500 ರನ್‌ ಕನವರಿಕೆಯಲ್ಲಿ…


Team Udayavani, May 30, 2019, 6:00 AM IST

x-10

ಇಂಗ್ಲೆಂಡಿನ ಟ್ರ್ಯಾಕ್‌ಗಳೆಲ್ಲ ಬ್ಯಾಟಿಂಗ್‌ ಸ್ವರ್ಗವಾಗಿ ಗೋಚರಿಸುತ್ತಿವೆ. 350 ರನ್‌ ನಿರಾಯಾಸವಾಗಿ ಹರಿದು ಬರುತ್ತಿದೆ. ಹೀಗಾಗಿ ಈ ವಿಶ್ವಕಪ್‌ನಲ್ಲಿ 500 ರನ್‌ ಯಾಕೆ ದಾಖಲಾಗಬಾರದು? ಹಾಗೆಯೇ ಸರ್ವಾಧಿಕ ವೈಯಕ್ತಿಕ ರನ್ನಿನ ವಿಶ್ವದಾಖಲೆ ಯಾಕೆ ನಿರ್ಮಾಣವಾಗಬಾರದು? ಈ ಎರಡು ಕೌತುಕಗಳತ್ತ ವಿಶ್ವಕಪ್‌ ಗಿರಕಿ ಹೊಡೆಯುತ್ತಿದೆ.

ಟಿ20 ಕ್ರಿಕೆಟ್‌ ಮುನ್ನೆಲೆಗೆ ಬಂದ ಮೇಲೆ ಕ್ರಿಕೆಟ್‌ ಎನ್ನುವುದು ಸಂಪೂರ್ಣವಾಗಿ ಬ್ಯಾಟ್ಸ್‌ಮನ್‌ಗಳ ಆಟವಾಗಿದೆ. ಕಲಾತ್ಮಕ ಆಟಕ್ಕಿಂತ ಎಷ್ಟೇ ಉತ್ತಮ ಎಸೆತವನ್ನೂ ಬೌಂಡರಿ ಗೆರೆಯಾಚೆಗೆ ನಿರ್ದಯವಾಗಿ ಚಚ್ಚುವ ಆಟಗಾರರಿಗೆ ಕೋಟಿ ಲೆಕ್ಕದಲ್ಲಿ ಬೆಲೆ ಬರುತ್ತಿದೆ. ಇಂತಹ ದೈತ್ಯ ಪ್ರತಿಭೆಗಳಿಗೇ ತಂಡಗಳು ವಿಶೇಷ ಮಣೆ ಹಾಕುತ್ತಿವೆ.

ಈ ಬಾರಿಯ ವಿಶ್ವಕಪ್‌ ಕುತೂಹಲವೂ ಇದೇ ಆಗಿದೆ. ಇಂಗ್ಲೆಂಡಿನ ಟ್ರ್ಯಾಕ್‌ಗಳೆಲ್ಲ ಬ್ಯಾಟಿಂಗ್‌ ಸ್ವರ್ಗವಾಗಿ ಗೋಚರಿಸುತ್ತಿವೆ. 350 ರನ್‌ ನಿರಾಯಾಸವಾಗಿ ಹರಿದು ಬರುತ್ತಿದೆ. ಹೀಗಾಗಿ ಈ ವಿಶ್ವಕಪ್‌ನಲ್ಲಿ 500 ರನ್‌ ಯಾಕೆ ದಾಖಲಾಗಬಾರದು? ಹಾಗೆಯೇ ಸರ್ವಾಧಿಕ ವೈಯಕ್ತಿಕ ರನ್ನಿನ ವಿಶ್ವದಾಖಲೆ ಯಾಕೆ ನಿರ್ಮಾಣವಾಗಬಾರದು? ಈ ಎರಡು ಕೌತುಕಗಳತ್ತ ವಿಶ್ವಕಪ್‌ ಗಿರಕಿ ಹೊಡೆಯುತ್ತಿದೆ.

