ಇಟಲಿಯಿಂದಲೇ ಭಾರತ ಸೇವೆ ಮಾಡಿದ ಯುವಕ; ತಾಯ್ನಾಡಿಗೆ ಮರಳದೇ ರೋಮ್ ನಲ್ಲೇ ಉಳಿದ ವಿದ್ಯಾರ್ಥಿ

ಸೋಂಕು ಬೇರೆಯವರಿಗೆ ಹರಡಬಾರದು ಎಂಬ ಕಾರಣಕ್ಕೆ ಭಾರತಕ್ಕೆ ಬರದೇ ಅಲ್ಲೇ ಉಳಿದಿದ್ದಾನೆ.

Team Udayavani, Mar 26, 2020, 4:08 PM IST

ಇಟಲಿಯಿಂದಲೇ ಭಾರತ ಸೇವೆ ಮಾಡಿದ ಯುವಕ; ತಾಯ್ನಾಡಿಗೆ ಮರಳದೇ ರೋಮ್ ನಲ್ಲೇ ಉಳಿದ ವಿದ್ಯಾರ್ಥಿ

Representative Image

ರೋಮ್: ಅಕ್ಷರಶಃ ಇಟಲಿಯನ್ನು ಕೋವಿಡ್ ವೈರಸ್ ಮರಣದ ಕೂಪಕ್ಕೆ ತಳ್ಳಿದೆ. ಜನರು ಕಂಡ ಕಂಡ ಸ್ಥಳಗಳಲ್ಲಿ ಸಾವಿಗೀಡಾಗುತ್ತಿದ್ದಾರೆ. ಇಟಲಿ ಜಗತ್ತಿನಲ್ಲಿ ಅತ್ಯುತ್ತಮ ಆರೋಗ್ಯ ಸೇವೆಯನ್ನು ಹೊಂದಿರುವ ರಾಷ್ಟ್ರವಾಗಿದೆ. ಆದರೂ ಅಲ್ಲಿನ ಆರಂಭಿಕ ಅವಗಣನೆಯಿಂದ ಇಂದಿನ ಪರಿಸ್ಥಿತಿ ನಿರ್ಮಾಣವಾಗಿದೆ. ಹೆಚ್ಚಿನ ಸಂಖ್ಯೆಯ ಭಾರತೀಯರು ಇಟಲಿಯಲ್ಲಿ ವಾಸಿಸುತ್ತಿದ್ದು ಅವರ ಪರಿಸ್ಥಿತಿಯೂ ತೀವ್ರ ಸಂಕಷ್ಟದಲ್ಲಿದೆ.

ವಿವಿಧ ರಾಷ್ಟ್ರಗಳ ವಿದ್ಯಾರ್ಥಿಗಳು ಅಲ್ಲಿ ವಾಸಿಸುತ್ತಿದ್ದಾರೆ. ಇಟಲಿಯ ರಾಜಧಾನಿಯಲ್ಲಿ ಓದುತ್ತಿರುವ ಪ್ರಸ್ತುತ ಇಂದೋರ್ನ ವಿದ್ಯಾರ್ಥಿಯೊಬ್ಬ ತನ್ನಿಂದ ಕೋವಿಡ್ ವೈರಸ್ ಸೋಂಕು ಬೇರೆಯವರಿಗೆ ಹರಡಬಾರದು ಎಂಬ ಕಾರಣಕ್ಕೆ ಭಾರತಕ್ಕೆ ಬರದೇ ಅಲ್ಲೇ ಉಳಿದಿದ್ದಾನೆ. ಇಂದೋರ್ ನ ವಿದ್ಯಾರ್ಥಿ ಅನಂತ್ ಶುಕ್ಲಾ ಅವರು ಇಟಲಿಯ ರಾಜಧಾನಿ ರೋಮ್ನಲ್ಲಿ ವಾಸಿಸುತ್ತಿದ್ದಾರೆ.

ವಿದ್ಯಾರ್ಥಿಯ ತಂದೆ ಅನಂತ್  ಮನೆಗೆ ಹಿಂದಿರುವಂತೆ ಸಾಕಷ್ಟು ಮನವಿ ಮಾಡಿದ್ದಾರೆ.  ಆದರೆ ಸಾಮಾಜಿಕ ಆರೋಗ್ಯದ ಕಾರಣಕ್ಕಾಗಿ ತಮ್ಮ ತಂದೆಯ ಸೂಚನೆಯನ್ನು ಧಿಕ್ಕರಿಸಿ ಮರಣ ಮೃದಂಗ ಭಾರಿಸುತ್ತಿರುವ ಇಟಲಿಯಲ್ಲೇ ಉಳಿಯಲು ತೀರ್ಮಾನಿಸಿದ್ದಾರೆ.  ನಾನು ಭಾರತಕ್ಕೆ ಹಿಂದಿರುಗಿದರೆ ಅಲ್ಲಿನ ಮುಗ್ದ ಜನರಿಗೆ ನನ್ನಿಂದ ಸೋಂಕು ವರ್ಗಾವಣೆಯಾದಂತಾಗುತ್ತದೆ.

ಅದರ ಬದಲು ನಾನು ಇಲ್ಲೇ ಉಳಿದು ಬಿಟ್ಟರೆ ಇತರರಿಗೆ ಈ ವೈರಸ್  ಹರಡುವುದನ್ನು ನಾನು ತಡೆಯಬಹುದು. ಈ ಕಾರಣಕ್ಕೆ ಇಲ್ಲೇ ಉಳಿಯಲಿದ್ದು, ತೃಪ್ತನಾಗಿದ್ದೇನೆ ಜತೆಗೆ ಸಾಮಾಜಿಕ ಆರೋಗ್ಯ ಕಾಪಾಡಿಕೊಂಡ ಸಂತೋಷವು ನನ್ನಲ್ಲಿ ಇದೆ ಎಂದು ಹೇಳಿದ್ದಾರೆ.

