ತರಂಗಾಂತರಂಗ: ಪುನರ್ಜನ್ಮ- ಹುಟ್ಟು, ಸಾವು, ಮರುಹುಟ್ಟು ; ಇವುಗಳ ಗುಟ್ಟೇನು?


Team Udayavani, Jul 27, 2020, 5:30 PM IST

Punarjanma-01

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಜನ್ಮ ಜನ್ಮಾಂತರದ ಬಂಧ, ಋಣಾನುಬಂಧ, ಏಳೇಳು ಜನ್ಮಗಳ ಬಂಧ… ಇಂತಹ ಹಲವಾರು ಪದಬಳಕೆಗಳನ್ನು ಜನರ ಆಡುಮಾತಿನಲ್ಲಿ ನಾವು ಪ್ರತಿನಿತ್ಯವೆಂಬಂತೆ ಕೇಳುತ್ತಲೇ ಇರುತ್ತೇವೆ. ದೇಹ ಮಾತ್ರವೇ ನಶಿಸುತ್ತದೆ, ಆತ್ಮಕ್ಕೆ ಸಾವಿಲ್ಲ ಎಂಬ ನಂಬಿಕೆಯೂ ಇದೆ. ಪುನರ್ಜನ್ಮ ಎಂಬುದು ಸಾಮಾನ್ಯರಿಗೆ ಭಯಮಿಶ್ರಿತ ಕುತೂಹಲದ, ತತ್ವಜ್ಞಾನಿಗಳಿಗೆ ಶೋಧನೆಯ, ವಿಜ್ಞಾನಿಗಳಿಗೆ ಅನ್ವೇಷಣೆಯ ಮತ್ತು ನಾಸ್ತಿಕರಿಗೆ ‘ಹಾಗೇನಿಲ್ಲ ಬಿಡಿ’ ಎಂಬ ಕುತೂಹಲದ ವಿಷಯವಾಗಿದೆ. ಈ ಹಿನ್ನಲೆಯಲ್ಲಿ ಪುನರ್ಜನ್ಮ ವಿಷಯದ ಕುರಿತಾಗಿ ಒಂದಷ್ಟು ವಿಚಾರಗಳನ್ನು ನಿಮಗೆ ತಿಳಿಸಿಕೊಡುವ ಪ್ರಯತ್ನ ನಮ್ಮದು.

ಈ ಹಿಂದೆ ‘ತರಂಗ’ ವಾರಪತ್ರಿಕೆಯಲ್ಲಿ ಪ್ರಕಟಗೊಂಡು ಜನಮನ್ನಣೆ ಪಡೆದುಕೊಂಡಿದ್ದ ಈ ಲೇಖನದ ಯಥಾವತ್ ರೂಪ ಇದೀಗ ನಿಮ್ಮ ಮುಂದೆ…

– ಡಾ| ಎನ್‌. ಗೋಪಾಲಕೃಷ್ಣ

ಮರಣವೇ ಜೀವನದ ಕೊನೆಯಲ್ಲ; ಸಾವಿನ ಬಳಿಕ ಇನ್ನೊಂದು ಹೊಸ ಹುಟ್ಟು ಇದೆ ಎನ್ನುವುದು ನಂಬಿಕೆ. ಈ ಜನ್ಮದಲ್ಲಿ ಅಪೂರ್ಣವಾದ ಕಾಮನೆಗಳನ್ನು, ಇಲ್ಲಿ ಎಸಗಿದ ಕೆಲಸಗಳ ಪರಿಣಾಮಗಳನ್ನು ಅನುಭವಿಸುವುದಕ್ಕಾಗಿ ಇನ್ನೊಮ್ಮೆ ಜನಿಸಿ ಬರಬೇಕಾಗುತ್ತದೆ ಎಂಬುದು ಕರ್ಮಸಿದ್ಧಾಂತದ ಲೆಕ್ಕಾಚಾರ.

