11 ವಿಶ್ವಕಪ್‌ಗಳ ಹಿನ್ನೋಟ

Team Udayavani, May 30, 2019, 6:00 AM IST

* ವಿಶ್ವಕಪ್‌-1
ವರ್ಷ: 1975
ಆತಿಥ್ಯ: ಇಂಗ್ಲೆಂಡ್‌
ಚಾಂಪಿಯನ್‌: ವೆಸ್ಟ್‌ ಇಂಡೀಸ್‌
ಪಂದ್ಯಶ್ರೇಷ್ಠ: ಕ್ಲೈವ್‌ ಲಾಯ್ಡ
8 ತಂಡಗಳ ಈ ಆರಂಭಿಕ ಸ್ಪರ್ಧೆಯಲ್ಲಿ ಯಾವ ಬಲಾಬಲವೂ ಸ್ಪಷ್ಟವಾಗಿ ಅರಿವಿರಲಿಲ್ಲ. ಆದರೆ ಆಗಲೇ ಟೆಸ್ಟ್‌ ಕ್ರಿಕೆಟ್‌ನಲ್ಲಿ ದೈತ್ಯರೆನಿಸಿದ್ದ ಕೆರಿಬಿಯನ್ನರು ಏಕದಿನದಲ್ಲೂ ಪ್ರಾಬಲ್ಯ ಮೆರೆದರು. ಆಸ್ಟ್ರೇಲಿಯವನ್ನು 17 ರನ್ನುಗಳಿಂದ ಕೆಡವಿ ಚಾಂಪಿಯನ್‌ ಎನಿಸಿದರು.

* ವಿಶ್ವಕಪ್‌-2
ವರ್ಷ: 1979
ಆತಿಥ್ಯ: ಇಂಗ್ಲೆಂಡ್‌
ಚಾಂಪಿಯನ್‌: ವೆಸ್ಟ್‌ ಇಂಡೀಸ್‌
ಪಂದ್ಯಶ್ರೇಷ್ಠ: ವಿವಿಯನ್‌ ರಿಚರ್ಡ್ಸ್‌
ಮತ್ತೆ ಇಂಗ್ಲೆಂಡ್‌ನ‌ಲ್ಲಿ ನಡೆದ ಈ ಕೂಟದಲ್ಲಿ ವೆಸ್ಟ್‌ ಇಂಡೀಸ್‌ ತನ್ನ ಪರಾಕ್ರಮ ಮೆರೆಯಿತು. ಅಜೇಯ ಅಭಿಯಾನಗೈದು ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಫೈನಲ್‌ನಲ್ಲಿ ನಾಟಕೀಯ ಕುಸಿತ ಅನುಭವಿಸಿದ ಆತಿಥೇಯ ಇಂಗ್ಲೆಡ್‌ 92 ರನ್ನುಗಳಿಂದ ಶರಣಾಯಿತು.

* ವಿಶ್ವಕಪ್‌-3
ವರ್ಷ: 1983
ಆತಿಥ್ಯ: ಇಂಗ್ಲೆಂಡ್‌
ಚಾಂಪಿಯನ್‌: ಭಾರತ
ಪಂದ್ಯಶ್ರೇಷ್ಠ: ಮೊಹಿಂದರ್‌ ಅಮರನಾಥ್‌
ಜಾಗತಿಕ ಕ್ರಿಕೆಟ್‌ನಲ್ಲಿ ಪವಾಡವೊಂದಕ್ಕೆ ಸಾಕ್ಷಿಯಾದ ವಿಶ್ವಕಪ್‌ ಪಂದ್ಯಾವಳಿ ಇದಾಗಿದೆ. ಹ್ಯಾಟ್ರಿಕ್‌ ಹಾದಿಯಲ್ಲಿದ್ದ ವೆಸ್ಟ್‌ ಇಂಡೀಸ್‌ ಸೊಕ್ಕು ಮುರಿಯುವ ಮೂಲಕ ಕಪಿಲ್‌ದೇವ್‌ ಸಾರಥ್ಯದ ಭಾರತ ಹೊಸ ಇತಿಹಾಸ ಬರೆಯಿತು. ಲಾರ್ಡ್ಸ್‌ನಲ್ಲಿ ವಿಂಡೀಸನ್ನು 43 ರನ್ನುಗಳಿಂದ ಬಗ್ಗುಬಡಿಯಿತು.

