BYJU’S, Unacademy,Vedantu….. ಎಜುಟೆಕ್‌ ಕಂಪನಿಗಳು ಫೇಲ್‌ ಆಗುತ್ತಿರುವುದೇಕೆ?


Team Udayavani, Jul 28, 2024, 11:40 AM IST

edtech companies in india

ಭಾರತೀಯ ಕ್ರಿಕೆಟ್‌ ತಂಡದ ಪ್ರಾಯೋಜಕತ್ವಕ್ಕೆ ಸಂಬಂಧಿಸಿದಂತೆ 158 ಕೋಟಿ ಬಾಕಿ ಉಳಿಸಿಕೊಂಡಿರುವ ಎಜುಟೆಕ್‌ ಬೈಜೂಸ್‌ ವಿರುದ್ಧ ಕಾರ್ಪೋರೆಟ್‌ ದಿವಾಳಿ ಪ್ರಕ್ರಿಯೆ ಆರಂಭಿಸಲು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಮುಂದಾಗಿದೆ. ಹಿಂದೊಮ್ಮೆ ಸ್ಟಾರ್ಟ್‌ಅಪ್‌ ಗಳ “ಸೂಪರ್‌ ಸ್ಟಾರ್‌’ ಎನಿಸಿದ್ದ ಬೈಜೂಸ್‌ ಪತನವು ಭಾರತದ ಎಜುಟೆಕ್‌ ಸ್ಟಾರ್ಟ್‌ಅಪ್‌ ಗಳ ವೈಫ‌ಲ್ಯದ ಪ್ರತಿಬಿಂಬವಾಗಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಎಜುಟೆಕ್‌ ಕಂಪನಿಗಳ ಬೆಳವಣಿಗೆ, ಕುಸಿತ ಸೇರಿ ವಿವಿಧ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಎಜುಟೆಕ್‌ ಉದ್ಯಮ

ಭಾರತದಲ್ಲಿ 2004ರಲ್ಲೇ ಎಜುಟೆಕ್‌ ಉದ್ಯಮ ಚಿಗುರೊಡೆಯಿತು. ಎಕ್ಸ್‌ಟ್ರಾ ಮಾರ್ಕ್ಸ್, ಖಾನ್‌ ಅಕಾಡೆಮಿಗಳು ಆನ್‌ಲೈನ್‌ ಮೂಲಕ ಪಾಠ ಬೋಧನೆ ಆರಂಭಿಸಿದವು. ನಿಧಾನಗತಿಯಲ್ಲಿದ್ದ ಎಜುಟೆಕ್‌ ಉದ್ಯಮಕ್ಕೆ ಕೋವಿಡ್‌ ಸಾಂಕ್ರಾಮಿಕವು ಕಾಲಘಟ್ಟವು ಹೊಸ ಆಯಾಮವನ್ನು ತಂದುಕೊಟ್ಟಿತು. ಅಲ್ಲಿಯವರೆಗೂ ತಮ್ಮ ಮಿತಿಯಲ್ಲೇ ಕಾರ್ಯಾಚರಣೆ ನಡೆಸುತ್ತಿದ್ದ ಎಜುಟೆಕ್‌ ಕಂಪನಿಗಳು ಕೋವಿಡ್‌ ಕಾಲಘಟ್ಟದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡವು. 2011ರಲ್ಲಿ ಆರಂಭವಾದ ಬೈಜೂಸ್‌ ಸ್ಟಾರ್ಟ್‌ಅಪ್‌, ಕೋವಿಡ್‌ ಅವಕಾಶವನ್ನು ಬಾಚಿಕೊಂಡು ದಿಢೀರ್‌ನೆ ಬೆಳವಣಿಗೆ ಕಂಡಿತು! ಜತೆಗೆ, ವೇದಾಂತು, ಅಪ್‌ಗ್ರೇಡ್‌, ಆಕಾಶ್‌ನಂಥ ಸ್ಟಾರ್ಟ್‌ಅಪ್‌ಗಳು ಮುಂಚೂಣಿಗೆ ಬಂದವು. ಹೂಡಿಕೆದಾರರೂ ಎಜುಟೆಕ್‌ ಉದ್ಯಮದ ಮೇಲೆ ಹೆಚ್ಚಿನ ಆತ್ಮವಿಶ್ವಾಸ ಇರಿಸಿಕೊಂಡರು. ಇದರೊಂದಿಗೆ ಭಾರತದಲ್ಲಿ ಎಜುಟೆಕ್‌ ಬೃಹತ್‌ ಲಾಭದಾಯಕ ಉದ್ಯಮವಾಗಿ ಬದಲಾಯಿತು!