ವೇದವಾಗ್ಮಯ, ಭಗವದ್ಗೀತೆ, ಭಾಗವತ, ಪುರಾಣ ಸಾಹಿತ್ಯಗಳಲ್ಲಿ ಪುನರ್ಜನ್ಮ ಕುರಿತ ಹಲವಾರು ಉಲ್ಲೇಖಗಳಿವೆ. ಹಲವು ಪಾಶ್ಚಾತ್ಯ ವಿಜ್ಞಾನಿ- ಸಂಶೋಧಕರ ತಲಸ್ಪರ್ಶಿ ಅಧ್ಯಯನದ ಫ‌ಲವಾದ ನೂರಾರು ಗ್ರಂಥಗಳಿವೆ. ಎಲ್ಲೋ ಸತ್ತವರು ಇನ್ನೆಲ್ಲೋ ಹುಟ್ಟಿ ಬಂದ ಪ್ರತ್ಯಕ್ಷದರ್ಶಿ ವರದಿಗಳಿವೆ. ಮರುಹುಟ್ಟು ಪಡೆದು ಬಂದವರ ಇಂಥ ವಾಸ್ತವಿಕ ಘಟನೆಗಳು ವ್ಯಕ್ತಿತ್ವ ವಿಕಾಸ/ ನಡವಳಿಕೆಯ ಸುಧಾರಣೆ ಕುರಿತಂತೆ ನಮಗೆ ವಿಶಿಷ್ಟ ಸಂದೇಶವೊಂದು ನೀಡುತ್ತವೆ. ಈ ಬಗ್ಗೆ ನಮ್ಮ ಗಮನ ಸೆಳೆಯಲೆಳಸುವ ಬರಹ ಇದು.

ಪುನರಪಿ ಜನನಂ ಪುನರಪಿ ಮರಣಮ್‌

ಪುನರಪಿ ಜನನೀ ಜಠರೇ ಶಯನಮ್‌

ಆದಿಶಂಕರಾಚಾರ್ಯರ ಭಜಗೋವಿಂದಂನಲ್ಲಿ ಪ್ರಸಿದ್ಧ ಸಾಲುಗಳು ಇವು. ವ್ಯಕ್ತಿ ಪುನಃ ಪುನಃ ಹುಟ್ಟುತ್ತಾನೆ, ಪುನಃ ಪುನಃ ಸಾಯುತ್ತಾನೆ, ಪುನಃ ಪುನಃ ತಾಯಿಯ ಗರ್ಭದಲ್ಲಿ ನಿದ್ರಿಸುತ್ತಾನೆ ಎನ್ನುತ್ತಾರೆ ಶಂಕರಾಚಾರ್ಯರು

ಹಿಂದೂ ಧರ್ಮದಲ್ಲಿ ಪ್ರತಿ ಯುಗವೂ ದೇವರು ಅವತಾರವೆತ್ತಿ ಬರುವುದರಿಂದಲೇ ಪ್ರಾರಂಭ. ಸುಮಾರು ಐದು ಸಾವಿರ ವರ್ಷಗಳ ಹಿಂದೆ ಶ್ರೀಕೃಷ್ಣನ ಅವತಾರವಾಯಿತು. ಇದಾಗಿ ಒಂದು ಸಾವಿರ ವರ್ಷಗಳ ಬಳಿಕ ಜೈನ ತೀರ್ಥಂಕರ ಮಹಾವೀರ ಅವತಾರ. ತದನಂತರದಲ್ಲಿ ಗೌತಮ ಬುದ್ಧ, ಯೇಸುಕ್ರಿಸ್ತ, ಮಹಮದ್‌ ಇವರೆಲ್ಲರ ಆಗಮನ.

ನಮ್ಮ ಆತ್ಮ ಅಥವಾ ಜೀವ ಅಂತ್ಯ ಕಾಣುವುದು, ನಾವು ಕೈವಲ್ಯ ಜ್ಞಾನ ಪಡೆದು, ಮೋಕ್ಷ ಹೊಂದಿದಾಗ ಎನ್ನುತ್ತದೆ ಭಗವದ್ಗೀತೆ. ಬ್ರಹ್ಮಾಂಡ ವ್ಯವಸ್ಥೆಯು ಪುನರ್ಜನ್ಮದ ಸಿದ್ಧಾಂತಕ್ಕೆ ಅನುಗುಣವಾಗಿಯೇ ಇದೆ. ಪುನರ್ಜನ್ಮದ ಪರಿಕಲ್ಪನೆಯಲ್ಲಿ ಆತ್ಮವು ಶರೀರದೊಳಗೆ ಸೇರಿಕೊಳ್ಳುತ್ತದೆ. ಇಂಥ ಪ್ರಕ್ರಿಯೆ ಕ್ರಿಮಿಕೀಟ, ಪ್ರಾಣಿ, ಮನುಷ್ಯರೆಲ್ಲರಿಗೂ ಅನ್ವಯಿಸುತ್ತದೆ. ಆತ್ಮಕ್ಕೆ ಮೋಕ್ಷ ದೊರೆಯುವ ತನಕ ಈ ಪ್ರಕ್ರಿಯೆ ನಡೆಯುತ್ತಲೇ ಇರುತ್ತದೆ. ಭಗವದ್ಗೀತೆ ಹೇಳುತ್ತದೆ –