* ವಿಶ್ವಕಪ್‌-4
ವರ್ಷ: 1987
ಆತಿಥ್ಯ: ಭಾರತ, ಪಾಕಿಸ್ಥಾನ
ಚಾಂಪಿಯನ್‌: ಆಸ್ಟ್ರೇಲಿಯ
ಪಂದ್ಯಶ್ರೇಷ್ಠ: ಡೇವಿಡ್‌ ಬೂನ್‌
ವಿಶ್ವಕಪ್‌ ಆತಿಥ್ಯದಿಂದ ಇಂಗ್ಲೆಂಡ್‌ ದೂರಾಯಿತು. ರಿಲಯನ್ಸ್‌ ಪ್ರಾಯೋಜಕತ್ವದಲ್ಲಿ ಭಾರತ-ಪಾಕಿಸ್ಥಾನ ಜಂಟಿಯಾಗಿ 4ನೇ ಕೂಟವನ್ನು ಸಂಘಟಿಸಿದವು. ಕೋಲ್ಕತಾ ಫೈನಲ್‌ನಲ್ಲಿ ಇಂಗ್ಲೆಂಡನ್ನು ಕೇವಲ 7 ರನ್ನುಗಳಿಂದ ಮಣಿಸಿದ ಆಸ್ಟ್ರೇಲಿಯ ಮೊದಲ ಸಲ ಕಪ್‌ ಎತ್ತಿ ಸಂಭ್ರಮಿಸಿತು.

ವಿಶ್ವಕಪ್‌-5
ವರ್ಷ: 1992
ಆತಿಥ್ಯ: ಆಸ್ಟ್ರೇಲಿಯ, ನ್ಯೂಜಿಲ್ಯಾಂಡ್‌
ಚಾಂಪಿಯನ್‌: ಪಾಕಿಸ್ಥಾನ
ಪಂದ್ಯಶ್ರೇಷ್ಠ: ವಾಸಿಮ್‌ ಅಕ್ರಮ್‌
ರೌಂಡ್‌ ರಾಬಿನ್‌ ಲೀಗ್‌ ಮಾದರಿಯ ಈ ಪಂದ್ಯಾವಳಿ ಕಲರ್‌ಫ‌ುಲ್‌ ಆಗಿ ಮೂಡಿಬಂತು. ಆಸ್ಟ್ರೇಲಿಯ-ನ್ಯೂಜಿಲ್ಯಾಂಡ್‌ ಆತಿಥ್ಯದ ಈ ಕೂಟ ಅನೇಕ ವೈಶಿಷ್ಟéಗಳಿಗೆ ಸಾಕ್ಷಿಯಾಯಿತು. ಇಂಗ್ಲೆಂಡನ್ನು 22 ರನ್ನುಗಳಿಂದ ಮಣಿಸಿದ ಪಾಕಿಸ್ಥಾನ ವಿಶ್ವ ಕ್ರಿಕೆಟಿನ ನೂತನ ಚಾಂಪಿಯನ್‌ ಎನಿಸಿತು.

ವಿಶ್ವಕಪ್‌-6
ವರ್ಷ: 1996
ಆತಿಥ್ಯ: ಭಾರತ, ಪಾಕಿಸ್ಥಾನ, ಶ್ರೀಲಂಕಾ
ಚಾಂಪಿಯನ್‌: ಶ್ರೀಲಂಕಾ
ಪಂದ್ಯಶ್ರೇಷ್ಠ: ಅರವಿಂದ ಡಿ ಸಿಲ್ವ
ಮೊದಲ ಸಲ 3 ರಾಷ್ಟ್ರಗಳ ಆತಿಥ್ಯ. ಭಾರತ, ಪಾಕಿಸ್ಥಾನ ಜತೆಗೆ ಶ್ರೀಲಂಕಾದಲ್ಲೂ ಕೆಲವು ಪಂದ್ಯಗಳನ್ನು ಆಡಲಾಯಿತು. ವಿಲ್ಸ್‌ ಪ್ರಾಯೋಜಕತ್ವದಲ್ಲಿ ನಡೆದ “ಶಾಂತಿಗಾಗಿ ಕ್ರಿಕೆಟ್‌’ ಪಂದ್ಯಾವಳಿ ಇದಾಗಿತ್ತು. ಆಸ್ಟ್ರೇಲಿಯವನ್ನು 7 ವಿಕೆಟ್‌ಗಳಿಂದ ಮಣಿಸಿದ ಶ್ರೀಲಂಕಾ ನೂತನ ಚಾಂಪಿಯನ್‌ ಎನಿಸಿತು.

