ಮತದಾನದಲ್ಲೂ ಮುಂಚೂಣಿಯಲ್ಲಿರಿ; ನಾವು ಯಾಕೆ ಮತ ಹಾಕಬೇಕು

Team Udayavani, Mar 25, 2019, 1:14 PM IST

“ನಾವು ಯಾಕೆ ಮತ ಹಾಕಬೇಕು’ ಇದು ಯುವ ಹಾಗೂ ಉಳಿದ ಎಲ್ಲ ಅರ್ಹ ಮತದಾರರನ್ನು ಎ. 18ರ ಮತದಾನದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುವ ಉದಯವಾಣಿಯ ವಿಶೇಷ ಅಭಿಯಾನ. ಇದರಲ್ಲಿ ಜಿಲ್ಲೆಯ ವಿವಿಧ ಕಾಲೇಜಿನ ವಿದ್ಯಾರ್ಥಿಗಳು/ ತರುಣ ಮತದಾರರು ಮತದಾನದ ಮಹತ್ವದ ಕುರಿತು ಬರೆಯುತಿದ್ದಾರೆ.ಬನ್ನಿ ಪ್ರಜಾತಂತ್ರವನ್ನು ಬೆಂಬಲಿಸೋಣ, ಮತದಾನ ಮಾಡೋಣ.

ಮತದಾನದಲ್ಲೂ ಮುಂಚೂಣಿಯಲ್ಲಿರಿ
ನಮ್ಮಂತಹ ಯುವಕ- ಯುವತಿಯರಿಗೆ ಮತದಾನದಲ್ಲಿ ಪಾಲ್ಗೊಳ್ಳುವುದೇ ಒಂದು ಉತ್ಸಾಹದ ಸಂಗತಿ. ಕೇವಲ ಅಭ್ಯರ್ಥಿಯನ್ನು ಆದರ್ಶ , ದೂರದೃಷ್ಟಿ ಚಿಂತನೆ ಹೊಂದಿರುವಂತವರನ್ನು ಗೆಲ್ಲಿಸಲು ನಾವು ಮತದಾನ ಮಾಡಬೇಕು. ಶೈಕ್ಷಣಿಕವಾಗಿ ಮೇಲುಗೈ ಸಾಧಿಸುತ್ತ ಬಂದಿರುವ ಕರಾವಳಿ ಮತದಾನದಲ್ಲೂ ಗರಿಷ್ಠತೆ ಸಾಧಿಸಲು ಎಲ್ಲರೂ ಕೂಡ ಮತ ಚಲಾಯಿಸಿ ಮಾದರಿಯಾಗಬೇಕಿದೆ.
ಕೀರ್ತಿ ಭಟ್‌ ಉಪ್ಪುಂದ, ಭಂಡಾರ್‌ಕಾರ್ಸ್‌ ಕಾಲೇಜು, ಕುಂದಾಪುರ

ಮತ ಹಾಳು ಮಾಡಬೇಡಿ
ದೇಶ ಯಾವತ್ತೂ ಬಾಹ್ಯ ಆಕ್ರಮಣಕ್ಕೆ ಒಳಗಾಗಬಾರದು. ದೇಶದ ರಕ್ಷಣೆ ಒಬ್ಬ ಪ್ರಜಾಪ್ರತಿನಿಧಿಯ ಜವಾಬ್ದಾರಿ. ಆತ ಬೇಜಾಬ್ದಾರಿಯನ್ನು ಹೊಂದಿದರೆ ದೇಶ ಸರ್ವನಾಶ ಗೊಳ್ಳುವುದು ಖಂಡಿತ. ಹಾಗಾಗಿ ಒಳ್ಳೆಯ ಪ್ರಜಾಪ್ರತಿನಿಧಿಯನ್ನು ಆಯ್ಕೆಮಾಡುವುದು ನಮ್ಮೆಲ್ಲರ ಕರ್ತವ್ಯ. ನಮ್ಮ ಒಂದು ಮತ ಅಮೂಲ್ಯವಾದದು.ದಯವಿಟ್ಟು ಅದನ್ನು ಹಾಳು ಮಾಡದಿರಿ.
 ಪುನೀತ್‌, ಸಂತ ಮೇರಿ ಪದವಿ ಪೂರ್ವ ಕಾಲೇಜು ಶಿರ್ವ