ತಪ್ಪಾಯ್ತಾ ಉದ್ಯಮ ಲೆಕ್ಕಾಚಾರ?

ಭಾರೀ ವೇಗದಲ್ಲಿ ಬೆಳವಣಿಗೆಗಳನ್ನು ಕಂಡ ಎಜುಟೆಕ್‌ ಉದ್ಯಮವು ಅಷ್ಟೇ ವೇಗದಲ್ಲಿ ಕುಸಿತವೂ ಕಂಡಿದ್ದು ಕೂಡ ವಿಪರ್ಯಾಸ. ಇತರ ಉದ್ಯಮಗಳಂತೆ, ಆನ್‌ಲೈನ್‌ ಬೋಧನೆಯ ವೇದಿಕೆಗಳು ಕೋವಿಡ್‌ ನಂತರ ಬಿಸಿನೆಸ್‌ ಮಾಡೆಲ್‌ ಗುರುತಿಸಿಕೊಳ್ಳಲು ವಿಫ‌ಲವಾದವು. ಕೋವಿಡ್‌ ಕಾಲದಲ್ಲಿ ಉಂಟಾದ ಶೈಕ್ಷಣಿಕ ಪರಿಸ್ಥಿತಿಯು ಸ್ಟಾರ್ಟ್‌ಅಪ್‌ ಗಳಲ್ಲಿ ವಿಪರೀತ ಆತ್ಮವಿಶ್ವಾಸವನ್ನು ಹೆಚ್ಚಿಸಿತು. ಪರಿಣಾಮ ಎಲ್ಲೆ ಮೀರಿ ಬಂಡವಾಳ ಹೂಡಿಕೆ ಮತ್ತು ವೆಚ್ಚ ಮಾಡಿದವು. ಕೋವಿಡ್‌ ಸಾಂಕ್ರಾಮಿಕ ಮುಗಿದ ನಂತರವೂ ಶೈಕ್ಷಣಿಕ ವಲಯವು ಹಿಂದಿನ ಸ್ಥಿತಿಗೆ ಮರಳಲಾರವು ಎಂಬ ಅವುಗಳ ಎಣಿಕೆ ಸುಳ್ಳಾಯಿತು. ಅದರ ಪರಿಣಾಮವನ್ನು ಇಡೀ ಎಜುಟೆಕ್‌ ಉದ್ಯಮ ಎದುರಿಸುತ್ತಿದೆ.

ಅಗತ್ಯಕ್ಕಿಂತಲೂ ಹೆಚ್ಚು ನೇಮಕಾತಿ

ಕೋವಿಡ್‌ ಕಾಲ ಘಟ್ಟದಲ್ಲಿ ಸೃಷ್ಟಿಯಾದ ಬೇಡಿಕೆಯಿಂದಾಗಿ ಬಹುತೇಕ ಎಜುಟೆಕ್‌ ಕಂಪನಿಗಳು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗಿಗಳನ್ನು ನೇಮಕ ಮಾಡಿಕೊಂಡವು. ಉದ್ಯೋಗ ಕಡಿತ ಪ್ರಕ್ರಿಯೆ ಆರಂಭವಾಗುವ ಮುಂಚೆ ಬೈಜೂಸ್‌ ನಲ್ಲಿ 12 ಸಾವಿರ, ಅನ್‌ಅಕಾಡೆಮಿ ಮತ್ತು ವೇದಾಂತು ಕಂಪನಿಯು 6000 ಉದ್ಯೋಗಿಗಳನ್ನು ಹೊಂದಿತ್ತು. ಆದರೆ, ಕೋವಿಡ್‌ ನಂತರ ಹಾಗೂ ಆರ್ಥಿಕ ಹಿಂಜರಿತ ಪರಿಣಾಮ ಎಜುಟೆಕ್‌ ವಲಯದ ಉದ್ಯಮಗಳು ಭಾರೀ ನಷ್ಟ ಅನುಭವಿಸಿದವು. ಪರಿಣಾಮ ಉದ್ಯೋಗಗಳನ್ನು ಕಡಿತ ಮಾಡುವುದು ಅನಿವಾರ್ಯವಾಯಿತು. ಇದು ಕೂಡ ಪ್ರತಿಕೂಲ ಪರಿಣಾಮ ಬೀರಿತು.