* ವಿಶ್ವಕಪ್‌-7
ವರ್ಷ: 1999
ಆತಿಥ್ಯ: ಇಂಗ್ಲೆಂಡ್‌
ಚಾಂಪಿಯನ್‌: ಆಸ್ಟ್ರೇಲಿಯ
ಪಂದ್ಯಶ್ರೇಷ್ಠ: ಶೇನ್‌ ವಾರ್ನ್
ಮತ್ತೆ ವಿಶ್ವಕಪ್‌ ಟೂರ್ನಿ ಇಂಗ್ಲೆಂಡ್‌ ಪ್ರವೇಶಿಸಿತು. ಜತೆಗೆ ಸ್ಕಾಟ್ಲೆಂಡ್‌, ಐರ್ಲೆಂಡ್‌, ವೇಲ್ಸ್‌, ಹಾಲೆಂಡ್‌ನ‌ಲ್ಲೂ ಕೆಲವು ಪಂದ್ಯಗಳನ್ನು ಆಡಲಾಯಿತು. ಫೈನಲ್‌ನಲ್ಲಿ ಪಾಕಿಸ್ಥಾನವನ್ನು 8 ವಿಕೆಟ್‌ಗಳಿಂದ ಹಿಮ್ಮೆಟ್ಟಿಸಿದ ಆಸ್ಟ್ರೇಲಿಯ 2ನೇ ಸಲ ಕಪ್‌ ಎತ್ತಿತ್ತು. ಹ್ಯಾಟ್ರಿಕ್‌ ಸಾಧನೆಗೆ ಮುನ್ನುಡಿ ಬರೆಯಿತು.

* ವಿಶ್ವಕಪ್‌-8
ವರ್ಷ: 2003
ಆತಿಥ್ಯ: ದಕ್ಷಿಣ ಆಫ್ರಿಕಾ, ಜಿಂಬಾಬ್ವೆ
ಚಾಂಪಿಯನ್‌: ಆಸ್ಟ್ರೇಲಿಯ
ಪಂದ್ಯಶ್ರೇಷ್ಠ: ರಿಕಿ ಪಾಂಟಿಂಗ್‌
ಮೊದಲ ಸಲ ದಕ್ಷಿಣ ಆಫ್ರಿಕಾ ಹಾಗೂ ಜಿಂಬಾಬ್ವೆ ಆತಿಥ್ಯದಲ್ಲಿ ಪಂದ್ಯಾವಳಿ ಸಾಗಿತು. ಸರ್ವಾಧಿಕ 14 ತಂಡಗಳು ಪಾಲ್ಗೊಂಡವು. ಸೌರವ್‌ ಗಂಗೂಲಿ ಸಾರಥ್ಯದ ಭಾರತ ಅಮೋಘ ಪ್ರದರ್ಶನ ನೀಡಿ ಫೈನಲ್‌ಗೆ ಲಗ್ಗೆ ಇರಿಸಿತು. ಆದರೆ ಆಸ್ಟ್ರೇಲಿಯವನ್ನು ತಡೆದು ನಿಲ್ಲಿಸಲು ವಿಫ‌ಲವಾಯಿತು.