ಯೋಗ್ಯರನ್ನೇ ಆರಿಸಿ
ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಸುಪ್ರೀಂ ಆದರೂ, ಅಧಿಕಾರ ನಡೆಸುವುದು ಜನಪ್ರತಿನಿಧಿಗಳು. ಹಾಗಾಗಿ ಯೋಗ್ಯ ಅಭ್ಯರ್ಥಿ ಆಯ್ಕೆ ಮಾಡುವುದು ನಮ್ಮ ಹೊಣೆ. ಯುವಕರೇ ಹೆಚ್ಚಿರುವ ನಮ್ಮ ದೇಶವನ್ನು ಅಭಿವೃದ್ಧಿಯತ್ತ ಒಯ್ಯುವವರನ್ನು ಆಯ್ಕೆ ಮಾಡುವ ಜವಾಬ್ದಾರಿ ಇದೆ. ಪಕ್ಷ, ಜಾತಿ, ನೋಡದೆ ಸ್ಥಳೀಯ ಕ್ಷೇತ್ರಕ್ಕೆ ಒಳಿತಾಗಬಲ್ಲ ಯೋಗ್ಯರನ್ನು ಆರಿಸಬೇಕು.
ಸುಶ್ಮಿತಾ ನೇರಳಕಟ್ಟೆ,ಡಾ| ಬಿ.ಬಿ. ಹೆಗ್ಡೆ ಕಾಲೇಜು, ಕುಂದಾಪುರ

ಮತದಾನ ನಮ್ಮ ಪ್ರಮುಖ ಕರ್ತವ್ಯ
ಮತದಾನವು ಪ್ರತಿಯೊಬ್ಬರ ಞಜನ್ಮಸಿದ್ಧ ಹಕ್ಕು. ನಮ್ಮ ದೇಶದ ಉತ್ತಮ ಸರಕಾರಕ್ಕಾಗಿ ಮತ್ತು ದೇಶದ ರಕ್ಷಣೆಗಾಗಿ ಎಲ್ಲರೂ ತಪ್ಪದೇ ಮತದಾನ ಮಾಡಲೇ ಬೇಕಾಗಿದೆ. ಪ್ರತಿಯೊಬ್ಬ ಪ್ರಜೆ ಉತ್ತಮ ಜನಪ್ರತಿನಿಧಿಯನ್ನು ಆರಿಸು ಹಕ್ಕು ಹೊಂದಿದ್ದಾನೆ. ಇದರಿಂದಲೇ ದೇಶದ ಏಳಿಗೆ. ಇದನ್ನು ಗಮನದಲ್ಲಿಡಬೇಕು. ಮತದಾನ ಮಾಡುವುದರಿಂದ ಪ್ರಜೆಗಳು ಮತ್ತು ಸರಕಾರದ ಮಧ್ಯ ನಿಕಟ ಸಂಬಂಧ ಇರುತ್ತದೆ.
ನಿಶ್ಮಿತಾ ಟಿ.ಎಂ., ಎಸ್‌.ಎಂ.ಎಸ್‌. ಕಾಲೇಜು, ಬ್ರಹ್ಮಾವರ