ಪ್ರಚಾರ, ಪ್ರಾಯೋಜಕತ್ವಕ್ಕೆ ಭಾರೀ ವೆಚ್ಚ

ತಮ್ಮ ಉದ್ಯಮವನ್ನು ವಿಸ್ತರಿಸುವುದಕ್ಕಾಗಿ ಎಜುಟೆಕ್‌ ಕಂಪನಿಗಳು ವಿಪರೀತ ಪ್ರಚಾರದ ಮೊರೆ ಹೋದವು. ಇದಕ್ಕಾಗಿ ಸಾಕಷ್ಟು ಹಣವನ್ನು ವ್ಯಯಿಸಿದವು. ಅಲ್ಲದೇ, ಬೃಹತ್‌ ಕ್ರೀಡಾ ಕಾರ್ಯಕ್ರಮಗಳ ಪ್ರಾಯೋಜಕತ್ವಕ್ಕೆ ಪೈಪೋಟಿಗೆ ಬಿದ್ದವು. ಉದಾಹರಣೆಗೆ, ಕತಾರ್‌ನಲ್ಲಿ ನಡೆದ ಫಿಫಾ ಪುಟ್ಬಾಲ್‌ ವಿಶ್ವಕಪ್‌, ಭಾರತೀಯ ಕ್ರಿಕೆಟ್‌ ತಂಡದ ಪ್ರಾಯೋಜಕತ್ವವನ್ನು ಬೈಜೂಸ್‌ ಪಡೆದುಕೊಂಡರೆ, ಅನ್‌ ಅಕಾಡೆಮಿ ಮತ್ತು ವೇದಾಂತು ಐಪಿಎಲ್‌ನ ಪ್ರಮುಖ ಸ್ಪಾನ್ಸರ್‌ ಕಂಪನಿ ಗಳಾಗಿದ್ದವು. ಈ ಎಲ್ಲ ವೆಚ್ಚವನ್ನೂ ಭರಿಸಿಕೊಳ್ಳುವ ಶಕ್ತಿಗಳು ಸ್ಟಾರ್ಟ್‌ಅಪ್‌ ಗಳಿಗೆ ಇರಲಿಲ್ಲ. ಆದರೆ, ಉದ್ಯಮದ ಮೇಲಿನ ಅತಿಯಾದ ವಿಶ್ವಾಸವು ಅಪಾಯಕ್ಕೆ ನೂಕಿತು. ಇದೇ ಪರಿಸ್ಥಿತಿಯು ಉಳಿದ ಬಹುತೇಕ ಸ್ಟಾರ್ಟ್‌ಅಪ್‌ಗ್ಳದ್ದೂ ಆಗಿದೆ.

ಅಗತ್ಯಕ್ಕಿಂತ ಹೆಚ್ಚು ಕಂಪನಿಗಳ ಸ್ವಾಧೀನ

ಜಾಹೀರಾತುಗಳು ಮತ್ತು ಬಾಲಿವುಡ್‌ನ‌ ದುಬಾರಿ ರಾಯಭಾರಿಗಳ ಮೇಲೆ ವಿಪರೀತ ವೆಚ್ಚ ಮಾಡಿದ್ದ ಎಜುಟೆಕ್‌ನ ದೈತ್ಯಗಳಾದ ಬೈಜೂಸ್‌ ಮತ್ತು ಅನ್‌ ಅಕಾಡೆಮಿ 2020 ಜನವರಿಯಿಂದ 2 ಡಜನ್‌ ಆನ್‌ಲೈನ್‌ ಬೋಧನೆಯ ಸ್ಟಾರ್ಟ್‌ ಅಪ್‌ ವೇದಿಕೆಗಳನ್ನು ಸ್ವಾಧೀನಪಡಿಸಿಕೊಂಡಿದ್ದವು. ಆದರೆ, ಈ ಯಾವ ಕಂಪನಿಗಳು ವರವಾಗಿ ಪರಿಣಮಿಸಲಿಲ್ಲ. ಈ ಎರಡೂ ಕಂಪನಿಗಳಲ್ಲದೇ, ಉಳಿದ ಹಲವು ಕಂಪನಿಗಳು ಇದೇ ಮಾರ್ಗವನ್ನು ತುಳಿದಿದ್ದವು. ಆದರೆ, ಇದಾವುದೂ ಭವಿಷ್ಯದ ದೃಷ್ಟಿಯಿಂದ ಲಾಭದಾಯಕ ವ್ಯವಹಾರವಾಗಿ ಉಳಿಯಲಿಲ್ಲ.

