ ಮನವಿ