ಆಮಿಷಗಳಿಗೆ ಒಳಗಾಗಬೇಡಿ
ದೇಶದ ಒಳಿತಿಗಾಗಿ ಶ್ರಮಿಸುವ ಅಭ್ಯರ್ಥಿಯನ್ನು ಚುನಾಯಿಸಿ, ರಾಷ್ಟ್ರದ ಅಭಿವೃದ್ಧಿಗೆ ಅಳಿಲು ಸೇವೆ ಸಲ್ಲಿಸುವ ಸದವಕಾಶ ಬಳಸಿಕೊಳ್ಳಬೇಕು. ಒಂದು ಮತದಿಂದ ಏನೂ ವ್ಯತ್ಯಾಸವಾಗದು ಎನ್ನುವುದು ನಿಜವಲ್ಲ; ಯಾವುದೇ ಆಮಿಷಗಳಿಗೆ ಒಳಗಾಗದೆ, ಸರಿಯಾದ ಅಭ್ಯರ್ಥಿಗೆ ಮತ ಚಲಾಯಿಸುವ ಪ್ರತಿಜ್ಞೆ ನಮ್ಮದಾಗಲಿ.
ಅಮೃತಾ, ಪೂರ್ಣಪ್ರಜ್ಞ ಕಾಲೇಜು, ಉಡುಪಿ.

ನನ್ನ ಮತ, ದೇಶ ಹಿತ
ನಾಗರಿಕ ಸಮಾಜದ ಬದಲಾವಣೆಯ ಜೊತೆಗೆ, ಆಧುನಿಕ ವಿಶ್ವದಲ್ಲಿ ಭಾರತವು ಒಂದು ಸ್ಪರ್ಧೆಯ ರಾಷ್ಟ್ರವಾಗಬೇಕು, ನಿರುದ್ಯೋಗ ಸಮಸ್ಯೆಯನ್ನು ಕಡಿಮೆಮಾಡಬೇಕು, ಹಳ್ಳಿಗಳಿಗೆ ಮೂಲಭೂತ ಸೌಕರ್ಯಗಳನ್ನು ನೀಡಬೇಕು, ರೈತರಲ್ಲಿನ ಸಮಸ್ಯೆ ದೂರಮಾಡಿ ನವ ಚೈತನ್ಯ ತುಂಬಬೇಕು, ನನ್ನ ಮತ ಇಂತಹ ಕಾರ್ಯಕ್ಕೇ ಮೀಸಲಾಗಿರಬೇಕು.
ವಿಜಯ್‌ ಕೆರಾಡಿ, ಸ.ಪ್ರ.ದ. ಕಾಲೇಜು, ಶಂಕರನಾರಾಯಣ

ಮತದಾನ ವಿವೇಚನೆಯಿಂದ ಮಾಡಿ
ದೇಶದ ಅಭಿವೃದ್ಧಿಯಲ್ಲಿ ನಾವುಹಾಕುವ  ಒಂದೊಂದು ಮತ ಕೂಡ ಮಹತ್ವದ್ದು ಎನಿಸಿದೆ. ಹಾಗಾಗಿ ಜಾತಿ, ಮತ, ಧರ್ಮ, ಹಣದ ವ್ಯಾಮೋಹಕ್ಕೆ ಒಳಗಾಗದೇ ಮುಕ್ತವಾಗಿ ಮತ ಚಲಾಯಿಸಬೇಕು. ದೇಶದ ಶೇ.60ರಷ್ಟು ಮಂದಿ ಯುವಕರೇ ಇದ್ದರೂಮತದಾನ ಎಂದಾಗ ದೂರವಿರುವುದೇಜಾಸ್ತಿ. ಆದರೆ ಮತದಾನ ನಮ್ಮ ಹಕ್ಕು. ಅದನ್ನುವಿವೇಚನೆಯಿಂದ ಚಲಾಯಿಸಿ, ಸಭ್ಯರುಆಯ್ಕೆಯಾಗುವಂತೆ ಮಾಡಬೇಕಾಗಿದೆ.
ಭಾಸ್ಕರ ಗುಡ್ರಿ, ನೇರಳಕಟ್ಟೆ,ಡಾ| ಬಿ.ಬಿ. ಹೆಗ್ಡೆ ಕಾಲೇಜು, ಕುಂದಾಪುರ