428 ಎಜುಟೆಕ್‌ ಕಂಪನಿಗಳು ಬಂದ್‌!

ಕೋವಿಡ್‌ ಸಾಂಕ್ರಾಮಿಕ ಮುಗಿದ ಮೇಲೆ ಉಂಟಾದ ಆರ್ಥಿಕ ಹಿಂಜರಿತವು ಭಾರತದ ಎಜುಟೆಕ್‌ ಉದ್ಯಮ ಮೇಲೆ ಗಂಭೀರ ಪರಿಣಾಮ ಬೀರಿತು. ಹೂಡಿಕೆಯ ಕೊರತೆಯಿಂದ ನಲುಗತ್ತಿದ್ದ 428ಕ್ಕೂ ಅಧಿಕ ಎಜುಟೆಕ್‌ ಸ್ಟಾರ್ಟ್‌ಅಪ್‌ಗ್ಳು 2023ರಲ್ಲಿ ಅಂದಾಜು ಬಾಗಿಲೆಳೆದವು! ಹೀಗೆ, ಬಂದ್‌ ಆದ ಸ್ಟಾರ್ಟ್‌ಅಪ್‌ಗ್ಳ ಪೈಕಿ ವೇದುಅಕಾಡೆಮಿ, ಕ್ವಿಜ್‌ಮೈಂಡ್‌, ಟ್ರೈಬಕ್‌ ಬ್ಲೂ, ಆರ್‌ಕೆಎಸ್‌ ಲಾ ಕ್ಲಾಸಿಸ್‌, ಕೀ17ಟೆಕ್‌ ಪ್ರಮುಖವಾದವು. ಕೋವಿಡ್‌ ಕಾಲಘಟ್ಟದಲ್ಲಿ ಈ ಎಲ್ಲ ಸ್ಟಾರ್ಟ್‌ಅಪ್‌ ಗಳು ಚೆನ್ನಾಗಿಯೇ ಪ್ರದರ್ಶನ ತೋರಿದ್ದವು ಎಂಬುದು ಗಮನಾರ್ಹ.

ಯಶಸ್ಸಿನ ಶಿಖರವೇರಿ ಕುಸಿದ ಬೈಜೂಸ್‌!

ಕೇರಳದ ಎಂಜಿನಿಯರ್‌ ಬೈಜು ರವೀಂದ್ರನ್‌ ಮತ್ತು ದಿವ್ಯಾ ಗೋಕುಲ್‌ನಾಥ್‌ ಅವರು 2011ರಲ್ಲಿ ಬೈಜೂಸ್‌ ಆರಂಭಿಸಿದರು. ಮೊದಲಿಗೆ ವಿಡಿಯೋ ಆಧರಿತ ಬೋಧನೆ ಮಾಡಲಾಗುತ್ತಿತ್ತು. 2015ರಲ್ಲಿ ಆ್ಯಪ್‌ಗೆ ಚಾಲನೆ ನೀಡಲಾಯಿತು. ಆರಂಭದಲ್ಲಿ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಆನ್‌ಲೈನ್‌ ತರಬೇತಿ ನೀಡಲಾಗುತ್ತಿತ್ತು. ಬಳಿಕ ನಿಧಾನವಾಗಿ ಆನ್‌ಲೈನ್‌ ಬೋಧನೆಯನ್ನು ಶಾಲಾ ಮಕ್ಕಳವರೆಗೂ ವಿಸ್ತರಿಸಲಾಯಿತು. ಈ ಅವಧಿಯಲ್ಲಿ ನವೋದ್ಯಮವಾಗಿ ಬೈಜೂಸ್‌ ಭಾರೀ ಯಶಸ್ಸು ಕಂಡಿತು. 2022ರಲ್ಲಿ ಬೈಜೂಸ್‌ ಕಂಪನಿ ಮೌಲ್ಯ 1.84 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿತ್ತು. ಅದೀಗ 24 ಸಾವಿರ ಕೋಟಿ ರೂ.ಗೆ ಇಳಿಕೆಯಾಗಿದೆ! ಸಾಕಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲಾಗಿದ್ದರೂ, ಇರುವ ಉದ್ಯೋಗಿಗಳಿಗೆ ಸಂಬಳ ನೀಡಲೂ ದುಡ್ಡಿಲ್ಲ. ಅಕ್ಷರಶಃ ದಿವಾಳಿ ಅಂಚಿಗೆ ತಲುಪಿದೆ. ಯಾವುದೇ ಹಂತದಲ್ಲಿ ಸಂಪೂರ್ಣ ಬಂದ್‌ ಆಗುವ ಹಂತಕ್ಕೆ ಬೈಜೂಸ್‌ ಬಂದು ನಿಂತಿದೆ.