ಕಳೆದ ಸಲ ಅವಳಿ ದ್ವಿಶತಕ
ವಿಶ್ವಕಪ್‌ ಇತಿಹಾಸದ ಎರಡೂ ದ್ವಿಶತಕಗಳು 2015ರ ಆವೃತ್ತಿಯಲ್ಲೇ ದಾಖಲಾಗಿವೆ. ಮಾರ್ಟಿನ್‌ ಗಪ್ಟಿಲ್‌ ಅಜೇಯ 237 ಹಾಗೂ ಕ್ರಿಸ್‌ ಗೇಲ್‌ 215 ರನ್‌ ಬಾರಿಸಿದ್ದಾರೆ.
ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯ 2015ರಲ್ಲಿ ಅಫ್ಘಾನಿಸ್ಥಾನದ ವಿರುದ್ಧ ಗಳಿಸಿದ 417 ರನ್‌ ಈ ವರೆಗಿನ ಗರಿಷ್ಠ ತಂಡ ಗಳಿಕೆ. ಈ ಪಂದ್ಯವನ್ನು ಬೃಹತ್‌ ಅಂತರದಿಂದ (275 ರನ್‌) ಗೆದ್ದ ದಾಖಲೆಯೂ ಕಾಂಗರೂ ಪಾಲಾಯಿತು. ಭಾರತ 2007ರಲ್ಲಿ 413 ರನ್‌ ಬಾರಿಸಿತ್ತು. ದಕ್ಷಿಣ ಆಫ್ರಿಕಾ ಎರಡು ಸಲ 400ರ ಗಡಿ ದಾಟಿದೆ (411, 408).

ಭಾರತದ ರೋಹಿತ್‌ ಶರ್ಮ ಏಕದಿನದಲ್ಲಿ 3 ದ್ವಿಶತಕಗಳ ಒಡೆಯರಾಗಿದ್ದಾರೆ. 267 ಗರಿಷ್ಠ ವೈಯಕ್ತಿಕ ರನ್‌. ರೋಹಿತ್‌ ಅವರ ಈ ದಾಖಲೆಯನ್ನು ವಿಶ್ವಕಪ್‌ನಲ್ಲಿ ಮೀರಿಸಬಹುದೇ? ಈ ದಾಖಲೆಯನ್ನು ಅವರೇ ಮುರಿಯಬಲ್ಲರೇ? ಕುತೂಹಲ ಮೂಡಿದೆ. ಕೊಹ್ಲಿ, ಗೇಲ್‌, ಬೇರ್‌ಸ್ಟೊ, ಗಪ್ಟಿಲ್‌, ರಸೆಲ್‌, ಡಿ ಕಾಕ್‌ ಮೊದಲಾದರಿಂದಲೂ ಸ್ಫೋಟಕ ಇನ್ನಿಂಗ್ಸ್‌ಗಳ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ.

481 ರನ್‌ ವಿಶ್ವದಾಖಲೆ ಉಳಿದೀತೇ?
ಏಕದಿನ ಇತಿಹಾಸದಲ್ಲಿ ಈವರೆಗೆ 20 ಬಾರಿ ತಂಡಗಳು 400 ರನ್‌ ಗಡಿ ದಾಟಿವೆ. ದಕ್ಷಿಣ ಆಫ್ರಿಕಾ 6 ಸಲ, ಭಾರತ 4 ಸಲ (ಗರಿಷ್ಠ 418) ಈ ಸಾಧನೆ ಮಾಡಿವೆ. 2018ರಲ್ಲಿ ಇಂಗ್ಲೆಂಡ್‌ ತಂಡ ಆಸ್ಟ್ರೇಲಿಯ ಎದುರು 6 ವಿಕೆಟಿಗೆ 481 ರನ್‌ ಪೇರಿಸಿದ್ದು ವಿಶ್ವದಾಖಲೆ. ಇದಕ್ಕೆ ಇನ್ನು ಕೇವಲ 19 ರನ್‌ ಸೇರಿದರೆ 500ರ ಗಡಿ ತಲುಪಬಹುದು. ಈ ವಿಶ್ವಕಪ್‌ ಇಂಥದೊಂದು ಅದ್ಭುತ ಇನ್ನಿಂಗ್ಸಿಗೆ ಸಾಕ್ಷಿಯಾದೀತೇ ಎಂಬ ನಿರೀಕ್ಷೆ ಕ್ರಿಕೆಟ್‌ ಅಭಿಮಾನಿಗಳದ್ದು. ಪ್ರಚಂಡ ಫಾರ್ಮ್ನಲ್ಲಿರುವ ಇಂಗ್ಲೆಂಡಿಗೆ ಹೆಚ್ಚಿನ ಅವಕಾಶ ಇದೆ ಎಂಬುದೊಂದು ಲೆಕ್ಕಾಚಾರ. ಸಮಸ್ಯೆಯೆಂದರೆ, ಚೆನ್ನಾಗಿ ದಂಡಿಸಿಕೊಳ್ಳುವ ದುರ್ಬಲ ತಂಡಗಳ, ಲೆಕ್ಕದ ಭರ್ತಿಯ ತಂಡಗಳ ಗೈರು!