* ವಿಶ್ವಕಪ್‌-9
ವರ್ಷ: 2007
ಆತಿಥ್ಯ: ವೆಸ್ಟ್‌ ಇಂಡೀಸ್‌
ಚಾಂಪಿಯನ್‌: ಆಸ್ಟ್ರೇಲಿಯ
ಪಂದ್ಯಶ್ರೇಷ್ಠ: ಆ್ಯಡಂ ಗಿಲ್‌ಕ್ರಿಸ್ಟ್‌
ವಿಶ್ವಕಪ್‌ ಇತಿಹಾಸದ ದುರಂತಮಯ ಕೂಟ. ಭಾರತ, ಪಾಕಿಸ್ಥಾನ ತಂಡಗಳು ಲೀಗ್‌ ಹಂತದಲ್ಲೇ ನಿರ್ಗಮಿಸಿದವು. ಆಸ್ಟ್ರೇಲಿಯ ಮತ್ತೆ ಫೈನಲ್‌ಗೆ ಲಗ್ಗೆ ಇರಿಸಿತು. ಮಳೆಪೀಡಿತ ಪ್ರಶಸ್ತಿ ಸಮರದಲ್ಲಿ ಶ್ರೀಲಂಕಾವನ್ನು ಡಿ-ಎಲ್‌ ನಿಯಮದನ್ವಯ ಸೋಲಿಸಿ ಹ್ಯಾಟ್ರಿಕ್‌ ಪೂರ್ತಿಗೊಳಿಸಿತು.

* ವಿಶ್ವಕಪ್‌-10
ವರ್ಷ: 2011
ಆತಿಥ್ಯ: ಭಾರತ, ಪಾಕಿಸ್ಥಾನ, ಶ್ರೀಲಂಕಾ, ಬಾಂಗ್ಲಾದೇಶ
ಚಾಂಪಿಯನ್‌: ಭಾರತ
ಪಂದ್ಯಶ್ರೇಷ್ಠ: ಮಹೇಂದ್ರ ಸಿಂಗ್‌ ಧೋನಿ
ಏಶ್ಯದ 4 ರಾಷ್ಟ್ರಗಳ ಆತಿಥ್ಯದಲ್ಲಿ ನಡೆದ ಪಂದ್ಯಾವಳಿ ಇದು. ಮಹೇಂದ್ರ ಸಿಂಗ್‌ ಧೋನಿ ಸಾರಥ್ಯದಲ್ಲಿ ಕಣಕ್ಕಿಳಿದ ಭಾರತ ತಂಡ 2ನೇ ಸಲ ಕಪ್‌ ಎತ್ತಿ ಬರಗಾಲವೊಂದನ್ನು ನೀಗಿಸಿತು. ಫೈನಲ್‌ನಲ್ಲಿ ಶ್ರೀಲಂಕಾವನ್ನು 6 ವಿಕೆಟ್‌ಗಳಿಂದ ಉರುಳಿಸಿ ಟ್ರೋಫಿಯನ್ನು ಕ್ರಿಕೆಟ್‌ ದೇವರಿಗೆ ಅರ್ಪಿಸಿತು.

* ವಿಶ್ವಕಪ್‌-11
ವರ್ಷ: 2015
ಆತಿಥ್ಯ: ಆಸ್ಟ್ರೇಲಿಯ, ನ್ಯೂಜಿಲ್ಯಾಂಡ್‌
ಚಾಂಪಿಯನ್‌: ಆಸ್ಟ್ರೇಲಿಯ
ಪಂದ್ಯಶ್ರೇಷ್ಠ: ಜೇಮ್ಸ್‌ ಫಾಕ್ನರ್‌
ಆಸ್ಟ್ರೇಲಿಯ-ನ್ಯೂಜಿಲ್ಯಾಂಡ್‌ 2ನೇ ಸಲ ಜಂಟಿಯಾಗಿ ಆಯೋಜಿಸಿದ ಈ ಪಂದ್ಯಾವಳಿಯಲ್ಲಿ ಈ ಎರಡು ತಂಡಗಳೇ ಫೈನಲ್‌ಗೆ ಲಗ್ಗೆ ಇರಿಸಿದವು. ಕಿವೀಸ್‌ಗೆ ಮೊದಲ ಪ್ರಶಸ್ತಿ ಸಮರವಾಗಿತ್ತು. ಆದರೆ ಆಸೀಸ್‌ಗೆ ಸಡ್ಡು ಹೊಡೆಯಲು ವಿಫ‌ಲವಾಯಿತು. ಕ್ಲಾರ್ಕ್‌ ಪಡೆ 7 ವಿಕೆಟ್‌ಗಳಿಂದ ಗೆದ್ದಿತು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