ಈಗ ಹೇಗಿದೆ ಎಜುಟೆಕ್‌ ಉದ್ಯಮದ ಸ್ಥಿತಿ?

ಕಳೆದ ಎರಡ್ಮೂರು ವರ್ಷದಲ್ಲಿ ಪಾತಾಳ ಕಂಡಿದ್ದ ಭಾರತದ ಎಜುಟೆಕ್‌ ಕಂಪನಿಗಳು ಪ್ರಸಕ್ತ ಸಾಲಿನಲ್ಲಿ ತುಸು ಸುಧಾರಿಸಿಕೊಳ್ಳುತ್ತಿವೆ ಎಂಬುದು ಉದ್ಯಮ ಪಂಡಿತರ ಲೆಕ್ಕಾಚಾರವಾಗಿದೆ. ನಿಧಾನವಾಗಿ, ಮತ್ತೆ ಆನ್‌ಲೈನ್‌ ಕಲಿಕೆ ಹೆಚ್ಚಳವಾಗುತ್ತಿರುವುದು ಇದಕ್ಕೆ ಕಾರಣವಾಗಿದೆ. 2028ರ ಹೊತ್ತಿಗೆ ಶೇ.19ರಷ್ಟು ಬೆಳವಣಿಗೆಯನ್ನು ದಾಖಲಿಸಬಹುದೆಂದು ಅಂದಾಜಿಸಲಾಗಿದೆ. ಇದರ ಮಧ್ಯೆಯೂ, ಹಲವು ಕಂಪನಿಗಳು ತಮ್ಮ ಅಸ್ತಿತ್ವವನ್ನು ಕಾಪಾಡಿಕೊಳ್ಳಲು ಹೆಣಗಾಡುತ್ತಿವೆ.

ಎಜುಟೆಕ್‌ ಕಂಪನಿಗಳ ಪತನದ ಹಾದಿ..

ಕೋವಿಡ್‌ ಸಾಂಕ್ರಾಮಿಕ ನಂತರ ಅಂದರೆ 2022ರ ಬಳಿಕ ಎಜುಟೆಕ್‌ ಕಂಪನಿಗಳ ಪತನ ಶುರುವಾಯಿತು. ಹಲವು ಕಂಪನಿಗಳಿಗೆ ತೊಂದರೆ.

ಶಾಲಾ, ಕಾಲೇಜುಗಳು ಮತ್ತು ಇಡೀ ಶೈಕ್ಷಣಿಕ ವ್ಯವಸ್ಥೆಯು ಮತ್ತೆ ಕೋವಿಡ್‌ ಸಾಂಕ್ರಾಮಿಕ ಪೂರ್ವ ಸ್ಥಿತಿಗೆ ಹಿಂದಿರುಗುತ್ತಿದ್ದಂತೆ ಆನ್‌ ಲೈನ್‌ ಬೋಧನಾ ವೇದಿಕೆಗಳಿಗೆ ಬೇಡಿಕೆ ಕುಸಿಯಲಾರಂಭಿಸಿತು.

ಲಾಭಾಂಶ ಗಣನೀಯವಾಗಿ ಕುಸಿತವಾಗಿದ್ದೂ ಮಾತ್ರವಲ್ಲದೇ ಬಂಡವಾಳ ಕೂಡ ಹರಿದು ಬರಲಿಲ್ಲ. 2022ರಲ್ಲಿ 2.6 ಶತಕೋಟಿ (21580 ಕೋಟಿ ರೂ.) ಡಾಲರ್‌ನಷ್ಟು ಹರಿದು ಬಂದಿದ್ದ ಬಂಡವಾಳವು ಒಂದೇ ವರ್ಷದಲ್ಲಿ ಅಂದರೆ 2023ರಲ್ಲಿ ವರ್ಷದಲ್ಲಿ 29.73 ಕೋಟಿ ಡಾಲರ್‌ಗೆ (2400 ಕೋಟಿ) ಇಳಿಕೆಯಾಯಿತು. 2024ರಲ್ಲಿ ಈ ಪ್ರಮಾಣ ಇನ್ನೂ ತಗ್ಗಿದೆ.