ಸಿಕ್ಸರ್‌ ಸುರಿಮಳೆಯ ನಿರೀಕ್ಷೆ
ವಿಶ್ವಕಪ್‌ನ ಒಂದೇ ಪಂದ್ಯದಲ್ಲಿ ಗೇಲ್‌ 16 ಸಿಕ್ಸರ್‌ ಹೊಡೆದಿದ್ದಾರೆ. ಎಬಿಡಿ ಅವರೊಂದಿಗೆ 37 ಸಿಕ್ಸರ್‌ಗಳ ಜಂಟಿ ದಾಖಲೆ ಹೊಂದಿರುವ ಗೇಲ್‌ ಈ ಬಾರಿ ಅದನ್ನು ಮೀರಿ ಮುನ್ನುಗ್ಗುವ ಹುಮ್ಮಸ್ಸಿನಲ್ಲಿದ್ದಾರೆ.
ಈ ವರ್ಷ ಫೆಬ್ರವರಿಯಲ್ಲಿ ಇಂಗ್ಲಂಡ್‌ ವಿರುದ್ಧ ವೆಸ್ಟ್‌ ಇಂಡೀಸ್‌ ಒಂದೇ ಪಂದ್ಯದಲ್ಲಿ 23 ಸಿಕ್ಸರ್‌ ಸಿಡಿಸಿತು. 9 ದಿನಗಳ ಬಳಿಕ ಇಂಗ್ಲೆಂಡ್‌ 24 ಸಿಕ್ಸರ್‌ ಬಾರಿಸಿ ನೂತನ ದಾಖಲೆ ಸ್ಥಾಪಿಸಿತು. ಈ ದಾಖಲೆ ವಿಶ್ವಕಪ್‌ನಲ್ಲಿ ಪತನಗೊಂಡೀತೇ? 16 ಎಸೆತಗಳಲ್ಲಿ ಅರ್ಧ ಶತಕ, 35 ಎಸೆತಗಳಲ್ಲಿ ಶತಕ ಬಾರಿಸಿದವರಿದ್ದಾರೆ. ದಾಖಲೆಗಳಿರುವುದೇ ಮುರಿಯುವುದಕ್ಕೆ ಎನ್ನುವ ಸ್ಥಿತಿಯಲ್ಲಿ ಈ ಬಾರಿ ನಿರೀಕ್ಷೆ ಹೆಚ್ಚಿದೆ. 2019ರ ವಿಶ್ವಕಪ್‌ನಲ್ಲಿ ಬಲಾಡ್ಯ ತಂಡಗಳೇ ಕಣದಲ್ಲಿವೆ. ಅವುಗಳ ಎದುರಿಗೂ ಯಾವುದಾದರೂ ಒಂದು ತಂಡ 500 ರನ್‌ ಗುಡ್ಡೆ ಹಾಕಿದರೆ ಅದು ನಿಜಕ್ಕೂ ಅಸಾಮಾನ್ಯ ಸಾಧನೆ ಆಗಲಿದೆ.

ಟಾಪ್ ನ್ಯೂಸ್

ಒಮಿಕ್ರಾನ್ ಆತಂಕ: ದೇಶದಲ್ಲಿ ಶೇ.14ರಷ್ಟು ವಿದ್ಯಾರ್ಥಿಗಳ ಹಾಜರಾತಿ ಇಳಿಕೆ ಸಾಧ್ಯತೆ; ಸಮೀಕ್ಷೆ

ಒಮಿಕ್ರಾನ್ ಆತಂಕ: ದೇಶದಲ್ಲಿ ಶೇ.14ರಷ್ಟು ವಿದ್ಯಾರ್ಥಿಗಳ ಹಾಜರಾತಿ ಇಳಿಕೆ ಸಾಧ್ಯತೆ; ಸಮೀಕ್ಷೆ

1-ff

ಬೆಂಗಳೂರಿನ ರಸ್ತೆ ಗುಂಡಿ: ಡೆಲಿವರಿ ಬಾಯ್ ಸಾವು; ಅಧಿಕಾರಿ ವಿರುದ್ಧವೇ ಕೇಸ್!