‘ವಾಸಾಂಸಿ ಜೀರ್ಣಾನಿ ಯಥಾ ವಿಹಾಯ

ನವಾನಿ ಗೃಹ್ಯಾತಿ ನರೋಪರಾಣಿ

ತಥಾ ಶರೀರಾಣಿ ವಿಹಾಯ ಜೀರ್ಣಾ

ನ್ಯನ್ಯಾನಿ ಸಂಯಾತಿ ನವಾನಿ ದೇಹೀ’

(ಅಧ್ಯಾಯ 2, ಶ್ಲೋಕ 22)

ನಾವು ಹಳೆಯ ಬಟ್ಟೆಯನ್ನು ಬಿಸುಟು, ಹೊಸದಾದ ವಸ್ತ್ರವನ್ನು ಧರಿಸುವಂತೆ ಆತ್ಮವೂ ತನ್ನ ಹಳೆಯ ಶರೀರದಿಂದ ಹೊರ ಹೋಗಿ, ಹೊಸ ಶರೀರವೊಂದನ್ನು ಪ್ರವೇಶ ಮಾಡುತ್ತದೆ.

‘ಬಿತ್ತಿದಂತೆ ಬೆಳೆ’ ಎಂಬಂತೆ, ನಮ್ಮ ಇಂದಿನ ಕರ್ಮಗಳೇ (ಕೆಲಸ) ಮುಂದೆ ಸೂಕ್ತವಾದ ಜನ್ಮ ಪಡೆಯಲುಸಹಾಯಕ. ಯಾವುದೇ ಕರ್ಮಗಳನ್ನು ಈ ಜನ್ಮದಲ್ಲಿ ಪೂರ್ಣ ಮಾಡದೆ ಉಳಿಸಿಕೊಂಡರೆ, ಅವುಗಳನ್ನು ಮುಂದಿನ ಜನ್ಮದಲ್ಲಿ ಬಂದು ಪೂರ್ಣಗೊಳಿಸಬೇಕಾದ ಅನಿವಾರ್ಯತೆ ಉಂಟಾಗುತ್ತದೆ.

ಇದನ್ನೂ ಓದಿ: ಪುರಾಣಗಳಲ್ಲಿ ಪುನರ್ಜನ್ಮದ ಉಲ್ಲೇಖ : ಅಭಿಮನ್ಯುವಿಗೆ ಗರ್ಭಾವಸ್ಥೆಯಲ್ಲೇ ಚಕ್ರವ್ಯೂಹದ ಪಾಠ!

ನಮ್ಮ ಭವಿಷ್ಯವನ್ನು ನಾವೇ ರೂಪಿಸಿಕೊಳ್ಳಲು ಇಹದಲ್ಲಿ ನಾವು ಮಾಡಬೇಕಾದುದೇನು? ಪರಶ್ರಮದ ಓದು, ದುಡಿಮೆ, ಸಮಾಜ ಸೇವೆ, ಉತ್ತಮ ಸ್ಥಾನಮಾನಕ್ಕಾಗಿ ಅವಿರತ ಪ್ರಯತ್ನ. ಅದೇ ರೀತಿ ಪರದಲ್ಲಿ, ಮುಂದಿನ ಜನ್ಮದಲ್ಲಿ ಉತ್ತಮ ಮನುಷ್ಯನಾಗಿ, ಸತುRಲ, ಪ್ರಸೂತನಾಗಬೇಕಾದರೆ ಅತ್ಯುತ್ತಮ ಕರ್ಮವನ್ನೇ ಎಸಗಬೇಕು. ಹೀಗೇ ಕರ್ಮಸಿದ್ಧಾಂತದಲ್ಲಿ ಅಚಲ ನಂಬಿಕೆ ನಮ್ಮದು.