ಇಟಲಿ ಮಾಡಿದ ತಪ್ಪನ್ನು ನೀವು ಮಾಡಬೇಡಿ
ಇಲ್ಲಿನ ನಾಗರಿಕರು ಮಾಡಿದ ತಪ್ಪನ್ನು ನೀವು ಮಾಡುವುದು ಬೇಡ ಎಂದು ಇಟಲಿಯಲ್ಲಿರುವ ಭಾರತೀಯರು ಹೇಳುವ ಮಾತು. ಇದಕ್ಕೆ ಅನಂತ್ ಶುಕ್ಲಾ ಧ್ವನಿಗೂಡಿಸಿದ್ದು, ತಮ್ಮ ಮತ್ತು ಕುಟುಂಬದ ಹಿತದೃಷ್ಟಿಯಿಂದ ಮನೆಯಿಂದ ದಯವಿಟ್ಟು  ಹೊರಹೋಗಬೇಡಿ  ಎಂದು ಜನರಿಗೆ  ಕೈ  ಮುಗಿದು  ಮನವಿ ಮಾಡಿದ್ದಾರೆ.

ನೀವು  ಇದನ್ನು  ನಿರ್ಲಕ್ಷ್ಯ  ಮಾಡಿದರೆ  ಇಟಲಿಯಂತೆ  ಭಾರತವೂ ಶ್ಮಶಾನವಾಗಲಿದೆ  ಎಂದು  ಹೇಳಿದ್ದಾರೆ. ಸೈನಿಕರಾಗಿ  ದೇಶ  ಸೇವೆ ಮಾಡುವುದೊಂದೆ  ದೇಶಸೇವೆಯಲ್ಲ. ದೇಶದ  ಒಳಿತಿಗಾಗಿ  ಮನೆಯಲ್ಲೇ ಇದ್ದುಬಿಡುವುದು  ಒಂದು  ದೇಶಸೇವೆ  ಎಂದು  ಹೇಳಿದ್ದಾರೆ.

ನಿರ್ಲಕ್ಷ್ಯಕ್ಕೆ  ಬೆಲೆ  ತೆತ್ತ  ಇಟಲಿ:

ಈ ಸಾಂಕ್ರಾಮಿಕ ರೋಗ ಹರಡುವಿಕೆಯನ್ನು ತಡೆಗಟ್ಟಲು ಇಟಲಿಯಲ್ಲಿ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿರಲಿಲ್ಲ. ಚೀನದಲ್ಲಿ ವೈರಸ್ ಹಾವಳಿ ಹೆಚ್ಚಾಗುತ್ತಿರುವ ಸಂದರ್ಭದಲ್ಲೇ ಇಟಲಿಯಲ್ಲೂ ಕಾಣಿಸಿಕೊಂಡಿದೆ. ಆದರೆ ಚೀನದಲ್ಲಿ 3ನೇ ಹಂತದಲ್ಲಿರಬೇಕಾದರೆ ಇಟಲಿ 2ನೇ ಹಂತದಲ್ಲಿತ್ತು. ಆದರೆ ಅಲ್ಲಿನ ಸರಕಾರ ಯಾವುದೇ ಕ್ರಮಗಳನ್ನು ಕೈಗೊಂಡಿರಲಿಲ್ಲ.

ಒಂದು ವೇಳೆ ಸರಕಾರ ಆರಂಭದಲ್ಲಿ ಕ್ರಮಕೈಗೊಂಡಿದ್ದರೆ ಇಂದಿನ ಸ್ಥಿತಿಗೆ ಇಟಲಿ ತಲುಪುತ್ತಿರಲಿಲ್ಲ ಎಂಬುದು ಬಹುತೇಕ ಇಟಲಿಯನ್ನರ ಅಭಿಪ್ರಾಯವಾಗಿದೆ. ಇಟಲಿ ತನ್ನಲ್ಲಿನ ಆರೋಗ್ಯ ಸೇವೆಯ ಮೇಲೆ ಇರಿಸಿದ್ದ ಅತಿಯಾದ ಆತ್ಮವಿಶ್ವಾಸವೇ ಇದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗಿದೆ. ಇಟಲಿಯಲ್ಲಿ ಹೆಣವನ್ನು ಹೂಳಲು ಸ್ಥಳಾವಕಾಶ ಇಲ್ಲದೇ ಸಾಮೂಹಿಕವಾಗಿ ಅಂತ್ಯ ಸಂಸ್ಕಾರ ಮಾಡಲಾಗುತ್ತಿದೆ. ಅಲ್ಲಿನ ಆಸ್ಪತ್ರೆಯಲ್ಲಿ ಸೂಕ್ತ ಸೌಕರ್ಯ ಇಲ್ಲದೇ ಜನರಿಗೆ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ. ಸುಸಜ್ಜಿತ ಆಸ್ಪತ್ರೆಗಳಿದ್ದರು ಸೋಂಕು ಪೀಡಿತರ ಸಂಖ್ಯೆ ಹೆಚ್ಚಾದ ಕಾರಣ ಸಾವಿನ ಸಂಖ್ಯೆ ಹೆಚ್ಚಾಗಿವೆ.

ಟಾಪ್ ನ್ಯೂಸ್

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.