1-dddf

ಪರಿಷತ್ ಪ್ರಚಾರದಿಂದ ದೂರ : ಕಾರಣ ತಿಳಿಸಿದ ಸಂಸದ ಅನಂತಕುಮಾರ‌ ಹೆಗಡೆ

1-fewq3

ಆನ್ ಲೈನ್ ವಂಚನೆ : ವಿಜಯಪುರ ಪೊಲೀಸರಿಂದ ನೈಜೀರಿಯಾ ಪ್ರಜೆಯ ಬಂಧನ

1-gg

ಶಿಕ್ಷಣ ಕ್ಷೇತ್ರಕ್ಕೆ ಬಿಜಿಎಸ್ ಕೊಡುಗೆ ಅವಿಸ್ಮರಣೀಯ: ಸಚಿವ ಕೆ.ಗೋಪಾಲಯ್ಯ

1-r4w

ಹಸುವಿನ ಹೊಟ್ಟೆಯಲ್ಲಿತ್ತು 77 ಕೆಜಿ ಐಸ್ ಕ್ರೀಮ್ ಕಪ್ ಗಳು, ಚಮಚಗಳು

ತರಗತಿಯೊಳಗೆ ನುಗ್ಗಿದ ಚಿರತೆ, ವಿದ್ಯಾರ್ಥಿ ಮೇಲೆ ದಾಳಿ, ಪ್ರಾಣಾಪಾಯದಿಂದ ಪಾರು

ತರಗತಿಯೊಳಗೆ ನುಗ್ಗಿದ ಚಿರತೆ, ವಿದ್ಯಾರ್ಥಿ ಮೇಲೆ ದಾಳಿ, ಪ್ರಾಣಾಪಾಯದಿಂದ ಪಾರುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vivada

ವಿಶ್ವಕಪ್‌ ಮುಗಿದರೂ ವಿವಾದ ಮುಗಿದಿಲ್ಲ !

williams

ಐಸಿಸಿ ನಿಯಮ ಪ್ರಶ್ನಿಸುವ ಉದ್ದೇಶವಿಲ್ಲ: ವಿಲಿಯಮ್ಸನ್‌

stoks

4 ವರ್ಷಗಳ ಶ್ರಮಕ್ಕೆ ಇಂದು ಪ್ರತಿಫ‌ಲ: ಸ್ಟೋಕ್ಸ್‌

Neesham

ಕ್ರೀಡೆಗಿಂತ ಬೇಕರಿಯೇ ಬೆಸ್ಟ್ : ಜೇಮ್ಸ್ ನೀಶಮ್ ಹತಾಶೆಯ ನುಡಿ

stokes

ಓವರ್‌ ಥ್ರೋ ಎಸೆತದಲ್ಲಿ 6 ಅಲ್ಲ, ಐದು ರನ್ ಆಗಬೇಕಿತ್ತು!

MUST WATCH

udayavani youtube

ನಾಡಗೀತೆ ಮೇಲೆ ಈ ಹಸುವಿಗೆ ಅದೆಷ್ಟು ಗೌರವ ನೋಡಿ : ವಿಡಿಯೋ ವೈರಲ್

udayavani youtube

ಈ ಪ್ರಮುಖ ಕಾರಣಗಳಿಂದ ಜೀವನಶೈಲಿ ರೋಗಗಳಿಗೆ ನಾವು ತುತ್ತಾಗುತ್ತೇವೆ

udayavani youtube

ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಅವರ ಕೊಲೆಗೆ ಸಂಚು ಮಾಡಿಲ್ಲ : ಗೋಪಾಲ ಕೃಷ್ಣ

udayavani youtube

ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್ ಹತ್ಯೆಗೆ ಸ್ಕೆಚ್!

udayavani youtube

ಜಡೇಜಾಗಾಗಿ ಮೊದಲ ಸ್ಥಾನವನ್ನೇ ಬಿಟ್ಟುಕೊಟ್ಟ ಮಾಹಿ

ಹೊಸ ಸೇರ್ಪಡೆ

ಒಮಿಕ್ರಾನ್ ಆತಂಕ: ದೇಶದಲ್ಲಿ ಶೇ.14ರಷ್ಟು ವಿದ್ಯಾರ್ಥಿಗಳ ಹಾಜರಾತಿ ಇಳಿಕೆ ಸಾಧ್ಯತೆ; ಸಮೀಕ್ಷೆ

ಒಮಿಕ್ರಾನ್ ಆತಂಕ: ದೇಶದಲ್ಲಿ ಶೇ.14ರಷ್ಟು ವಿದ್ಯಾರ್ಥಿಗಳ ಹಾಜರಾತಿ ಇಳಿಕೆ ಸಾಧ್ಯತೆ; ಸಮೀಕ್ಷೆ

nadhigiridama

3 ತಿಂಗಳ ಬಳಿಕ ನಂದಿಗಿರಿಧಾಮ ವೀಕ್ಷಣೆಗೆ ಮುಕ್ತ

1-ff

ಬೆಂಗಳೂರಿನ ರಸ್ತೆ ಗುಂಡಿ: ಡೆಲಿವರಿ ಬಾಯ್ ಸಾವು; ಅಧಿಕಾರಿ ವಿರುದ್ಧವೇ ಕೇಸ್!

stage play

10ರಿಂದ 10 ದಿನ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ

1-dddf

ಪರಿಷತ್ ಪ್ರಚಾರದಿಂದ ದೂರ : ಕಾರಣ ತಿಳಿಸಿದ ಸಂಸದ ಅನಂತಕುಮಾರ‌ ಹೆಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.