ಮರುದುಂಬಿಯಾಗಿ ಮೇಣ್‌ ಕೋಗಿಲೆಯಾಗಿ

ಪುಟ್ಟುವುದು ನಂದನದೊಳ್‌ ಬನವಾಸಿ ದೇಶದೊಳ್‌

ಎಂದು ಕನ್ನಡದ ಆದಿಕವಿ ಪಂಪ, ಮರುಜನ್ಮದಲ್ಲಿ ನನ್ನ ಹುಟ್ಟೂರಾದ ಬನವಾಸಿ ದೇಶದಲ್ಲೇ ಮರಿದುಂಬಿಯೋ ಅಥವಾ ಕೋಗಿಲೆಯೋ ಆಗಿ ಹುಟ್ಟಬೇಕೆಂದು ಆಶಿಸುತ್ತಾನೆ. “ಮುಂದಿನ ಜನ್ಮದಲ್ಲಿ ನಾನು ಭರತಖಂಡದಲ್ಲಿ ಜನಿಸಬೇಕು’ ಎಂದು ಅನೇಕರು ಹೇಳಿಕೊಂಡಿದ್ದಾರೆ.

ಹೀಗೆ ನಮಗೆ ಹಲವು ಜನ್ಮಗಳ ಸ್ನೇಹ ಇರುತ್ತದೆಂಬ ನಂಬಿಕೆ ನಮ್ಮದಾಗಿದೆ. ಸಾಲದ ಬಾಕಿ ಉಳಿಸಿಕೊಂಡವರು ಈ ಜನ್ಮದಲ್ಲಿ ಮರುಪಾವತಿ ಮಾಡದಿದ್ದರೆ ಮುಂದಿನ ಜನ್ಮದಲ್ಲಿ ತೀರಿಸಲು ಹುಟ್ಟಿ ಬರಬೇಕಾಗುತ್ತದೆ ಎನ್ನುವ ಮಾತು ಮರುಜನ್ಮದದ ಮಟ್ಟಿಗೆ ನೂರಕ್ಕೆ ನೂರರಷ್ಟು ಅನ್ವಯಿಸುತ್ತದೆ.

ಭಗವಾನ್‌ ವಿಷ್ಣುವು ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ, ಶ್ರೀರಾಮರ ಅವತಾರಗಳನ್ನು ಎತ್ತಿ, ಮುಂದೆ ಕೃಷ್ಣ ಬುದ್ಧನಾಗಿ ಹುಟ್ಟಿ ಬಂದ. ಇನ್ನುಕಲ್ಕಿ ಅವತಾರ ಆಗುವುದು ಬಾಕಿ ಇದೆ.

ನೈನ್ಯಂ ಛಿಂದಂತಿ ಶಸ್ತ್ರಾಣಿ

ನೈನಂ ದಹತಿ ಪಾವಕಃ

ನ ಚೈನಂ ಕ್ಲೇದಯಂತ್ಯಾಪೋ

ಸ ಶೋಷಯತಿ ಮಾರುತಃ

ನಮ್ಮ ಆತ್ಮವನ್ನು ಯಾವುದೇ ಆಯುಧದಿಂದ ಕತ್ತರಿಸಲಾಗದು, ಬೆಂಕಿಯಿಂದ ಸುಡಲಾಗದು, ನೀರಿನಿಂದ ತೇವ ಮಾಡಲಾಗದು, ಅಥವಾ ಗಾಳಿಯಿಂದ ಅಲುಗಾಡಿಸಲಾಗದು ಎನ್ನುತ್ತದೆ ಭಗವದ್ಗೀತೆ.

ಭೂಮಿಯ ಮೇಲಿನ ನಮ್ಮ ಜೀವನ ಹುಟ್ಟಿನಿಂದ ಪ್ರಾರಂಭವಾಗಿ, ಸಾವಿನಲ್ಲಿ ಅಂತ್ಯಗೊಳ್ಳುತ್ತದೆ. ಇಲ್ಲಿಗೆ ಮುಗಿಯಿತೆ? ಹುಟ್ಟಿಗೂ ಮುಂಚಿನದು, ಸಾವಿನ ಅನಂತರದ್ದು ಏನೂ ಇಲ್ಲವೇ ? ಇಂಥ ಪ್ರಶ್ನೆಗಳಿಗೆ ಉತ್ತರ ಸಿಗುವುದೇ ನಮ್ಮ ವೇದ, ಉಪನಿಷತ್ತುಗಳಲ್ಲಿ, ಪುನರ್ಜನ್ಮ( ರಿ- ಇನ್‌ಕಾರ್ನೇಶನ್‌) ಜಾಗೃತಾವಸ್ಥೆ (ಕಾನ್ಶಿಯಸ್‌ನೆಸ್‌), ಹಿಂಚಲನ (ರಿಗ್ರೆಶನ್‌) ಇವೆಲ್ಲ ಸಿದ್ಧಾಂತಗಳೂ ಈಗ ವಿಶ್ವಮಾನ್ಯವಾಗತೊಡಗಿವೆ.