ಯೋಗ್ಯರ ಆಯ್ಕೆ ನಮಗಿರುವ ಜವಾಬ್ದಾರಿ
ಮತದಾನ ಎನ್ನುವುದು ನಾಗರಿಕನ ಹಕ್ಕು. ಉತ್ತಮ ನಾಯಕನ ಆಯ್ಕೆಗಾಗಿ
ಮತದಾನ ಮಾಡುವುದು ಅಗತ್ಯ. ಯುವಪೀಳಿಗೆಯು ಮತದಾನದ  ಮಹತ್ವವನ್ನುಅರಿತು ಮತ ಚಲಾಯಿಸಬೇಕು.ನಮ್ಮ ದೇಶದ ಭವಿಷ್ಯ ಮತದಾನದಲ್ಲಿ ಅಡಗಿದೆ. ಅಭಿವೃದ್ಧಿಯ ಕನಸನ್ನು ನನಸಾಗಿಸುವ ಯೋಗ್ಯ ಪ್ರಜಾನಾಯಕನ್ನುಮತಚಲಾಯಿಸುವುದರ ಮೂಲಕ ಆರಿಸೋಣ.
 ಶಶಿಧರ್‌ ಕೋಟ,ಎಸ್‌.ಎಂ.ಎಸ್‌. ಕಾಲೇಜು, ಬ್ರಹ್ಮಾವರ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • "ನಾವು ಯಾಕೆ ಮತ ಹಾಕಬೇಕು' ಇದು ಯುವ ಹಾಗೂ ಉಳಿದ ಎಲ್ಲ ಅರ್ಹ ಮತದಾರರನ್ನು ಎ. 18ರ ಮತದಾನದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುವ ಉದಯವಾಣಿಯ ವಿಶೇಷ ಅಭಿಯಾನ. ಇದರಲ್ಲಿ...

  • "ನಾವು ಯಾಕೆ ಮತ ಹಾಕಬೇಕು' ಇದು ಯುವ ಹಾಗೂ ಉಳಿದ ಎಲ್ಲ ಅರ್ಹ ಮತದಾರರನ್ನು ಎ. 18ರ ಮತದಾನದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುವ ಉದಯವಾಣಿಯ ವಿಶೇಷ ಅಭಿಯಾನ. ಇದರಲ್ಲಿ...

  • "ನಾವು ಯಾಕೆ ಮತ ಹಾಕಬೇಕು' ಇದು ಯುವ ಹಾಗೂ ಉಳಿದ ಎಲ್ಲ ಅರ್ಹ ಮತದಾರರನ್ನು ಎ. 18ರ ಮತದಾನದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುವ ಉದಯವಾಣಿಯ ವಿಶೇಷ ಅಭಿಯಾನ. ಇದರಲ್ಲಿ...

  • "ನಾವು ಯಾಕೆ ಮತ ಹಾಕಬೇಕು' ಇದು ಯುವ ಹಾಗೂ ಉಳಿದ ಎಲ್ಲ ಅರ್ಹ ಮತದಾರರನ್ನು ಎ. 18ರ ಮತದಾನದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುವ ಉದಯವಾಣಿಯ ವಿಶೇಷ ಅಭಿಯಾನ. ಇದರಲ್ಲಿ...

  • "ನಾವು ಯಾಕೆ ಮತ ಹಾಕಬೇಕು' ಇದು ಯುವ ಹಾಗೂ ಉಳಿದ ಎಲ್ಲ ಅರ್ಹ ಮತದಾರರನ್ನು ಎ. 18ರ ಮತದಾನದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುವ ಉದಯವಾಣಿಯ ವಿಶೇಷ ಅಭಿಯಾನ. ಇದರಲ್ಲಿ...

ಹೊಸ ಸೇರ್ಪಡೆ