ಕೋವಿಡ್‌ ಸಾಂಕ್ರಾಮಿಕ ಪರಿಣಾಮ ಉದ್ಭವಿಸಿದ ಆರ್ಥಿಕ ಹಿಂಜರಿತವೂ ಎಜುಟೆಕ್‌ ವಲಯದ ಹಿನ್ನಡೆಗೆ ಹೆಚ್ಚಿನ ಕೊಡುಗೆಯನ್ನು ನೀಡಿತು. ಉದ್ಯೋಗಿಗಳು ಕೆಲಸ ಕಳೆದುಕೊಂಡರು.

ಟಾಪ್ ನ್ಯೂಸ್

Udupi ಗೀತಾರ್ಥ ಚಿಂತನೆ-35; ಸ್ವಕರ್ಮ ಪಾಲನೆಯಿಂದ ಸಿದ್ಧಿಯೂ ಸಾಧ್ಯ

Udupi ಗೀತಾರ್ಥ ಚಿಂತನೆ-35; ಸ್ವಕರ್ಮ ಪಾಲನೆಯಿಂದ ಸಿದ್ಧಿಯೂ ಸಾಧ್ಯ

Donald-Trumph

US; ಕಮಲಾ ಹ್ಯಾರಿಸ್‌ ಜತೆ ಮತ್ತೊಂದು ಚರ್ಚೆ ಇಲ್ಲ:ಡೊನಾಲ್ಡ್‌ ಟ್ರಂಪ್‌

money

Bantwala: ನಿವೃತ್ತ ಸೈನಿಕರ 1.30 ಲಕ್ಷ ರೂ. ನಗದಿದ್ದ ಬ್ಯಾಗ್‌ ಕಳವು

CM Siddaramaiah ಸುಳ್ಳು ಹೇಳುವ ಬಿಜೆಪಿ ನಂಬಬೇಡಿ

CM Siddaramaiah ಸುಳ್ಳು ಹೇಳುವ ಬಿಜೆಪಿ ನಂಬಬೇಡಿ

State Govt;ಕಾರಾಗೃಹ ಇಲಾಖೆಗೆ ಮೇಜರ್‌ ಸರ್ಜರಿ: 43 ಮಂದಿ ಜೈಲು ಅಧಿಕಾರಿ, ಸಿಬಂದಿ ವರ್ಗಾವಣೆ

State Govt;ಕಾರಾಗೃಹ ಇಲಾಖೆಗೆ ಮೇಜರ್‌ ಸರ್ಜರಿ: 43 ಮಂದಿ ಜೈಲು ಅಧಿಕಾರಿ, ಸಿಬಂದಿ ವರ್ಗಾವಣೆ

Exam ಅಕ್ಟೋಬರ್‌ 3ಕ್ಕೆ ಪಿಎಸ್‌ಐ ಪರೀಕ್ಷೆ ಮರು ನಿಗದಿ

Exam ಅಕ್ಟೋಬರ್‌ 3ಕ್ಕೆ ಪಿಎಸ್‌ಐ ಪರೀಕ್ಷೆ ಮರು ನಿಗದಿ

Renukaswamy Case ದರ್ಶನ್‌ ಗ್ಯಾಂಗ್‌ 4 ದಿನ ನ್ಯಾಯಾಂಗ ಬಂಧನ ವಿಸ್ತರಣೆ

Renukaswamy Case ದರ್ಶನ್‌ ಗ್ಯಾಂಗ್‌ 4 ದಿನ ನ್ಯಾಯಾಂಗ ಬಂಧನ ವಿಸ್ತರಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ford Motor: ಭಾರತಕ್ಕೆ ಮತ್ತೆ ಮರಳಿದ ಫೋರ್ಡ್ ಮೋಟಾರ್-‌ ಚೆನ್ನೈ ಘಟಕ ಪುನರಾರಂಭ