ಇದನ್ನೂ ಓದಿ: ‘ನನಗೆ ಸಾವಿರಾರು ಜನ್ಮಗಳಾಗಿವೆ ; ಅವೆಲ್ಲದರಲ್ಲೂ ತಂದೆ- ತಾಯಿಗಳಿದ್ದರು ಅದರಲ್ಲಿ ನಿವ್ಯಾರು?’

ಪಾಶ್ಚಾತ್ಯ ರಾಷ್ಟ್ರಗಳಲ್ಲಿ, ಕಳೆದ ಕೆಲವು ದಶಕಗಳಲ್ಲಿ ಜಾಗೃತಾವಸ್ಥೆ ಕುರಿತಂತೆ ಕ್ರಾಂತಿಕಾರಿ ಅಧ್ಯಯನಗಳಾಗಿವೆ. ಜಾಗೃತಾವಸ್ಥೆಯ ಅಮರತ್ವವನ್ನೂ, ಆತ್ಮವು ಒಂದು ದೇಹದಿಂದ ಇನ್ನೊಂದು ದೇಹಕ್ಕೆ ಸ್ಥಳಾಂತರಗೊಳ್ಳುವ ಪ್ರಕ್ರಿಯೆಯನ್ನೂ ಕುರಿತು ಅನೇಕ ವಿದ್ವಾಂಸರು ಚಿಂತನಮಂಥನ ನಡೆಸಿ ಅಭಿಪ್ರಾಯಗಳನ್ನು ದಾಖಲಿಸಿದ್ದಾರೆ. ಹಲವಾರು ದಾರ್ಶನಿಕರು ಲೇಖಕರು, ಕಲಾವಿದರು, ವಿಜ್ಞಾನಿಗಳು ಮತ್ತು ರಾಜಕಾರಣಿಗಳು ಈ ಕುರಿತ ಅಧ್ಯಯನಕ್ಕೆ ಸೂಕ್ತವಾದ ಬೆಂಬಲವನ್ನು ದಾಖಲಿಸಿದ್ದಾರೆ.

ಭಾರತ ದೇಶದಲ್ಲಿ ಐದು ಸಾವಿರ ವರ್ಷಗಳ ಹಿಂದೆಯೇ ಶ್ರೀ ಕೃಷ್ಣನು ಅರ್ಜುನನಿಗೆ ಕುರುಕ್ಷೇತ್ರ ಸಮರದ ನಡುವೆ ಪುನರ್ಜನ್ಮದ ಬಗ್ಗೆ ಸ್ಪಷ್ಟವಾಗಿ ಬೊಧಿಸಿದ್ದಾನೆ. ಭಗವದ್ಗೀತೆಯಲ್ಲಿ ವಿವರಿಸಲಾಗಿರುವ ಆತ್ಮ, ಹುಟ್ಟು, ಸಾವು, ಪುನರ್ಜನ್ಮ, ಕರ್ಮಸಿದ್ಧಾಂತಗಳೆಲ್ಲ ಇಡೀ ವಿಶ್ವವೇ ಒಪ್ಪುವಂಥ ವ್ಯಾಖ್ಯಾನಗಳು.

ಪುರಾತನ ಗ್ರೀಕರಲ್ಲಿ ಸಾಕ್ರಟಿಸ್‌, ಪೈಥಾಗೊರಸ್‌, ಪ್ಲೇಟೋ..ಮುಂತಾದವರು ತಮ್ಮ ಬೋಧನೆಗಳ ಮೂಲಕ ಪುನರ್ಜನ್ಮದ ವ್ಯಾಖ್ಯಾನವನ್ನು ಮಂಡಿಸುತ್ತ ಬಂದವರೇ . ತನ್ನ ಹಿಂದಿನ ಜನ್ಮ ತನಗೆ ನೆನೆಪಿದೆ ಎಂಬುದಾಗಿ ಪೈಥಾಗೊರಸ್‌ ಹೇಳಿದರೆ, ‘ಪುನಃ ಜೀವತಳೆದು ಬರುವಂಥದು ಇದೆ, ಅದು ಸತ್ತ ಮೇಲೆ ಪುನಃ ಹುಟ್ಟಿ ಬರುತ್ತದೆ. ಈ ಬಗ್ಗೆ ನನಗೆ ವಿಶ್ವಾಸವಿದೆ’ ಎಂಬುದು ಸಾಕ್ರೆಟೀಸ್‌ನ ವಿವರಣೆ.

ಇದನ್ನೂ ಓದಿ: ಮನದಲ್ಲಿದ್ದ ತೀವ್ರ ಬಯಕೆಯೇ ಜಿಂಕೆಯ ಜನ್ಮ ತಾಳಲು ಕಾರಣವಾದ ‘ಜಡ ಭರತ’ನ ರೋಚಕ ಕಥೆ!

ಅಮೆರಿಕಾದ ಮುತ್ಸದ್ದಿ, ವಿಜ್ಞಾನಿ ಬೆಂಜಮಿನ್‌ ಫ್ರಾಂಕ್ಲಿನ್‌, ಅಮೆರಿಕಾದ ಅಧ್ಯಕ್ಷರಾಗಿದ್ದ ಜಾನ್‌ ಆಡಮ್ಸ್‌ (1814), ಫ್ರೆಂಚ್‌ ಚಕ್ರವರ್ತಿ ನೆಪೋಲಿಯನ್‌ ಇವರೆಲ್ಲ ಪುನರ್ಜನ್ಮವನ್ನು ನಂಬಿದವರು.

‘ನಾನು ಈ ಹಿಂದೆ ಸಾವಿರ ಬಾರಿ ಹುಟ್ಟಿದ್ದೆ. ಮುಂದೆಯೂ ಸಾವಿರ ಬಾರಿ ಹುಟ್ಟುತ್ತೇನೆ’- ಇದು ಜರ್ಮನಿಯ ಪ್ರಸಿದ್ಧ ನಾಟಕಕಾರ, ವಿಜ್ಞಾನಿ ಗಯಟೆಯ ಧೃಢ ನಂಬಿಕೆ.

‘ವಿಶ್ವದ ಎಲ್ಲ ವಸ್ತುಗಳ ರಹಸ್ಯ ಎಂದರೆ, ಎಲ್ಲವೂ ಇದ್ಧೇ ಇರುತ್ತದೆ, ಸಾಯುವುದಿಲ್ಲ. ಆದರೆ ಕೆಲವು ಕಾಲ ಕಣ್ಮರೆಯಾಗುತ್ತದೆ, ಪುನಃ ಕಾಣಿಸಿಕೊಳ್ಳುತ್ತವೆ’ ಎಂಬುದು ಅಮೆರಿಕದ ತತ್ವಶಾಸ್ತ್ರಜ್ಞ, ಕವಿ ಎಮರ್ಸನ್‌ ಅವರ ಹೇಳಿಕೆ.

ದಾರ್ಶನಿಕ ಥೋರೊಯೋ, ಕವಿ ವಾಲ್ಟ್, ವಿಟ್‌ಮಿನ್‌, ಫ್ರೆಂಚ್‌ ಲೇಖಕ ಹೊನೊರೆ ಬಾಲ್ಜಾಕ್‌, ಇಂಗ್ಲಿಷ್‌ ಕಾದಂಬರಿಕಾರ ಚಾರ್ಲ್ಸ್‌ ಡಿಕೆನ್ಸ್‌, ರಷ್ಯನ್‌ ಸಾಹಿತಿ ಕೌಂಟ್‌ ಲಿಯೋ ಟಾಲ್‌ಸ್ಟಾಯ್‌ ಇವರೆಲ್ಲರ ಅಭಿಪ್ರಾಯ ಪುನರ್ಜನ್ಮದ ಪರವಾದುದೇ.

ಪ್ರಸಿದ್ಧ ಸೂಫಿ ಕವಿ ಜಲಾಲುದ್ದೀನ್‌ ರೂಮಿ ಒಂದೆಡೆ ಹೇಳಿರುವುದು ಹೀಗೆ:

ನಾನು ಖನಿಜವಾಗಿದ್ದು ಸತ್ತು ಸಸ್ಯವಾದೆ

ಸಸ್ಯವಾಗಿದ್ದು ಸತ್ತು ಪ್ರಾಣಿಯಾದೆ

ಪ್ರಾಣಿಯಾಗಿ ಸತ್ತು ಮಾನವನಾದೆ

ನನಗೇಕೆ ಭಯ? ಸತ್ತುದರಿಂದ ನನಗೆ

ಕಡಿಮೆಯಾದುದಾದರೂ ಏನು?