Ford Motor: ಭಾರತಕ್ಕೆ ಮತ್ತೆ ಮರಳಿದ ಫೋರ್ಡ್ ಮೋಟಾರ್-‌ ಚೆನ್ನೈ ಘಟಕ ಪುನರಾರಂಭ

iPhone series: ಹೊಸ ಐಫೋನ್ 16 ಸರಣಿ- ಇದರಲ್ಲಿ ಏನೇನು ವೈಶಿಷ್ಟ್ಯಗಳಿವೆ ?

iPhone series: ಹೊಸ ಐಫೋನ್ 16 ಸರಣಿ- ಇದರಲ್ಲಿ ಏನೇನು ವೈಶಿಷ್ಟ್ಯಗಳಿವೆ ?

Big screen, low price iPhone-16 launch

iPhone-16: ಭಾರತದಲ್ಲೇ ಉತ್ಪಾದನೆ ಕಾರಣ ಐಫೋನ್‌-16 ಬೆಲೆಯಲ್ಲಿ ಇಳಿಕೆ

Hyundai Alcazar 2024: ಭಾರತದ ಮಾರುಕಟ್ಟೆಗೆ ಹುಂಡೈ ಅಲ್ಕಜಾರ್‌ ಬಿಡುಗಡೆ

Hyundai Alcazar 2024: ಭಾರತದ ಮಾರುಕಟ್ಟೆಗೆ ಹುಂಡೈ ಅಲ್ಕಜಾರ್‌ ಬಿಡುಗಡೆ

Brazil: ಸುಪ್ರೀಂ ಜಡ್ಜ್ ಜತೆ ಮಸ್ಕ್ ಜಗಳ; ಬ್ರೆಜಿಲ್‌ನಲ್ಲಿ “ಎಕ್ಸ್‌’ ಬಳಕೆಗೆ ತಡೆ

Brazil: ಸುಪ್ರೀಂ ಜಡ್ಜ್ ಜತೆ ಮಸ್ಕ್ ಜಗಳ; ಬ್ರೆಜಿಲ್‌ನಲ್ಲಿ “ಎಕ್ಸ್‌’ ಬಳಕೆಗೆ ತಡೆ

MUST WATCH

udayavani youtube

ಉಡುಪಿ ಕೃಷ್ಣ ಮಠದಲ್ಲಿರುವ ಸುಬ್ರಹ್ಮಣ್ಯ ಸನ್ನಿಧಿ

udayavani youtube

ಕೃಷ್ಣ ಮಠದ ಗಣಪತಿ ವಿಸರ್ಜನೆ ವೇಳೆ ತಾಸೆಯ ಪೆಟ್ಟಿಗೆ ಕುಣಿದು ಕುಪ್ಪಳಿಸಿದ ಭಕ್ತರು|

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

ಹೊಸ ಸೇರ್ಪಡೆ

Udupi ಗೀತಾರ್ಥ ಚಿಂತನೆ-35; ಸ್ವಕರ್ಮ ಪಾಲನೆಯಿಂದ ಸಿದ್ಧಿಯೂ ಸಾಧ್ಯ

Udupi ಗೀತಾರ್ಥ ಚಿಂತನೆ-35; ಸ್ವಕರ್ಮ ಪಾಲನೆಯಿಂದ ಸಿದ್ಧಿಯೂ ಸಾಧ್ಯ

Visa-fruad

Kasaragodu: ವೀಸಾ ವಂಚನೆ ಆರೋಪಿ ವಿರುದ್ಧ ಹಲವು ದೂರು

army

Kashmir; ಉಗ್ರರ ವಿರುದ್ಧ ಕಾರ್ಯಾಚರಣೆ: ಇಬ್ಬರು ಯೋಧರು ಹುತಾತ್ಮ

Donald-Trumph

US; ಕಮಲಾ ಹ್ಯಾರಿಸ್‌ ಜತೆ ಮತ್ತೊಂದು ಚರ್ಚೆ ಇಲ್ಲ:ಡೊನಾಲ್ಡ್‌ ಟ್ರಂಪ್‌

1-laden

Osama bin Laden ಪುತ್ರ ಹಂಝಾ ಜೀವಂತ: ರಹಸ್ಯವಾಗಿ ಅಲ್‌ ಕಾಯಿದಾಕ್ಕೆ ನೇತೃತ್ವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.