ದಾರ್ಶನಿಕ ವಾಲ್ಟೆರ್‌ ಹೇಳುವಂತೆ, ‘ಪುನರ್ಜನ್ಮವೆಂಬುದು ಅರ್ಥಶೂನ್ಯವಾದುದೂ ಅಲ್ಲ, ನಿರುಪಯುಕ್ತವಾದುದೂ ಅಲ್ಲ. ಒಂದಕ್ಕಿಂತ ಎರಡು ಬಾರಿ ಹುಟ್ಟುವುದು ಆಶ್ಚರ್ಯವೇನೂ ಅಲ್ಲ.’

1400 -1600ರ ಪುನರುತ್ಥಾನ (ರಿನೈಸೆನ್ಸ್‌) ಅವಧಿಯಲ್ಲಿ ಇಟೆಲಿಯ ಪ್ರಸಿದ್ಧ ದಾರ್ಶನಿಕ ಜಿಯೊರ್ಡಾನೊ ಬ್ರೂನೊ, ಪುನರ್ಜನ್ಮದ ಬಗೆಗೆ ತನ್ನ ಚಿಂತನೆ ಮಂಡಿಸುತ್ತ, ‘ಆತ್ಮವು ಶರೀರವಲ್ಲ; ಅದು ಒಂದು ಶರೀರದಿಂದ ಮತ್ತೊಂದು ಶರೀರಕ್ಕೆ ಹೋಗುತ್ತದೆ’ಎಂದು ಹೇಳಿದುದರಿಂದ ಆತ ಚರ್ಚ್‌ನ ಕೋಪಕ್ಕೆ ಗುರಿಯಾದ. ಇದೇ ಕಾರಣಕ್ಕಾಗಿ ಆತನನ್ನು ಸುಟ್ಟುಬಿಡಲಾಯಿತು.

‘ಮನುಷ್ಯ ಮನುಷ್ಯರ ಮಧ್ಯೆ ಶಾಶ್ವತವಾಗಿ ದ್ವೇಷ ಇರುತ್ತದೆ ಎಂದು ನಾನು ಆಲೋಚಿಸಲಾರೆ. ಈ ಜನ್ಮದಲ್ಲಿ ಅಲ್ಲದಿದ್ದರೆ ಮುಂದಿನ ಜನ್ಮದಲ್ಲಾದರೂ ಎಲ್ಲ ಮಾನವ ಸಮುದಾಯವನ್ನು ಸ್ನೇಹಭಾವದಿಂದ ಪರಿಗಣಿಸಲು ಸಾಧ್ಯವಾಗುತ್ತದೆಂಬ ಆಶಾವಾದ ನನ್ನದು’ ಎಂದರು ಮಹಾತ್ಮಾ ಗಾಂಧೀಜಿ.

(ಮುಂದುವರಿಯುತ್ತದೆ…)

ಟಾಪ್ ನ್ಯೂಸ್

Loan: ಸಾಲ ಪಡೆಯಲು ಸತ್ತ ವ್ಯಕ್ತಿಯನ್ನೇ ಬ್ಯಾಂಕಿಗೆ ಕರೆತಂದ ಮಹಿಳೆ… ಕೊನೆಗೆ ಆದದ್ದೇ ಬೇರೆ

Loan: ಸತ್ತ ವ್ಯಕ್ತಿಯನ್ನು ಕರೆತಂದು ಸಾಲ ಪಡೆಯಲು ಮುಂದಾದ ಮಹಿಳೆ… ಕೊನೆಗೆ ಆದದ್ದೇ ಬೇರೆ

Kalaburagi; Congress government has given 2000 compensation to farmers like beggars: Vijayendra

Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

Pushpa 2: ದಾಖಲೆ ಬೆಲೆಗೆ ʼಪುಷ್ಪ-2ʼ ಡಿಜಿಟಲ್‌ ಹಕ್ಕನ್ನು ಖರೀದಿಸಿದ ನೆಟ್‌ಫ್ಲಿಕ್ಸ್

Pushpa 2: ದಾಖಲೆ ಬೆಲೆಗೆ ʼಪುಷ್ಪ-2ʼ ಡಿಜಿಟಲ್‌ ಹಕ್ಕನ್ನು ಖರೀದಿಸಿದ ನೆಟ್‌ಫ್ಲಿಕ್ಸ್

Rohit Sharma spoke about team selection for T20 World Cup

T20 WC; ‘ಎಲ್ಲವೂ ಸುಳ್ಳು…’: ತಂಡದ ಆಯ್ಕೆ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ರೋಹಿತ್ ಶರ್ಮಾ

EVM VVPAT case:  ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ

EVM VVPAT case:  ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ

kejriwal 2

Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Food-Punjab

ಪಂಜಾಬ್ ಫುಡ್ ಸ್ಪೆಷಲ್ : ಸಾಹಸವಂತರ ನಾಡಿನ ಆಹಾರ ಪದ್ಧತಿಯೂ ಹೃದಯಂಗಮ

ಹಿಮದ ನಾಡಿನ ಸ್ವಾಧಿಷ್ಟ ರೆಸಿಪಿಗಳು – ಮಾಡಿ ಸವಿಯೋಣ ಬನ್ನಿ

ಹಿಮದ ನಾಡಿನ ಸ್ವಾಧಿಷ್ಟ ರೆಸಿಪಿಗಳು – ಮಾಡಿ ಸವಿಯೋಣ ಬನ್ನಿ

ಜಮ್ಮು ಮತ್ತು ಕಾಶ್ಮೀರದ ಸಿಹಿ, ಖಾರ, ವೆಜ್-ನಾನ್ ವೆಜ್ ಖಾದ್ಯ ವೈಭವ

ಜಮ್ಮು ಮತ್ತು ಕಾಶ್ಮೀರದ ಸಿಹಿ, ಖಾರ, ವೆಜ್-ನಾನ್ ವೆಜ್ ಖಾದ್ಯ ವೈಭವ

ಭಾರತೀಯ ಆಹಾರ ಪದ್ಧತಿ: ವೈವಿಧ್ಯ, ವೈಶಿಷ್ಟ್ಯಗಳ ಹಿನ್ನಲೆ ಮೇಲೊಂದು ಕ್ಷ-ಕಿರಣ

ಭಾರತೀಯ ಆಹಾರ ಪದ್ಧತಿ: ವೈವಿಧ್ಯ, ವೈಶಿಷ್ಟ್ಯಗಳ ಹಿನ್ನಲೆ ಮೇಲೊಂದು ಕ್ಷ-ಕಿರಣ

ರುದ್ರಾಕ್ಷಿಯನ್ನು ಬೇಕಾಬಿಟ್ಟಿ ಧರಿಸಿಕೊಳ್ಳುವಂತಿಲ್ಲ! ; ಅದಕ್ಕೆಂದೇ ಇಲ್ಲಿವೆ ಕೆಲ ನಿಯಮಗಳು

ರುದ್ರಾಕ್ಷಿಯನ್ನು ಬೇಕಾಬಿಟ್ಟಿ ಧರಿಸಿಕೊಳ್ಳುವಂತಿಲ್ಲ! ; ಅದಕ್ಕೆಂದೇ ಇಲ್ಲಿವೆ ಕೆಲ ನಿಯಮಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

18

Honesty: ಪ್ರಾಮಾಣಿಕರಿಗಿದು ಕಾಲವಲ್ಲ…

Loan: ಸಾಲ ಪಡೆಯಲು ಸತ್ತ ವ್ಯಕ್ತಿಯನ್ನೇ ಬ್ಯಾಂಕಿಗೆ ಕರೆತಂದ ಮಹಿಳೆ… ಕೊನೆಗೆ ಆದದ್ದೇ ಬೇರೆ

Loan: ಸತ್ತ ವ್ಯಕ್ತಿಯನ್ನು ಕರೆತಂದು ಸಾಲ ಪಡೆಯಲು ಮುಂದಾದ ಮಹಿಳೆ… ಕೊನೆಗೆ ಆದದ್ದೇ ಬೇರೆ

Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ

Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ

17

Sirsi: ಶಿರಸಿ ಮಾರಿಕಾಂಬೆ ವೈಭವದ ಜಾತ್ರೆ

16-wtr

Water: ನೀರು ಭುವನದ ಭಾಗ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.